ಅಬ್ರಹಾಂ ಲಿಂಕನ್‌

ವಿಕಿಕೋಟ್ದಿಂದ
  • ನಮ್ಮ ಶತ್ರುಗಳನ್ನು ಮಿತ್ರರನ್ನಾಗಿ ಮಾಡಿದಾಗ ಶತ್ರುಗಳನ್ನು ನಾಶ ಮಾಡಿದಂತೆ. ಆದ್ದರಿಂದ ಸೋಲು ಗೆಲುವು ಬಹಳಷ್ಟು ನಮ್ಮ ಕೈಯಲ್ಲಿಯೇ ಇದೆ. - ೧೧:೦೯, ೧೨ ಮಾರ್ಚ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಂದು ತಲೆಮಾರಿನ ಚಿಂತನಾ ವಿಧಾನ ಮುಂದಿನ ತಲೆಮಾರಿನ ಸರ್ಕಾರದ ಚಿಂತನೆ ಆಗುತ್ತದೆ. - ೦೪:೩೫, ೨೨ ಅಕ್ಟೋಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ದೃಢವಾಗಿ ನಿಲ್ಲುವ ಮುನ್ನ ನೀವು ಕಾಲಿಟ್ಟಿರುವ ನೆಲ ಸರಿಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. - ೦೯:೩೩, ೨೪ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಬ್ಬನ ಅನುಮತಿ ಇಲ್ಲದೆ ಅವನನ್ನು ಆಳುವಷ್ಟು ಯಾರೂ ಯೋಗ್ಯರಲ್ಲ. - ೦೨:೫೬, ೧೧ ನವೆಂಬರ್ ೨೦೧೪ (UTC) 
  • ಚಾರಿತ್ರ್ಯ ಎಂಬುದು ಮರವಿದ್ದಂತೆ ಹಾಗೂ ಪ್ರಖ್ಯಾತಿ ಎಂಬುದು ನೆರಳಿದ್ದಂತೆ. ಮರವಷ್ಟೇ ವಾಸ್ತವ ಹೊರತು ನೆರಳಲ್ಲ. - ೦೫:೦೭, ೨೯ ಅಕ್ಟೋಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ವ್ಯಕ್ತಿಯೊಬ್ಬನ ಸ್ವಭಾವವನ್ನು ಪರೀಕ್ಷಿಸಬೇಕೆಂದಿದ್ದರೆ ಅವನಿಗೆ ಅಧಿಕಾರವನ್ನು ಕೊಟ್ಟು ನೋಡಿ. - ೧೦:೫೨, ೫ ನವೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನನ್ನ ಅತ್ಯುತ್ತಮ ಸ್ನೇಹಿತ ಯಾರೆಂದರೆ, ನನ್ನಲ್ಲಿ ಇಲ್ಲದ ಪುಸ್ತಕವನ್ನು ನನಗಾಗಿ ತಂದುಕೊಡುವವನು. - ೦೪:೦೪, ೫ ಏಪ್ರಿಲ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಯಶಸ್ಸಿನ ಗುಟ್ಟು ಅಡಗಿರುವುದು ‘ಪ್ರಯತ್ನ’ ಎಂಬ ಬಂಗಾರದಂತಹ ಮೂರು ಅಕ್ಷರಗಳಲ್ಲಿ ಮಾತ್ರ.
  • ನಿಮ್ಮ ಪಾದಗಳು ಸರಿಯಾದ ಸ್ಥಳದಲ್ಲಿ ನೆಟ್ಟಿವೆ ಎಂಬುದನ್ನು ಖಚಿತಪಡಿಸಿಕೊಂಡು, ಆನಂತರ ದೃಢವಾಗಿ ಎದ್ದು ನಿಲ್ಲಿ. - ೦೪:೦೨, ೧೮ ಮೇ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪ್ರಮುಖ ತತ್ವಗಳು ಬದಲಾಯಿಸಲಾರದಷ್ಟು ದೃಢವಾಗಿರಬೇಕು. - ೦೯:೧೭, ೧೧ ಜುಲೈ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿಮ್ಮ ಬದುಕಿನಲ್ಲಿನ ವರು‌ಷಗಳಿಗಿಂತ ಆ ವರುಷಗಳಲ್ಲಿನ ಬದುಕು ಮುಖ್ಯ.
  • ನಾನು ನಿಧಾನವಾಗಿ ನಡೆಯುತ್ತೇನೆ ಆದರೆ ನಾನು ಹಿಂದೆ ಸರಿಯುವುದಿಲ್ಲ.