ವಿಷಯಕ್ಕೆ ಹೋಗು

ಎಂ. ವಿಶ್ವೇಶ್ವರಯ್ಯ

ವಿಕಿಕೋಟ್ದಿಂದ
  • ಜನರ ಬಡತನ ತೊಲಗಿಸಬೇಕಾದರೆ ಕಡ್ಡಾಯ ಶಿಕ್ಷಣದ ಮೂಲಕ ಅವರಲ್ಲಿರುವ ಅಜ್ಞಾನವನ್ನು ತೊಲಗಿಸಿ ಮತ್ತು ಮಿತವ್ಯಯದ ಪಾಠ ಅವರಿಗೆ ಕಲಿಸಿ.
  • ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು.
  • ದುಡಿಮೆಗೆ ಗುರಿಯಿರಲಿ , ದುಡಿಯುವುದರಲ್ಲಿ ನಿಯಮವಿರಲಿ.
  • ನಿನ್ನ ದುಡಿಮೆಯಲ್ಲಿ ನೀನು ದಕ್ಷನಾಗು.
  • ದುಡಿಮೆಯಲ್ಲಿ ಸೇವಾ ಬುದ್ದಿಯಿರಲಿ.
  • ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.
  • ಜನಾಂಗವನ್ನು ಶ್ರೇಷ್ಠ ಮಾಡುವುದಕ್ಕೆ ಒಂದೇ ದಾರಿ. ಜನರನ್ನು ಶ್ರೇಷ್ಠ ಮಾಡಬೇಕು.
    - ೫ ಡಿಸೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕಾಯಕವೇ ಪೂಜೆ
  • "ಪ್ರತಿಯೊಂದು ದೇಶದ ಪ್ರಗತಿ ಪ್ರಮುಖವಾಗಿ ಆ ದೇಶದ ಪ್ರಜೆಗಳ ವಿದ್ಯಾಭ್ಯಾಸವನ್ನು ಅವಲಂಭಿಸಿರುತ್ತದೆ. ವಿದ್ಯಾಭ್ಯಾಸವಿಲ್ಲದೆ ನಮ್ಮದು ಒಂದು ಎಳೆಯರ ದೇಶವಾಗುವುದು ಅಷ್ಟೇ. ನಮ್ಮ ಹುಟ್ಟು ಹಾಗು ಸಮಜದಲ್ಲಿ ನಮ್ಮ ಸ್ಥಾನಗಳಷ್ಟೇ ಅಲ್ಲದೆ ನಮ್ಮ ಸಾಮಾನ್ಯ ಜ್ಞಾನ ಹಾಗು ಕಾರ್ಯರೂಪೋನ್ಮುಖ ಜ್ಞಾನ ನಮ್ಮನ್ನು ಗುರುತಿಸಿಕೊಳ್ಳುವ ಮಾಪಕ ಆಗುತ್ತದೆ. ಸಾಧಾರಣವಾಗಿ ಮಾನವರು ಎಲ್ಲೆಡೆ ಸಮಾನ ಮಟ್ಟದ ಅರಿವಿನೊಂದಿಗೆ ಪ್ರಾರಂಭಿಸುವರಾದರೂ, ಒಂದು ನಾಗರೀಕ ದೇಶ ಹಾಗು ಅನಾಗರೀಕ ದೇಶಕ್ಕೂ ಇರುವ ಅಂತರ ಆ ದೇಶದ ಜನರು ಯಾವ ಮಟ್ಟಕ್ಕೆ ಬುದ್ಧಿವಂತಿಕೆ ಮತ್ತು ಕಾರ್ಯ ಕುಷಲತೆಯನ್ನು ಮೈಗೂಡಿಸಿಕೊಳ್ಳುತ್ತಾರೆ ಎಂಬುದರಲ್ಲಿದೆ."[]
  • ಗಾಂಧೀಜೀಯವರ ಪತ್ರಕ್ಕೆ ಪ್ರತಿಕ್ರಿಯಿಸುತ್ತಾ....

