ಸುಭಾಶ್ಚಂದ್ರ ಬೋಸ್‌

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
 • ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ಹೋರಾಟದಿಂದಲೇ ಪಡೆದು ಕೊಳ್ಳಬೇಕು. - ೧೬:೨೨, ೧೩ ಅಕ್ಟೋಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನನಗೆ ರಕ್ತ ನೀಡಿ ಮತ್ತು ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ.
 • ಒಬ್ಬ ವ್ಯಕ್ತಿ ತನ್ನ ಸಿದ್ದಾಂತಕ್ಕಾಗಿ ಸಾವನ್ನಪ್ಪಬಹುದು. ಅದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ದಾಂತ ಸಾವಿರ ಜನರಲ್ಲಿ ಅವತರಿಸುತ್ತದೆ.
 • ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ.
 • ಗುಲಾಮಿತನದ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ. ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ದರಾಗಬೇಕಾಗಿದೆ.
 • ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ.
 • ಭಾರತವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ. ಶ್ರೀಘದಲ್ಲೇ ಭಾರತ ಸ್ವತಂತ್ರ್ಯವಾಗಲಿದೆ.
 • ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಬಹುದೊಡ್ಡ ಅಪರಾಧ.
 • ಉತ್ಸಾಹವಿಲ್ಲದೆ ಯಾವ ಮಹತ್ತರವಾದ ಕೆಲಸವೂ ನಡೆದಿಲ್ಲ.
 • ಜನ ಹಣ ಮತ್ತು ವಸ್ತುಗಳು ಸ್ವತಃ ಜಯ ಅಥವಾ ಸ್ವಾತಂತ್ರ್ಯವನ್ನು ತರಲು ಸಾಧ್ಯವಿಲ್ಲ. ಧೈರ್ಯಶಾಲಿ ಕೆಲಸಗಳು ಮತ್ತು ಉಜ್ಜಲ ಸಾಧನೆ ಮಾಡಬೇಕಾದರೆ ನಮ್ಮಲ್ಲಿ ನಾವು ಪ್ರೇರಕ ಶಕ್ತಿಯನ್ನು ಹೊಂದಿರಬೇಕು.
 • ಸ್ವೀಕರಿಸಬೇಕಾದ ಸವಾಲುಗಳು ಇಲ್ಲದೇ ಇದ್ದರೆ,ಹೋರಾಟಗಳು ಇಲ್ಲದೇ ಹೋದರೆ ಜೀವನ ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ.