ವಿಷಯಕ್ಕೆ ಹೋಗು

ಕುವೆಂಪು

ವಿಕಿಕೋಟ್ದಿಂದ

ನುಡಿಗಳು

[ಸಂಪಾದಿಸಿ]
  • ಓ ನನ್ನ ಚೇತನ, ಆಗು ನೀ ಅನಿಕೇತನ.
  • ಕಲೆಗಾಗಿ ಕಲೆ ಎಂಬ ಮಾತು ಕಲಾಪೂರ್ಣವಾದರೂ ಪೂರ್ಣವಲ್ಲ
  • ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ
  • ನೂರು ದೇವರನು ನುಕಾಚೆ ದೂರ, ಭಾರತಾಂಬೆಯೇ ದೇವಿ ಪೂಜಿಸುವ ಬಾರ
  • ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
  • ರಾಮಾವತಾರಕಿಂ ಮಿಗಿಲೈಸೆ ರಾಮಾಯಣವತಾರಂ
  • ಕನ್ನಡವೇ ಸತ್ಯ, ಕನ್ನಡವೇ ನಿತ್ಯ
  • ಭಾಷೆ ಲೋಕೋಪಯೋಗಿಯೂ ಹೌದು, ಭಾವೊಪಯೋಗಿಯೂ ಹೌದು
  • ಜ್ಯೋತಿಯಿರ್ಪೆಡೆಯಲ್ಲಿ ಭಗವದ್ವಿಭೂತಿಯಂ ದರ್ಶಿಸುತೆ
  • ಪ್ರಿಥಿವಿಯ ಪ್ರಥಮ ಪ್ರಭಾತದಲಿ ಇತಿಹಾಸ ದೃಷ್ಟಿಗಸ್ಪಷ್ಟ ಪ್ರಾಚಿ ದಿಗಂತದಲಿ ನವಜಾತ ಶಿಶುವಾಗಿ ನಲಿದೆಯೌ ನೇನೆಲೌ ಸಂಸ್ಕೃತದ ವಾಗ್ದೇವಿ ನಿನ್ನನನುಳಿದೆಲ್ಲಿಯದು ಕನ್ನಡದ ಬದುಕು?
  • ಆನಂದಮಯ ಈಜಾಗ ಹೃದಯ ಏತಕೆ ಭಯ ಮಾಣೋ, ಸೂರ್ಯೋದಯ ಚಂದ್ರೋದಯ ದೇವರ ದಯಾ ಕಾಣೋ
  • ಮನುಜ ಮತ ವಿಶ್ವಪಥ
  • ಆದರ್ಶಗಳು ಪ್ರತಿದಿನ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು. - ೦೫:೦೦, ೭ ಫೆಬ್ರುವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಳ್ಳೆಯ ಬರಹಗಾರ ತನ್ನ ವಿರುದ್ಧ ತಾನೇ ಯೋಚಿಸಬಲ್ಲವ. ಕೆಟ್ಟ ಬರಹಗಾರ ತನ್ನನ್ನು ಬಿಟ್ಟರೆ ಇಲ್ಲ ಅಂತ ತಿಳಿದುಕೊಂಡಿರುತ್ತಾನೆ. - ೦೬:೩೨, ೭ ಏಪ್ರಿಲ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ವಿದ್ಯಾರ್ಥಿಗಳು ಭತ್ತದ ಚೀಲಗಳಾಗಬಾರದು, ಭತ್ತದ ಗದ್ದೆಗಳಾಗಬೇಕು. - ೦೯:೧೫, ೧೪ ಏಪ್ರಿಲ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಂಬಿ ಅನುಭವಿಸುವುದಕ್ಕಿಂತ, ಅನುಭವಿಸಿ ನಂಬುವುದೇ ಶಾಶ್ವತ ಮತ್ತು ಸತ್ಯ. - ೦೪:೫೧, ೧೪ ಜುಲೈ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಹಿಂದೆ ಸರಿವುದೆ ಸಾವು! ಆತ್ಮಹತ್ಯೆ! - ೦೫:೪೪, ೧೨ ಡಿಸೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಉತ್ಸಾಹವೆಂಬುದು ಕಲ್ಲಿದ್ದಲ ಒಳಗಿನ ಕಾವಾಗಬೇಕೆ ಹೊರತು, ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು. - ೧೫:೩೪, ೧೭ ಜನವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮನುಷ್ಯನ ಅಂತಃಕರಣದಲ್ಲಿ ಸಾತ್ವಿಕತೆಯ ಜ್ಯೋತಿಯನ್ನು ಜಾಗೃತಗೊಳಿಸುವುದು ಕರುಣೆ. - ೧೨:೧೨, ೨೪ ಮೇ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಉತ್ತಮವಾದುದು ಶ್ರಮವಿಲ್ಲದೆ ಲಭಿಸದು , ಇಚ್ಹೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ .
