ಎಂ. ಗೋಪಾಲಕೃಷ್ಣ ಅಡಿಗ

ವಿಕಿಕೋಟ್ದಿಂದ
 • ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸಗೊಂಡು ತನ್ನ ಮಟ್ಟವನ್ನು ಮುಟ್ಟಬೇಕು. - ೧೬:೪೪, ೧೧ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಜನರಿಗೆ ತಮ್ಮ ಹಕ್ಕು, ಹೊಣೆಗಾರಿಕೆಯ ಅರಿವು ಇಲ್ಲದೆ ಹೋದರೆ ಪ್ರಜಾಪ್ರಭುತ್ವ ಕೇವಲ ನಕಲಿ ಮಾಲು. - ೦೫:೪೬, ೪ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ವಿವೇಕವೆಂದರೆ ಬಿಡಿಸಿ ನೋಡುವುದು, ವಿಶ್ಲೇಷಿಸುವುದು, ತೂಗುವುದು, ಅಳೆಯುವುದು. - ೦೫:೩೨, ೧೮ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಒಂದು ಜಾತಿಯ ಜನ, ತಮ್ಮ ಸುತ್ತಲೂ ಇನ್ನೂ ಅನೇಕ ಜಾತಿಗಳಿವೆ ಎಂಬು­ದನ್ನು ಯಾವಾಗ ಮರೆಯುತ್ತಾರೋ ಆಗ ಜಾತಿಭಾವನೆ ಮಾರಕವಾಗುತ್ತದೆ. - ೧೬:೦೩, ೨೫ ಡಿಸೆಂಬರ್ ೨೦೧೩ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ
 • ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ. - ೦೫:೨೦, ೨೦ ಫೆಬ್ರುವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಏನಾದರು ಮಾಡುತಿರು ತಮ್ಮ ಸುಮ್ಮನಿರಬೇಡ.
 • ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.
 • ನೀತಿ ನಿಯಮಗಳ ಬೇಲಿ ಇಲ್ಲದೆ ಸಮಾಜ ಜೀವನವೇ ಅಸಾಧ್ಯ. - ೧೩ ಡಿಸೆಂಬರ್ ೨೦೧೬ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಬದುಕಿನ ಗದ್ದಲ ಹೆಚ್ಚಾಗಿದ್ದಾಗ ಬಹಳ ಜನರಿಗೆ ಸಾವಿನ ಸವಾಲು ಕೇಳಿಸುವುದಿಲ್ಲ. - ೧೭:೩೮, ೯ ಫೆಬ್ರುವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನಾವೆಲ್ಲರು ಒಂದೇ ಜಾತಿ, ಒಂದೇ ಮತ, ಒಂದೇ ಕುಲ,ನಾವು ಮನುಜರು.
 • ನಿನ್ನೆದೆಯ ಬಲ,ಒಂದೇ ನಿನ್ನ ಬೆಂಬಲವು.
 • ಒಂದು ಕವನ ಒಂದು ಶತಮಾನದ ಮೇಲೆಯೂ ಸಂತೋಷ ಕೊಟ್ಟು ಜುಮ್ಮು ದಟ್ಟಿಸುವುದು ಸಾಧ್ಯವಾದರೆ, ಒಂದು ಶತಮಾನದ ಹಿಂದೆ ಇದ್ದ ಕಾವ್ಯಪ್ರಿಯನೊಬ್ಬ ಎದ್ದು ಬಂದು ಇದನ್ನು ಓದಿ ಮೆಚ್ಚುವುದು ಸಾಧ್ಯವಾದರೆ ಆಗ ಮಾತ್ರ ಕೃತಿ ಕೃತಾರ್ಥ.
 • ದೇಶದ ಪರಿಸ್ಥಿತಿ ತುಂಬ ಕೆಡುತ್ತ ಬರುತ್ತಿದೆ -ಆರ್ಥಿಕವಾಗಿ, ನೈತಿಕವಾಗಿ ಯಾವ ಕಡೆ ಹೋಗುತ್ತದೆ, ಏನಾಗುತ್ತದೆ, ತಿಳಿಯುವುದಿಲ್ಲ.
 • ಹುಡುಗನಲ್ಲಿ ಕಪಿ ಅಂಶವೂ ಇದೆ, ಆಂಜನೇಯನಂತೆ ಅದ್ಭುತವಾಗಿ ಬೆಳೆಯಬಲ್ಲ ಸಾಧ್ಯತೆಯೂ ಇದೆ -"ಹನುಮದ್ವಿಲಾಸ".
 • ಕಾವ್ಯ ಸಂಪ್ರದಾಯಬದ್ಧವಾಗಬಾರದು, ಆಗ ಕಾವ್ಯದಲ್ಲಿ ಮುಗ್ಗಲು ವಾಸನೆ ಬರುತ್ತದೆ.
 • ಪಂಪ ಕುಮಾರವ್ಯಾಸರನ್ನು ಓದಿ ಸಂತೋಷಪಡಲಾರದವನು, ಆಧುನಿಕ ಕಾವ್ಯವನ್ನೋದಿ ನಿಜವಾಗಿಯೂ ಪುಳಕಿತನಾಗುತ್ತಾನೆ ಎಂದು ನಂಬುವುದು ಕಷ್ಟ.
 • ಹೊಸತು ಹಳೆಯದರ ಜೊತೆಗೂ, ಹಳೆಯದು ಹೊಸದರ ಜೊತೆಗೂ ಹೊಂದಿಕೊಳ್ಳದೆ ಬದುಕು ಸುಸಂಸ್ಕೃತವಾಗುವುದಿಲ್ಲ, ಕಾವ್ಯವು ಶ್ರೇಷ್ಠವಾಗುವುದಿಲ್ಲ.