ವಿಷಯಕ್ಕೆ ಹೋಗು

ರವೀಂದ್ರನಾಥ ಟ್ಯಾಗೋರ್

ವಿಕಿಕೋಟ್ದಿಂದ
 • ಜನಿಸುವ ಪ್ರತಿ ಮಗುವು ಭಗವಂತನು ಇನ್ನೂ ಮನುಷ್ಯರನ್ನು ಕಂಡು ಬೇಸರಗೊಂಡಿಲ್ಲ ಎಂಬ ಒಳ್ಳೆಯ ಸುದ್ದಿಯನ್ನು ತರುತ್ತದೆ.[೧]
 • ಇನ್ನೂ ನಸುಕಿರುವಾಗಲೇ ನಂಬಿಕೆ ಎಂಬ ಹಕ್ಕಿ ಬೆಳಕು ಕಾಣಲು ಆರಂಭಿಸುತ್ತದೆ.[೨]
 • ದಳಗಳನ್ನು ಕಿತ್ತು ಇಟ್ಟುಕೊಂಡ ಮಾತ್ರಕ್ಕೆ ಹೂವಿನ ಸೌಂದರ್ಯ ನಿಮ್ಮ ಸ್ವತ್ತಾಗುವುದಿಲ್ಲ.[೩]
 • ಪ್ರಪಂಚದೊಡನೆ ತನಗಿರುವ ಸಂಬಂಧವನ್ನು ಮನುಷ್ಯ ಅರಿತುಕೊಳ್ಳದಿದ್ದರೆ, ಅವನು ವಾಸಿಸುವ ಸ್ಥಳ ಸೆರೆಮನೆಯಾಗುತ್ತದೆ.[೪]
 • ಅತ್ಯುನ್ನತ ಶಿಕ್ಷಣವೆಂದರೆ ಬರೀ ಮಾಹಿತಿ ನೀಡುವುದಲ್ಲ; ಬದಲಿಗೆ, ನಮ್ಮ ಸಮಸ್ತ ಅಸ್ತಿತ್ವವೂ ಸಾಮರಸ್ಯದಿಂದ ಒಡಗೂಡುವಂತೆ ಬದುಕು ರೂಪಿಸಿಕೊಡುವುದು. [೫]
 • ಪ್ರಪಂಚದೊಡನೆ ತನಗಿರುವ ಸಂಬಂಧವನ್ನು ಮನುಷ್ಯ ಅರಿತುಕೊಳ್ಳದಿದ್ದರೆ, ಅವನು ವಾಸಿಸುವ ಸ್ಥಳ ಸೆರೆಮನೆಯಾಗುತ್ತದೆ. [೬]
 • ನಿಮ್ಮ ಕಲಿಕೆಯ ಮಿತಿಯನ್ನು ಮಕ್ಕಳ ಮೇಲೆ ಹೇರಬೇಡಿ. ಅವರು ಹುಟ್ಟಿದ್ದು ಬೇರೆ ಕಾಲದಲ್ಲಿ. [೭]
 • ಕೇವಲ ನೀರನ್ನು ದುರುಗುಟ್ಟಿ ನೋಡುತ್ತಾ ನಿಲ್ಲುವುದರಿಂದ ಸಮುದ್ರವನ್ನು ದಾಟಲು ನಿಮಗೆ ಸಾಧ್ಯವಾಗದು. [೮]
 • ನಿಮ್ಮ ಜೀವನದಲ್ಲಿ ಸೂರ್ಯ ಮರೆಯಾದನೆಂದು ನೀವು ಅತ್ತರೆ, ಹೊಳೆಯುವ ನಕ್ಷತ್ರಗಳು ಕಾಣಿಸಲು ಕಣ್ಣೀರು ಅಡ್ಡಿಯಾಗುತ್ತದೆ. [೯]
 • ಭಕ್ತಿಯಲ್ಲಿ ಬೇಡಿಕೆ ಇಲ್ಲ; ಅರ್ಪಣೆ ಇದೆ. [೧೦]
 • ಹುಟ್ಟುವ ಪ್ರತಿ ಮಗುವೂ ಭಗವಂತ ಇನ್ನೂ ಮಾನವನ ಒಳ್ಳೆಯತನದಲ್ಲಿ ನಂಬಿಕೆಯಿಟ್ಟಿದ್ದಾನೆ ಎಂದು ಸೂಚಿಸುತ್ತದೆ.
 • ಅಪಮಾರ್ಗದಲ್ಲಿ ಗಳಿಸಿದ ಹಣದಿಂದ ಮಾಡುವ ದಾನ–ಧರ್ಮ ಅಂಗೀಕಾರಾರ್ಹವಲ್ಲ. [೧೧]
 • ನಿಸರ್ಗವೇ ಜಗತ್ತಿನಲ್ಲಿ ಬಹು ದೊಡ್ಡ ಗುರು. [೧೨]
 • ಜೀವನ ಸಂತಸದಿಂದ ಕೂಡಿದೆ ಎಂಬ ಕನಸು ಕಂಡೆ. ಎಚ್ಚರವಾದ ನಂತರ ಜೀವನವೆಂಬುದು ಸೇವೆ ಎಂದು ತಿಳಿಯಿತು. - ೦೫:೨೦, ೭ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನಿಸರ್ಗವೇ ಜಗತ್ತಿನಲ್ಲಿ ಬಲು ದೊಡ್ಡ ಗುರು.- ೦೫:೪೮, ೨೫ ಏಪ್ರಿಲ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನಿಸರ್ಗವೇ ಜಗತ್ತಿನಲ್ಲಿ ಬಲು ದೊಡ್ಡ ಗುರು.- ೧೦:೦೬, ೨೫ ಏಪ್ರಿಲ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಮನುಷ್ಯನ ಉತ್ಕರ್ಷವೇ ಮತದ ಗುರಿ.೧೬:೩೮, ೧೮ ಜೂನ್ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಅಪಮಾನ ಸಹಿಸುವುದು ಕಷ್ಟವಲ್ಲ; ಆದರೆ ಅದನ್ನು ಸಹಿಸಿಕೊಳ್ಳುವುದು ಅನ್ಯಾಯ.

ಆಕರ‍‌ಗಳೂ[ಸಂಪಾದಿಸಿ]

 1. ೦೪:೧೫, ೨೮ ಮೇ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 2. ೦೬:೪೩, ೨೩ ಸೆಪ್ಟೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 3. ೦೩:೩೨, ೩೧ ಅಕ್ಟೋಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 4. ೦೩:೩೨, ೨೯ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 5. ೧೪:೧೨, ೨೦ ಜನವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 6. ೧೩:೫೫, ೧೯ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 7. ೦೬:೨೭, ೬ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 8. ೦೪:೨೩, ೪ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 9. ೦೮:೫೦, ೧೭ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 10. ೦೮:೫೦, ೨೯ ಅಕ್ಟೋಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 11. ೧೧:೫೯, ೧೦ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 12. ೧೯:೦೦, ೧೧ ಫೆಬ್ರುವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.