ಬಸವಣ್ಣ

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
  • ಕಾಯಕವೇ ಕೈಲಾಸ, ಕರ್ತವ್ಯದ ಉದ್ದೇಶ.
  • ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯಾ.
  • ಬಯ್ದವರೆನ್ನ ಬಂಧುಗಳೆಂಬೆ, ಜರೆದವರೆನ್ನ ಜನ್ಮಬಂಧುಗಳೆಂಬೆ ಹೊಗಳಿದವರೆನ್ನ ಹೊನ್ನಶೂಲಕ್ಕಿಕಿದರು.
  • ತನುವಿನ ಕೋಪ ಹಿರಿತನಕ್ಕೆ ಕೇಡು. ಮನದ ಕೋಪ ತನ್ನ ಅರಿವಿಗೆ ಕೇಡು. - ೧೩:೦೩, ೧೭ ಮಾರ್ಚ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
  • ಸಾರ ಸಜ್ಜನರ ಸಂಗವ ಮಾಡುವುದು, ದೂರ ದುರ್ಜನರ ಸಂಗ ಬೇಡವಯ್ಯಾ.
  • ನುಡಿದರೆ ಮುತ್ತಿನ ಹಾರದಂತಿರಬೇಕು.
"https://kn.wikiquote.org/w/index.php?title=ಬಸವಣ್ಣ&oldid=8621" ಇಂದ ಪಡೆಯಲ್ಪಟ್ಟಿದೆ