ಹಂಸಲೇಖ

ವಿಕಿಕೋಟ್ದಿಂದ
  1. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ ಕನ್ನಡ, ಕಸ್ತೂರಿ ಕನ್ನಡ.
  2. ಸಣ್ಣ ಬಿರುಕು ಸಾಲದೆ, ತುಂಬು ದೋಣಿ ತಳ ಸೇರಲು, ಸಣ್ಣ ಅಳಕು ಸಾಲದೆ, ತುಂಬು ಬದಕು ಬರಡಾಗಲು.
  3. ಕೆಣಕೋದ್ಯಾಕೆ ಅಳಿಸೋದ್ಯಾಕೆ, ನಗಿಸೋದಕ್ಕೆ ಸೋಲೋದ್ಯಾಕೆ, ಪ್ರೀತಿ ಮುಂದೆ ಸೋಲೋದೊಂದೆ, ಕಾಲಾ ಮರೆಸೋ ಮಂತ್ರ ನಂದೆ.
  4. ಅರಿಯದಂತೆ ಕಳೆದು ಹೋದ, ಆ ನಲ್ಮೆಯ ಕ್ಷಣಗಳ, ಮರಳಿ ಕೊಡುವೆಯಾ ಕಾಲವೇ, ತಿರುಗಿ ಬರುವೆಯಾ.
  5. ಸ್ನೇಹಕ್ಕೆ ಮೂಲಾನೆ ಸಂವೇದನ, ಸ್ನೇಹಕ್ಕೆ ಬೇಕಯ್ಯಾ ಸದ್ಭಾವನೆ.
  6. ಮನದೊಳಗೆ ಹಚ್ಚುತ್ತಾಳೆ ನಮ್ಮ ಹೆಣ್ಣು ದೀಪವಾ, ಮನ ಬೆಳಗಿ ತೋರುತ್ತಾಳೆ ನಿತ್ಯ ಸತ್ಯ ರೂಪವ
  7. ದಲಿತರ ಮನೆಗೆ ಬಲಿತರು ಹೋಗುವುದು ದೊಡ್ಡ ವಿಷಯವಲ್ಲ, ದಲಿತರ ಮನೆಗೆ ಬರುವ ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಊಟ ಬಡಿಸುವುದು ದೊಡ್ಡ ವಿಷಯ.
  8. ತಿಳಿಯ ನೀರ ಮನಸ ಮೇಲೆ ಪ್ರೇಮವೇಸೆದರೆ ಉಂಗುರ, ಬೆರೆತ ಕಣ್ಣಲ್ಲಿ ಪ್ರಣಯದ ಅಂಕುರ ಇರಿದು ಬಾ ಅಂತರ.
  9. ಹರಿದು ಬರುವ ಹಾವನ್ನು ನಂಬಬಹುದು ಆದರೆ, ನಲಿದು ಬರುವ ಹುಡುಗಿ ನಂಬಬೇಡ.
  10. ಜೀವನ ಸರಿಗಮಗಳ ಅಲೆಗಳ ಮೇಲೆ ನಗಿಸೋ ಅಳಿಸೋ ಪ್ರೀಯನೋಲೆ, ದಿನವೂ ಹೋಸದೆ ಸಂದೇಶವಿದೆ.
"https://kn.wikiquote.org/w/index.php?title=ಹಂಸಲೇಖ&oldid=8624" ಇಂದ ಪಡೆಯಲ್ಪಟ್ಟಿದೆ