ವಿಷಯಕ್ಕೆ ಹೋಗು

ರಾಮಕೃಷ್ಣ ಪರಮಹಂಸ

ವಿಕಿಕೋಟ್ದಿಂದ
  • ಸಜ್ಜನರ ಕೋಪ ನೀರಿನ ಮೇಲೆ ಗೆರೆ ಇದ್ದಂತೆ. ಕ್ಷಣದಲ್ಲಿಯೇ ಮಾಯವಾಗಿ ಬಿಡುತ್ತದೆ. - ೧೮:೨೨, ೨೨ ಮಾರ್ಚ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಂಬಿಕೆಯೇ ಜೀವನ, ಸಂದೇಹವೇ ಮೃತ್ಯು - ೦೬:೦೩, ೧೧ ಜುಲೈ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಶ್ರೇಷ್ಠ ವಿಚಾರಗಳಿಂದ ತುಂಬಿರುವ ಪವಿತ್ರ ಗ್ರಂಥ ಓದಿದ ಮಾತ್ರಕ್ಕೇ ಮನುಷ್ಯ ಧಾರ್ಮಿಕ ವ್ಯಕ್ತಿ ಆಗುವುದಿಲ್ಲ. - ೧೦:೩೪, ೧೯ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಬ್ಬ ವ್ಯಕ್ತಿ ದೀಪದ ಬೆಳಕಿನಿಂದ ಭಾಗವತ ಓದಬಹುದು, ಮತ್ತೊಬ್ಬ ನಕಲಿ ದಾಖಲೆ ಸೃಷ್ಟಿಸಬಹುದು. ಆದರೆ ದೀಪಕ್ಕೆ ಏನೇನೂ ಆಗದು. ದುರುಳರು, ಸದ್ಗುಣಿಗಳು ಎಲ್ಲರ ಮೇಲೂ ಸೂರ್ಯ ಬೆಳಕು ಬೀರುತ್ತಾನೆ. - ೦೭:೧೮, ೩೧ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪ್ರತಿಫಲಾಪೇಕ್ಷೆಯಿಲ್ಲದೆ ತೋರುವ ಪ್ರೀತಿ ಪರಿಶುದ್ಧವಾದುದು.
  • ಕಲಿಯಲು ತಿರಸ್ಕರಿಸುವುದು ಜೀವಿಸಲು ತಿರಸ್ಕರಿಸುವುದಕ್ಕೆ ಸಮನಾದುದು. - ೦೫:೦೧, ೬ ಜುಲೈ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಫಲಭರಿತವಾದ ಮರದ ಕೊಂಬೆಗಳು ಬಗ್ಗುವುದು ಸಹಜ, ಅಂತೆಯೇ ನೀನು ಮಹಾನ್ ವ್ಯಕ್ತಿಯಾಗಬೇಕಾದಲ್ಲಿ ತಗ್ಗಿ ಬಗ್ಗಿ ನಡೆಯುವುದನ್ನು ಕಲಿ.
  • ಪ್ರೇಮ ಚಿಂತೆಯಂತಲ್ಲದೆ ಎಲ್ಲವನ್ನು ಪವಿತ್ರವನ್ನಾಗಿಸುತ್ತದೆ.
  • ಮನುಷ್ಯನ ಎಲ್ಲಾ ಸಂಬಂಧಗಳಲ್ಲಿ ಅತ್ಯಂತ ಪವಿತ್ರವಾದುದು ಪ್ರೇಮ.
  • ನಿನ್ನನ್ನು ನೋಡಿ ಚಪ್ಪಾಳೆ ಬಾರಿಸುವ ಹತ್ತು ಬೆರಳುಗಳಿಗಿಂತಲೂ ಕಣ್ಣೀರುವರೆಸುವ ಒಂದು ಕೈ ಮೇಲು.
  • ಸ್ವರ್ಗವೆಂದರೆ ಮತ್ತೇನೂ ಅಲ್ಲ ಯಾವಾಗಲೂ ಸಂತೋಷವಾಗಿರುವ ಮನಸ್ಸೇ.
  • ಉತ್ತಮರು ಆತ್ಮವಿಮರ್ಶೆ ಮಾಡಿಕೊಂಡು ತಮ್ಮನ್ನು ತಾವು ತಿದ್ದಿಕೊಳ್ಳುತ್ತಾರೆ. ಅಧಮರು ಮಾತ್ರವೇ ಪರರ ನಿಂದನೆ ಮಾಡುತ್ತಾ ಕೆಳಗಿಳಿಯುತ್ತಾರೆ.
  • ಯಾವಾಗಲೂ ಒಬ್ಬರಿಗೆ ಕೊಡುವುದನ್ನು ಕಲಿತುಕೋ, ತೆಗೆದುಕೊಳ್ಳುವುದನ್ನಲ್ಲ.
  • ಸ್ವಾರ್ಥ ಭಾವನೆ ಇಲ್ಲದೆ ಇತರರಿಗಾಗಿ ಕೆಲಸ ಮಾಡುವುದು ನಮಗೆ ನಾವೇ ಉಪಕಾರ ಮಾಡಿಕೊಂಡಂತೆ.
  • ಮನುಷ್ಯನ ಮನಸ್ಸು ಯಾವಾಗಲೂ ದೇವರ ಕಡೆ ತಿರುಗಿದ್ದರೆ ಅವನು ಎಲ್ಲಾ ಅಪಾಯಗಳಿಂದಲೂ ಪಾರಾಗುವನು.
  • ಪ್ರಪಂಚದ ನಾಲ್ಕು ದಿಕ್ಕುಗಳಲ್ಲೂ ಸಂಚರಿಸಿ ಬನ್ನಿ ,ನಿಜವಾದ ಧರ್ಮ ನಿಮಗೆ ಎಲ್ಲಿಯೂ ಸಿಗುವುದಿಲ್ಲಏಕೆಂದರೆ ,ಅದು ಇರುವುದು ಇಲ್ಲಿ...ನಮ್ಮದೇ ಹೃದಯದಲ್ಲಿ.