ಮದರ್‌ ತೆರೇಸಾ

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
 • ಉತ್ಕಟ ಪ್ರೀತಿಯನ್ನು ಅಳೆಯಲಾಗದು; ಕೊಡಬಹುದಷ್ಟೆ.
  - ೦೬:೫೪, ೨೬ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಕೀಳರಿಮೆ ಮತ್ತು ಭಯವನ್ನು ಕಿತ್ತೊಗೆದರೆ ಅದ್ಭುತವಾದುದನ್ನು ಸಾಧಿಸಲು ಸಮರ್ಥರಾಗುತ್ತೀರಿ.
  - ೦೭:೦೫, ೨೯ ಜೂನ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಕೆಲಸ ಮಾಡುವುದಕ್ಕೆ ನಾಯಕರಿಗಾಗಿ ಕಾಯಬೇಡಿ, ನಿಮ್ಮ ಪಾಡಿಗೆ ಕೆಲಸ ಮಾಡುವುದನ್ನು ಕಲಿಯಿರಿ.
  - ೦೫:೫೨, ೮ ಜುಲೈ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನೀವು ಜನರನ್ನು ವಿಮರ್ಶಿಸುವುದರಲ್ಲೇ ಕಾಲ ಕಳೆದರೆ, ಅವರನ್ನು ಪ್ರೀತಿಸಲು ನಿಮಗೆ ಸಮಯವೇ ಸಿಗದು.
  - ೦೪:೦೩, ೯ ಅಕ್ಟೋಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನಮ್ಮಲ್ಲಿ ಶಾಂತಿ ಇಲ್ಲದಿದ್ದರೆ ಅದಕ್ಕೆ, ನಾವು ಪರಸ್ಪರ ಸಂಬಂಧಿಗಳು ಎಂಬುದನ್ನು ನಾವು ಮರೆತಿರುವುದೇ ಕಾರಣ.
  - ೦೭:೨೩, ೨೬ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನಾವು ಯಾರಿಗೂ ಏನೂ ಆಗದೆ ಇರುವುದು ಜಗತ್ತಿನ ಬಹುದೊಡ್ಡ ರೋಗ.
  - ೦೨:೫೫, ೧೯ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಯಾರಿಂದಲೂ ಪ್ರೀತಿ ದೊರೆಯದ, ಯಾರಿಂದಲೂ ಕಾಳಜಿ ದೊರೆಯದ, ಎಲ್ಲರಿಂದಲೂ ಅಲಕ್ಷಿತನಾದ ಮನುಷ್ಯನ ಸ್ಥಿತಿ, ಹಸಿವಿನಿಂದ ನರಳುವವನಿಗಿಂತ ಘೋರ.
  - ೦೫:೩೬, ೨ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಬಹಳಷ್ಟು ತಪ್ಪುಗಳನ್ನು ಮಾಡದೆ ಯಾರೂ ದೊಡ್ಡ ವ್ಯಕ್ತಿ ಅಥವಾ ಮಹಾಪುರುಷ ಆಗಲಾರರು.
  - ೦೪:೨೯, ೨೬ ಜೂನ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಎಷ್ಟು ಕೊಡುತ್ತೀಯ ಎನ್ನುವುದು ಮುಖ್ಯವಲ್ಲ. ಕೊಡುವುದರಲ್ಲಿ ಎಷ್ಟು ಪ್ರೀತಿ ತುಂಬಿಸಿದ್ದೀಯ ಎನ್ನುವುದು ಮುಖ್ಯ.
 • ನಗುವಿನೊಂದಿಗೆ ಶಾಂತಿ ಪ್ರಾರಂಭವಾಗುತ್ತದೆ.
 • ಹೊಟ್ಟೆಯ ಹಸಿವಿಗಿಂತ,ಪ್ರೀತಿಯ ಹಸಿವನ್ನು ತೆಗೆದು ಹಾಕುವುದು ತುಂಬಾ ಕಷ್ಟ.
 • ನಿನ್ನೆ ಕಳೆದಿದೆ. ನಾಳೆ ಇನ್ನೂ ಬಂದಿಲ್ಲ. ಈಗ ನಮ್ಮ ಪಾಲಿಗೆ ಇರುವುದು ಈ ದಿನ ಮಾತ್ರ. ಇಂದು ಪ್ರಾರಂಭಿಸೋಣ.
 • ಜೀವನವು ಪ್ರೀತಿಯಾಗಿದೆ, ಅದನ್ನು ಆನಂದಿಸಿ. ಜೀವನವು ರಹಸ್ಯವಾಗಿದೆ, ಅದನ್ನು ತಿಳಿದುಕೊಳ್ಳಿ. ಜೀವನವು ಒಂದು ಭರವಸೆಯಾಗಿದೆ, ಅದನ್ನು ಪೂರೈಸಿಕೊಳ್ಳಿ.
