ವಿಷಯಕ್ಕೆ ಹೋಗು

ಮಂಕುತಿಮ್ಮ

ವಿಕಿಕೋಟ್ದಿಂದ
  • ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ. ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು. ಪದಕುಸಿಯೆ ನೆಲವಿಹುದು, ಮಂಕುತಿಮ್ಮ
  • ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ ಕೊರತೆಯೊಂದನು  ನೀನು ನೆನೆನೆನೆದು ಕೆರಳಿ ಧರೆ ಎಲ್ಲವನು ಶಪಿಸಿ ಮನದಿ ನರಕವ ನಿಲಿಸಿ ನರಳುವುದು ಬದುಕೇನೋ? ಮಂಕುತಿಮ್ಮ.ಮಂಕುತಿಮ್ಮನ ಕಗ್ಗದ ಸೊಬಗು.ಪ್ರಕಟಿತ ದಿನಾಂಕ ಅಕ್ಟೋಬರ್ 13th,2014 panjumagazine.com
  • ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು- ಮಂಕುತಿಮ್ಮ
  • ಅಕ್ಕಿಯೊಳಗನ್ನವನು ಮೊದಲಾರು ಕಂಡವರು ಅಕ್ಕರದ ಬರಹಕ್ಕೆ ಮೊದಲಿಗನದಾರು ಲಿಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ ದಕ್ಕುವುದೇ ಜಸ ನಿನಗೆ ’ಮಂಕುತಿಮ್ಮ
  • ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ ಅವನರಿವಿಗೆಟುಕುವೊಲೊಂದಾತ್ಮನಯವ ಹವಣಿಸಿದನಿದನು ಪಾಮರಜನರ ಮಾತಿನಲಿ ಕವನ ನೆನಪಿಗೆ ಸುಲಭ-ಮಂಕುತಿಮ್ಮ
  • ಗಿಡದಿ ನಗುತ್ತಿರುವ ಹೂವು ಪ್ರಕೃತಿಸಖನಿಗೆ ಚಂದ ಮಡದಿ ಮುಡಿದಿರುವ ಹೂವು ಯುವಕಂಗೆ ಚಂದ ಗುಡಿಯೊಳಗೆ ಕೊಡುವ ಹೂವು ದೈವಭಕ್ತಗೆ ಚಂದ ಬಿಡಿಗಾಸು ಹೂವಳಿಗೆ -ಮಂಕುತಿಮ್ಮ.ಮಂಕುತಿಮ್ಮನ ಕಗ್ಗದ ಸೊಬಗು.ಪ್ರಕಟಿತ ದಿನಾಂಕ ಅಕ್ಟೋಬರ್ 13th,2014 panjumagazine.com
  • ಏನು ಜೀವನದರ್ಥ? ಏನು ಪ್ರಪಂಚಾರ್ಥ? ಏನು ಜೀವ ಪ್ರಪಂಚಗಳ ಸಂಬಂಧ ಕಾಣದಿಲ್ಲಿರ್ಪುದೇನಾನುಮುಂಟೆ ಅದೇನು? ಜ್ಞಾನ ಪ್ರಮಾಣವೇಂ - ಮಂಕುತಿಮ್ಮ
  • ದೇವರೆಂಬುದದೇನು ಕಗ್ಗತ್ತಲೆಯ ಗವಿಯೇ? ನಾವಾರಿಯಲಾರದೆಲ್ಲದರೊಟ್ಟು ಹೆಸರೆ? ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? ಸಾವು ಹುಟ್ಟುಗಳೇನು? - ಮಂಕುತಿಮ್ಮ
  • ಒಗಟಯೇನೀ ಸೃಷ್ಟಿ ? ಬಾಳಿನರ್ಥವದೇನು? ಬಗೆದು ಬಿಡಿಸುವರಾರು ಸೊಜಿಗವನಿದನು? ಜಗವ ವಿರವಿಸಿದ ಕೈಯೊಂದಾದೊಡೇಕಿಂತು ಬಗೆ ಬಗೆಯ ಜೀವಗತಿ ?-ಮಂಕುತಿಮ್ಮ
  • ಬದುಕಿಗಾರ್ ನಾಯಕರು, ಏಕಪೌರುಷವುರೋ ವಿಧಿಯೋ ಪೌರುಷವೊ ಧರುಮವೊ ಅಂಧಬಲವೋ ಕುದುರುವುದದೆಂತು ಈಯವ್ಯವಸ್ಥೆಯ ಪಾಡು ಅದಿಗುದಿಯೆ ಗತಿಯೇನೋ- ಮಂಕುತಿಮ್ಮ
  • ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? ಭ್ರಮಿಪುದೇನಾಗಾಗ ಕರ್ತೃವಿನ ಮನಸು? ಮಮತೆಯುಳ್ಳವನಾತನಾದೋಡೀ ಜೀವಗಳು ಶ್ರಮಪಡುವುವೇಕಿಂತು?- ಮಂಕುತಿಮ್ಮ
  • ಏನು ಪ್ರಪಂಚವಿದು, ಏನು ಧಾಳಾಧಾಳಿ, ಏನದ್ಭುತಾಪಾರಶಕ್ತಿನಿರ್ಘಾತ ಮಾನವನ ಗುರಿಯೇನು ?ಬೆಲೆಯೇನು?ಮುಗಿವೇನು? ಏನರ್ಥವಿದಕೆಲ್ಲ? - ಮಂಕುತಿಮ್ಮ
  • ಮುತ್ತಿರುವುದರಿಂದು ಭೂಮಿಯನೊಂದು ದುರ್ದೈವ ಮೃತ್ಯು ಕುಣಿಯುತಲಿಹನು ಕೇಕೆ ಹಾಕುತ್ತಲಿ ಸುತ್ತಿಪುತು ತಲೆಯನನುದಿನದ ಲೋಕದ ವಾರ್ತೆ ಎತ್ತಲಿದಕೆಲ್ಲ ಕಡೆ -ಮಂಕುತಿಮ್ಮ
  • ಮಾನವರೋ ದಾನವರೋ ಭೂಮಾತೆಯನು ತಣಿಸೆ ಶೋನಿತವನೆರೆಯುವರು ಭಾಷ್ಪ ಸಲುವುದಿರೆ? ಏನು ಹಗೆ ಏನು ಧಗೆ ಏನು ಹೊಗೆ ಯೀ ಧರಣಿ ಸೌನಿಕನ ಕಟ್ಟೆಯೇಂ- ಮಂಕುತಿಮ್ಮ

[]

  1. [ಋತ್ವಿಕ್ ವಾಣಿ ಸಂಪುಟ 23 ಸಂಚಿಕೆ 04 ಮಾಸ ಪತ್ರಿಕೆ ಸೆಪ್ಟೆಂಬರ್ 2023]