ಅರವಿಂದ
ಗೋಚರ
- ನಂಬಿಕೆಯೇ ಯಶಸ್ಸಿನ ಮೂಲಾಧಾರ. ನಂಬಿಕೆಯಿಲ್ಲದಿದ್ದರೆ ಯಾವುದೇ ಕಾರ್ಯ ಸಿದ್ಧಿಸುವುದಿಲ್ಲ. ಸುಖದ ಅನುಭವಕ್ಕೆ ನಂಬಿಕೆ ಮುಖ್ಯ. - ೧೭:೪೫, ೧೬ ಅಕ್ಟೋಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಮ್ಮ ಬಹುಪಾಲು ಸೋಲುಗಳಿಗೆ ಕಾರಣ ನಮ್ಮಲ್ಲಿ ತಲೆಯೆತ್ತುವ ಅಪನಂಬಿಕೆಗಳು.
- ಈ ಪ್ರಪಂಚದಲ್ಲಿ ಯಾವುದೂ ಸ್ಥಿರವಲ್ಲ. ಕೀರ್ತಿಯೂ ಸರಿ ಕೀರ್ತಿವಂತರೂ ಸರಿ.
- ಯೋಚನೆಗಳು ಅಲೆಯಂತೆ ಚಲಿಸುತ್ತವೆ, ತಮಗೆ ವ್ಯಕ್ತವಾಗಲು ಅನುಕೂಲವಾದ ಮನಸ್ಸನ್ನು ಹುಡುಕುತ್ತವೆ.
- ಒಬ್ಬ ಆದರ್ಶ ತಾಯಿ ಗುರುಗಳಿಂತ ಶ್ರೇಷ್ಠಳು.
- ಶಾಂತವಾಗಿ ನೀಡುವ ಉತ್ತರದಿಂದ ಎಂಥಾ ಸಿಟ್ಟನ್ನೂ ಕಡಿಮೆ ಮಾಡಬಹುದು.
- ತೀವ್ರವಾದ ಹಂಬಲ ಮತ್ತು ಹಂತ ಹಂತವಾಗಿ ಮೇಲೇರುವ ತಾಳ್ಮೆ ವಿದ್ಯಾರ್ಥಿಗಳಿಗಿರಬೇಕು.
- ವಿದ್ಯಾವಂತರೆಲ್ಲ ಜ್ಞಾನಿಗಳಲ್ಲ, ಜ್ಞಾನಿಗಳೆಲ್ಲ ವಿದ್ಯಾವಂತರಲ್ಲ.
- ಸ್ಪಷ್ಟತೆ, ಜ್ಞಾನ, ಸತತ ಪ್ರಯತ್ನ; ಈ ಮೂರು ಮೇಧಾವಿಗಳಿಗೆ ಅಗತ್ಯ.
- ಜೀವನದಲ್ಲಿ ಬದುಕುವ ರೀತಿ ನೀತಿ ವಿದ್ಯೆಯಿಂದ ಬರುವುದಿಲ್ಲ, ಅದು ಸಂಸ್ಕಾರದಿಂದ ಮಾತ್ರ ಸಾಧ್ಯ.
- ತಾಳ್ಮೆಗೆಟ್ಟು ಯಾವುದನ್ನೂ ತಳ್ಳಿಹಾಕಬೇಡಿ, ಆತುರದ ನಿರ್ಣಯಗಳು ತೀರಾ ಆಪತ್ತಿನವು.
- ಹೆತ್ತ ಮಗ ಕೈಬಿಟ್ಟರೂ ಬಿಟ್ಟಾನು, ಆದರೆ ಕಲಿತ ವಿದ್ಯೆ ಎಂದಿಗೂ ನಿನ್ನನ್ನು ಕೈಬಿಡದು.