ವಿಷಯಕ್ಕೆ ಹೋಗು

ದ.ರಾ. ಬೇಂದ್ರೆ

ವಿಕಿಕೋಟ್ದಿಂದ
  • ಯಾರಿಗೇತರಲಿ ಇಷ್ಟವೋ ಅದುವೇ ಸುಖ.
    - ೧೧:೩೮, ೬ ಜೂನ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಬ್ಬರು ಮತ್ತೊಬ್ಬರನ್ನು ತುಳಿದು ಬದುಕಬಾರದು, ತಿಳಿದು ಬದುಕಬೇಕು.!!
  • ರಸವೆ ಜನನ, ವಿರಸವೆ ಮರಣ, ಸಮರಸವೇ ಜೀವನ.
  • ಸಾವಿಗೆ ನಾ ಹೆದರುವುದಿಲ್ಲ. ಯಾಕೆಂದರ ನಾ ಇರೋತನಕ ಅದು ಬರೋದಿಲ್ಲ. ಅದು ಬಂದಾಗ ನಾ ಇರುವುದಿಲ್ಲ.
  • ಲೇಸೆ ಕೇಳಿಸಲಿ ಕಿವಿಗಳಿಗೆ, ಲೇಸೆ ಕಾಣಿಸಲಿ ಕಂಗಳಿಗೆ
  • ಮನುಷ್ಯ ದುಖಃ ಬೇಕಾದಷ್ಟು ತಡೆದುಕೊಳ್ಳಬಹುದು, ಆದರೆ ಸುಖ ತಡೆದುಕೊಳ್ಳೋದು ಬಹಳ ಕಷ್ಟ.
  • ಕಾಯಿಸಿದ್ದರೆ ಮರಳು ಕೂಡ ಸುಗಂಧವುಳ್ಳದ್ದಾಗುತ್ತದೆ.
  • ಭಿನ್ನಮತಗಳ ಹಿಂದೇ ಒಂದೇ ಒಂದು ಬುದ್ಧಿಯನ್ನು ಕಂಡು ಹಿಡಿಯುವುದೇ ಜ್ಞಾನ
  • ಜ್ಞಾನ ಎಂಬುದು ಸೂರ್ಯನ ಹಾಗೆ, ನಾವಿರುವಲ್ಲಿಗೆ ಬಂದು ನಮ್ಮನ್ನು ಕೊರೆಯುತ್ತದೆ
  • ಅನ್ಯರನು ಹಾಳುಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ.
    - ೦೫:೨೬, ೧೩ ಮೇ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪ್ರಕೃತಿಯ ಮೇಲೆ ಮಾನವ ಗೆಲುವು ಸಾಧಿಸಿದ ಕ್ರಮಬದ್ಧ ಕಥೆಯೇ ಸಂಸ್ಕೃತಿ.
    - ೦೩:೧೦, ೨೫ ಜೂನ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಎಂತಹ ಕಟು ಅನುಭವ ಪ್ರಸಂಗ ಬಂದರೂ ಎದೆಗುಂದಬಾರದು.ಇದೇ ಸುಖಿ ಆಗಿರೋ ರಹಸ್ಯ.
  • ಅನ್ಯರನು ಆಳುಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ.
    - ೦೫:೨೬, ೬ ನವೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತೊs
  • ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ (ಯುಗಾದಿ)
  • ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು,ತಿಳಿದು ಬದುಕಬೇಕು.
  • ರಸವೇ ಜನನ, ವಿರಸ ಮರಣ, ಸಮರಸವೇ ಜೀವನ.
  • ನಕ್ಕ ಸಾಯ್ರೊ, ನಕ್ಕ ಸಾಯ್ರಿ, ನಕ್ಕ ಸತ್ರ, ನಕ್ಷತ್ರ ಅಕ್ಕೀರೀ.
  • ಗೆಲ್ಲುತ್ತೇನೆ ಎಂದು ಬಂದವನು ಸೋಲುವುದಕ್ಕೂ ಸಿದ್ಧವಿರಬೇಕು.
  • ಸಾವಿಗೆ ನಾ ಹೆದರೋದಿಲ್ಲ. ಯಾಕಂದರ ನಾ ಇರೋತನಕ ಅದು ಬರೋದಿಲ್ಲ. ಅದು ಬಂದಾಗ ನಾ ಇರೋದಿಲ್ಲ.
  • ನಿನ್ನೊಳಗೆ ನೀ ಹೊಕ್ಕು ನಿನ್ನ ನೀನೇ ಕಂಡು ನೀನು ನೀನಾಗು ಗೆಳೆಯ.