ಚೆನ್ನವೀರ ಕಣವಿ
ಗೋಚರ
ಚೆನ್ನವೀರ ಕಣವಿ(೨೮ ಜೂನ್ ೧೯೨೮ - ೧೬ ಫೆಬ್ರವರಿ ೨೦೨೨) ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದು ಪ್ರಸಿದ್ಧರಾಗಿದ್ದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು.
ಯುಕ್ತಿಗಳು
[ಸಂಪಾದಿಸಿ]- ಬಾಲ್ಯದಲ್ಲಿ ಕಲಿತದ್ದೇ ಬದುಕಿನಲ್ಲಿ ಉಳಿಯುವುದರಿಂದ ಮಕ್ಕಳಿಗೆ ಕನ್ನಡ ಸಂಸ್ಕಾರ ಕಲಿಸಬೇಕು. - ೦೮:೪೬, ೪ ಸೆಪ್ಟೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಕವಿತೆಯ ಸಾಲುಗಳು
[ಸಂಪಾದಿಸಿ]- ' ಏನಾದರೂ ಇರಲಿ ಹಾಡು ನಿಲ್ಲಿಸಬೇಡ
ದೀಪ ಪಟ್ಟನೆ ಹಾರಿಹೋಗಬಹುದು ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ ಮೂಲೆ ಮೂಲೆಗೆ ಹೋಗಿ ಹಾಯಬಹುದು...'
- 'ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು
ಎಷ್ಟು ಕವಿತೆಗೆ ಜಾಗವು ಕಣ್ಣು ತೆರೆಯುವುದು ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು ಒಂದು ಕವಿತೆಗೆ ಕೂಡಾ ಮನೆ ಕರಗಬಹುದು '