ವಿಷಯಕ್ಕೆ ಹೋಗು

ಕನಕದಾಸ

ವಿಕಿಕೋಟ್ದಿಂದ

ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರು|ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರು|ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.

ಯುಕ್ತಿಗಳು

[ಸಂಪಾದಿಸಿ]
  • ಕಾಲವಾವನ ಕೀಳು ಮಾಡದು?
    - ೦೬:೩೧, ೧೧ ಆಗಸ್ಟ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಹಿಂದೆ ನನ್ನ ಬೈದವರೆಲ್ಲ ಚೆಂದವಿರಲಿ, ಮುಂದೆ ನನ್ನ ಬೈದವರೆಲ್ಲ ಅಂದಣವೇರಲಿ, ಕಂದು ಇಟ್ಟವರೆಲ್ಲ ಕುದುರೆ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ.
  • ಅಜ್ಞನಿಗಳೊಡನೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳೊಡನೆ ಜಗಳವಾಡುವುದು ಲೇಸು.
  • ದುರ್ಜನರ ಮನೆಯ ಪಾಯಸಾನ್ನಕಿಂತ ಸಜ್ಜನರ ಮನೆಯ ದಬ್ಬಾಳಿಕೆಗೆ ಲೇಸು ಹೆಜ್ಜೆಗೆ ಸಾವಿರ ಹೊನ್ನನಿತ್ತರೂ ಬೇಡ ಬಲು ದುರ್ಜನರ ಸಂಗ ಬಲು ಭಂಗ ಹರಿಯೆ.
  • ತಾನಾರು ? ದೇಹವಾರು? ದಿವ್ಯಾ ಜ್ಞಾನದಲಿ ತಿಳಿದಾತ.ಪರಮಯೋಗಿ

ಕೃತಿಗಳು

[ಸಂಪಾದಿಸಿ]
  • ಮೋಹನ ತರಂಗಿಣಿ []
  • ನಳಚರಿತ್ರೆ []
  • ರಾಮಧಾನ್ಯ ಚರಿತ್ರೆ

[]

"https://kn.wikiquote.org/w/index.php?title=ಕನಕದಾಸ&oldid=12331" ಇಂದ ಪಡೆಯಲ್ಪಟ್ಟಿದೆ