ವರ್ಗ:ಸಾಹಿತ್ಯ
ಗೋಚರ
(ಶ್ರೀ ಮದ್ಭಾಗವತ)
ನವ ವಿಧ ಭಕ್ತಿ. ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ| ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೆದನಂ||
ಭಗವಂತನ ಲೀಲೆಗಳನ್ನು ಕೊಂಡಾಡುವುದನ್ನು ಕೇಳುವುದಕ್ಕೆ ಶ್ರವಣ, ಕೇಳುವುದನ್ನು ಪ್ರೀತಿಯಿಂದ ಹೇಳುವುದಕ್ಕೆ ಕೀರ್ತನ. ಯಾವಾಗಲೂ ನಾಮಸ್ಮರಣೆ ಮಾಡುವುದೇ ಸ್ಮರಣ ಭಕ್ತಿ, ಶ್ರೀ ಗುರುಗಳ ಪಾದಸೇವೆ ಮಾಡುವುದಕ್ಕೆ ಪಾದಸೇವನ, ಪೂಜೆ ಮಾಡುವುದಕ್ಕೆ ಅರ್ಚನಾ. ನಮಸ್ಕರಿಸುವುದಕ್ಕೆ ವಂದನ, ವಿವಿಧ ಸೇವೆ ಮಾಡುವುದಕ್ಕೆ ದಾಸ್ಯ, ತನ್ನ ಮಿತ್ರ, ಇಷ್ಟಬಂಧು, ತಾಯ್ತಂದೆಯರ ಮುಂದೆ ಅಂತಃಕರಣವನ್ನು ಬಿಚ್ಚಿ ತೋರಿಸುವಂತೆ ಪರಮಾತ್ಮನ ಮುಂದೆ ಬಿಚ್ಚಿ ತೋರಿಸುವುದು ಸಖ್ಯ ಮತ್ತು ಎಲ್ಲವನ್ನೂ ಸಮರ್ಪಿಸುವುದೇ ಆತ್ಮನಿವೇದನ.