ಚಾಣಕ್ಯ

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಚಾಣಕ್ಯ
ಚಾಣಕ್ಯ
 • ನೀರಿನಲ್ಲಿ ಎಣ್ಣೆ, ವಿವೇಕಿಯಲ್ಲಿ ತಿಳಿವು ಸ್ವಶಕ್ತಿಯಿಂದ ವಿಸ್ತಾರವಾಗುತ್ತದೆ. - ೦೬:೩೨, ೯ ಏಪ್ರಿಲ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಸೌಂದರ್ಯ ಮತ್ತು ಯೌವನವನ್ನು ಸೋಲಿಸುವ ತಾಕತ್ತು ಇರುವುದು ಜ್ಞಾನಕ್ಕೆ. - ೦೭:೧೮, ೩ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಸ್ವಹಿತಾಸಕ್ತಿ ಇಲ್ಲದ ಸ್ನೇಹ ಇಲ್ಲವೇ ಇಲ್ಲ. ಇದು ಕಹಿಯಾದ ಸತ್ಯ. - ೦೫:೧೬, ೧೨ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಸಾವಿರ ಹಸುಗಳ ನಡುವೆಯೂ ಕರುವು ತನ್ನ ತಾಯಿಯನ್ನೇ ಅನುಸರಿಸಿ ಹೋಗುವಂತೆ, ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಅವನನ್ನು ಹಿಂಬಾಲಿಸುತ್ತವೆ. - ೦೪:೫೨, ೧೯ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಭೀತಿ ಹತ್ತಿರವಾಗುತ್ತಿರುವ ಸುಳಿವು ಸಿಕ್ಕಿದ ಕೂಡಲೇ ಆಕ್ರಮಣ ಮಾಡಿ ಅದನ್ನು ನಾಶ ಮಾಡು. - ೦೬:೫೭, ೨೪ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಯಾರ ಬಗ್ಗೆ ನಿನಗೆ ದ್ವೇಷವಿದೆಯೋ ಅವನ ಬಳಿ ಮಧುರವಾಗಿ ಮತ್ತು ಹಿತವಾಗಿ ಮಾತನಾಡು. - ೦೬:೩೩, ೨೭ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಬುದ್ಧಿವಂತನಿಗೆ ಜೀವನದ ಭಯವಿಲ್ಲ.:ಚಾಣಕ್ಯನ ಪ್ರಮುಖ ನೀತಿ ಸೂತ್ರಗಳು ಪ್ರಕಟಣೆ 23-Feb-2016 00:30 IST kannada.eenaduindia.com
 • ಯಾವ ವ್ಯಕ್ತಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ತಾನಾಗಿ ಹೋರಾಟ ಮಾಡುತ್ತಾನೆ. ಆತನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.
 • ಅಲ್ಪಕಾಲದ ಸುಖದಲ್ಲಿ ಮೈಮರೆಯಬಾರದು. ತಕ್ಷಣದ ಸುಖಕ್ಕಾಗಿ ದೀರ್ಘಕಾಲದ ಆನಂದ ಬಿಟ್ಟುಕೊಡುವವನು ಕಡುಮೂರ್ಖನೇ ಸರಿ.
 • ದೇಶದ ಬುದ್ಧಿಜೀವಿಗಳು ಮತ್ತು ಅಪರಾಧಿಗಳು ತಳಮಳಗೊಂಡಿದ್ದಾರೆಂದರೆ ಆ ದೇಶದ ಆಡಳಿತ ನಡೆಸುವಾತ ಸರಿದಾರಿಯಲ್ಲಿದ್ದಾನೆಂದೆ ಅರ್ಥ.
 • ಆತ್ಮ ವಿಶ್ವಾಸ ಒಂದಿದ್ದರೆ ಎಂತಹ ಪರಿಸ್ಥಿತಿಯಲ್ಲೂ ತಲೆ ಎತ್ತಿ ನಿಲ್ಲಬಹುದು.
