ವಿಷಯಕ್ಕೆ ಹೋಗು

ವರ್ಗ:ಲೇಖಕ

ವಿಕಿಕೋಟ್ದಿಂದ

ಲೇಖಕರ ಪಟ್ಟಿ

ಡಾ.ಬಿ.ಆರ್ ಅಂಬೇಡ್ಕರ್ >ಜನನ:೧೪/೦೪/೧೮೯೧. ಮರಣ:೦೬/೧೨/೧೯೫೬ >ತಂದೆ:ರಾಮಜೀ ಸಕ್ಪಾಲ್. ತಾಯಿ:ಭೀಮಬಾಯಿ ಬಾಬಾಸಾಹೇಬರ ಕೆಲವು ಜನಪ್ರಿಯ ನುಡಿಗಳು:

•ಮೈಮೇಲಿನ ಬಟ್ಟೆ ಹರಿದರು ಚಿಂತೆ ಇಲ್ಲ ಕೈಯಲೋಂದು ಪುಸ್ತಕವಿರಲಿ. •ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು. •ಮತದಾನ ಮನೆಯ ಮಗಳಿದಂತೆ ಮತದಾನವನ್ನು ಮಾರಿಕೊಳ್ಳಬೇಡಿ. •ಒಂದು ಸಮಾಜದ ಬೆಳವಣಿಗೆಯನ್ನು ನಾನು ಆ ಸಮಾಜದ ಹೆಣ್ಣು ಮಕ್ಕಳ ಸ್ಥಿತಿಗತಿಗಳ ಮೇಲೆ ನಿರ್ಧರಿಸುತ್ತೇನೆ. •ಇತಿಹಾಸಕಾರರು ಸತ್ಯಕ್ಕೆ ನಿಷ್ಠಾರಾಗಿರಬೇಕು ಏಕೆಂದರೆ ಸತ್ಯವೇ ಇತಿಹಾಸಕ್ಕೆ ತಾಯಿ. •ವಿಚಾರಗಳನ್ನು ಓದುವುದರಿಂದ ಬದಲಾವಣೆಗಳು ಬರುವುದಿಲ್ಲ, ವಿಚಾರಗಳನ್ನು ಅನುಸರಿಸುವುದ್ದರಿಂದ ಮಾತ್ರ ಬದಲಾವಣೆ ಬರುತ್ತದೆ. •ಒಬ್ಬನೇ ಎಂದು ಹೋರಾಡಲು ಹಿಂಜರಿಯಬೇಡ, ಏಕೆಂದರೆ ಸಾವಿರರೂ ಜನರ ವಿರುದ್ಧ ಹೋರಾಡಿ ಗೆದ್ದರು ಅಥವಾ ಸೋತರು ಇತಿಹಾಸ ಸೇರೋದು ಒಬ್ಬನ ಹೆಸರು. •ಪ್ರಶ್ನಿಸುವ ಎದೆಗಾರಿಕೆ ಇಲ್ಲದವರು ಪ್ರಜಾಪ್ರಭುತ್ವ ದಲ್ಲಿ ಬದುಕಲು ಅನರ್ಹ. •ನಿಮ್ಮ ಮೂಢನಂಬಿಕೆಯೇ ನಿಮ್ಮ ಬಡತನ ಗುಲಾಮಗಿರಿಗೆ ಕಾರಣವಾಗಿದೆ. •ಇಂದೇ ನಿಮ್ಮ ಗೋಡೆಗಳ ಮೇಲೆ ಬರೆದಿಟ್ಟುಕೊಳ್ಳಿ ಈ ದೇಶವನ್ನು ಆಳಲು ಹುಟ್ಟಿದವನು ನಾನೆಂದು. •ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ.