ಬ್ರಹ್ಮರ್ಷಿ ನಾರಾಯಣ ಗುರು
ಗೋಚರ
- ಜಾತಿಯ ಬಗ್ಗೆ ಕೇಳಬೇಡ, ಜಾತಿಯನ್ನು ಹೇಳಬೇಡ, ಜಾತಿಯ ಬಗ್ಗೆ ಚಿಂತಿಸಲೂಬೇಡ. - ೧೨:೩೬, ೧೫ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಜಾತೀಯತೆ ಇಲ್ಲ, ಅದು ಉಂಟೆಂದು ತಿಳಿಯುವುದು ತಪ್ಪು. ಮತ ಯಾವುದೇ ಇರಲಿ ಮನುಷ್ಯ ಒಳ್ಳೆಯವನಾದರೆ ಸಾಕು.
- ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿರಿ.
- ಮೇಲು ಕೀಳುಗಳೆಂಬುವುದು ಇಲ್ಲ ಹಾಗೇನಾದರೂ ಕೀಳೆಂಬುವುದು ಇದ್ದರೆ ಅದು ಭೇದ ಬಗೆಯುವ ಆತನ ಮನಸ್ಸಷ್ಟೇ.
- ಒಂದೇ ಜಾತಿ, ಒಂದೇ ಧರ್ಮ, ಒಬ್ಭನೇ ದೇವರು.
- ಜಾತಿ ಮತ ಪಂಥಗಳು ಅದೆಷ್ಟೇ ದ್ವೇಷದ ಗೋಡೆಗಳನ್ನು ಎಬ್ಬಿಸಿದರೂ ನಾವೆಲ್ಲರೂ ಸಹೋದರ ಸಮಾನರು ಎಂಬುದೇ ಆತ್ಯಂತಿಕ ಸತ್ಯ .
- ಸಂತಸ ಬಯಸುವವರು ಇದನ್ನು ಗಮನಿಸಬೇಕು ಅನ್ಯರ ಸಂತೋಷ ತನ್ನ ಸಂತೋಷ ತನ್ನ ಸಂತೋಷದ ದಾರಿ ಇತರಿಗೆ ಸಂತಸ ತರುವಂತಿರ ಬೇಕು.