 • ಬೇರೆಯವರ ತಪ್ಪಿನಿಂದಲೂ ಕಲಿತುಕೊಳ್ಳಿ. ಎಲ್ಲಾ ತಪ್ಪುಗಳನ್ನು ನೀವೇ ಮಾಡುವಷ್ಟು ಜೀವನದ ಆಯಸ್ಸು ನಿಮಗಿಲ್ಲ.
 • ತನಗಿಂತ ಹೆಚ್ಚಿನವನೊಡನಾಗಲೀ, ಸರಿಸಮನನೊಡನಾಗಲಿ ಯುದ್ಧ ಮಾಡಬಾರದು.
 • ಆಶಾಪರನಾದ ಕಾರ್ಯದಕ್ಷನನ್ನು ಮೋಸಗೊಳಿಸುವುದು ಸುಲಭ.
 • ಹಾಲಿನ ಜೊತೆ ಸೇರಿದ ನೀರು ಸಹ ಹಾಲಾಗುತ್ತದೆ, ಅದೇ ರೀತಿ ಗುಣವಂತನ ಆಶ್ರಯ ಪಡೆದ ಗುಣಹೀನನು ಗುಣವಂತನಾಗುತ್ತಾನೆ.
 • ಮರ್ಯಾದೆ ಮೀರಿದವರನ್ನು ಯಾವತ್ತೂ ನಂಬ ಬಾರದು.:ಚಾಣಕ್ಯನ ಪ್ರಮುಖ ನೀತಿ ಸೂತ್ರಗಳು ಪ್ರಕಟಣೆ 23-Feb-2016 00:30 IST kannada.eenaduindia.com
 • ವಿದ್ಯಾವಂತನಿಗೆ ಎಲ್ಲೆಡೆ ಗೌರವ ಲಭಿಸುತ್ತದೆ. ವಿದ್ಯೆ ಸೌಂದರ್ಯ ಮತ್ತು ಯೌವನಕ್ಕೂ ಮಿಗಿಲಾದದ್ದು - ೦೪:೦೮, ೨೪ ಜೂನ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಮಕ್ಕಳನ್ನು ಐದು ವರ್ಷಗಳವರೆಗೆ ಮುದ್ದಿಸಬೇಕು, ಮುಂದಿನ ಹತ್ತು ವರ್ಷಗಳವರೆಗೆ ದಂಡಿಸಬೇಕು. ಹದಿನಾರರ ವಯಸ್ಸಿಗೆ ಬಂದ ನಂತರ ಮಿತ್ರರಂತೆ ಕಾಣಬೇಕು. - ೦೫:೩೭, ೧೫ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಹೂವಿನ ಸುಗಂಧವು ಗಾಳಿ ಬೀಸಿದ ಕಡೆ ಮಾತ್ರ ಪಸರಿಸಿದರೆ, ಉತ್ತಮ ಕಾರ್ಯವು ಎಲ್ಲೆಡೆ ಪಸರಿ. - ೦೫:೪೮, ೨೩ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ವ್ಯಕ್ತಿ ಕೆಲಸದ ಮೂಲಕ ದೊಡ್ಡವನಾಗುವನೇ ಹೊರತು ಹುಟ್ಟಿನಿಂದಲ್ಲ. - ೧೭:೦೫, ೧೬ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಒಂದು ಕೆಲಸ ಹಿಡಿದ ಮೇಲೆ ಬೆನ್ನು ಹತ್ತಿ ಅದನ್ನು ಮುಗಿಸಿಬಿಡಬೇಕು. - ೧೬:೩೭, ೧ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಶ್ರಮಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವವರೇ ಕೊನೆಗೂ ಅತ್ಯಂತ ಸಂತೋಷದಿಂದ ಇರುತ್ತಾರೆ. - ೦೬:೨೦, ೬ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಕೆಲಸ ಮಾಡುತ್ತಿದ್ದರೆ ಬಡತನ ಇರುವುದಿಲ್ಲ. ಮೌನವಾಗಿದ್ದರೆ ಜಗಳ ಉಂಟಾಗುವುದಿಲ್ಲ.
