ವಿಷಯಕ್ಕೆ ಹೋಗು

ಫ್ರೆಡ್ರಿಕ್‌ ನೀಷೆ

ವಿಕಿಕೋಟ್ದಿಂದ

ಫ್ರೆಡರಿಕ್ ನೀಷೆ ವಿಜ್ಞಾನಿಗಳಿಂದ, ವಿಶ್ವವಿದ್ಯಾಲಯದ ಪ್ರೊಫೆಸರುಗಳಿಂದ ಹಿಡಿದು ಸಾಮಾನ್ಯ ಓದುಗನವರೆಗೆ ಎಲ್ಲರಿಗೂ ಹಿಡಿಸುವ, ಮಾತ್ರವಲ್ಲ, ಎಲ್ಲರಿಗೂ ಪರಮಾಪ್ತನೆನಿಸುವ ಬರಹಗಾರನಾಗಿದ್ದಾನೆ.

ಕಳೆದ ನೂರೈವತ್ತು ವರ್ಷಗಳಲ್ಲಿ ಜನಿಸಿದ ಮಹಾ ಮೇಧಾವಿಗಳಲ್ಲಿ ಒಬ್ಬನಾದ ಫ್ರೆಡರಿಕ್ ನೀಷೆಯ ಬದುಕು ಸಹ ಅವನ ತತ್ವಜ್ಞಾನದಷ್ಟೇ ವಿಚಿತ್ರ ವಿರೋಧಾಭಾಸಗಳಿಂದ ಕೂಡಿದೆ. ಚರ್ಚಿನ ಪಾದ್ರಿಗಳ ವಂಶದಲ್ಲಿ ಜನಿಸಿದ ಈ ವ್ಯಕ್ತಿ ದೇವರ ಸಾವನ್ನು ಘೋಷಿಸಿದ. ಸತ್ಯ ಮತ್ತು ಸ್ವಾತಂತ್ರ್ಯಗಳನ್ನು ಆರಾಧಿಸಿದ ಒಬ್ಬ ತತ್ವಜ್ಞಾನಿ ನಾಜೀವಾದದ ಹರಿಕಾರನೆನಿಸಿದ (ಇದಕ್ಕೆ ಅವನ ತಂಗಿಗೆ ಧನ್ಯವಾದ ಹೇಳಬೇಕು!). ‘ಹೊಸ ಮನುಷ್ಯ’ನ ಅವತರಣವನ್ನು ಸಾರಿದ ಪ್ರವಾದಿ ಕೊನೆಗೆ ಮಾನಸಿಕವಾಗಿ ಅಸ್ವಸ್ಥನಾದ ತನ್ನ ಬದುಕಿನ ಕೊನೆಯ ದಿನಗಳನ್ನು ಕತ್ತಲೆಯಲ್ಲಿ ಕಳೆದ.

ನುಡಿಗಳು

[ಸಂಪಾದಿಸಿ]
  • ವಿವಾಹ ಬಂಧನದಲ್ಲಿ ಸಂತೋಷ ಇಲ್ಲದಿರಲು ಪ್ರೀತಿಯ ಕೊರತೆ ಕಾರಣವಲ್ಲ. ಅದಕ್ಕೆ ಕಾರಣ ಸ್ನೇಹ ಇಲ್ಲದಿರುವಿಕೆ. - ೦೪:೧೬, ೬ ಮೇ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕೆಲವೊಮ್ಮೆ ಜನ ಸತ್ಯವನ್ನು ಕೇಳಿಸಿಕೊಳ್ಳಲು ಇಚ್ಛಿಸುವುದಿಲ್ಲ.ಏಕೆಂದರೆ, ತಮ್ಮ ಭ್ರಮೆಗಳನ್ನು ನಾಶ ಮಾಡಿಕೊಳ್ಳುವುದು ಅವರಿಗೆ ಬೇಕಿರುವುದಿಲ್ಲ.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೨೬ ಆಗಸ್ಟ್ ೨೦೨೪ (UTC)

  • ಎಲ್ಲಿ ಪ್ರೀತಿ ಮೇಲುಗೈ ಪಡೆದಿರುತ್ತದೋ ಅಲ್ಲಿ ಕಾನೂನಿನ ಅಗತ್ಯ ಇರುವುದಿಲ್ಲ.

- ೨೮ ಜುಊ ೨೦೨೪ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