"ನಿಮ್ಮ ಚಿಂತನೆ ಗ್ರಾಮೀಣ ಉದ್ಯಮದ ಪ್ರಗತಿಯನ್ನು ಕುರಿತದ್ದಾಗಿದೆ, ನನ್ನದು ಘನ (ಭಾರೀ) ಉದ್ಯಮ ಹಾಗು ಗ್ರಾಮೀಣ ಉದ್ಯಮ ಎರಡರ ಪ್ರಗತಿಯೂ ಆಗಬೇಕು ಎಂಬ ಚಿಂತನೆ. ಗ್ರಾಮೀಣ ಉದ್ಯಮದ ಪ್ರಗತಿಯ ನಿಮ್ಮ ಉದ್ದೇಶಕ್ಕೆ ನನ್ನ ಪೂರ್ಣ ಸಹಕಾರ ಇದೆ. ನಾನು ಎಂದಿಗೂ ಯಾವುದೇ ಉನ್ನತ ಕಾರ್ಯಕ್ಕೆ ಅಡಚಣೆ ತರುವ ಮನಸಿಲ್ಲ, ಅದರಲ್ಲೂ ನಿಮ್ಮಂತಹ ವಿಚಾರವಂತರೂ, ಜನ ಸೇವೆಯಲ್ಲಿ ಐತಿಹಾಸಿಕ ಸಾಧಕರು ಕೈಗೊಳ್ಳುವ ಕಾರ್ಯಗಳಲ್ಲಿ..... ನಾನು ಘನ (ಭಾರೀ) ಉದ್ಯಮನ್ನು ಬೆಂಬಲಿಸುತ್ತೇನೆ. ಇದು ನಮ್ಮ ದೇಶದಿಂದ ಪ್ರತೀ ವರ್ಷ ಹೊರದೇಶಗಳಿಗೆ ಹೋಗುತ್ತಿರುವ ಸಂಪತ್ತನ್ನು ಉಳಿಸಬಲ್ಲದು; ಘನ ಉದ್ಯಮಗಳು ನಮ್ಮ ರೈಲ್ವೇ ಸಾರಿಗೇ ಹಾಗು ದೇಶ ರಕ್ಷಣೆಗೆ ಬೇಕಾದ ಯಂತ್ರಗಳನ್ನು, ಸ್ಥಳೀಯ ಕಾರ್ಖಾನೆಗಳಿಗೆ ಬೇಕದ ಯಂತ್ರಗಳನ್ನು ಹಾಗು ಗ್ರಾಮೀಣ ಉದ್ಯಮಕ್ಕೆ ಬೇಕಾದ ಯಂತ್ರಗಳನ್ನೂ ತಯಾರಿಸಬಹುದು. ಯಂತ್ರ ಶಕ್ತಿಯ ಸುದೀರ್ಘ ಬಳಕೆಯ ಅಗತ್ಯವಿದೆ ಏಕೆಂದರೆ ನಮ್ಮ ದೇಶದ ದೀರ್ಘ ಕಾಲಿಕ ಹಾಗು ತಕ್ಷಣದ ಅಗತ್ಯಗಳನ್ನು ಮಾನವ ಶಕ್ತಿಗಿಂತಲೂ ಸಮರ್ಥವಾಗಿ ಇದು ಪೂರೈಸಬಲ್ಲದು. ನಮ್ಮ ಜನರ ಜೀವನಮಟ್ಟವನ್ನು ಗೌರವಾನ್ವಿತವಾಗಿಸಲು ಬೇಕಾದ ಆಹಾರ ಹಾಗು ಸರಕು ಸಾಮಗ್ರಿಗಳನ್ನು ಬೇಗನೆ ಒದಗಿಸುವ ಗುರಿ ನಮ್ಮದಾಗಬೇಕು." []

  • "ಭಾರತಿಯರ ಅರಿವಿಗೆ ಆಧುನಿಕ ಪ್ರಗತಿಯ ತತ್ವದ ಪರಿಚಯವಾಗಬೇಕಾಗಿದೆ, ಸಾರ್ವತ್ರಿಕ ವಿಚಾರಣೆಯ ಮಿಡಿತದ ಹಾಗು ವೈಜ್ಞಾನಿಕ್ಕೋದ್ದಿಮೆಯ ಜಾಗರೀಕರಣ ಮೂಡಬೇಕಾಗಿದೆ ಮತ್ತು ಅದಕ್ಕೆ ಬೇಕಾದ ವಿಚಾರ ಹಾಗು ಪ್ರಯಾಸವನ್ನು ಉತ್ತೇಜಿಸಬೇಕಾಗಿದೆ. ಒಂದು ಹೊಸ ಭಗೆಯ ಆತ್ಮಗೌರವಯುತ, ಪ್ರಗತಿಪರ ಪೌರತ್ವವನ್ನು ಸೃಷ್ಟಿಸಬೇಕಾಗಿದೆ ಮತ್ತು ಸ್ವಾವಲಂಭಿತ ರಾಷ್ಟ್ರೀಕರಣ ಬೆಳೆಯಬೇಕಾಗಿದೆ. " []
  • ೧೯೫೫ ರ ಭಾರತ ರತ್ನ ಪುರಸ್ಕಾರದಿಂದ ಗೌರವಿಸಲ್ಪಟ್ಟ ವಿಶ್ವೇಶ್ವರಯ್ಯನವರು ಆಗಿನ ಪ್ರಧಾನಿ ಜವಹರ್ ಲಾಲ್ ನೆಹರು ಅವರಿಗೆ ಬರೆದ ಪತ್ರದಲ್ಲಿ...