 • ಯೌವನ ಮತ್ತು ಸ್ತ್ರೀ ಸೌಂದರ್ಯ ಜಗತ್ತಿನ ಶಕ್ತಿಶಾಲಿ ಶಸ್ತ್ರಗಳಾಗಿವೆ.
 • ಮೊದಲ ಐದು ವರ್ಷಗಳ ಕಾಲ ನಿಮ್ಮ ಮಗುವನ್ನು ಪ್ರಿಯತಮೆಯಂತೆ ನೋಡಿಕೊಳ್ಳಿ. ಮುಂದಿನ ಐದು ವರ್ಷಗಳ ಕಾಲ ಅವರನ್ನು ಗದರಿಸಿ. ಹದಿನಾರನೆ ವರ್ಷಕ್ಕೆ ಕಾಲಿಡುವಾಗ ಅವರನ್ನು ಸ್ನೆಹಿತರಂತೆ ನೋಡಿಕೊಳ್ಳಿ. ನಿಮ್ಮ ಬೆಳೆದ ಮಕ್ಕಳು ನಿಮ್ಮ ಉತ್ತಮ ಸ್ನೆಹಿತರು.
 • ತನ್ನ ಹಲ್ಲಿನಲ್ಲಿ ವಿಷವಿಲ್ಲದಿದ್ದರೂ ಹಾವು ತನ್ನ ಆತ್ಮ ರಕ್ಷಣೆಗಾಗಿ ಬುಸುಗುಡಲೇ ಬೇಕು.
 • ಯಾವ ವ್ಯಕ್ತಿ ತನ್ನ ನಿಂದನೆಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳುತ್ತಾನೋ ಅವನು ಇಡೀ ಜಗದ ಮೇಲೆ ವಿಜಯ ಸಾಧಿಸುತ್ತಾನೆ.
 • ಜೀವನದಲ್ಲಿ ಯಾರನಾದರೂ ನಂಬು... ಆದರೆ ನಂಬುವ ಮೊದಲು ಹತ್ತು ಬಾರಿ ಯೋಚಿಸು. ಎಕೆಂದರೆ ಕೆಲವೊಂದು ಸಲ ನಮ್ಮ ಹಲ್ಲು ನಮ್ಮ ನಾಲಿಗೆಯನ್ನೇ ಕಚ್ಚಿ ಬಿಡುತ್ತದೆ.
 • ಯಾವ ಮನುಷ್ಯನು ತನ್ನ ಗುಟ್ಟಿನ ವಿಚಾರಗಳನ್ನು ಎಲ್ಲರೆದುರು ಹೇಳಿಕೊಳ್ಳುತ್ತಾನೋ, ಅವನು ಇರುವೆಯ ಗೂಡಲ್ಲಿ ಹಾವು ಸಿಕ್ಕಿದಂತೆ ಸಾಯುತ್ತಾನೆ.
 • ಹಣವಿಲ್ಲದ ಪುರುಷನನ್ನು ವ್ಯೇಶ್ಯೆ ತೊರೆಯುತ್ತಾಳೆ, ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ, ಹಣ್ಣು ಬಿಡದ ಮರಗಳನ್ನು ಪಕ್ಷಿಗಳು ತೊರೆಯುತ್ತವೆ. ಪ್ರಪಂಚದಲ್ಲಿ ಎಲ್ಲರೂ ತನ್ನ ಲಾಭವನ್ನೆ ನೋಡುತ್ತಾರೆ. ಎಲ್ಲಿಯವರೆಗೆ ನಮ್ಮಲ್ಲಿ ಜನಗಳಿಗೆ ಬೇಕಾದ್ದು ಇದೆಯೋ ಅಲ್ಲಿಯವರೆಗೆ ಮಾತ್ರ ನಮಗೆ ಬೆಲೆ.
