ಯು.ಆರ್. ಅನಂತಮೂರ್ತಿ

ವಿಕಿಕೋಟ್ದಿಂದ



ಯು.ಆರ್.ಅನಂತಮೂರ್ತಿ 
  • ನಮಗೆ ಬೇಕಾಗಿರುವುದು ಧರ್ಮ ತೋರಿಸಿಕೊಟ್ಟಿರುವ ನೈತಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಹರಿಸುವ ದಾರಿ ಮತ್ತು ಅದು ಬೋಧಿಸುವ ಧ್ಯಾನದ ಶಿಸ್ತನ್ನು ಅರ್ಥಮಾಡಿಕೊಳ್ಳುವ ಮನಸ್ಸು. - ೦೫:೪೬, ೨೬ ಆಗಸ್ಟ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.

ಮಾತು ಸೋತ ಭಾರತ ೨೦೦೭ ಪುಸ್ತಕ[ಸಂಪಾದಿಸಿ]

  • ಮಾತು ಅತಿಶಯದ ಕ್ರೌರ್ಯದ ಸ್ಥಿತಿಯಲ್ಲಿಯೂ ಶಾಪ ಆಗುವ ಮಾಂತ್ರಿಕತೆ ಕಳೆದುಕೊಂಡಾಗ, ಆತ್ಮಹತ್ಯೆ ಒಂದೇ ಕಾಣಿಸುತ್ತದೆ. ನಮ್ಮ ರೈತರ ಆತ್ಮಹತ್ಯೆ ಇದೇ ಧಾಟಿಯಲ್ಲಿದೆ ಅನ್ನಿಸುತ್ತದೆ.
  • ಸಂವಾದದಿಂದ ಒಲಿಸಿಕೊಳ್ಳುವುದು ನಾಗರೀಕತೆ.
  • ದಿನಾಲೂ ಕಿರುಚಾಡುವವನೊಬ್ಬ ಕ್ವಿಟ್ ಇಂಡಿಯಾ ಅಂತ ಹೇಳಿದ್ದರೆ, ಆ ಮಾತಿಗೆ ಶಕ್ತಿ ಇರುತ್ತಲಿರಲಿಲ್ಲ. ಮಹಾತ್ಮಾ ಗಾಂಧಿ, ಬ್ರಿಟಿಷರೊಡನೆ ಸಂವಾದನಡೆಸಿ, ತdnಅಂತರ ಕೊನೆಯಲ್ಲಿ ಹೇಳಿದ ಕಟುಮಾತು ಅದು. ಅದಕ್ಕಾಗಿಯೇ, ಆ ದನಿಯಲ್ಲಿ ಅಷ್ಟು ಶಕ್ತಿಯಿತ್ತು.
  • ದೃಶ್ಯವಿಲ್ಲದೆಯೇ ಸುದ್ದಿ ಚರ್ಚೆ ಇಲ್ಲ. ಇದು ಇಂದಿನ ಟಿ.ವಿ ವಾಹಿನಿಗಳ ದುರಂತ. ದೃಶ್ಯ ಅನಿವಾರ್ಯ, ಅದರ ಅಡಿಯಲ್ಲಿಯೇ ಚರ್ಚೆ. ಆತ್ಮಹತ್ಯೆ ಮಾಡಿಕೊಳ್ಳುವವನ ದೃಶ್ಯ ಕಂಡರೆ ಮಾತ್ರ ಬೆಲೆ, ಹೀಗಾಗಿ ಕ್ಯಾಮೆರಾ ಬರುವವರೆಗೆ ಕಾಯ್ದು, ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಾಗ ಅದು ಸುದ್ದಿ, ಅದರ ನಂತರ ಚರ್ಚೆ, … ಚರ್ಚೆ ನಡೆಯುವಾಗಲೂ ಸಹಿತ ದೃಶ್ಯದ ಪುನರಾವರ್ತನೆ. ಇವೆಲ್ಲಾ ಜಾಹೀರಾತಿನ ಮಧ್ಯೆ ನಡೆವ್ವೌ. ಇದು ಅಜ್ಜಿಯನ್ನು ಸುಟ್ಟ ಹಾಗೂ‌ ಆಗಬೇಕು, ಸುಡುವ ನಾವು ಚಳಿ ಕಾಯಿಸಿಕೊಂಡ ಹಾಗೂ ಆಗಬೇಕು.
  • ಮಾತು ಸತ್ತಿದೆ ಎಂಬುದಕ್ಕೆ ಭಯೋತ್ಪಾದನೆಯೇ ಪ್ರಮಾಣ, ಏಕೆಂದರೆ ಬಾಂಬು ಗನ್ನುಗಳು ಕೊಲ್ಲುವುದು ಬಡಪಾಯಿಗಳನ್ನೇ, ಸರ್ಕಾರೀ ಹಿರೀಕರನ್ನು, ದೊಡ್ದ ಜನಗಳನ್ನು ಕೊಂದಾಗ ಅದು ದೊಡ್ಡ ಸುದ್ದಿ.
