ವಿಷಯಕ್ಕೆ ಹೋಗು

ಹಾ.ಮಾ. ನಾಯಕ

ವಿಕಿಕೋಟ್ದಿಂದ
 • ಜ್ಞಾನ ನಿಂತ ನೀರಲ್ಲ, ಹರಿಯುವ ಹೊಳೆ, ದಿನ ದಿನವೂ ಅದು ನವೋನವವಾಗುತ್ತಿದೆ
 • ಜ್ಞಾನ ಬೆಳೆದಂತೆಲ್ಲ ವ್ಯವಸ್ಥೆಗೊಳ್ಳಬೇಕಾಗುತ್ತದೆ. ವ್ಯವಸ್ಥೆಗೊಂಡಾಗ ವಿಸ್ತರಣ ಸಂಶೋಧನೆ ಮತ್ತು ವ್ಯಾಸಂಗಗಳು ಸುಲಭವಾಗುತ್ತವೆ
 • ಪುಸ್ತಕಗಳಲ್ಲಿ ಹಳೆಯವೆಂಬುವೇ ಇಲ್ಲ. ಓದಿರದ ಪುಸ್ತಕಗಳೆಲ್ಲ ಹೊಸವು; ಮತ್ತೆ ಮತ್ತೆ ಓದಬೇಕೆನ್ನುವ ಪುಸ್ತಕಗಳೆಲ್ಲ ಹೊಸವು.
  - ೧೬:೪೫, ೨೬ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಯಾವ ಭಾಷೆಯ ಹೇರಿಕೆಯೂ ಸರಿಯಲ್ಲ, ಯಾವುದೇ ಭಾಷೆಯ ಕಲಿಕೆಯನ್ನು ತಡೆಯುವುದೂ ಸರಿಯಲ್ಲ.
  - ೧೪:೧೭, ೭ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಸ್ವಾತಂತ್ರ್ಯ ಮನುಷ್ಯನ ದುಡಿಮೆಯನ್ನು ಬೇಡುತ್ತದೆ. ದುಡಿಯದ ಮನುಷ್ಯನಿಗೆ ಸ್ವಾತಂತ್ರ್ಯವಿರುವುದಿಲ್ಲ.
  - ೦೫:೫೫, ೧೫ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನಿಜವಾದ ವಿದ್ಯೆ ಮನುಷ್ಯನಿಗೆ ಆಲೋಚಿಸುವುದನ್ನು ಕಲಿಸುತ್ತದೆ.
  - ೦೪:೪೬, ೨೧ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನಿಜವಾದ ವಿದ್ಯೆ, ಮನುಷ್ಯನಿಗೆ ಆಲೋಚಿಸುವುದನ್ನು ಕಲಿಸುತ್ತದೆ.
  - ೦೬:೨೭, ೧೮ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಭಾಷೆಗಳನ್ನು ಒಂದಕ್ಕೊಂದು ಪೂರಕವೆಂದು ಭಾವಿಸಬೇಕು. ಅವುಗಳ ನಡುವೆ ಸ್ಪರ್ಧೆ ಏರ್ಪಡಿಸಬಾರದು.
 • ಮತ್ತೊಬ್ಬರ ವಿಚಾರವನ್ನು ಕೇಳುವ ಸಹನೆಯನ್ನು ಬೆಳಸಿಕೊಳ್ಳದಿದ್ದರೆ ನಾವು ವಿಚಾರವಂತರಾಗುವುದು ಸಾಧ್ಯವಿಲ್ಲ.
  - ೧೧:೧೦, ೧೪ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ‘ಸ್ನೇಹ’ ಬದುಕಿನ ಅಮೂಲ್ಯ ನಿಧಿ. ಒಳ್ಳೆಯ ಸ್ನೇಹಿತರು ವರವಾಗುತ್ತಾರೆ. ಕೆಟ್ಟ ಸ್ನೇಹಿತರು ಶಾಪವಾಗುತ್ತಾರೆ.
  - ೦೩:೧೮, ೧೬ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿಪ್ರಕಟಗೊಂಡ ಸುಭಾಷಿತ.
 • ಸುಭಾಷಿತ: ಮನುಷ್ಯ ಕೇವಲ ಸ್ಥಿತಪ್ರಜ್ಞನಾಗಿದ್ದರೆ ಸಾಲದು, ಸ್ಥಿತಿಪ್ರಜ್ಞನೂ ಆಗಿರಬೇಕು.
  - ಪ್ರಜಾವಾಣಿಯಲ್ಲಿಪ್ರಕಟಗೊಂಡ ಸುಭಾಷಿತ.