 • ಚಿನ್ನದ ಅಸಲಿತನವನ್ನು ಪರೀಕ್ಷಿಸಲು ಅದನ್ನು ಬೆಂಕಿಯಲ್ಲಿ ಹಾಕಿ ಬೇಯಿಸುತ್ತಾರೆ. ಅದೇ ರೀತಿ ವ್ಯಕ್ತಿಗಳ ಮೆಲೆ ಬರುವ ಆಪಾದನೆಗಳು ಅವರ ಅಸಲಿಯತ್ತನ್ನು ತೋರಿಸುತ್ತವೆ.
 • ವೈಮುಖದಿಂದ ಸುಂದರವಾಗಿರುವ ಸ್ತ್ರೀ ಕೇವಲ ಒಂದು ರಾತ್ರಿ ಮಾತ್ರ ಸುಖವಾಗಿರಬಲ್ಲಳು. ಆದರೆ ಮನಸ್ಸಿನಿಂದ ಸುಂದರವಾಗಿರುವ ಸ್ತ್ರೀ ಜೀವನ ಪೂರ್ತಿ ಸುಖ ಕೊಡುತ್ತಾಳೆ. ಮನಸಿನಲ್ಲಿ ಸುಂದರವಾಗಿರುವವಳನ್ನು ಮಡದಿಯಾಗಿ ಪಡೆಯುವುದು ಒಳ್ಳೆಯದು.
 • ದುರ್ಜನ ಮತ್ತು ಸರ್ಪದ ಆಯ್ಕೆ ಬಂದಾಗ ಸರ್ಪದ ಆಯ್ಕೆ ಮಾಡಿಕೊಳ್ಳಬೇಕು. ಏಕೆಂದರೆ ಸರ್ಪ ತನ್ನ ರಕ್ಷಣೆಗಾಗಿ ಮಾತ್ರ ಕಚ್ಚುತ್ತದೆ, ಆದರೆ ದುರ್ಜನರು ಯಾವಗಲೂ ವಿಷ ಕಾರುತ್ತಿರುತ್ತಾರೆ.
 • ಶಿಕ್ಷಣವನ್ನು ಪಡೆಯುವುದು ತಪಸ್ಸಿದ್ದಂತೆ. ಅದಕ್ಕಾಗಿ ಮನೆ ಮತ್ತು ಮಾಯೆಯ ಮೋಹವನ್ನು ತ್ಯಾಗ ಮಾಡಬೇಕಾಗುತ್ತದೆ.
 • ರಾಜ,ವೈಶ್ಯ,ಯಮ,ಅಗ್ನಿ,ಕಳ್ಳ,ಬಾಲಕ,ಯಾಚಕ ಮತ್ತು ಗ್ರಾಮ ಕಂಟಕರು ಈ ಎಂಟೂ ಜನರಿಗೆ ಬೇರೆಯವರ ದುಃಖ ತಿಳಿಯುವುದಿಲ್ಲ.
 • ಸಂಪೂರ್ಣ ಮನಸ್ಸಿನಿಂದ ಪರಿಪೂರ್ಣ ಪ್ರಯತ್ನ ಮಾಡಿ ಬೇಟೆಯಾಡಿ ಪಡೆದುಕೊಳ್ಳುವುದನ್ನು ನಾವು ಸಿಂಹದಿಂದ ಕಲಿಯಬೇಕು.
 • ಒಂದು ಒಣಗಿದ ಮರವು ಬೆಂಕಿಯಾದರೆ ಇಡೀ ಅರಣ್ಯವನ್ನೇ ಸುಟ್ಟುಹಾಕುವಂತೆ, ಒಬ್ಬ ದುಷ್ಟ ಮಗ ಇಡೀ ಕುಟುಂಬವನ್ನೇ ನಾಶ ಮಾಡುತ್ತಾನೆ.