  • ಸರಕು ಸಂಸ್ಕೃತಿಯ ಮಾರುಕಟ್ಟೆ ಇಂದಿನ ಪ್ರಬಲ ಅಸ್ತ್ರ.
  • ಸುನಾಮಿಯಲ್ಲಿ ನಾನು ಸತ್ತಿದ್ದರೆ, ೧ ಲಕ್ಷ ಕೊಟ್ಟು, ಮನೆ ಕಟ್ಟಿಸಿಕೊಡುತ್ತಿದ್ದರು.ದುರದೃಷ್ಟ, ನಾನು ಸಾಯಲಿಲ್ಲ. ನನ್ನ ದಿನವಹಿ ೨೫-೨೦ ರೂಪಾಯಿ ಸಂಪಾದನೆಯಲ್ಲಿ ಮನೆ ನಡೆಯಬೇಕು. -೨೦೦೪ರ ಸುನಾಮಿಯಲ್ಲಿ ಬದುಕುಳಿದ ಐಸ್ ಕ್ಯಾಂಡಿ ಮಾರುವ ಪಳನಿಸ್ವಾಮಿಯ ಈ ಮಾತುಗಳು ನಮ್ಮ ದುರವಸ್ಥೆಯನ್ನು ಪ್ರತಿಬಿಂಬಿಸುತ್ತವೆ. ಅಪಘಾತದ ಸಾವು, ಬದುಕಿಗಿಂತ ಹೆಚ್ಚು ಅನುಕೂಲಕರವಾಯಿತೇ ?
  • ಭಾಷೆಗೆ ಮನವೊಲಿಸಬಲ್ಲ ಶಕ್ತಿಯಿದೆ ಎಂಬುದರ ಮೇಲೆ ನಮಗೆ ನಂಬಿಕೆ ಕಳೆದುಹೋಗಿದೆ. ಇದು ದುರಂತ.
  • ರಾಜಾಜಿ ಮದ್ರಾಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನಗೈದಾಗ ಹೇಳಿದ್ದು ನನ್ನ ಎರಡು ಶತ್ರುಗಳು ಪಿ.ಡಬ್ಲು ಡಿ ಇಲಾಖೆ ಮತ್ತು ಕಮ್ಯುನಿಸ್ಟರು. ಅಧಿಕಾರಶಾಹಿಯ ತೊಂದರೆಯ ಅರಿವು ಅವರಿಗಿತ್ತು. ಇಂದು ಕಳೆದುಹೋಗಿರುವುದು ಅದೇ.
  • ಜಾಹೀರಾತಿನ ಭಾಷೆಯೇ ಸಂವಹನ. ಇದು ಸಂವಾದದ ಮೇಲೆ ಬೀರಿರುವ ಪರಿಣಾಮ ಕೆಟ್ಟದ್ದು.
  • ರಾಜಕಾರಣಿಗಲು ದ್ವಂದ್ವವನ್ನೇ ಮಾತನಾಡುತ್ತಾ, ಜನರನು ಮೂರ್ಖರನ್ನಾಗಿಸುತ್ತಾರೆ.
  • ೧೯೨೯ರಲ್ಲಿ ಬಾಪೂಜಿ ತೀರ್ಥಹಳ್ಳಿಗೆ ಬಂದಾಗ ಊರ ಹಿರಿಯರು ಕರಪತ್ರ ಹಂಚಿದ್ದರು. ಅಲ್ಲಿದ್ದದ್ದು ೨ ಮನವಿ. ಬಾಪೂ ಸಭೆಗೆ ಬರುವವರು "ಮಹಾತ್ಮಾ ಗಾಂಧೀಜಿ ಕೀ ಜೈ" ಎಂದು ಕೂಗಬಾರದು ಮತ್ತು ಬಾಪೂಜಿಯ ಸುತ್ತಮುತ್ತ ಜನಸಂದಣಿ ಉಂಟುಮಾಡಬಾರದು ಎಂದು. ಇದು ಇವತ್ತ್ತು ನಂಬಲಿಕ್ಕೂ ಸಾಧ್ಯವಾಗದ ವಿಷಯ. ಯಾವ ರಸ್ತೆಯೇ ನೋಡಿ, ರಾಜಕಾರಣಿಗಳ ಜಾಹೀರಾತು ಇಲ್ಲವೇ ಮಾರಾತದ ಸರಕುಗಳ ಜಾಹೀರಾತು. ತೀರ್ಥಹಳ್ಳಿಯಲ್ಲಿ ಅಂದಿನ ಹಿರಿಯರು, ತಾವು ಖಾದಿ ವಸ್ತ್ರದ ಪ್ರಚಾರದಲ್ಲಿ ಸ್ವಲ್ಪ ಪ್ರಗತಿಯಾಗಿದೆಯಾದರೂ, ಅಸ್ಪಶ್ಯತೆಯ ವಿಚಾರದಲ್ಲಿ ಪ್ರಗತಿ ಸಾಧ್ಯವಾಗಲಿಲ್ಲ ಎಂದು ಸಂತಖ ತೋಡಿಕೊಂಡಿದ್ದರು.
