ವಿಷಯಕ್ಕೆ ಹೋಗು

ರಾಬರ್ಟ್ ಹೈನ್ಲೈನ್

ವಿಕಿಕೋಟ್ದಿಂದ

ರಾಬರ್ಟ್ ಹೈನ್ಲೈನ್ (ರಾಬರ್ಟ್ ಎ ಹೀನ್ಲೀನ್) ಅಮೇರಿಕದ‌ ವೈಜ್ಞಾನಿಕ ಕತೆಗಾರ‌. Robert A. Heinlein

  • ಪ್ರತಿ ಕಾಯಿದೆ ಕೂಡ‌, ಅದನ್ನು ಮುರಿಯುವ‌ ಬಗೆಯನ್ನು ಯೋಚಿಸಲು ಪ್ರೇರೇಪಿಸುತ್ತದೆ.
  • ಮಶೀನು ಓಡುತ್ತಿರುವ‌ವರೆಗೆ, ಅದರ‌ ಸಿದ್ಧಾಂತದ‌ ಬಗ್ಗೆ ತಲೆ ಕೆಡಿಸಿಕೊಳ್ಳೋ ಅಗತ್ಯ‌ ಇಲ್ಲ‌.
  • ಅಪದ್ಧ‌ ಮಾತಾಡೋದು ಮತ್ತು ಅದನ್ನ‌ ಭೀಕರವಾಗಿ ವ್ಯಕ್ತ‌ ಪಡಿಸೋಕೆ ಮನುಷೈರಿಗೆ ಅಪರಿಮಿತವಾದ‌ ಸಾಮರ್ಥ್ಯವಿದೆ.
  • ಸ್ವಯಂಸ್ಪೂರ್ತಿಯಿಂದ‌ ಪ್ರಜೆಗಳು ತಮ್ಮ‌ ದೇಶ‌ ಉಳಿಸಿಕೊಳ್ಳದಿದ್ರೆ, ಆ ದೇಶ‌ ಉಳಿಯೋದು ಸಂಶಯ‌.
  • ನಂಬಿಕಸ್ತ‌ ಕುಶಲಕರ್ಮಿಗಳ‌ ಸಾಮರ್ಥ್ಯ‌ದಲ್ಲಿ ನಂಬಿಕೆ ಇಡಿ.
  • ಬಹುತೇಕ‌ ರಾಜಕಾರಣಿಗಳು ನಂಬಿಕಸ್ತ‌ರು. ಇಲ್ಲದಿದ್ರೆ, (ಇಲ್ಲದಿದ್ರೆ 13 ರಾಜ್ಯಗಳ‌ ಅಮೇರಿಕಾ, 52 ರಾಜ್ಯಗಳ‌ ದೇಶವಾಗ್ತಾ ಇರ್ಲಿಲ್ಲ‌) .
  • ವಯಸ್ಸಾಗೋದೇ ಸಾಧನೆಯಲ್ಲ‌, ಸದಾ ಚಿರ‌ಯವ್ವನಿಗನಾಗಿರೋದು ಪಾಪ‌ ಅಲ್ಲ‌.
  • ಯಾವ‌ ಕಕ್ಶ್ಹಿದಾರ‌ ಕೂಡಾ ಯಾವ‌ ಖಟ್ಲೆ‍ ‍ ಕೇಸುಗಳ್ನ‌ ಗೆದ್ದಿಲ್ಲ‌. ವಕೀಲರು ಮಾತ್ರ‌ ಗೆದ್ದು ಹಣ‌ ಮಾಡ್ಕೊಳ್ಳೋದು.
  • ಯಾವುದಾದ್ರೂ ಒಂದು ಪಕ್ಶ್ಹ‌ ಸೇರಿಕೊಳ್ಳಿ. ಒಂದೋ ನೀವು ಸರಿಯಾಗಿರಬಹುದು ಅಥವಾ ಕೆಲವೊಮ್ಮೆ ತಪ್ಪಾಗಿರಬಹುದು. ನಿರ್ಲಿಪ್ತನಾಗಿರೋದು, ಅಲಿಪ್ತನಾಗಿರೋದು ಸದಾ ತಪ್ಪು.
  • ಬದುಕು ತುಂಬಾ ಚಿಕ್ಕದು, ಆದ್ರೆ ವರ್ಶ್ಹಗಳು ತುಂಬಾ ಉದ್ದ‌
