ಮುಂಗಾರು ಮಳೆ
ಗೋಚರ
- ಪ್ರೀತಿ ಮಧುರ, ತ್ಯಾಗ ಅಮರ.
- ರೀ, ಮನುಷ್ಯಂಗೆ bad time ಶುರು ಆದ್ರೆ ತಲೆ ಕೆರ್ಕೊಂಡು, ತಲೆಲಿ ಗಾಯ ಆಗಿ, ಗಾಯ ಕ್ಯಾನ್ಸರ್ ಆಗಿ ಡಾಕ್ಟರ್ ತಲೆನೆ ತೆಗಿಬೇಕು ಅಂತಾರೆ.
ಅಂತಾದ್ರಲ್ಲಿ ನಾನು ಈ ದಿಲ್..ಹೃದಯ..ಹಾರ್ಟ್ ಅಂತಾರಲ್ಲ...ಅಲ್ಲಿಗೇ ಕೈ ಹಾಕಿ ಪರ ಪರ ಅಂತ ಕೆರ್ಕೊಂಡ್ ಬಿಟ್ಟಿದೀನಿ ಕಣ್ರೀ...
- ನಿಮ ನಗು, ನಿಮ್ ಬ್ಯೂಟಿ, ನಿಮ್ ವಾಯ್ಸು, ನಿಮ್ ಕೂದಲು, ನಿಮ್ ನೋಟ, ಈ ಬಿಕನಾಸಿ ಮಳೆ, ನಿಮ್ ಗೆಜ್ಜೆ ಸದ್ದು, ಆ ವಾಚು, ಆ rascal ದೇವದಾಸ್ ಗಂಟೆ ಸದ್ದು, ಎಲ್ಲಾ ಮಿಕ್ಸ್ ಆಗಿ ನನ್ ಲೈಫಲ್ಲೆ ರಿಪೇರಿ ಮಾಡಕ್ಕಾಗ್ದೇ ಇರೋ ಅಷ್ಟು ಗಾಯ ಮಾಡಿದೆ ಕಣ್ರಿ..
- ನಂಗೊತಾಯ್ತು ಕಣ್ರಿ .. ನೀವ್ ನಂಗೆ ಸಿಗಲ್ಲಾ ಅಂತ.. ಬಿಟ್ಕೊಟ್ಬಿಟ್ಟೆ ಕಣ್ರಿ.. ನಿಮ್ಮನ್ನ ಪಟಾಯ್ಸಿ ಲೋಫರ್ ಅನಿಸ್ಕೊಳೋದಕ್ಕಿಂತ ಒಬ್ಬ ಡೀಸೆಂಟ್ ಹುಡುಗನಾಗಿ ಇದ್ಬಿಟ್ರೆ ಸಾಕು ಅನ್ನಿಸಿಬಿಟ್ಟಿದೆ ಕಣ್ರಿ... ಆದ್ರೆ ಒಂದು ವಿಷ್ಯ ತಿಳ್ಕೊಳಿ. ನನ್ನಷ್ಟು ನಿಮ್ಮನ್ ಇಷ್ಟ ಪಡೋನು ಈ ಭೂಮಿಲೆ ಯಾರೂ ಸಿಗಲ್ಲ ಕಣ್ರೀ..
- ಏನೋ ದೇವದಾಸ, ಲೈಫಲ್ಲಿ ಮೊದಲ್ನೇ ಸಾರಿ ಇಷ್ಟ ಪಟ್ಟು ಒಂದು ಮೊಂಬತ್ತಿ ಹಚ್ಚಿದೆ, ಮಳೆ ಹುಯ್ದು ಬಿಡ್ತು..
- ಲೈಫಲ್ಲಿ ಈ ಲೆವೆಲ್ಲಿಗೆ ಕನ್ ಫ್ಯೂಸ್ ಆಗಿದ್ದಿ ಇದೇ ಮೊದಲು, ಎಲ್ಲಾ ನಿಮ್ ಆಶೀರ್ವಾದ..
- ಅದೇನೋಪಾ, ನೀವು FMನವ್ರು ಯಾರು ಫೋನ್ ಮಾಡಿದ್ರೂ ಪ್ರಾಬ್ಲೆಮ್ solve ಆಗತ್ತೆ ಅಂತ ರೈಲು ಹತ್ತಿಸ್ತಾನೆ ಇರ್ತಿರಾ ಬಿಡ್ರಿ..
- ಈ ಮುಂಗಾರು ಮಳೆಲ್ಲಿ ಇಷ್ಟೊಂದು ಬೆಂಕಿ ಇದೆ ಅಂತ ಗೊತ್ತಿರ್ಲಿಲ್ಲಾ ದೇವದಾಸ.....
- ಈ ಪ್ರೀತಿ ಮಳೆಗೆ ಸಿಕ್ಕಿ ನಾನ್ ದಿಕ್ಕಾಪಾಲಾಗಿ ಹೋದೆ ಕಣೋ, ದಿಕ್ಕೇ ಇಲ್ಲಾ ಕಣೋ ನಂಗೆ.
- ನೀವು ಸಿಗದೇ ಇದ್ರೆ ನೋವು ಆಗತ್ರಿ, ಆದ್ರೆ ಈ ನೋವಲ್ಲು ಒಂಥರಾ ಸುಖ ಇದೆ..sweet pain..sweet memories, ಜೊತೆಗೆ ಈ ಹಾಟ್ ಡ್ರಿಂಕ್ ಲೋಕಲ್ ನೀರಾ ಕೈಯಲ್ಲಿದ್ರೆ ದೂಸರಾ ಮಾತೆ ಇಲ್ಲಾ ಕಣ್ರಿ.
