ಸಾಕ್ರೆಟಿಸ್‌

ವಿಕಿಕೋಟ್ದಿಂದ

ಸಾಕ್ರಟೀಸ್ ಕ್ರಿ.ಪೂ.೪೬೯-೩೯೯ ರಲ್ಲಿ ಗ್ರೀಸ್ ದೇಶದಲ್ಲಿ ಜೀವಿಸಿದ್ದ ಒಬ್ಬ ಶ್ರೇಷ್ಠ ತತ್ವಜ್ಞಾನಿ.ಅವನು ಸತ್ಯವಾದಿಯೂ,ನಿಷ್ಟೂರವಾದಿಯೂ ಆಗಿದ್ದನು.

  • ತಪ್ಪನ್ನು ದೂರವಿರಿಸಿ ಸತ್ಯವನ್ನು ಶೋಧಿಸುವುದೇ ಶಿಕ್ಷಣ. - ೦೯:೩೨, ೯ ಜೂನ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ವ್ಯಕ್ತಿಗೆ ಸತ್ಯವನ್ನು ತಿಳಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದೇ ಶಿಕ್ಷಣ. - ೦೬:೪೫, ೬ ಅಕ್ಟೋಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಾನು ಯಾರಿಗೂ ಏನನ್ನೂ ಬೋಧಿಸಲಾರೆ. ಅವರು ಯೋಚಿಸುವಂತೆ ಮಾತ್ರ ಮಾಡಬಲ್ಲೆ. - ೦೪:೦೦, ೨೪ ಡಿಸೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಮಗೆ ಏನೂ ತಿಳಿದಿಲ್ಲ ಎನ್ನುವುದನ್ನು ಅರಿಯುವುದೇ ನಿಜವಾದ ವಿವೇಕ . - ೧೦:೦೮, ೧೦ ಫೆಬ್ರುವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅಸೂಯೆ ಎನ್ನುವುದು ಆತ್ಮಕ್ಕೆ ಅಂಟಿದ ಹುಣ್ಣು. - ೦೬:೦೩, ೩ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬುದ್ಧಿ ಇಲ್ಲದ ಐಶ್ವರ್ಯ ಕಡಿವಾಣ ಇಲ್ಲದ ಕುದುರೆಯಂತೆ. - ೦೯:೨೭, ೧೫ ನವೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸತ್ಯದ ಜತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ. - ೦೫:೦೦, ೧೩ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬುದ್ಧಿ ಇಲ್ಲದ ಐಶ್ವರ್ಯ ಕಡಿವಾಣ ಇಲ್ಲದ ಕುದುರೆಯಂತೆ. - ೦೮:೪೫, ೧೬ ನವೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬೋಧಿಸುವುದಕ್ಕಿಂತ ಕಲಿಯುವಂತೆ ಮಾಡುವುದು ಮುಖ್ಯ. - ೧೧:೨೭, ೨ ಸೆಪ್ಟೆಂಬರ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಮ್ಮ ಧ್ಯೇಯವು ಸುಖ ಪ್ರಾಪ್ತಿಯಲ್ಲ. ಅದು ಸತ್ಯದ ಸಾಕ್ಷಾತ್ಕಾರ ಎಂಬುದನ್ನು ನಂಬಬೇಕು.
  • ಪರೀಕ್ಷಿಸದ ಜೀವನವು, ಜೀವಿಸಲು ಯೋಗ್ಯವಾಗಿಲ್ಲ.
  • ನಿಮ್ಮ ಗಾಯಗಳನ್ನು, ನಿಮ್ಮ ಬುದ್ಧಿವಂತಿಕೆಯನ್ನಾಗಿ ಬದಲಿಸಿ.
  • ನಮ್ಮ ಪ್ರಾರ್ಥನೆಗಳು ಸಾಮಾನ್ಯವಾಗಿ ಆಶೀರ್ವಾದಕ್ಕಾಗಿ ಇರಬೇಕು, ಏಕೆಂದರೆ ನಮಗೆ ಯಾವುದು ಒಳ್ಳೆಯದು ಎಂದು ದೇವರಿಗೆ ಚೆನ್ನಾಗಿ ತಿಳಿದಿದೆ.