" ನನ್ನನ್ನು ಈ ಪುರಸ್ಕಾರದಿಂದ ಗೌರವಿಸಿದ್ದಕ್ಕೆ ನಾನು ನಿಮ್ಮ ಸರ್ಕಾರವನ್ನು ಹೊಗಳುತ್ತೇನೆ ಎಂಬುದು ನಿಮ್ಮ ನಿರೀಕ್ಷೇ ಆಗಿದ್ದರೆ ಅದು ನಿಮಗೆ ನಿರಾಶೆಯನ್ನು ಉಂಟು ಮಾಡಬಲ್ಲದು. ನಾನು ವಾಸ್ತವತೆ, ಸಾಕ್ಷಿ, ಆಧಾರಗಳನ್ನು ಅರಸುವ ವ್ಯಕ್ತಿ." []

  • ಆಸ್ಟ್ರೇಲಿಯಾ ಹಾಗು ಕೆನಡಾದ ಗೌರ್ನರ್-ಜನರಲ್ ಗಳು ಪ್ರಕಟಿಸಿದ ತಮ್ಮ ಸಂಸ್ಥಾನಗಳಲ್ಲಿನ ಆರ್ಥಿಕ ಸಾಧನೆಗಳನ್ನು ಭಾರತೀಯರು ಗಮನಸಬೇಕು ಎನ್ನುತ್ತಾ, ವಿಶ್ವೇಶ್ವರಯ್ಯನವರು…
ಆಸ್ಟ್ರೇಲಿಯಾ, ಕೆನಡಾ ಹಾಗು ಭಾರತಗಳ ಆರ್ಥಿಕ ಸಾರಾಂಶ ಟಿಪ್ಪಣಿ