  • ತರ್ಕದ ಮೂಲಕ ವಿರೊಧಿಗಳ ಮನ ಒಲಿಸುವ ಶಕ್ತಿ ಭಾಷೆಗೆ ಇದೆ. ಆದರೆ, ಆ ಶಕ್ತಿಯ ಬಗ್ಗೆ ನಾವುಗಳು ನಂಬಿಕೆ ಕಳೆದುಕೊಂಡಿದ್ದೇವೆ.
  • ತಮ್ಮ ಸುತ್ತಲ ಪರಿಸರದಲ್ಲಿ ದೊರಕುವ ಸಾಮಗ್ರಿಗಳಿಂದಲೇ ಬದುಕು ಕಟ್ಟಿಕೊಳ್ಳುವ ಕಲೆಯನ್ನು ನಮ್ಮ ಬಡವರು ಇನ್ನೂ ಉಳಿಸಿಕೊಂಡಿದ್ದಾರೆ. ಇದು ಹೆಚ್ಚುಗಾರಿಕೆಯೇ ಸೈ.
  • ಕೊಳ್ಳುಬಾಕ ಸಂಸ್ಕೃತಿ ಮತ್ತು ಅರ್ಥಹೀನ ಅಭಿವೃದ್ದಿ, ಇವೆರಡೂ ಪಶ್ಚಿಮ ದೇಶಗಲ ನಾಗರೀಕತೆಯ ಕಥೆ. ಅಗತ್ಯವಿಲ್ಲದ್ದನ್ನು ಕೊಂಡು ಸುಖ ಪಡಲು ಸಾಧ್ಯವೇ?
  • ಬದುಕಿನ ವರ್ಷಗಳನ್ನು ಹೆಚ್ಚ್ಚಿಸುವ ಮಾತ್ರೆಗಳಿಗಿಂತಲೂ ಬದುಕಿನ ಗುಣಮಟ್ಟವನ್ನ ಹೆಚ್ಚಿಸುವುದು ಒಳಿತು. ವಿ~ಜ್ಞಾನ ಅದರತ್ತ ಸಾಗಬೇಕಾದುದು ಅನಿವಾರ್ಯ.
  • ಖಂಡನೆ- ನೀವು ನಿಮಗೆ ಬೇಕಾದುದನ್ನ ಮಾತ್ರ ಖಂಡಿಸುತ್ತೀರಿ, ಅನುಕೂಲಸಿಂಧು ಖಂಡನೆ ಎಂದು ಬೈಸಿಕೊಳ್ಳುವುದು ಬಹಳವಾಗಿದೆ. It's as if, we're all students taking the exam of being Politically Correct & we have to criticise & respond to everything. ನಮಗೆ ಸಂಬಂಧಿಸಲಿ ಅಥವಾ ಸಂಬಂಧಿಸದೆಯೇ ಇರಲಿ, ಪ್ರತಿಕ್ರಿಯೆ-ಖಂಡನೆ ಮಾಡಲೇ ಬೇಕು ಎಂಬ ನಿರೀಕ್ಷೆ ತ್ರಾಸದಾಯಕ. ನಾವೆಲ್ಲರೂ ರಾಜಕೀಯವಾಗಿ ಸರಿಯಾದ ವಿಷಯದ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಗಿದ್ದೇವೆಯೇ?
  • ನನಗೆ ಕನ್ನಡ ಗೊತ್ತು, ಕನ್ನಡ ಸಾಂಸ್ಕೃತಿಕ ಸಂದರ್ಭ ಗೊತ್ತು. ಆನು ದೇವಾ ಹೊರಗಣವನು ಬಗ್ಗೆ ಪ್ರತಿಕ್ರಿಯೆ ನೀಡಬಲ್ಲೆ. ನನಗೆ ಬಂಗಾಳಿ ತಿಳಿಯದು. ಲಜ್ಜಾ ಕೃತಿಯ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಿಲ್ಲ ಎಂದು ಖಂಡಿಸುವುದು ಎಷ್ಟು ಸರಿ? ಅನುಕೂಲಸಿಂಧು ಧೋರಣೆ ಎಮ್ದು ಹೀಗಳೆಯುವುದು ಎಷ್ಟು ಸರಿ?