ದೊಡ್ಮನೆ ಹುಡುಗ
ಗೋಚರ
- ಸೈಡ್ ಹೋಗೋ ವಜ್ರಮುನಿ
- ನೀನ್ಯಾವನಲೇ, ನನ್ನ ತಮ್ಮನ್ಗೆ ಆಪಲೇಷನ್ ಮಾಡೋನು?
- ನೀವು ಅಪ್ಪ ಮಕ್ಕಳು ಇಂಥವರ ಮಾತು ಕೇಳ್ತೀರಿ ಅಂತ ಹೇಳಿ, ಅವರನ್ನೇ ಕರೆದುಕೊಂಡು ಬರ್ತೀನಿ
- ತಪ್ಪು ಮಾಡಿದ್ದೀಯೋ ಇಲ್ಲವೋ ಅಂತಾನೂ ಕೇಳಲಾರದೇನೇ, ಹೊಡೀತಾಇದ್ದೆಯಲ್ಲ, ಅದು ತಪ್ಪು
- ಚಿಕ್ಕ ವಯಸ್ಸಿನಲ್ಲಿ, ಈ ಹುಣಿಸೆಬೀಜ ತಿಂದರೆ ಹೊಟ್ಟೆಯೊಳಗೆ ಗಿಡ ಬೆಳೆಯುತ್ತದೆ ಅಂತಾ ಹೇಳಿದ್ದಕ್ಕೆ, ಅದನ್ನೇ ತಿನ್ನುತ್ತಾ ಇದ್ವಿ, ಹೊಟ್ಟೆಯಲ್ಲಿ ಬೆಳೆಯಲೇ ಇಲ್ಲ
- ಒಂದ್ ಕಾಲದಲ್ಲಿ ನಾನೂ ರೌಡಿ ಆಗಿದ್ದೆ, ಭಯಂಕರ ಹವಾ ಇಟ್ಟಿದ್ದೆ. ನನ್ನನ್ನು ಕೊಲ್ಲೋಕೆ ಬಂದರು, ಆದರೆ, ನಮ್ಮ ತಾಯಿನಾ ಕೊಂದು ಪಲಾವ್ ನಲ್ಲಿ ಹುಗಿದು ಬಿಟ್ಟರು.
- ನನ್ನ ಹೆಸರು ಲವಂಗ, ರೌಡಿಸಂ ಕಾಲದಲ್ಲಿ, ನಮ್ಮ ಊರಿನ ಜನರಿಗೆ ನಾಲಗೆ ತಿರುಗದೆ, ಲವಂಗ ಹೋಗಿ ಲಂಗ ಆಗಿದೆ.
- ನಾನು ಯಾಕೆ ಮುಳಗುತ್ತಾ ಇದ್ದ ನನ್ನ ಸ್ವಂತ ಮಗನನ್ನು ಬಿಟ್ಟು, ಅಕ್ಕನ ಮಗನನ್ನು ಮೊದಲು ಬದುಕಿಸಿದೆ ಅಂತಾ ಕಾಲ ಬಂದಾಗ ನಿನಗೇ ಗೊತ್ತಾಗುತ್ತೆ
- ಯಾಕಪ್ಪ, ನಿನ್ನ ಅಪ್ಪನನ್ನು ಬಿಟ್ಟು, ನಿಮ್ಮ ಅತ್ತೆ ಮಗನನ್ನು ಕಾಪಾಡಲು ಹೋಗುತ್ತಿದ್ದೀಯಾ? ಅರ್ಥಾ ಆಯಿತಾ, ನಾನು ಅವತ್ತು ಕೃಷ್ಣನ ಬದಲು ನಿನ್ನ ಮೊದಲು ನೀರಿನಿಣ್ದ ಎತ್ತಿಕೊಂಡು ಬಂದಿದ್ದರೆ, ದೊಡ್ಮನೆ ರಾಜೀವಪ್ಪ, ಕಂಡೋರ ಮಗನ್ನೌ ನೀರಿನಲ್ಲಿ ಬಿಟ್ಟು, ಸ್ವಂತ ಮಗನನ್ನು ಉಳಿಸಿದ ಅಂತಾ ಅನ್ನುತ್ತಿದ್ದರು. ಏನೂ ಯೋಚಿಸಬೇಡಿ ಸಾರ್, ನಮ್ಮನ್ನು ನಾವು ಕಾಪಾಡೀಕೋತೀವಿ ಹೋಗಿ
- ಕನ್ನಡ ತಾಯಿಗೆ ನನ್ನ ನಿಯತ್ತು, ಹಿಡಿದು ಹೇಳ್ತೀನಿ ಅನ್ನದ ತುತ್ತು, ಅಭಿಮಾನಿಗಳೇ ನಮ್ಮನೆ ದೇವ್ರು, ನಿಮ್ಮಿಂದಲೇ ಬಾಳಿದು ಹಸಿರು
- ಇಕಿ ನನ್ನ ಅವ್ವ ರೀ, ಇವ ನಮ್ಮ ಅವ್ವನ ಗಂಡಾರಿ,
- ನೀನ್ ನನ್ನ ಪ್ರೀತಿ ಮಾಡಲಿಲ್ಲ ಅಂದ್ರೆ ಕಳ್ಳೀ ಹಾಲು ಕುಡೀದು ಸತ್ತು ಹೋಗ್ತೀನಿ
- ನೀವ್ ಬೆಳ್ಳಗೆ ಇದೀರಾ, ಯಾಅ ಕಲರ್ ಬಟ್ಟೆ ಹಾಕಿದರೂ, ಚೆನ್ನಾಗಿ ಕಾಣತ್ತೆ ಬಿಡ್ರೀ
- ಇದು ಜನ ಪ್ರೀತಿಯಿಂದ ಕೊಟ್ಟಿರೋ ಸೀಟು
- ನಿಮ್ಮ ಜಮೀನಾ ಅದು, ದೊಡ್ಮನೆ ರಾಜೀವಪ್ಪ ಕೊಟ್ಟದ್ದು,
- ಹೀರೊ ಪವರ್ ಫುಲ್ ಆಗಿದ್ರೇನೇ ವಿಲ್ಲನ್ ಗೂ ಮರ್ಯಾದೆ