ವಿಷಯಕ್ಕೆ ಹೋಗು

ಉತ್ತರ ಕರ್ನಾಟಕದ ಗಾದೆಗಳು ಪುಸ್ತಕದಿಂದ ಗಾದೆಗಳು

ವಿಕಿಕೋಟ್ದಿಂದ
  • ಅಕ್ಕ ಸತ್ತ ಆರತಿಂಗಳಿಗಿ ಭಾವನ ಕೊಳ್ಗಿ ಬಿದ್ದ ಅತ್ತರು.
  • ಅಕ್ಕ ತಂಗೇರ ಧನಿ ರೊಕ್ಕಾ ಬಾರಿಸಿದ್ಹಂಗ.
  • ಅಕ್ಕನ ಚಾಳಿ ಮನಿಮಿಂದಿಗೆಲ್ಲಾ.
  • ಅಕ್ಕ ಇದ್ರ ಭಾವ ರೊಕ್ಕ ಇದ್ರ ಸಂತಿ.
  • ಅಕ್ಕನ ಬಂಗಾರಿದ್ರೂ ಪತ್ತಾರ ತಗೊಳ್ಳದ್ಲೆ ಬಿಡುದುಲ್ಲ.
  • ಅಕ್ಕ ಸತ್ತರೂ ಅಮಾಸಿ ನಿಲ್ಲುದುಲ್ಲ.
  • ಅಕ್ಕಾ ಅಂದ್ರ ಬಕ್ಕಾ ಅರೇದವರ.
  • ಅಗಸರ ನಾಯಿ ಹಳ್ಳಾನೂ ಕಾಯಲಿಲ್ಲ ಮನಿನೂ ಕಾಯಲಿಲ್ಲ.
  • ಅಗ್ಗದ ಚಪ್ಪಲಿ ಕಾಲಿಗಿ ಮೂಲ.
  • ಅಜ್ಜಿ ನೂತದ್ದೆಲ್ಲ ಮಮ್ಮಗನ ಉಡದಾರಕ್ಕಂತ.
  • ಅಟ್ಟಮ್ಯಾಲ ಒಲಿ ಉರಿತು ಕೆಟ್ಟಮ್ಯಾಲ ಬುದ್ಧಿ ಬಂತು.
  • ಅಟ್ಟ ಮಾರಂದ್ರ ಸುಟ್ಟ ಮಾರಿದರಂತ.
  • ಅಟ್ಟ ಉಣ್ಣಾವನ ಹೇಣ್ತೇ ಆಗಬಾರ್ದು ಮೊಟ್ಟ ಹೊಡ್ಯಾವನ ಆಳ ಆಗಬಾರ್ದು.
  • ಅಟ್ರ ಉಣಬೇಕು ಸತ್ರ ಹೊರಬೇಕು.
  • ಅಟ್ಟದ್ದಾರ ಮಂದಿಗೆ ಸುಟ್ಟದ್ದು ಮೂರಮಂದಿಗೆ.
  • ಅಡವತ್ನ್ಯಾಗ ಆಯಿ ಮೈನೆರದ್ಲಂತ.
  • ಅಡವ್ಯಾಗಿನ ದೇವರ ಬಂದ ಗುಡವ್ಯಾಗಿನ ದೇವರ್ನ ಓಡಿಸ್ರಂತ.
  • ಅಡದೆವ್ವ ಬಂದ ಗಿಡದೆವ್ವಿ ಗೆಬ್ಬಿ ಸಿತ್ತಂತ.
  • ಅಡ್ಯಾಗ ಜಾಲಿ ಸೊಕ್ಕಬಾರದು ಊರಾಗ ಕಬ್ಬಲಗೇರ ಸೊಕ್ಕಬಾರದು.
  • ಅತ್ತೆ ಸತ್ರೆ ಸೊಸೆ ಬಿತ್ರಾಣಿ.
  • ಅರ್ಥ ಆಗ್ದೆ ಹಳ್ಳಿಯವ್ ಕೆಟ್ವಂತೆ ಅರ್ಥ ಆಗಿ ಪಟ್ನುದವೆ ಕೆಟ್ಟೋದ್ವಂತೆ.
  • ಬುದ್ಧಿ ಮಾತ್ ಹೇಳಿದ್ರೆ ಗುದ್ಕಂದ್ ಸತ್ರು
  • ಹೆಂಗ್ಸೆ ಯಜ್ಮಾನ್ಕೆ ಕೊಡ್ಯಾಡ ಮನೆಲ್ ದೊಡ್ಡಸ್ತ್ಕೆ ತೋರಿಸ್ಯಾಡ
  • ಇದ್ಬಂದುದ್ನು ಕಳ್ಕಂಡ ಸಿದ್ ಭೈರುವ
  • ನಂಟು ನೋಡ್ದೆ ಹೋಯ್ತು ಗಂಟು ಕೇಳ್ದೆ ಹೋಯ್ತು
  • ಕೊಡದ್ ಮೂರ್ ಕಾಸು ಕ್ವಾಣೆ ತುಂಬಾ ಹಾಸು
  • ಆಚಾರಿ ಆಳಲ್ಲ ಅಂಬಲಿ ಪಾಯ್ಸ ಅಲ್ಲ
  • ಆಯ್ಸ ಒಂದಿದ್ರೆ ಪಾಯ್ಸಕ್ ಅಪುಪುರ್ವೆ
  • ಕಲಿತ ವಿದ್ಯೆ ಹೇಳ್ದೆ ಹೋಯ್ತು ಕೊಟ್ಟ ಸಾಲ ಕೇಳ್ದೆ ಹೋಯ್ತು