 • ಒಳ್ಳೆಯ ಕೆಲಸವನ್ನು ಮೀರಿದ ಪೂಜೆ ಇಲ್ಲ. ಮಾನವೀಯತೆಯನ್ನು ಮೀರಿದ ಸಂಪತ್ತು ಇಲ್ಲ. ಮನುಷ್ಯನಿಗೆ ಮರಣ ಇರುತ್ತದೆ, ಆದರೆ ಒಳ್ಳೆಯತನಕ್ಕೆ ಮರಣ ಇರುವುದಿಲ್ಲ.
 • ಪ್ರೀತಿ ತನ್ನಷ್ಟಕ್ಕೆ ಉಳಿಯಲು ಸಾಧ್ಯವಿಲ್ಲ, ಪ್ರೀತಿಯನ್ನು ಕ್ರಿಯೆಯ ರೂಪಕ್ಕೆ ತರಬೇಕು ಮತ್ತು ಆ ಕ್ರಿಯೆಯು ಸೇವೆಯಾಗಬೆಕು.
 • ಸಣ್ಣ ವಿಷಯಗಳಲ್ಲಿ ನಿಷ್ಠಾವಂತರಾಗಿರಿ ಏಕೆಂದರೆ ನಿಮ್ಮ ಶಕ್ತಿ ಅವುಗಳಲ್ಲಿದೆ.
 • ನಾನು ಪ್ರತಿಯೊಬ್ಬ ಮನುಷ್ಯನಲ್ಲೂ ದೇವರನ್ನು ಕಾಣುತ್ತೇನೆ . ನಾನು ಕುಷ್ಠರೋಗಿಯ ಗಾಯಗಳನ್ನು ತೊಳೆಯುವಾಗ , ನಾನು ಭಗವಂತನನ್ನು ಶುಶ್ರೂಷೆ ಮಾಡುತ್ತಿದ್ದೇನೆ ಎಂದು ನನಗೆ ತೋರುತ್ತದೆ . ಅದೊಂದು ಸುಂದರ ಅನುಭವವಲ್ಲವೇ ?
 • ಪ್ರೀತಿಯು ಎಲ್ಲಾ ಸಮಯದಲ್ಲೂ ಒಂದು ಹಣ್ಣಾಗಿದೆ , ಮತ್ತು ಪ್ರತಿಯೊಬ್ಬರ ಕೈಗೂ ತಲುಪುತ್ತದೆ . ಯಾರಾದರೂ ಅದನ್ನು ಸಂಗ್ರಹಿಸಬಹುದು ಮತ್ತು ಯಾವುದೇ ಮಿತಿಯನ್ನು ಹೊಂದಿಸಲಾಗಿಲ್ಲ. ಪ್ರತಿಯೊಬ್ಬರೂ ಈ ಪ್ರೀತಿಯನ್ನು ಧ್ಯಾನ , ಪ್ರಾರ್ಥನೆಯ ಮನೋಭಾವ ಮತ್ತು ತ್ಯಾಗದ ಮೂಲಕ ತೀವ್ರವಾದ ಆಂತರಿಕ ಜೀವನದಿಂದ ತಲುಪಬಹುದು.
 • ಸ್ವರ್ಗ ಹೇಗಿರುತ್ತದೆ ಎಂಬುದು ಖಚಿತವಾಗಿ ನನಗೆ ಗೊತ್ತಿಲ್ಲ. ಆದರೆ ನಾವು ಮೃತಪಟ್ಟಾಗ ಮತ್ತು ದೇವರು ನಮ್ಮ ಬಗ್ಗೆ ನಿರ್ಣಯ ತೆಗೆದುಕೊಳ್ಳುವಾಗ, ನಿಮ್ಮ ಜೀವನದಲ್ಲಿ ನೀವೆಷ್ಟು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಕೇಳುವುದಿಲ್ಲ ನೀವು ಮಾಡಿದ ಕಾರ್ಯಕ್ಕೆ ನೀವು ಎಷ್ಟು ಪ್ರೀತಿ ನೀಡಿದ್ದೀರಿ ಎಂದು ಕೇಳುತ್ತಾನೆ ಎಂದು ನನಗೆ ತಿಳಿದಿದೆ.
 • ಪ್ರೀತಿ ಎಂಬುದು ಸರ್ವಋತುವಿನಲ್ಲೂ ಸಿಗುವ ಹಣ್ಣು ಮತ್ತು ಇದು ಎಲ್ಲರ ಕೈಗೆ ಎಟಕುವಂತೆ ಇರುತ್ತದೆ.