ವಿಷಯಕ್ಕೆ ಹೋಗು

ಡಿ.ವಿ.ಜಿ.

ವಿಕಿಕೋಟ್ದಿಂದ
  • ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು.
  • ಜೀವನದೊಂದು ಕಲೆ ಕಲೆಯ ಕಲಿಸುವುದೆಂತು?
  • ಒರಟುಯಾನವೋ ಭಾಷೆ?
  • ನಿನಗೆ ನೀನೇ ಗುರುವೋ?
  • ಪದಕುಸಿಯೆ ನೆಲವಿಹುದು ಮಂಕುತಿಮ್ಮ
  • ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ
  • ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು ಮಗುವು ನೀಂ ಪೆತ್ತರ್ಗೆ ಲೋಕಕ್ಕೆ ಸ್ಪರ್ಧಿ.
  • ಶುದ್ಧ-ಸತ್ಯವ ಜೀವಿತ-ಪ್ರಶ್ನೆಗನ್ಯಯಿಪ ಪದ್ಧತಿಯೇ ಧರ್ಮ.
  • ಗ್ರೀಸಿನಾ ಕಾವ್ಯಗಳನೋದುವರು ದೆಹಲಿಯಲಿ, ಕಾಶಿಯಾ ಶಾಸ್ತ್ರಗಳನೋಕ್ಸ್ ಫರ್ಡಿನವರು, ದೇಶ ಕಾಲ ವಿಭಾಗ ಮನದ ರಾಜ್ಯದೊಳಿರದು, ಶ್ವಾಸವದು ಬ್ರಹಮನದು ಮಂಕುತಿಮ್ಮ
  • ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ, ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ, ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ, ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ
  • ಪ್ರತಿಫಲದ ಅಪೇಕ್ಷೆಯಿಲ್ಲದೆ ಕೇವಲ ಆತ್ಮತೃಪ್ತಿಗಾಗಿ ಕೆಲಸ ಮಾಡಿದಾಗ, ಮೋಸ ಹೋದಾಗಲೂ ದುಃಖವಾಗುವುದಿಲ್ಲ. - ೧೮:೧೭, ೨೪ ಏಪ್ರಿಲ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು ನಿಮ್ಮ ದುಡಿಮೆಯ ಬೆವರೋ ಅಥವಾ ಬೇರೆಯವರ ಕಣ್ಣೀರೋ! - ೦೫:೦೧, ೨೦ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿರ್ಭಯವೂ, ನಿಷ್ಪಕ್ಷಪಾತವೂ ಆದ ಜಗತ್ಸತ್ಯಾನ್ವೇಷಣೆಯೇ ವಿಜ್ಞಾನ. - ೧೭:೫೫, ೨೭ ಫೆಬ್ರುವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಮ್ಮ ಬಾಳು ನಿತ್ಯದ ಕುಸ್ತಿ. ಅದಕ್ಕೆ ನಾವು ಹತ್ತೆಂಟು ಕೈಪಟ್ಟು, ಕಾಲು ವರಸೆಗಳನ್ನು ಅಭ್ಯಾಸ ಮಾಡಿಕೊಂಡಿರಬೇಕು. - ೧೬:೩೬, ೧೦ ಏಪ್ರಿಲ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಮ್ಮ ಸ್ವಭಾವ, ಸಂದರ್ಭ– ಇವೆರಡನ್ನೂ ನಾವು ಕಂಡುಕೊಂಡು ನಮಗೆ ತಕ್ಕ ಗುರಿ ಯಾವುದು, ತಕ್ಕ ದಾರಿ ಯಾವುದು ಎಂಬುದನ್ನು ನಾವೇ ಗೊತ್ತು ಮಾಡಿಕೊಳ್ಳಬೇಕು. - ೧೪:೫೫, ೫ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು.kannadahanigalu.com
  • ವಿದ್ವತ್ತು ಸಂತೆಯ ಸರಕಾಗಲೊಲ್ಲದು. ಸಂತೆಗೆ ವಿದ್ವತ್ತಿನ ಬೆಲೆ ತಿಳಿಯದು.
  • ಮನಸ್ಸೇ ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸದ ಹೊರತು ಇನ್ನಾವುದೂ ಸರಿಯಾಗಲಾರದು. - ೦೧:೫೧, ೧೮ ಮಾರ್ಚ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಹೊಸತನವೇ ಬಾಳು. ಹಳಸಿಕೆಯೆಲ್ಲ ಸಾವು ಬಿಡು.- ೦೩:೩೨, ೩೦ ಮಾರ್ಚ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಇರುವ ಭಾಗ್ಯವ ನೆನೆದು ಬಾರನೆಂಬುವುದನ್ನು ಬಿಡು ಹರುಷಕ್ಕಿದೆ ದಾರಿ.
  • ಒಳ್ಳೆಯ ಮಾತುಗಳನ್ನು ಆಡಿದರೆ ಸಾಲದು.ಆ ಮಾತುಗಳು ಒಳ್ಳೆಯ ಕೆಲಸಕ್ಕೆ ಉತ್ತೇಜನ ನೀಡುವಂತೆ ಇರಬೇಕು.
  • ಕರ್ತವ್ಯವನ್ನು ಕುರಿತು ಮೊದಲು ಯೋಚನೆ ಮಾಡಿ,ಹಕ್ಕುಗಳು ಆಮೇಲೆ ಬರಲಿ.
  • ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು; ಲೋಕ ಧರ್ಮದ ಹಿತಕ್ಕಾಗಿಯಲ್ಲ.
"https://kn.wikiquote.org/w/index.php?title=ಡಿ.ವಿ.ಜಿ.&oldid=8675" ಇಂದ ಪಡೆಯಲ್ಪಟ್ಟಿದೆ