  • ಸತ್ಯಕ್ಕೆ ಹೆದರುವವನು ಅಥವಾ ನಾಚುವವನು ನಿಜವಾದ ಜಿಜ್ಞಾಸುವಾಗಲಾರನು.
  • ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು.
  • ಇವತ್ತಿನ ಹಾರೈಕೆ, ನಾಳಿನ ಪೂರೈಕೆ, ಇಂದಿನ ಕನಸು, ನಾಳೆಯ ನನಸು.
  • ಬಹುಜನರು ಹೇಳಿದುದೇ ಬಹಳ ಸತ್ಯವಾಗುವುದಿಲ್ಲ. - ೦೬:೩೭, ೨೫ ನವೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸತ್ಯಕ್ಕೆ ಹೆದರುವವನು ನಿಜವಾದ ಜಿಜ್ಞಾಸುವಾಗಲಾರ. - ೦೯:೨೪, ೨೮ ಡಿಸೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬುದ್ಧಿ–ಭಾವಗಳ ವಿದ್ಯುದಾಲಿಂಗನವೇ ಪ್ರತಿಭೆ. - ೦೭:೪೯, ೨೮ ಆಗಸ್ಟ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಉತ್ತಮವಾದುದು ಶ್ರಮವಿಲ್ಲದೆ ಲಭಿಸದು. ಇಚ್ಛೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ. ೦೧:೧೧, ೩೦ ಏಪ್ರಿಲ್ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕನ್ನಡದ ವಿಷಯದಲ್ಲಿ ನಾನು ಬುಲ್‍ಡೋಜ಼ರ್ ನಂತೆ ನುಗ್ಗುತ್ತೇನೆ. ದಾರಿ ಬಿಟ್ಟಿರೋ ಬದುಕುಳಿಯುತ್ತೀರಿ -ವಿಚಾರಕ್ರಾಂತಿಗೆ ಆಹ್ವಾನ*
  • ಸರ್ವೋದಯವಾಗಲಿ ಸರ್ವರಲಿ
  • ಕನ್ನಡವೆನೆ ಕುಣಿದಾಡುದೆನ್ನೆದೆ; ಕನ್ನಡವೆನೆ ಕಿವಿ ನಿಮಿರುವುದು
  • ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೊಳಗುತ್ತದೆ.
  • ಕನ್ನಡಕೆ ಹೋರಾಡು ಕನ್ನಡದ ಕಂದಾ, ಕನ್ನಡವ ಕಾಪಾಡು ನನ್ನ ಆನಂದಾ.
  • ಆಯಾ ಪ್ರಾಂತ್ಯಗಳಲ್ಲಿ ಆಯಾ ದೇಶಭಾಷೆಗಳಿಗೆ ಪ್ರಥಮ ಸ್ಥಾನ ಸಲ್ಲಬೇಕು. ಅಲ್ಲಿಯ ಶಿಕ್ಷಣ ಎಲ್ಲಾ ಮಟ್ಟಗಳಲ್ಲಿಯೂ ದೇಶಭಾಷೆಯಲ್ಲೇ ಸಾಗಬೇಕು.
  • ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಾದರೂ ಮಾನ್ಯಸ್ಥಾನ ದೊರೆಯಬೇಕಾದರೆ ಅದು ಇಲ್ಲಿ ಕರ್ನಾಟಕದಲ್ಲೇ. ಇನ್ನೆಲ್ಲಿಯೂ ಅಲ್ಲ.
  • ಮತ ಮನುಜ ಮತವಾಗಬೇಕು.
  • ಪಥ ವಿಶ್ವಪಥವಾಗಬೇಕು.
  • ಕರ್ನಾಟಕ, ಹಳೆಯದೆ ಅದು

ಹೊಸ ತಾಯಿಯ ಹೆಸರು
ತುಂಬುವುದಿದೆ ಜನಹೃದಯದ
ಭಾವೈಕ್ಯದ ಉಸಿರು.

"https://kn.wikiquote.org/w/index.php?title=ಕುವೆಂಪು&oldid=8904" ಇಂದ ಪಡೆಯಲ್ಪಟ್ಟಿದೆ