ವಿಷಯಕ್ಕೆ ಹೋಗು

ಸುಧಾ ಮೂರ್ತಿ

ವಿಕಿಕೋಟ್ದಿಂದ
ಸುಧಾ ಮೂರ್ತಿ
ಸುಧಾ ಮೂರ್ತಿ
 1. ನೀವು ತುಂಬಾ ಸೆನ್ಸಿಟಿವ್ ಆಗಿರಬಾರದು. ಏಕೆಂದರೆ ಸೆನ್ಸಿಟಿವ್ ಜನಗಳು ಜೀವನದಲ್ಲಿ ತುಂಬಾನೇ ನೋವು ಅನುಭವಿಸುತ್ತಾರೆ.
 2. ಸಾಧನೆ ಮಾಡಬೇಕು ಎನ್ನುವುದು ಎನೂ ಇಲ್ಲ, ನಾವು ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ.
 3. ಜೀವನವು ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಪಠ್ಯಕ್ರಮಗಳನ್ನು ಹೊಂದಿರದ ಪರೀಕ್ಷೆಯಾಗಿದೆ ಹಾಗೂ ಇದಕ್ಕೆ ಉತ್ತರ ಪತ್ರಿಕೆಗಳು ಸಹ ಇಲ್ಲವಾಗಿದೆ.
 4. ತಡವಾಗಿ ಸಿಕ್ಕ ಯಶಸ್ಸು ವ್ಯಕ್ತಿತ್ವ ರೂಪಿಸುತ್ತದೆ. ತಕ್ಷಣವೇ ಸಿಕ್ಕ ಯಶಸ್ಸು ಅಹಂಕಾರವನ್ನು ಸೃಷ್ಟಿಸುತ್ತದೆ. ತಡವಾಗಿ ಗೆದ್ದವನು ಮೊದಲನೆ ಸಲ ಗೆದ್ದವರಿಗಿಂತ ಚೆನ್ನಾಗಿ ಪಾಠ ಹೇಳಬಲ್ಲನು ಎಂಬದು ನೆನಪಿರಲಿ.
 5. ಎಲ್ಲಿ ಸನ್ಮಾನ ಇರುತ್ತೋ ಅಲ್ಲಿ ಅವಮಾನ ಇರುತ್ತೆ...!
 6. ನಮ್ಮಿಂದ ಬೇರೆಯವರಿಗೆ ತೊಂದರೆ, ದುಃಖ ಆಗಬಾರದು ಎನ್ನುವುದು ಸತ್ಯವೇ. ಹಾಗೆಂದು ಎಲ್ಲರನ್ನೂ ಖುಷಿಪಡಿಸುತ್ತೇನೆ ಎಂದರೆ ಖಂಡಿತ ಸಾಧ್ಯವಿಲ್ಲ. ಒಂದುವೇಳೆ ಎಲ್ಲರನ್ನೂ ಖುಷಿಪಡಿಸಲು ಹೋದರೆ ಒಂದೇ ಒಂದು ವ್ಯಕ್ತಿಯೂ ನಿಮ್ಮಿಂದ ಖುಷಿಯಾಗಿರಲು ಸಾಧ್ಯವಿಲ್ಲವಾಗುತ್ತದೆ. ಆದ್ದರಿಂದ ಬೆರೆಯವರನ್ನು ಖುಷಿಪಡಿಸುವುದಕ್ಕಾಗಿಯೇ ನಿಮ್ಮ ಅಮೂಲ್ಯ ಸಮಯಗಳನ್ನು ವ್ಯರ್ಥ ಮಾಡಿಕೊಳ್ಳದಿರಿ.
 7. ಯಾರಾದರೂ ಮೋಸ ಹೋದಾಗ, ಆ ವ್ಯಕ್ತಿ ಅಸಮಾಧಾನಗೊಳ್ಳುವುದು ಹಣವನ್ನು ಕಳೆದುಕೊಂಡದ್ದಕ್ಕಾಗಿ ಅಲ್ಲ ಬದಲಾಗಿ ಯಾರದರೂ ಅವರನ್ನು ಮೋಸಗೊಳಿಸುವಷ್ಟು ಮೂರ್ಖರಾಗಿದ್ದೇನೆ ಎಂದು ಅರಿತುಕೊಂಡ ಕಾರಣಕ್ಕೆ.
 8. ಬೆಂಕಿಯನ್ನು ಬೆಂಕಿಯಿಂದ ನಂದಿಸಲಾಗದು. ನೀರು ಮಾತ್ರ ಎನಾದರೂ ಬದಲಾವಣೆ ತರಬಲ್ಲದು.
 9. ನೀವು ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸಿದರೆ, ನೀವು ಯರನ್ನೂ ಮೆಚ್ಚಿಸುವುದಿಲ್ಲ. ಇತರರ ಸಂತೋಷಕ್ಕಾಗಿ ನೆಮ್ಮ ಜೀವನವನ್ನು ನಡೆಸುವುದು ಅಸಾಧ್ಯ.
 10. ಮನುಷ್ಯನಿಗೆ ದುಡ್ಡು ಬಂದಾಗ ಮಾನವೀಯತೆ ಮರೆತು ಹೋಗಬಾರದು ಎಂದು ನನಗೆ ನನ್ನ ಹೆಮ್ಮೆಯ ಹಿರಿಯರು ಹೇಳಿ ಕೊಟ್ಟಿದ್ದಾರೆ.