"ಈ ಪ್ರಕಟಣೆಗಳಲ್ಲಿನ ಅಂಕಿ ಅಂಶಗಳು ಮೈಸೂರಿನ ಪ್ರಜೆಗಳ ಕಣ್ಣು ತೆರೆಸಬೇಕು. ನಾನು ಅದನ್ನು ಇಲ್ಲಿ ಪ್ರಸ್ಥಾಪಿಸುತ್ತಿರುವುದು ಈ ಎರಡು ಬ್ರಿಟೀಷ್ ಸಂಸ್ಥಾನಗಳ (ವಸಾಹತು)ಮಟ್ಟಕ್ಕೆ ಸಂವೃದ್ಧಿಯನ್ನು ಸಾಧಿಸುವ ನಿರೀಕ್ಷೆಯಿಂದಲ್ಲ. ಸೂಕ್ತ ವ್ಯವಸ್ಥೆ ಮತ್ತು ಸಾಧನಗಳೊಂದಿಗೆ ಮಾನವನ ದಕ್ಷ ಪ್ರಯತ್ನ ಏನೆಲ್ಲವನ್ನು ಸಾಧಿಸಬಹುದು ಎಂಬುದನ್ನು ತಿಳಿದರೆ ನಮಗೇ ಒಳಿತು. ಪಾಶ್ಚಾತ್ಯ ದೇಶಗಳ ರಾಷ್ಟ್ರೀಯತೆ ಆರ್ಥಿಕತೆಯ ನಿಟ್ಟಿನಲ್ಲಿ ಸಾಗಿದೆ , ಆದರೆ ನಮ್ಮ ದೇಶದ ರಾಷ್ಟ್ರೀಯತೆ ವಿಧಿ ಮತ್ತು ಧಾರ್ಮಿಕ ನೀತಿಯ ಕೈವಶದಲ್ಲಿದೆ. ಸ್ವರ್ಣಯುಗವು ಹಿಂದೆ ಇತ್ತೆಂದೂ, ಜಗತ್ತಿನ ಮೌಲ್ಯಗಳು ಕೆಳಗುರುಳುತ್ತಿವೆ, ಪೂರ್ವ ಸ್ಥಿತಿಯನ್ನು ಪುನಃ ತರುವುದಾದರೆ ಜಗತ್ತು ಉದ್ಧರಿಸುತ್ತದೆ ಎಂಬ ಭ್ರಾಂತಿಯಲ್ಲೇ ನಮ್ಮಲ್ಲಿ ಇನ್ನೂ ಕೆಲವರು ಇದ್ದಾರೆ. ಈ ಜಗತ್ತಿನಲ್ಲಿ ನಮ್ಮ ಜೀವನವನ್ನು ಮುಂದಿನ ಲೋಕಕ್ಕೆ ಅಣಿಗೊಳಿಸಿಕೊಳ್ಳುವ ಉದ್ದೇಶಕ್ಕೆ ತೊಡಗಿಸಿಕೊಳ್ಳಬೇಕು, ಹಾಗಾಗಿ ಇಲ್ಲಿ ನಾವು ಸುಖ, ಸೌಕರ್ಯದ ಜೀವನಕ್ಕೆ ಸಿಲುಕಿಕೊಳ್ಳಬಾರದು ಎಂಬುದು ಹಿಂದೂ ಧರ್ಮದ ಸಿದ್ಧಾಂತ. ನಾವು ಹಿಂದಿನ ಆದರ್ಶಗಳಿಗೇ ಬಂಧಿಗಳಾಗಿದ್ದೇವೆ. ವೈಯಕ್ತಿಕ ಲಾಭ ಹಾಗು ಅಗತ್ಯ್ಯಾನುಸಾರ ಪಾಶ್ಚಾತ್ಯದ ಕಾರ್ಯ ಹಾಗು ವ್ಯಾಪಾರ ಶೈಲಿಗಳನ್ನು ಅಳವಡಿಸಿಕೊಂಡಿದ್ದೇವೆ. ಹಳೆಯ ತತ್ವಗನ್ನೇ ಉಪಾಸಿಸುತ್ತಾ, ಆಧುನಿಕ ತತ್ವಗಳನ್ನು ಅರೆಮನಸ್ಸಿನಿಂದ ಸ್ವೀಕರಿಸಿ, ಒಟ್ಟಾರೆ ಸ್ಥಗಿತತೆಯೇ ನಮ್ಮ ಪ್ರತಿಭೆ ಹಾಗು ಜಾಣತನವೆಂದು ನಿರೂಪಿಸಿದ್ದೇವೆ. ನಾವು ಅನ್ಯ ದೇಶಗಳಂತೆ ವಸ್ತು ಸಂಪತ್ತನ್ನು ಅನುಸರಿಸುವುದಾದರೆ,ನಾವು ನಮ್ಮ ದಿಕ್ಕೆಟ್ಟ ಕಾರ್ಯಗಳನ್ನು ಹೊರಗೆಸೆದು ಪಾಶ್ಚಾತ್ಯ ತತ್ವಗಳನ್ನು, ಗುಣಮಟ್ಟವನ್ನು ಅಳವಡಿಸಿಕೊಂಡು ಅವರ ಮಾರ್ಗವನ್ನು ಅನುಸರಿಸಬೇಕು - ಸ್ಪಷ್ಟೋಕ್ತವಾಗಿ ವಿದ್ಯಾಭ್ಯಾಸ ಎಲ್ಲ ಮಟ್ಟಗಳಲ್ಲೂ ಹರಡಬೇಕು, ಉದ್ಯೋಗ ಬೆಳೆಯಬೇಕು ಮತ್ತು ಉತ್ಪಾದನೆ ಹಾಗು ಸಂಪತ್ತು ಹೆಚ್ಚಾಗಬೇಕು. ಮಿಕೆಲ್ಲಾ ಕಾರ್ಯಗಳೂ ಆರ್ಥಿಕ ಬೆಳವಣಿಗೆಯ ಕಟ್ಟುಪಡೆಗೆ ತಮನ್ನು ತಾವು ರೂಪಿಸಿಕೊಳ್ಳಬೇಕು." [] []

  1. . Remembering Our Leaders. Vol2. CBT Publication.
  2. . Remembering Our Leaders. Vol2. CBT Publication.
  3. Reconstructing India. 1920. pp. In his preface to the book. 
  4. . Our Leaders.
  5. . Speeches by Sir M. Visvesvaraya.
  6. Speeches by Sir M. Visvesvaraya. K.C.I.E. Bangalore Government Press. 1917. pp. 148-159.