 • ಒಬ್ಬ ಆಸೆಬುರುಕನನ್ನು ಹಣಕೊಟ್ಟು ಕೈವಶ ಮಾಡಿಕೊಳ್ಳಬೇಕಾಗುತ್ತದೆ ಆದರೆ ಒಬ್ಬ ಸಜ್ಜನನನ್ನು ಕೈವಶ ಮಾದಿಕೊಳ್ಳಬೇಕಾದರೆ ಕೇವಲ ಸತ್ಯವನ್ನೇ ನುಡಿಯಬೇಕಾಗುತ್ತದೆ.
 • ಅತಿಯಾದ ರೂಪ ಸೀತೆಗೆ ಮುಳುವಾಯಿತು, ಅತಿಯಾದ ಗರ್ವ ರಾವಣನಿಗೆ ಕೇಡುಂಟು ಮಾಡಿತು, ಅತಿಯಾದ ದಾನ ಬಲಿಯನ್ನು ನಾಶ ಮಾಡಿತು, ಆದ್ದರಿಂದ ಅತಿಯಾಗಿ ಯಾವುದನ್ನೂ ಮಾಡಬಾರದು.
 • ಹೇಗೆ ಒಬ್ಬ ಕುಡುಕನಿಗೆ ಸರಿ ಕೆಟ್ಟದ್ದು ಗೊತ್ತಾಗುವುದಿಲ್ಲವೋ ಅದೇ ರೀತಿ ಒಬ್ಬ ಸ್ವಾರ್ಥ ಸಾಧಕನಿಗೆ ಸರಿ ಕೆಟ್ಟದ್ದು ಗೊತ್ತಾಗುವುದಿಲ್ಲ.
 • ಊಟ ಮಾಡುವಾಗ ಮಾತ್ರ ದೊಡ್ಡದಾಗಿ ಬಾಯಿ ತೆರೆಯುವ ಮನುಷ್ಯ ನೂರು ವರ್ಷದ ಸುಖವನ್ನು ಒಂದೇ ವರ್ಷಕ್ಕೆ ಪಡೆದುಕೊಳ್ಳುತ್ತಾನೆ. ಅಂದರೆ ಮೌನವೇ ಮಹಾ ಅಸ್ತ್ರ. ಮಹಾಯುದ್ಧದಿಂದ ಗೆಲ್ಲಲಾಗದ್ದನ್ನು ಮೌನದಿಂದ ಗೆಲ್ಲಬಹುದು. ಹೆಚ್ಚಿಗೆ ಮಾತಾಡಿದಷ್ಟು ಹೆಚ್ಚಿನ ಸಮಸ್ಯೆಗಳು ಮೈಮೇಲೆ ಬರುತ್ತವೆ.
 • ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ವ್ಯಕ್ತಿ ಆಗುತ್ತಾನೆಯೆ ಹೊರತು ಹುಟ್ಟಿನಿಂದಲ್ಲ.
 • ಲಕ್ಷ್ಮೀ,ಪ್ರಾಣ,ಜೀವನ,ಶರೀರ ಎಲ್ಲವೂ ನಶ್ವರ, ಧರ್ಮ ಮಾತ್ರ ಸ್ಥಿರ.
 • ಒಬ್ಬ ಗುಣವಂತ ಪುತ್ರ ನೂರು ಮೂರ್ಖ ಪುತ್ರರಿಗಿಂತ ಉತ್ತಮ. ಒಬ್ಬ ಚಂದಿರ ಮಾತ್ರ ಅಂಧಕಾರವನ್ನು ನಾಶ ಮಾಡಬಲ್ಲ. ಆದರೆ ಸಾವಿರಾರು ನಕ್ಷತ್ರಗಳು ಇದನ್ನು ಮಾಡಲು ಸಾಧ್ಯವಿಲ್ಲ.
 • ಪುತ್ರನಿಗೆ ಉತ್ತಮ ಶಿಕ್ಷಣವನ್ನು ಕೊಡುವುದು ತಂದೆಯ ಮುಖ್ಯ ಕರ್ತವ್ಯ.