 11. ಹಣವನ್ನು ಎಣಿಸಿ ಎಣಿಸಿ ದಣಿಯುವುದಕ್ಕಿಂತ, ಜನರನ್ನು ಮೆಚ್ಚಿಸಿ ಕುಣಿಸುವುದೇ ಲೇಸು.
 12. ನಾನು ನಾರಾಯಣ ಮೂರ್ತಿ ಅವರನ್ನು ಮದುವೆಯಾಗುವಾಗ ಅವರ ಕೈಯಲ್ಲಿ ಸ್ಥಿರವಾಗಿ ಯಾವುದೇ ಕೆಲಸವಿರಲಿಲ್ಲ, ನಾನು ಆ ವ್ಯಕ್ತಿಯನ್ನು ಕೆಲಸಕ್ಕಾಗಿ ಆಯ್ಕೆ ಮಾಡಲಿಲ್ಲ. ಆ ಮನುಷ್ಯನ ಸರಳತೆ, ಆತ್ಮವಿಶ್ವಾಸದಲ್ಲಿ ನನಗೆ ನಂಬಿಕೆ ಇತ್ತು ಅದಕ್ಕೆ ನಾನು ಬೆನ್ನೆಲುಬಾಗಿ ನಿಂತೆಯಷ್ಟೆ.
 13. ಯಾವಾಗ ಹೆಣ್ಣು ಮಕ್ಕಳು ಬೆಳೆಯುತ್ತಾರೋ ಆವಾಗ ಅವರು ತಾಯಿಗೆ ಒಳ್ಳೆಯ ಗೆಳತಿಯರಾಗುತ್ತಾರೆ ಆದರೆ ಯಾವಗ ಯುವಕರು ಬೆಳೆಯುತ್ತಾರೋ ಆವಾಗ ಅವರು ಆಗಂತುಕರಾಗುತ್ತಾರೆ.
 14. ನಾನು ನಿಮಗೆ ವಿದ್ಯೆಯಿಲ್ಲದೆ ಸುಸ್ಥಿರ ಜೀವನ ಬಾಳುತ್ತಿರುವ ಬಹಳಷ್ಟು ಜನರ ಉದಾಹರಣೆ ಕೊಡಬಲ್ಲೆ. ಏಕೆಂದರೆ ಅವರಿಗೆ ಅವರಲ್ಲಿ ನಂಬಿಕೆ ಇತ್ತು.
 15. ಕೊರಳಲ್ಲಿ ಸರವಿದ್ದರೆ ಶ್ರೇಷ್ಠವಲ್ಲ, ನಡತೆಯಲ್ಲಿ ಸರಳತೆಯಿದ್ದವರು ಶ್ರೇಷ್ಠ.
 16. ಒಬ್ಬ ಪುರುಷ ಅಥವಾ ಮಹಿಳೆಗೆ ನಿಜವಾದ ಗೆಳೆಯ/ಗೆಳತಿ ಯಾರೆಂಬ ಪ್ರಶ್ನೆಗೆ ಉತ್ತರವೆಂದರೆ: ಗಂಡನಿಗೆ ತನ್ನ ಹೆಂಡತಿ ಹಾಗೂ ಹೆಂಡತಿಗೆ ತನ್ನ ಗಂಡ.
 17. ನನಗೆ ಇಬ್ಬರು ಮೊಮ್ಮಕ್ಕಳಿದ್ದಾರೆ. ನಾನು ಅವರನ್ನು ಭೇಟಿಯಾದಾಗ ಅವರಿಗೆ ಚಿಕ್ಕ ಚಿಕ್ಕ ಉಡುಗೊರೆಗಳನ್ನೇ ಕೊಡುತ್ತೇನೆ. ಏಕೆಂದರೆ ಅವರು ಚಿಕ್ಕ ಚಿಕ್ಕ ವಿಷಯಗಳಿಗೂ ಬೆಲೆ ಕೊಡಬೇಕೆಂದು ನಾನು ಬಯಸುತ್ತೇನೆ.
 18. ಅನುವಂಶೀಯತೆಯಿಂದ ಕೇವಲ ರೋಗಗಳನ್ನಷ್ಟೇ ವರ್ಗಾಯಿಸಬಹುದು ಆದರೆ ಪ್ರಾಮಾಣಿಕತೆ ಮತ್ತೆ ಸಮಗ್ರತೆಯನ್ನಲ್ಲ ಎಂಬುದು ನನಗೆ ಅರಿವಾಗಿದೆ.
 19. ನಿಮ್ಮ ಮೇಲೆ ನೀವು ಅವಲಂಬಿಸಿ ಹಾಗೂ ಧೈರ್ಯ ನಿಮ್ಮೊಳಗೇ ಹುಟ್ಟಬೇಕೆಂಬುದನ್ನು ತಿಳಿದಿರಿ. ಅದು ಸಮಯ ತೆಗೆದುಕೊಳ್ಳುತ್ತದೆ ಆದರೆ ನೀವು ಅದಕ್ಕಾಗಿ ಕೆಲಸ ಮಾಡಲೇ ಬೇಕು.