  • ಹೆಂಗಸರನ್ನ‌ ಮತ್ತು ಚಿಕ್ಕ‌ ಮಕ್ಕಳನ್ನ‌ ಉಳಿಸೋದು ಮಾತ್ರ‌ ಒಳ್ಳೆ ನಿಯಮ‌. ಮಿಕ್ಕ‌ ಎಲ್ಲಾ ನಿಯಮಗಳ್ನೂ ಮುರೀಬಹುದು.. ದೇಶಭಕ್ತಿ ಅಂದ್ರೆ ಹೆಂಗಸರನ್ನ‌ ಮತ್ತು ಚಿಕ್ಕ‌ ಮಕ್ಕಳನ್ನ‌ ಉಳಿಸಿಕೊಂಡು, ಮಿಕ್ಕ‌ ಎಲ್ಲರೂ ಪ್ರಾಣ‌ ಕೊಡೋಕೆ ಸಿದ್ಧರಾಗಿರೋದು.
  • ಪ್ರಗತಿ ಬೆಳಗ್ಗೆ ಬೇಗ‌ ಎದ್ದು, ಮೈ ಮುರಿದು ದುಡಿಯೋ ಮಂದಿಯಿಂದ‌ ಆಗೋದಿಲ್ಲ‌. ಸುಲಭದ‌ ದಾರಿ ಹುಡುಕೋ ಸೋಮಾರಿಗಳಿಂದ‌...
  • ಎಲ್ಲಾ ಮನುಶ್ಹ್ಯರೂ ಮೇಲು‍ಕೀಳಾಗಿಯೇ ಹುಟ್ಟೋದು.
  • ಇತಿಹಾಸವನ್ನ‌ ನಿರ್ಲಕ್ಶ್ಹ್ಯ‌ ಮಾಡೋ ಜನಾಂಗ‌, ಉದ್ಧಾರ‌ ಆಗೋಲ್ಲ‌. (ನಮ್ಮ‌ ಸ್ಮಾರಕಗಳನ್ನ‌ ನೋಡಿ)
  • ಸತ್ತಿರೋ ಸಿಂಹ‌ ಅಗೋಕಿಂತ‌ ಬದುಕಿರೋ ನರಿಯಾಗೋದು ವಾಸಿ. ಆದ್ರೆ, ಬದುಕಿರೋ ನರಿಗಿಂತ್ಲು ಬದುಕಿರೋ ಸಿಂಹ‌ ಆಗೋದು ಸುಲಭ‌ ಮತ್ತು ಒಳ್ಳೇದು ಕೂಡ‌.
  • ಮುಠ್ಠಾಳತನದ‌ ಶಕ್ತಿ ತುಂಬಾ ಜಾಸ್ತಿ. ಅದನ್ನ‌ ಎಂದೂ ಕಡೆಗಣಿಸಬೇಡಿ.
  • ಒಂದೋ ಶಾಂತಿ ಪಡೀಬಹುದು, ಅಥವಾ ಸ್ವಾತಂತ್ರ್ಯ‌ ಪಡಿಬಹುದು. ಎರಡು ಕೂಡಾ ಜೊತೆಗೆ ಸಿಗೋಲ್ಲ‌.
  • ನಮ್ಮನ್ನ‌ ನಾವೇ ಸಾಯಿಸಿಕೊಂಡ್ರೆ, ಅದು ಸೈನ್ಸ್ ನ‌ ತಪ್ಪು ಬಳಕೆಯಿಂದ‌. ನಮ್ಮನ್ನ‌ ನಾವೇ ಸಾಯಿಸಿಕೊಳ್ಳೋದರಿಂದ‌ ಬಚಾವ್ ಮಾಡಿಕೊಂಡ್ವಿ ಅಂದ್ರೆ, ಅದು ಸೈನ್ಸ್ ನ‌ ಸದ್ಬಳಕೆಯಿಂದ‌.
  • ನನಗೆ ಗೊತ್ತಿಲ್ಲ‌ ಅಂತ‌ ಒಪ್ಪಿಕೊಂಡ್ರೆ, ಗೊತ್ತು ಮಾಡಿಕೊಳ್ಳೋಕೆ ಸಾಧ್ಯ‌.
  • ಶಿಷ್ಟಾಚಾರ ಸದಾ ಪಾಲಿಸಬೇಕು ಅಂತ‌ ಅನ್ನೋವನು ಬೆಕ್ಕಿನ‌ ಜೊತೆ ಆಟವಾಡಿಲ್ಲ‌.ಸಂಪದ