ಸರ್ ಎಂ.ವಿಶ್ವೇಶ್ವರಯ್ಯ

ವಿಕಿಕೋಟ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
  1. ಜನರ ಬಡತನ ತೊಲಗಿಸಬೇಕಾದರೆ ಕಡ್ಡಾಯ ಶಿಕ್ಷಣದ ಮೂಲಕ ಅವರಲ್ಲಿರುವ ಅಜ್ಞಾನವನ್ನು ತೊಲಗಿಸಿ ಮತ್ತು ಮಿತವ್ಯಯದ ಪಾಠ ಅವರಿಗೆ ಕಲಿಸಿ.
  2. ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು.
  3. ದುಡಿಮೆಗೆ ಗುರಿಯಿರಲಿ , ದುಡಿಯುವುದರಲ್ಲಿ ನಿಯಮವಿರಲಿ.
  4. ನಿನ್ನ ದುಡಿಮೆಯಲ್ಲಿ ನೀನು ದಕ್ಷನಾಗು.
  5. ದುಡಿಮೆಯಲ್ಲಿ ಸೇವಾ ಬುದ್ದಿಯಿರಲಿ.
  6. ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.
  7. ಜನಾಂಗವನ್ನು ಶ್ರೇಷ್ಠ ಮಾಡುವುದಕ್ಕೆ ಒಂದೇ ದಾರಿ. ಜನರನ್ನು ಶ್ರೇಷ್ಠ ಮಾಡಬೇಕು. ೫ ಡಿಸೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  8. ಕಾಯಕವೇ ಪೂಜೆ