ವಿಷಯಕ್ಕೆ ಹೋಗು

ಕೆ.ಎಸ್. ನಿಸಾರ್ ಅಹಮದ್‌

ವಿಕಿಕೋಟ್ದಿಂದ
(ಪ್ರೊ. ಕೆ.ಎಸ್‌.ನಿಸಾರ್‌ ಅಹಮದ್‌ ಇಂದ ಪುನರ್ನಿರ್ದೇಶಿತ)
  • ಕಾಲಪ್ರಜ್ಞೆ ಇಲ್ಲದವನಿಗೆ ಗಡಿಯಾರ ಬರಿ ಅಲಂಕಾರವಷ್ಟೇ.
  • ಪರಾನುಕರಣೆಯ ಪರಮಾನ್ನಕ್ಕಿಂತ ಸ್ವಸಾಧನೆಯ ಸಾರನ್ನ ಸ್ವಾದಿಷ್ಟ.
  • ಸಂಸ್ಕೃತಿಯ ಮಹೋನ್ನತವಾದ ಮಹಲಿಗೆ ನೀತಿ ನೆಲಗಟ್ಟು, ಅನುಭವ ಆವಾರ.
  • ಬಾಳನ್ನು ಹಸನಾಗಿಸಿಕೊಳ್ಳಬೇಕು, ಪ್ರಹಸನವಾಗಿಸಿಕೊಳ್ಳಬಾರದು.
  • ಮನುಷ್ಯನನ್ನು ಕಡೆಗಣಿಸಿ ಮಾಡಿದ ಯಾವುದೇ ಸತ್ಕರ್ಮ ನಿರರ್ಥಕ, ಅಪ್ರಯೋಜಕ.
  • ಮುಂದಿರುವ ಹುಣ್ಣಿಮೆಯ ಸೊಬಗನ್ನು ಸವಿಯದೆ, ಮುಂಬರಲಿರುವ ಅಮಾವಾಸ್ಯೆಯನ್ನು ನೆನೆದು ಕೊರಗುತ್ತಾ ಕೂರುವುದು ವಿವೇಕವೆನ್ನಿಸದು.
  • ನಾನು ಕನ್ನಡದ ಒಂದೊಂದು ಅಕ್ಷರವನ್ನೂ ಬೆವರು ಹರಿಸಿ ಕಲಿತಿದ್ದೇನೆ.[]
  • ನಾಡಿನ ಸಂಪತ್ತನ್ನು ಪೋಷಿಸಬೇಕಾದವರು ಅಪೋಷಿಸಲು ಶುರುವಿಟ್ಟಿರುವುದೇ ನಮ್ಮ ದುರದೃಷ್ಟ.
  • ದಿನದಿಂದ ದಿನಕ್ಕೆ, ಕ್ಷಣದಿಂದ ಕ್ಷಣಕ್ಕೆ, ಭವಿಷ್ಯವ ಚಿಂತಿಸದೆ ಬದುಕನ್ನು ನಡೆಸುತ್ತಿರು.

ಉಲ್ಲೇಖಗಳು

[ಸಂಪಾದಿಸಿ]