ಮಾರ್ಗರೇಟ್ ಥ್ಯಾಚರ್

ವಿಕಿಕೋಟ್ದಿಂದ
  • ಸಮಾಜವಾದದ ಸಮಸ್ಯೆಯೆಂದರೆ, ಖರ್ಚು ಮಾಡಲು ಅಂತಿಮವಾಗಿ, ಬೇರೆ ಜನರ ಹಣ ಉಳಿಯುವುದಿಲ್ಲ.
  • ಹುಂಜ ಜಂಭ ಪಡಬಹುದು, ಆದರೆ ಮೊಟ್ಟೆ ಇಡುವುದು ಕೋಳಿ ಮಾತ್ರವೇ
  • ಸತ್ಯ, ಎಂದಿಗೂ "ಅದೇ ಹಳೇ ಸುದ್ದಿಯೇ......"
  • ಉನ್ನತ ಸ್ಥಾನ ಏರಲು ಬಹಳ ಶ್ರಮ ಬೇಕು ಮತ್ತು ಅಲ್ಲಿ ಜಾಗ ಬಹಳ ಕಡಿಮೆ ಎಂದು ಜನರ ಭಾವನೆ. ಅದು ತಪ್ಪು. ಅಲ್ಲಿ ಅಳತೆ ಮೀರಿದಷ್ಟು ಸ್ಥಳವಿದೆ.
  • ಒಮ್ಮತ ಎಂದರೆ ಎಲ್ಲಾ ನಂಬಿಕೆ, ತತ್ವ, ಮೌಲ್ಯ ಮತ್ತು ನೀತಿಗಳನ್ನು ತ್ಯಜಿಸುವುದು ಅಥವಾ ರಾಜಿ ಮಾಡಿಕೊಳ್ಳುವುದೇ ಆಗಿದೆ. ಹೀಗಾಗಿ ಒಮ್ಮತ ಎಂಬುದನ್ನು ಯಾರೂ‌ ವಿರೋಧಿಸುವುದಿಲ್ಲ ಮತ್ತು ಯಾರೂ‌ ಪಾಲಿಸುವುದಿಲ್ಲ.
  • ಮಧ್ಯಮ ಮಾರ್ಗ ಉತ್ತಮವಾದುದಲ್ಲ. ಎರಡು ಬದಿಯಿಂದಲೂ ಹೊಡೆತ ಬೀಳುವ ಸಂಭವ ಹೆಚ್ಚು.
  • ತೋಳಿನ ಮೇಲೆ ಎದೆ ಇಟ್ಟುಕೊಳ್ಳುವುದು (ಭಾವುಕವಾಗಿ ಯೋಚಿಸುವುದು) ತಪ್ಪು. ಭಾವುಕತೆ ಎದೆಯೊಳಗಿದ್ದೇ ಹೆಚ್ಚು ಪ್ರಯೋಜಕ.
  • ಅಧಿಕಾರದಲ್ಲಿರಲು ಸದಾ ಸುಳ್ಳು ಹೇಳಬೇಕಿಲ್ಲ, ಆದರೆ ಜಾರಿಕೊಳ್ಳುವುದು ಆವಶ್ಯಕ.
  • ಸಮಾಜ ಎನ್ನುವ ವಸ್ತು ಯಾವುದೂ ಇಲ್ಲ. ನಾವು- ನೀವು ಕೂಡಿದರೆ ಅದೇ ಸಮಾಜ.