ಭರ್ತೃಹರಿ
ಗೋಚರ
- ಕಾಲ ಸರಿಯುತ್ತದೆ ಎಂದು ಹೇಳುತ್ತಾರೆ. ಇಲ್ಲ, ನಾವು ಸರಿಯುತ್ತೇವೆ. ಕಾಲ ಉಳಿಯುತ್ತದೆ. - ೦೫:೧೧, ೨೩ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕುದಿಯುವ ನೀರಿನಲ್ಲಿ ಮುಖ ಕಾಣುವುದಿಲ್ಲ. ಕುದಿಯುವ ಮನಸ್ಸಿಗೆ ತನ್ನ ಹಿತ ಕಾಣುವುದಿಲ್ಲ. - ೧೭:೧೬, ೩೦ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಲೌಕಿಕ ಭೋಗಗಳು ನಮ್ಮನ್ನು ಕಾಲಕ್ರಮೇಣ ಬಿಟ್ಟು ಹೋಗುತ್ತವೆ. ಅವು ನಮ್ಮನ್ನು ತ್ಯಜಿಸಿದರೆ ಸಂಕಟವಾಗುತ್ತದೆ. ನಾವೇ ಅವುಗಳನ್ನು ತ್ಯಜಿಸಿದರೆ ಸುಖವುಂಟಾಗುತ್ತದೆ. - ೧೨:೧೨, ೫ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಇಂದ್ರಿಯಗಳು ಎಲ್ಲಿಯವರೆಗೆ ಹಿಡಿತದಲ್ಲಿರುತ್ತವೆಯೋ ಅಲ್ಲಿಯ ತನಕ ವ್ಯಕ್ತಿ ಸನ್ಮಾರ್ಗದಲ್ಲಿರುತ್ತಾನೆ. - ೧೪:೦೨, ೨೫ ಏಪ್ರಿಲ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಾವು ಕಾಲವನ್ನು ಕಳೆಯುತ್ತೇವೆ ಅಲ್ಲ, ಕಾಲ ನಮ್ಮನ್ನು ಕಳೆಯುತ್ತದೆ. - ೦೯:೧೫, ೨೮ ಏಪ್ರಿಲ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸಿರಿ ಇದ್ದಾಗ ಸೈರಣೆ, ಕಷ್ಟದ ಸಂದರ್ಭದಲ್ಲಿ ತಾಳ್ಮೆ, ಯುದ್ಧದ ಸಂದರ್ಭದಲ್ಲಿ ಧೈರ್ಯ ಬೇಕೆಬೇಕು. - ೦೩:೫೩, ೧ ಮೇ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಲ್ಲ ಜನರಿಗೂ ಎಲ್ಲ ಗುಣಗಳಿಗೂ ಶೀಲವೇ ಶ್ರೇಷ್ಠವಾದ ಭೂಷಣ. - ೦೬:೦೧, ೮ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ವಿವೇಕ ಇಲ್ಲದವರ ಅಧಃಪತನ ನೂರು ರೀತಿಯಲ್ಲಾಗುತ್ತದೆ. - ೧೪:೦೧, ೧೭ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಗಳಿಗೆ ಗಳಿಗೆಗೂ ವಿಘ್ನಗಳನ್ನೆದುರಿಸಿದರೂ ಪ್ರಯತ್ನವನ್ನು ಬಿಡದೆ ಸಾಧಿಸುವವರು ಉತ್ತಮರು. - ೦೫:೦೧, ೩೦ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸುಸಂಸ್ಕೃತವಾದ ಮಾತೇ ಮನುಷ್ಯನಿಗೆ ಅಲಂಕಾರ. - ೧೬:೨೨, ೨೯ ಸೆಪ್ಟೆಂಬರ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.