ವಿಷಯಕ್ಕೆ ಹೋಗು

ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌

ವಿಕಿಕೋಟ್ದಿಂದ

ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್ )- (ಜನನ ಜನವರಿ ೧೫, ೧೯೨೯ - ಮರಣ ಎಪ್ರಿಲ್ ೦೪, ೧೯೬೮) - ಅಮೇರಿಕಾ ಸಂಯುಕ್ತ ಸಂಸ್ಥಾನದ ಆಟ್ಲಾಂಟ ನಗರದಲ್ಲಿ ಜನಿಸಿದ ಡಾ. ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್, ಅಮೇರಿಕಾದ ವರ್ಣಭೇಧನೀತಿಯ ವಿರುಧ್ಧ ಹೋರಾಡಿದ ಪ್ರಮುಖ ಕಪ್ಪು ನಾಯಕರಲ್ಲೊಬ್ಬರು.ಇವರನ್ನು ಗೌರವಿಸಿದ ಪ್ರಶಸ್ತಿಗಳಲ್ಲಿ "ನೊಬೆಲ್ ಶಾಂತಿ ಪ್ರಶಸ್ತಿ" ಮತ್ತು "ಅಮೇರಿಕದ ಅಧ್ಯಕ್ಷರ ಸ್ವಾತಂತ್ರ್ಯ ಪದಕ"ಗಳು ಪ್ರಮುಖವಾದವು.ಮಹಾತ್ಮ ಗಾಂಧಿ ಯವರಿಂದ ಪ್ರಭಾವಿತರಾಗಿದ್ದ ಇವರ ಅಹಿಂಸಾತ್ಮಕ ಚಳುವಳಿ ಮತ್ತು ಸರಳ ನಡವಳಿಕೆಗಳು, ಇವರ ಚಳುವಳಿಯನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿದವು.ಎಪ್ರಿಲ್ ೦೪, ೧೯೬೮ರಂದು ಇವರು ಹಂತಕನ ಗುಂಡಿಗೆ ಬಲಿಯಾಗಿ ಹುತಾತ್ಮರಾದರು.

ನುಡಿಗಳು

[ಸಂಪಾದಿಸಿ]
  • ಯಾವುದೋ ಒಂದು ಕಡೆ ನಡೆಯುವ ಅನ್ಯಾಯವು ಎಲ್ಲಾ ಕಡೆಯ ನ್ಯಾಯಕ್ಕೆ ಎದುರಾಗುವ ಬೆದರಿಕೆಯೇ ಆಗಿರುತ್ತದೆ.
    - ೦೪:೨೮, ೨೨ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಂದೋ ಸೋದರರ ರೀತಿ ಒಟ್ಟಿಗೆ ಬದುಕುವುದನ್ನು ಕಲಿಯಿರಿ; ಇಲ್ಲವೆ ಮೂರ್ಖರ ರೀತಿ ಒಟ್ಟಿಗೆ ನಾಶವಾಗಿ.
    - ೦೬:೫೫, ೧೪ ಡಿಸೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಜಗತ್ತಿನಲ್ಲಿ ಯಾರು ಏನೇ ಮಾಡುವುದಿದ್ದರೂ ಭರವಸೆ ಇಟ್ಟುಕೊಂಡೆ ಮಾಡುತ್ತಾರೆ.
  • ನಿಜವಾದ ಶಾಂತಿಯು ಕೇವಲ ಉದ್ವೇಗದ ಅನುಪಸ್ಥಿತಿಯಲ್ಲ: ಅದು ನ್ಯಾಯದ ಉಪಸ್ಥಿತಿ.