ಕಾಳಿದಾಸ
ಗೋಚರ
- ಕಾರ್ಯ ಕುಶಲನಾದ ಮನುಷ್ಯನಿಗೆ ಯಶಸ್ಸು ಮತ್ತು ಹಣಕ್ಕೆ ಕೊರತೆ ಇರುವುದಿಲ್ಲ. - ೦೪:೫೦, ೨೧ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹಳೆಯದು ಎಂದರೆ ಎಲ್ಲವೂ ಶ್ರೇಷ್ಠವಲ್ಲ, ಹೊಸತು ಎಂದ ಮಾತ್ರಕ್ಕೆ ತಿರಸ್ಕರಿಸಬೇಕಿಲ್ಲ. ತಿಳಿದವರು ಎರಡನ್ನೂ ಪರೀಕ್ಷಿಸಿಯೇ ಒಪ್ಪುತ್ತಾರೆ. ಮೂರ್ಖರಾದವರು ಈ ವಿಷಯದಲ್ಲಿ ಅವಿಚಾರಿಗಳಾಗಿರುತ್ತಾರೆ. - ೦೫:೧೮, ೧೨ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಗುರಿ ಮುಟ್ಟಲು ನಿರ್ಧರಿಸಿರುವ ಮನಸ್ಸನ್ನು, ಇಳಿಜಾರಿನಲ್ಲಿ ಹರಿಯುವ ನೀರನ್ನು ಯಾರು ತಾನೇ ತಡೆಯಲು ಸಾಧ್ಯ? - ೦೭:೩೯, ೧೦ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಇಂದಿನ ದಿನವನ್ನು ಚೆನ್ನಾಗಿ ಬದುಕಿದರೆ ನಿನ್ನೆಗಳು ಸುಂದರ ನೆನಪಾಗುತ್ತವೆ, ನಾಳೆಗಳು ಭರವಸೆಯ ಬೆಳಕಾಗುತ್ತವೆ. - ೦೮:೧೭, ೨೮ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮನಸ್ಸನ್ನು ಚಂಚಲಗೊಳಿಸುವ ವಸ್ತು ಎದುರಿರುವಾಗಲೂ ಯಾರ ಮನಸ್ಸು ವಿಕಾರವಾಗುವುದಿಲ್ಲವೋ ಅವರೇ ಲೋಕದಲ್ಲಿ ಧೀರರು. - ೧೦:೪೩, ೨೭ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಆಸೆ ಇಲ್ಲದವನಿಗೆ ಜಗತ್ತೇ ತೃಣಸಮಾನ.
- ದುರ್ಜನರು ಉಪಕಾರದಿಂದಲೇ ಶಾಂತರಾಗುವುದಿಲ್ಲ.
- ಹುಲ್ಲು ಕೂಡ ಆಹಾರವಾಗಿ ಹಸುಗಳಿಗೆ ಒದಗುತ್ತದೆ. ಉಪಕಾರ ಬುಧ್ಧಿ ಇಲ್ಲದ ಮನುಷ್ಯ ಹುಲ್ಲಿಗಿಂತ ಕೀಳು.
- ರತ್ನವನ್ನು ಇತರರು ಹುಡುಕಿಕೊಂಡು ಹೊಗುತ್ತಾರೆಯೇ ಹೊರತು ರತ್ನವೇ ಇತರರನ್ನು ಹುಡುಕಿಕೊಂಡು ಹೋಗುವುದಿಲ್ಲ.