 • ದುಷ್ಟರು ಮತ್ತು ಮುಳ್ಳುಗಳನ್ನು ಚಪ್ಪಲಿಗಳಿಂದ ತಿಳಿಯಬೇಕು ಅಥವಾ ಅವುಗಳ ಮಾರ್ಗದಿಂದ ದೂರವಿರಬೇಕು.
 • ಅನ್ನ ನೀರು ಮತ್ತು ಶುಭಾಷಿತಗಳೇ ಪೃಥ್ವಿಯ ಮೂರು ರತ್ನಗಳು, ಮೂರ್ಖರು ವ್ಯರ್ಥವಾಗಿ ಕಲ್ಲಿನ ತುಂಡಿಗೆ ರತ್ನದ ಹೆಸರನ್ನು ಕೊಟ್ಟಿದ್ದಾರೆ.
 • ಕಾಲ ವ್ಯಕ್ತಿಗಳನ್ನು ಸಮರ್ಥರನ್ನಾಗಿಸಬಹುದು, ಶಕ್ತಿಶಾಲಿಗಳನ್ನಾಗಿಸಬಹುದು, ಇಲ್ಲ ದುರ್ಬಲರನ್ನಾಗಿಸಿ ಕೊಲ್ಲಬಹುದು, ಕಾಲ ಯಾರ ಕೈಯಲ್ಲೂ ಇಲ್ಲ. ಯಾರು ಯಾರಿಗೂ ಮಿತ್ರನೂ ಅಲ್ಲ ಶತ್ರುವೂ ಅಲ್ಲ, ಕಾಲ ಎಲ್ಲರನ್ನೂ ಮಿತ್ರ ಶತ್ರುವನ್ನಾಗಿಸುತ್ತದೆ.
 • ಯಾವಾಗಲೂ ಗುಣವಓತರ ಜೊತೆ ಸ್ನೇಹ ಬೆಳೆಸುವುದು ಶ್ರೇಯಸ್ಕರ, ಯಾಕೆಂದರೆ ಹಾಲಲ್ಲಿ ನೀರು ಹಾಲಾಗುವಂತೆ, ಗುಣವಂತರ ಜೊತೆ ಸೇರಿದರೆ ನಾವೂ ಗುಣವಂತರಾಗುತ್ತೇವೆ.
 • ದುರ್ಬಲ ವ್ಯಕ್ತಿಯನ್ನು ಗಮನಿಸಿ ನಿರ್ಲಕ್ಷಿಸಬೇಡಿ. ಏಕೆಂದರೆ ಅವರು ಅತಿ ಹೆಚ್ಚು ಸೇಡಿನ ಮನೋಭಾವನೆಯನ್ನು ಹೊಂದಿರುತ್ತಾರೆ ಮತ್ತು ಅದಕ್ಕಾಗಿಯೇ ಹವಣಿಸುತ್ತಾರೆ.
 • ಅವಿವೇಕಿ ಜನರಿಗೆ ಸಲಹೆ ನೀಡಬೇಡಿ, ನೀವು ಅವರನ್ನು ಸರಿಪಡಿಸಲು ಸಹಾಯ ಮಾಡುತ್ತೇವೆ ಎಂದುಕೊಂಡರೆ ಅದು ನಮ್ಮ ಮೂರ್ಖತನ.
 • ಮತ್ತೊಬ್ಬರ ಸಹಾಯ ಪಡೆದು ಎದ್ದೇಳುವಷ್ಟು ಮಟ್ಟಿಗೆ ಯಾವ ಸಂಬಂಧದಲ್ಲಿಯೂ ಕುಸಿದು ಬೀಳದಿರಿ.
"https://kn.wikiquote.org/w/index.php?title=ಚಾಣಕ್ಯ&oldid=8835" ಇಂದ ಪಡೆಯಲ್ಪಟ್ಟಿದೆ