ವಿಷಯಕ್ಕೆ ಹೋಗು

ಜಾರ್ಜ್‌ ಬರ್ನಾರ್ಡ್‌ ಷಾ

ವಿಕಿಕೋಟ್ದಿಂದ

ಜಾರ್ಜ್ ಬರ್ನಾರ್ಡ್ ಷಾ (೧೮೫೬ - ೧೯೫೦) ಒಬ್ಬ ಪ್ರಸಿದ್ಧ ಆಂಗ್ಲ ನಾಟಕಕಾರರು. ಐರ್ಲೆಂಡಿನಲ್ಲಿ ಜನಿಸಿ ನಂತರ ಇಂಗ್ಲೆಂಡಿನಲ್ಲಿ ನೆಲೆಸಿದವರು. ಬರ್ನಾರ್ಡ್ ಷಾ ೬೦ ಕ್ಕೂ ಹೆಚ್ಚು ನಾಟಕಗಳನ್ನು ಬರೆದರು. ಇದಲ್ಲದೆ ಸಾಹಿತ್ಯ ವಿಮರ್ಶೆ ಮತ್ತು ಸಂಗೀತದ ಬಗ್ಗೆಯೂ ಬರೆದರು. ಇವರು ಪ್ರಸಿದ್ಧ ವಾಗ್ಮಿಯಾಗಿಯೂ ಹೆಸರು ಮಾಡಿದರು. ತಮ್ಮ ಕೃತಿಗಳಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಹಾಗೆಯೇ ಅವರ ಕೃತಿಗಳಲ್ಲಿ ಹಾಸ್ಯದ ಎಳೆಯೂ ಸಾಮಾನ್ಯವಾಗಿ ಇರುತ್ತದೆ. ಶಿಕ್ಷಣ, ಆರೋಗ್ಯ, ಮದುವೆ, ಧರ್ಮ ಮೊದಲಾದ ವಿಷಯಗಳನ್ನು ತಮ್ಮ ಕೃತಿಗಳಲ್ಲಿ ಚರ್ಚಿಸಿದ ಬರ್ನಾರ್ಡ್ ಷಾ, ತಮ್ಮ ಕಾಲದ ಸಾಮಾಜಿಕ ತೊಡಕುಗಳನ್ನು ಕಟುವಾಗಿ ಟೀಕಿಸಿದರು. ತಮ್ಮ ಭಾಷಣಗಳ ಮೂಲಕ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ರಾಜಕೀಯ ಹಕ್ಕುಗಳು ಮೊದಲಾದ ವಿಷಯಗಳಿಗೆ ಶ್ರಮಿಸಿದರು.

ಯುಕ್ತಿಗಳು

[ಸಂಪಾದಿಸಿ]
  • ಮಾತಿನ ಸ್ವಾತಂತ್ರ್ಯ ಅಪಹಾರದ ಕೊನೆಯ ಅವತಾರವೇ ಕೊಲೆ. - ೦೬:೧೪, ೩೦ ನವೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಈ ಪ್ರಪಂಚದಲ್ಲಿ ರಾಜಕಾರಣಿಗಳೇ ಇನ್ನೂ ಪ್ರಮುಖ ಸ್ಥಾನದಲ್ಲಿರುವುದು ದುರ್ದೈವದ ಸಂಗತಿ. ಆದರೆ ಅದೇ ವಾಸ್ತವ. - ೦೪:೪೯, ೨೧ ಫೆಬ್ರುವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.