ವಿಷಯಕ್ಕೆ ಹೋಗು

ಖಲೀಲ್ ಗಿಬ್ರಾನ್

ವಿಕಿಕೋಟ್ದಿಂದ

ಖಲೀಲ್ ಜಿಬ್ರಾನ್ (1883-1931)- ಲೆಬನನ್|ಲೆಬನಾನಿನಲ್ಲಿ ಜನಿಸಿ ಉತ್ತರ ಅಮೇರಿಕ|ಉತ್ತರ ಅಮೆರಿಕದಲ್ಲಿ ತನ್ನ ಜೀವನದ ಬಹುಭಾಗವನ್ನು ಕಳೆದ ದಾರ್ಶನಿಕ ಕವಿ, ಚಿತ್ರಕಾರ. ಇಪ್ಪತ್ತಕ್ಕೂ ಹೆಚ್ಚಿನ ಅಪೂರ್ವ ಕೃತಿಗಳಿಂದ, ಸಹಸ್ರಾರು ವಚನ-ಕವನಗಳಿಂದ, ನೂರಾರು ಆನುಭಾವಿಕ ಚಿತ್ರಗಳಿಂದ ಪೂರ್ವ ಪಶ್ಚಿಮದವರ ಪ್ರೀತಿ ಗೌರವಗಳಿಗೆ ಪಾತ್ರನಾದವ. ತನ್ನ ಅಮೂರ್ತ ಚಿಂತನೆಗಳಿಗೆ, ಕಾವ್ಯಮಯ ಉಕ್ತಿಗಳಿಗೆ, ಶಬ್ದಶಿಲ್ಪಶೈಲಿಗೆ ಪ್ರಸಿದ್ಧನಾದವ.

ಯುಕ್ತಿಗಳು

[ಸಂಪಾದಿಸಿ]
  • ಜ್ಞಾನವೇ ಜೀವನದ ಸುಖವನ್ನು ಹೆಚ್ಚಿಸುವ ಬೆಳಕು.
    - ೦೬:೩೨, ೨೭ ಜೂನ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ವಾಚಾಳಿಯಿಂದ ಮೌನವಾಗಿ ಇರುವುದನ್ನು, ಅಸಹಿಷ್ಣು ವ್ಯಕ್ತಿಯಿಂದ ಸಹನೆಯನ್ನು, ನಿರ್ದಯಿಯಿಂದ ದಯಾಪರತೆಯನ್ನು ಕಲಿತೆ.ಅಷ್ಟಾದರೂ ಆ ಯಾರು ಗುರುವಿನ ಬಗ್ಗೆಯೂ ನನಗೆ ಕೃತಜ್ಞತೆಯೇ ಇಲ್ಲದಿರುವುದು ವಿಚಿತ್ರವಾದ ಸಂಗತಿ.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೧೧ ಸೆಪ್ಟೆಂಬರ್ ೨೦೨೪ (UTC)

  • ಯಾವಾಗ ನೀವು ಹೃದಯದ ಏಕಾಂತದಲ್ಲಿ ನೆಲೆ ನಿಲ್ಲಲಾರಿರೋ ಆಗ ನೀವು ತುಟಿಗಳ ಮೇಲೆ ವಾಸ ಮಾಡಲು ಆರಂಭ ಮಾಡುತ್ತೀರಿ.