ವಿಷಯಕ್ಕೆ ಹೋಗು

ಮಹಾಭಾರತ

ವಿಕಿಕೋಟ್ದಿಂದ
  • ಸುಖದ ಬಳಿಕ ದುಃಖ, ದುಃಖದ ಬಳಿಕ ಸುಖ. ಸುಖ, ದುಃಖಗಳು ಚಕ್ರದ ರೀತಿಯಲ್ಲಿ ತಿರುಗಿ ಬರುತ್ತವೆ. - ೦೮:೦೯, ೧೧ ಜೂನ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಯಾರ ಮನೆಯಲ್ಲಿ ಗೃಹಿಣಿ ಇಲ್ಲವೋ ಆ ಮನೆ ಕಾಡಿಗೆ ಸಮ - ೧೦:೨೪, ೧೦ ಜುಲೈ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸಾವನ್ನಾಗಲೀ, ಬದುಕನ್ನಾಗಲೀ ಅಭಿನಂದಿಸಬಾರದು. ಹೇಗೆ ಸೇವಕನು ಆಜ್ಞೆಯನ್ನು ಪಾಲಿಸುತ್ತಾನೋ ಹಾಗೆ ಕಾಲವನ್ನೇ ಎದುರು ನೋಡುತ್ತಿರಬೇಕು. - ೦೫:೦೬, ೬ ಡಿಸೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಉದಯ ಮತ್ತು ಅಸ್ತಮಾನದಲ್ಲಿ ಸೂರ್ಯ ಒಂದೇ ರೀತಿ ಕಾಣಿಸುತ್ತಾನೆ. ಅದೇ ರೀತಿ ವಿವೇಕಿಗಳು ಕಷ್ಟ ಮತ್ತು ಸುಖದಲ್ಲಿ ಒಂದೇ ರೀತಿಯಲ್ಲಿ ಇರುತ್ತಾರೆ. - ೦೨:೫೨, ೧೭ ಡಿಸೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ವಿದ್ವಾಂಸರು ಸಕಲ ಶಾಸ್ತ್ರಗಳನ್ನು ರಚಿಸಿರುವುದು ಜನರಿಗೆ ಮನಶಾಂತಿ ಲಭಿಸಲೆಂದು. ಯಾರ ಮನಸ್ಸು ಶಾಂತವಾಗಿದೆಯೋ ಅವನೇ ಸರ್ವ ಶಾಸ್ತ್ರಜ್ಞ. - ೦೭:೫೮, ೨೨ ಡಿಸೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಇತಿಹಾಸ ಎಂಬ ದೀಪದ ಮೂಲಕ ಅಜ್ಞಾನವೆಂಬ ಕತ್ತಲೆ ದೂರವಾಗುತ್ತದೆ. ಇತಿಹಾಸದ ಕಟ್ಟಡವು ಅದರಿಂದ ಸಂಪೂರ್ಣವಾಗಿ ಬೆಳಗುತ್ತದೆ. - ೦೫:೪೭, ೪ ಫೆಬ್ರುವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅಹಂಕಾರವನ್ನು ತ್ಯಜಿಸುವವನು ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ. - ೦೮:೫೫, ೧೧ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಇಲ್ಲಿ ಕಂಡುಬರುವುದು ಬೇರೆ ಕಡೆಗಳಲ್ಲಿ ಸಿಗಬಹುದು, ಆದರೆ ಇಲ್ಲಿ ಇಲ್ಲದಿರುವುದು ಇನ್ನೆಲ್ಲಿಯೂ ಸಿಗುವುದಿಲ್ಲ."->ಆದಿಪರ್ವ.
  • ಅತೃಪ್ತಿಯೇ ಪ್ರಗತಿಯ ಮೂಲ.-> ದುರ್ಯೋಧನ.
  • ಅಧಿಕಾರದ ನಶೆ ಮದ್ಯದ ನಶೆಗಿಂತಲೂ ಕೆಟ್ಟದ್ದು; ಏಕೆಂದರೆ ಅಧಿಕಾರದ ನಶೆ ಇರುವವನಿಗೆ ಆತ ಕೆಳಗೆ ಬೀಳುವ ವರೆಗೂ ನಶೆ ಇಳಿಯುವುದಿಲ್ಲ.-ವಿದುರ."
  • ಸಾಧುಗಳನ್ನು ರಕ್ಷಿಸಲು, ದುಷ್ಟರನ್ನು ಶಿಕ್ಷಿಸಲು, ಧರ್ಮದ ಸಂಸ್ಥಾಪನೆಗಾಗಿ, ಯುಗಯುಗಗಳಲ್ಲಿಯೂ ಸಂಭವಿಸುತ್ತೇನೆ."-> ಕೃಷ್ಣ nammakannadanaadu.com
  • ನೀರಿನಿಂದ ಬೆಂಕಿಯನ್ನು ಆರಿಸುವಂತೆ, ಜ್ಞಾನದಿಂದ ದುಃಖವನ್ನು ಶಾಂತಗೊಳಿಸಬೇಕು.ಜ್ಞಾನ
  • ಸುಖ–ದುಃಖಗಳು ಚಕ್ರದೋಪಾದಿಯಲ್ಲಿ ತಿರುಗುತ್ತಿರುತ್ತವೆ. - ೦೬:೩೬, ೧೬ ಫೆಬ್ರುವರಿ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಐದು ಇಂದ್ರಿಯಗಳಿರುವ ಮನುಷ್ಯರಿಗೆ ಒಂದು ಇಂದ್ರಿಯವು ಹರುಕಾದರೆ ಸಾಕು, ಅವನ ಪ್ರಜ್ಞಾಶಕ್ತಿ ಚರ್ಮದ ಚೀಲದ ತೂತಿನಿಂದ ನೀರು ಸೋರಿದಂತೆ ಸೋರಿಹೋಗುವುದು.
"https://kn.wikiquote.org/w/index.php?title=ಮಹಾಭಾರತ&oldid=8907" ಇಂದ ಪಡೆಯಲ್ಪಟ್ಟಿದೆ