ಜಿಡ್ಡು ಕೃಷ್ಣಮೂರ್ತಿ

ವಿಕಿಕೋಟ್ದಿಂದ
  • ನಂಬಿಕೆ, ರಾಷ್ಟ್ರೀಯತೆ ಮತ್ತು ಸಂಪ್ರದಾಯದ ಮೂಲಕ ಇತರ ಮಾನವಕೋಟಿಯಿಂದ ನಿನ್ನನ್ನು ನೀನು ಪ್ರತ್ಯೇಕಿಸಿಕೊಳ್ಳುವುದು ಹಿಂಸೆಗೆ ಎಡೆ ಮಾಡುತ್ತದೆ. - ೦೬:೧೨, ೧೮ ಫೆಬ್ರುವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಉತ್ತರ ಅದರ ಒಳಗಿಂದಲೇ ಸಿಗುತ್ತದೆ. ಏಕೆಂದರೆ ಉತ್ತರ ಸಮಸ್ಯೆಯಿಂದ ಬೇರೆಯಲ್ಲ. - ೦೭:೫೭, ೧೮ ಏಪ್ರಿಲ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸತ್ಯ ಪಥವಿಲ್ಲದ ತಾಣ. ಸತ್ಯವನ್ನು ಅರಿಯಲು ಸಂಘಟನೆ ಬೇಕಿಲ್ಲ.
  • ಇರುವುದನ್ನು ಸ್ವೀಕರಿಸದೆ ಇರುವದೇ ಭಯ.
  • ಅಂಜಿಕೆ ಬುದ್ಧಿವಂತಿಕೆಯನ್ನು ಕ್ಷುದ್ರಗೊಳಿಸುತ್ತದೆ. ಮಾನವನ ಸ್ವಾರ್ಥಮಯ ಕಾರ್ಯಗಳಿಗೆಲ್ಲಾ ಅಂಜಿಕೆಯೇ ಕಾರಣ.
  • ನಿಮ್ಮನ್ನು ಅರಿಯಲು ಯಾವುದೇ ಗುರು, ಪುಸ್ತಕ ಹಾಗೂ ಮನಶ್ಯಾಸ್ತ್ರಜ್ಞರ ಹತ್ತಿರ ಹೋಗಬೇಕಾಗಿಲ್ಲ, ನಿಮ್ಮ ಅಂತರಂಗದಲ್ಲಿ ನಿಮ್ಮನ್ನು ಅರಿಯುವ ಸರ್ವಸಂಪತ್ತು ಹುದುಗಿದೆ.
  • ನೀವೇ ಜಗತ್ತು. ನೀವು ಬದಲಾಗದೆ ಯಾವುದು ಬದಲಾಗದು.
  • ನನಗೆ ಕೇವಲ ಒಂದೇ ಉದ್ದೇಶವಿದೆ. ಅದುವೇ ಮಾನವನನ್ನು ಮುಕ್ತನನ್ನಾಗಿಸುವದು. ಈ ಮುಕ್ತಿಯೆಡೆಗೆ ಸಾಗಲು ಮಾನವನನ್ನು ಹುರಿದುಂಬಿಸುವದು. ಎಲ್ಲ ಬಂಧನಗಳನ್ನು ಕಿತ್ತೆಸುವದು. ಸಹಾಯ ಮಾಡುವದು. ಏಕೆಂದರೆ ಇದುವೇ ಮಾನವನಿಗೆ ಅನಂತವಾದ ಸುಖ ಕೊಡುವುದು.
  • ಕ್ಷಣ ಕ್ಷಣದ ಇರುವನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವುದೇ ತೃಪ್ತಿ.
  • ಹೆಚ್ಚು ವಿಚಾರಮಾಡುವವರು, ಹೆಚ್ಚು ಎಚ್ಚರಗೊಂಡವರು ಹೆಚ್ಚು ಜಾಗೃತರದವರೂ ನಂಬುವದು ಕಡಿಮೆ. ಕಾರಣವಿಷ್ಟೆ ನಂಬಿಕೆ ಬಂಧಿಸುತ್ತದೆ ಬೇರ್ಪಡಿಸುತ್ತದೆ.
  • ಪ್ರೀತಿಸಿರಿ ಅದರಲ್ಲಿ ಅರ್ಥಮಾಡಿಕೊಳ್ಳುವ ಶಕ್ತಿ ಇದೆ.kanaja.in