ಬೆಂಜಮಿನ್ ಫ್ರಾಂಕ್ಲಿನ್
ಗೋಚರ
- ನೀವು ವಿಳಂಬ ಮಾಡಬಹುದು, ಆದರೆ ಕಾಲ ಎಂದಿಗೂ ವಿಳಂಬ ಮಾಡದು. - ೧೩:೫೫, ೨೯ ಅಕ್ಟೋಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಿಮ್ಮ ಶತ್ರುಗಳನ್ನು ಪ್ರೀತಿಸಿ, ಯಾಕೆಂದರೆ ಅವರು ನಿಮ್ಮ ತಪ್ಪುಗಳನ್ನು ನಿಮಗೆ ತಿಳಿಸುತ್ತಾರೆ. - ೦೫:೦೪, ೨೮ ಜುಲೈ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ‘ಕಾಲ’ವೇ ಹಣ ಎನ್ನುವುದು ನೆನಪಿರಲಿ. - ೦೭:೩೩, ೨೩ ಜನವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಧರ್ಮ ಎಂಬುದು ಇದ್ದರೂ ಮನುಷ್ಯ ಇಷ್ಟೊಂದು ದುಷ್ಟನಾಗಿರುವಾಗ ಧರ್ಮವೇ ಇಲ್ಲದಿದ್ದರೆ ಅವನು ಏನಾಗಬಹುದಿತ್ತು.
- ಮೂರ್ಖನ ಹೃದಯ ಅವನ ನಾಲಿಗೆಯಲ್ಲಿರುತ್ತದೆ. ಆದರೆ ವಿವೇಕಿಯ ನಾಲಿಗೆ ಅವನ ಹೃದಯದಲ್ಲಿರುತ್ತದೆ. - ೦೯:೧೪, ೩೧ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬೇಗ ಮಲಗಿ, ಬೇಗ ಏಳುವುದರಿಂದ ಮನುಷ್ಯ ಆರೋಗ್ಯಶಾಲಿಯೂ ಶ್ರೀಮಂತನೂ ಹಾಗೂ ವಿವೇಕಿಯೂ ಆಗುತ್ತಾನೆ. - ೦೫:೩೦, ೨೭ ಡಿಸೆಂಬರ್ ೨೦೧೩ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ
- ಅತ್ಯುತ್ತಮ ಪ್ರಮಾಣದ ಬಡ್ಡಿ ಸಿಗುವುದು ಜ್ಞಾನದ ಮೇಲಿನ ಹೂಡಿಕೆಯಿಂದ ಮಾತ್ರ. - ೦೪:೧೬, ೫ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸಣ್ಣಪುಟ್ಟ ಖರ್ಚುಗಳ ಬಗ್ಗೆಯೂ ಎಚ್ಚರ ವಹಿಸಿ. ಒಂದು ಸಣ್ಣ ರಂಧ್ರ ಕೂಡ ಎಂಥ ದೊಡ್ಡ ಹಡಗನ್ನಾದರೂ ಮುಳುಗಿಸಬಲ್ಲದು. - ೦೬:೨೩, ೧೬ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.