ಕುಮಾರವ್ಯಾಸ

ವಿಕಿಕೋಟ್ದಿಂದ
  • ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು.
  • ಸಂಸಾರ ಎಂಬ ಮರಕ್ಕೆ ಬಂಧುಗಳ ದರ್ಶನವೇ ಫಲ - ೦೬:೩೧, ೧೨ ಆಗಸ್ಟ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸುರಿದುದು ಅತಿ ಮಳೆಯೆಂದು ಕುಲಗಿರಿ ಕರಗುವುದೇ?
  • ನೆಚ್ಚದಿರು ಸಿರಿಯನು ವೃತಾ ಮದಗಿಚ್ಚಿನ ಉರಿಯಲಿ ಬೇಯದಿರು.
  • ಸಂಕಟದ ಸನ್ನಾಹದಲಿ ಸುಭಟಕ ಮಾಡಬೇಡ.
  • ಗಾಳಿ ಬೆಮರುವುದುಂಟೆ ವಹ್ನಿಜ್ವಾಲೆ ಹಿಮಕಂಜುವುದೆ ಮಂಜಿನ ಮೇಲುಗಾಳೆಗವುಂಟೆ ಬಲುಬೇಸಗೆಯ ಬಿಸಿಲೊಳಗೆ – ಪದ್ಯ ೪೧
  • ನುಡಿಯ ಖಡ್ಗದಲೇಕೆ ಗಂಟಲ ಕೊಯ್ವೆ – ಪದ್ಯ ೩
  • ಬಿಡು ಮರೀಚಿಯ ತೊರೆಗೆ ಹರುಗೋಲಿಡುವರುಂಟೇ; ಲೆಪ್ಪದುರಗನ ಹಿಡಿವಡೇತಕೆ ಗರುಡಮಂತ್ರವು – ಪದ್ಯ ೩೮
  • ಗಿರಿಯ ಶಿರದಲಿ ಹೂತ ಕಕ್ಕೆಯ ಮರ ಮುರಿದು ಬೀಳ್ವಂತೆ – ಪದ್ಯ ೭೬
  • ಬಲು ಬಿಸಿಲೊಳುರೆ ನೊಂದ ನೈದಿಲೆಗಳಿಗೆ ಚಂದ್ರಿಕೆ – ಪದ್ಯ ೪೬
  • ಹದ್ದು ಕಾಗೆಯ ಮನೆಗೆ ಬಾಣಸವಿದ್ದುದೋ ಗಜವೆನುತ ಬೊಬ್ಬಿಡುತಿದ್ದುದ್ – ಪದ್ಯ ೪೩
  • ಹಗೆಯ ಬಲದಲಿ ಹರಿದು ಸುಭಟರ ಚಿಗುಳಿದುಳಿದುದು ತಲೆಗಳನು ಮುಗಿಲಗಲದಲಿ ಹರಹಿದುದು – ಪದ್ಯ ೧೪
  • ಬತ್ತಿದ ಕೆರೆಯೊಳಗೆ ಬಲೆಯೇಕೆ – ಪದ್ಯ ೭
  • ಒಂದು ಮತವೆನಗೊಂದು ನುಡಿ ಮನವೊಂದು ಮತ್ತೊಂದಿಲ್ಲ – ಪದ್ಯ ೩೪
  • ಕವಲು ಮನದಲಿ ಕಂಪಿಸುತ ಶಿಬಿರವನು ಹೊಕ್ಕರು – ಪದ್ಯ ೪೩
  • ಗಿರಿಯ ಮಕ್ಕಳು ನಗುತ ವಜ್ರದ ಕರವ ಹೊಯ್ದಂತಾಯ್ತು – ಪದ್ಯ ೫೭
  • ಸೂರ್ಯನ ಕಿರಣ ಹೊಲೆಯನ ಚರಿಸಿದರೆ ಹೊಲೆ ಹೂರುವುದೇ – ಪದ್ಯ ೫೦
  • ಅಂಘ್ರಿಗೆ ಶಿರವ ಚಾಚಿ- ಪದ್ಯ ೬೩
  • ಕವಲು ನಾಲಗೆಯಿಲ್ಲ ತನಗೆಂದ – ಪದ್ಯ ೧೭
  • ಕದನದಲಿ ಹಿಡಿವಡೆದವರ ಕೊಲುವುದು ನರೇಂದ್ರರ ಧರ್ಮವಲ್ಲ – ಪದ್ಯ ೩೮