ಮಾಯಾಮಾಳವಗೌಳ

ವಿಕಿಕೋಟ್ದಿಂದ
Jump to navigation Jump to search

ಪರಿಚಯ[ಸಂಪಾದಿಸಿ]

ಇದು ೧೫ನೇ ಮೇಳಕರ್ತ ೩ನೇ ಅಗ್ನಿ ಭೂ ಚಕ್ರದಲ್ಲಿ ೩ನೇ ರಾಗ. ಮಾಳವಗೌಳ ಎಂಬ ಹೆಸರಿನಿಂದ ಪ್ರಚಾರದಲ್ಲಿದ್ದ ಈ ರಾಗಕ್ಕೆ ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ ಮಾಯಾ ಎಮ ಮುಂಪ್ರತ್ಯಯವನ್ನು ಸೇರಿಸಲಾಗಿದೆ. ಇದು ಅತ್ಯಂತ ಪ್ರಾಚೀನ ರಾಗಗಳಲ್ಲಿ ಒಂದು. ಸಂಗೀತ ಕಲಿಕೆಯ ಪ್ರಾರಂಭಿಕ ಹಂತದ ಸರಳೆಗಳು, ದಾಟು ಸ್ವರ, ಜಂಟಿ ಸ್ವರಗಳೆಲ್ಲ ಈ ರಾಗದಲ್ಲಿಯೇ ಪುರಂದರದಾಸರು ರಚಿಸಿರುವುದು.

ಸ್ವರ ಸಂಚಾರ[ಸಂಪಾದಿಸಿ]

ಆರೋಹಣ: ಸ ರಿ ಗ ಮ ಪ ದ ನಿ ಸ ಅವರೋಹಣ : ಸ ನಿ ದ ಪ ಮ ಗ ರಿ ಸ

ರಾಗ ಲಕ್ಷಣ[ಸಂಪಾದಿಸಿ]

ಸಂಪೂರ್ಣ ರಾಗ. ಈ ರಾಗದಲ್ಲಿ ಬರುವ ಸ್ವರಗಳು ಷಡ್ಜ, ಶುದ್ಧರಿಷಭ, ಅಂತರ ಗಾಂಧಾರ, ಶುದ್ಧಮಧ್ಯಮ, ಪಂಚಮ, ಶುದ್ಧದೈವತ, ಕಾಕಲಿ ನಿಷಾದ. ರಾಗಾಂಗರಾಗ. ಷಡ್ಜವು ಗ್ರಹಸ್ವರ. ಗಾಂಧಾರ ನಿಷಾದ ಸ್ವರಗಳು ನ್ಯಾಸಸ್ವರಗಳು. ಷಡ್ಜ, ಮಧ್ಯಮ, ಪಂಚಮ ಸ್ವರಗಳು ಅಂಶ ಸ್ವರಗಳು. ಗಾಂಧಾರ ನಿಶಾದಗಳು ಸಂವಾದಿ ಸ್ವರಗಳು. ಸರ್ವಕಾಲಿಕ ರಾಗ. ಕರುಣಾ, ಭಕ್ತಿ ಪ್ರಧಾನ ರಸಪ್ರಧಾನ ರಾಗ. ರಕ್ತಿರಾಗ.

ಪ್ರಸಿದ್ಧ ಕೃತಿಗಳು[ಸಂಪಾದಿಸಿ]

ತ್ಯಾಗರಾಜರ ಮೇರುಸಮಾನ ಮತ್ತು ತುಳಸಿದಳಮುಲಚೆ, ಪೊನ್ನಯ್ಯ ಪಿಳ್ಳೆಯವರ ಮಾಯಾತೀತ ಸ್ವರೂಪಿಣಿ ಈ ರಾಗದಲ್ಲಿ ಪ್ರಸಿದ್ಧವಾದ ಕೃತಿಗಳು.