- ಅರ್ಥ ಆಗ್ಲಿಲ್ಲ.... ಆಗೋದು ಬೇಡ ಬಿಡಿ..
- ಥ್ಯಾಂಕ್ಸ್ ಕಣ್ರಿ ನಂದಿನಿ. ಪ್ರೀತಿ ವಿಷ್ಯದಲ್ಲಿ ನನ್ ಕಣ್ಣು ತೆರೆಸಿದ ದೇವತೆ ನೀವು.. ಈ ಕಣ್ಣು ಕ್ಲೋಸ್ ಆಗಿ ಮಣ್ಣು ಸೇರಿದ್ಮೇಲೂ ನಾನ್ ಈ ಉಪಕಾರಾನ ಮರೆಯಲ್ಲ ರಿ.. ನೀವು ಸಿಗಲ್ಲ ಅಂತ ನಂಗೇನೂ ಬೇಜಾರ್ ಇಲ್ಲಾರಿ.. ನಿಮ್ ಜೊತೆ ಕಳೆದ್ನಲ್ಲಾ ಈ ನಾಲ್ಕ್ ದಿವಸ, ಅಷ್ಟು ಸಾಕು ಕಣ್ರಿ... ಅದನ್ನೆ ರಿವೈಂಡ್ ಮಾಡ್ಕೊಂಡು ಹೇಗೋ ಜೀವನ ತಳ್ಳಿ ಬಿಡ್ತೀನಿ.
- ಏನ್ ಜೇಮ್ಸ್ ಬಾಂಡು ನಿಮ್ಮಪ್ಪ. ಯಾರ್ರೀ ಹೆದರ್ತಾರೆ ಅವ್ರಿಗೆ. ನಮ್ ಮದುವೆ ಆಗ್ಲಿ. ನಿಮ್ಮಪ್ಪಂಗೆ ಬಿಳಿ ಡ್ರೆಸ್ ಹಾಕ್ಸಿ, ಇದೇ ಗನ್ ಕೈಯಲ್ಲಿ ಕೊಟ್ಟು ನಮ್ ಮನೆ ಮುಂದೆ ಸೆಕ್ಯುರಿಟಿಗೆ ನಿಲ್ಲಿಸ್ತೀನಿ... ನೋಡ್ತಾ ಇರಿ ನಂಗು ನಿಮ್ಮಪ್ಪಂಗು ಇನ್ನೆರಡು ದಿನದಲ್ಲಿ ಹೆಂಗೆ ದೋಸ್ತಿ ಆಗತ್ತೆ ಅಂತ.. ತೋರ್ಸಿ ಈ ವಾಚ್ ನ ನಿಮ್ಮಪ್ಪಂಗೆ.
- ಅಂಕಲ್, ಮನುಷ್ಯ ಎಷ್ಟೇ ದೊಡ್ಡವನಾದ್ರೂ ಚಿಕ್ಕ ಮಗು ತರ ಇರ್ಬೇಕು ಅಂತ ನಮ್ಮಪ್ಪ ಅಮ್ಮ ಹೇಳ್ಕೊಟ್ಟಿದಾರೆ ಅಂಕಲ್.
- ಈ ಗಂಡು ಜನ್ಮ ಸಾಕಪ್ಪಾ ಸಾಕು...ಲೋ ದೇವದಾಸ.. ಆ ಹುಡ್ಗಿ ಮತ್ತೆ ಬಂದ್ಗಿಂದ್ ಬಿಟ್ಟಾಳು ನೋಡ್ಕಳ್ಳೋ ಪುಣ್ಯಾತ್ಮ...ಒಳ್ಳೆ ಕ್ಯಾಬರೆ ಡ್ಯಾನ್ಸರ್ ತರ ಆಗೋಯ್ತು ನಮ್ ಲೈಫು.
- ನಂಗೆ ಸಿಗೋ ಬುಡ್ಡಾಗಳೆಲ್ಲಾ ಎಣ್ಣೆ ಹೊಡಿ ಅಂತಾರೆ.
- ನನ್ ಹೆಸ್ರು ಹಾಳಾಗಿ ಹೋಗಿದೆ. ಹೇಳಿದ್ರೂ ಪ್ರಯೋಜನ ಇಲ್ಲ ಬಿಡಿ.
- ನಂದಿನಿ: ಮಾನ ಮರ್ಯಾದೆ ಅಂದ್ರೆ ಏನು ಗೊತ್ತಿದಿಯಾ ನಿಮ್ಗೆ? ಪ್ರೀತಮ್: ಎಲ್ಲೋ ಕೇಳ್ದಂಗಿದೆ .... ಅಷ್ಟು ಐಡಿಯಾ ಇಲ್ಲಾ .
- ಭಗವಂತಾ, ಈ ವಯಸ್ಸಿನ ಹುಡುಗ್ರುನ್ನೆಲ್ಲಾ ನೀನೇ ಕಾಪಾಡ್ಬೇಕು.. ಕೆ.ಎಸ್.ಆರ್.ಟಿ.ಸಿ.ಗೆ ಸಿಕ್ಕಿ ಸಾಯೋ ನಾಯಿಗಳಾದ್ರೂ ಎಷ್ಟೊ ವಾಸಿ.
- ಆ ವಾಚ್ ನಲ್ಲಿ ನನ್ನ ಕೋಟಿ ನೆನಪುಗಳಿವೆ.. ಇಷ್ಟದ ಪ್ರಶ್ನೆ ಅಲ್ಲಾ.. ಕಷ್ಟದ ಪ್ರಶ್ನೆ