ಜ್ಞಾನ ದೀವಿಗೆ

ವಿಕಿಕೋಟ್ದಿಂದ

ವಿಜಯ ಕರ್ನಾಟಕದಲ್ಲಿ ಜ್ಞಾನ ದೀವಿಗೆ ವಿಭಾಗದಲ್ಲಿ ಪ್ರಕಟಗೊಂಡಿರುವ ನುಡಿಗಳನ್ನು ಇಲ್ಲಿ ಸೇರಿಸಲಾಗಿದೆ.

  • ದೇವೋನ್ಮಾದ: ಸಂತರು, ಶರ, ಪ್ರಪಂಚದ ಮಹಾತ್ಮರು ಎಲ್ಲರೂ ಅಂಥ ಭಗವದ್ ತನ್ಮಯತೆ, ಉನ್ಮತ್ತತೆಯನ್ನು ಅನುಭವಿಸಿದ್ದನ್ನ, ಆನಂದಿಸಿದ್ದನ್ನು ನೋಡುತ್ತೇವೆ. ಮಹಾದೇವಿ ಅಕ್ಕನವರು ಹೇಳುತ್ತಾರೆ. - ೨೫ ಡಿಸೆಂಬರ್ ೨೦೧೩, ೦೪:೧೯
  • ಮಹಾಕಾವ್ಯ: ಎಳೆಯ ಮಗು ತಾಯಿಯ ಎದೆ ಹಾಲನ್ನು ಕುಡಿಯುತ್ತಲೇ ಕಣ್ಣು ಮುಚ್ಚಿ ನಿದ್ರೆಹೋಗಿ ಬಿಡುತ್ತದೆ. ಈಗ ಆ ಮಗುವಿಗೆ ಈ ಪ್ರಪಂಚದಲ್ಲಿ ತಾಯಿಯ ಹಾಲು ಬಿಟ್ಟರೆ ಬೇರೆ ಏನೂ ಕಾಣುತ್ತಿಲ್ಲ. - ೨೭ ಡಿಸೆಂಬರ್ ೨೦೧೩, ೦೪:೦೩
  • ಸಿದ್ಧಿಯ ಶ್ರೀಗಿರಿ: ನೆಪೋಲಿಯನ್ ಬೋನಾಪಾರ್ಟ್ ಫ್ರಾನ್ಸ್ ದೇಶದ ದೊರೆ, ಒಂದು ದಿನ ನೆಪೋಲಿಯನ್‌ನು ಆ ದೇಶದ ದೊಡ್ಡ ವಿಜ್ಞಾನಿಗೆ ಅರಮನೆಯಲ್ಲಿ ಗೌರವದ ಭೋಜನ ಏರ್ಪಡಿಸಿದ್ದ. - ೨೯ ಡಿಸೆಂಬರ್ ೨೦೧೩, ೧೮:೧೬
  • ಅಮೃತಸಿದ್ಧಿ !:ಅರೆಕೊಡವು ಸದ್ದು ಮಾಡುವುದು ಸ್ವಾಭಾವಿಕ. ತುಂಬಿದ ಕೊಡವು ಎಂದೂ ಸದ್ದು ಮಾಡದು. ಭಕ್ತಿರಸಾಮೃತ ಸಾಗರದ ದಡದಲ್ಲಿ ನಿಂತು ಆಕಸ್ಮಿಕವಾಗಿ ದೊರೆತ ಹನಿ, ಎರಡು ಹನಿ ಭಕ್ತಿರಸ ಕುಡಿದವನು ಅರೆಗೊಡದಂತೆ. - ೩೦ ಡಿಸೆಂಬರ್ ೨೦೧೩, ೦೪:೧೭
  • ಉನ್ಮತ್ತತೆ-ತನ್ಮಯತೆ: ಮೈತುಂಬ ದುಡಿದು ದಣಿದು ಹಸಿದು ಬಂದಿದ್ದ ಮನುಷ್ಯ ಹೊಟ್ಟೆ ತುಂಬ ಊಟ ಮಾಡಿದಾಗ ಕಣ್ಣುಗಳು ತಮ್ಮಷ್ಟಕ್ಕೆ ಮುಚ್. ನಿದ್ ನೀಡುತ್ತವೆ. - ಡಿಸೆ ೨೦೧,
  • ಭಕ್ತನು ದ್ವೇಷರಹಿತನು: ಜಗತ್ತಿನಲ್ಲಿ ನಡೆಯುವ ಸೃಷ್ಟಿ , ಸ್ಥಿತಿ, ಲಯ ಎಲ್ಲ ಕಾರ್ಯಗಳೂ ಆ ಸೃಷ್ಟಿಕರ್ತನಾದ ದೇವನ ಕಾರ್ಯಗಳೇ ಆಗಿವೆ. ಆದ್ದರಿಂದ ನಮಗೆ ಹುಟ್ಟುವುದು, ಬದುಕುವುದು ಎಷ್ಟು ಪ್ರಿಯವೋ ಪವಿತ್ರವೋ ಅಷ್ಟೇ ಮರಣವೂ ಪ್ರಿಯ ! - ೨೨ ಡ ೨೦೧೩, ೦೪:೫೯
  • ಅರಿವಿನ ಬೆಳಕು: ಒಬ್ಬ ಶಿಲ್ಪಿಯು ರಾಜನ ಆಜ್ಞೆಯಂತೆ ಒಂದು ಸುಂದರ ಮೂರ್ತಿ ಮಾಡಿದ. ದೇವರೇ ಕಲಾಕುಸುಮವಾಗಿ ಆ ಕಲ್ಲಿನಲ್ಲಿ ಪ್ರಕಟವಾದ. ರಾಜನು ಕಟ್ಟಿಸಿದ ಭವ್ಯವಾದ ಮ ಆ ಮೂರ್ತಿಯ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿತು. - ೨೦ ಡಿಸೆಂಬರ್ ೨೦೧೩, ೦೪:೧೫
  • ಸುಮಧುರ ಹೃದಯ: ಯಾವುದೇ ಹೂವು ಮೊಗ್ಗಿನ ಅವಸ್ಥೆಯಲ್ಲಿ ಇರುವವರೆಗೆ ಅದರ ಸುಗಂಧವು ಅವ್ಯಕ್ತ. ಆದರೆ ಅದೇ ಮೊಗ್ಗು ಅರಳಿ ಮೈ ಅದರ ಸುಗಂಧವು ಸುವ್ಯಕ್ತ. - ೨೩ ಡಿಸೆಂಬರ್ ೨೦೧೩, ೦೫:೫೩
  • ಪೂಜಾ ವೈಭವ !; ಸೃಷ್ಟಿಯು ಮೂರ್ತಿಯಾದರೆ, ಸೃಷ್ಟಿಕರ್ತನಾದ ದೇವನೇ ಮೂರ್ತಿಕಾರ, ಮಹಾಶಿಲ್ಪಿ ! ಸೃಷ್ಟಿಯಲ್ಲಿ ಮತ್ತು ಸ ನಾವು ಎಂದೂ ಭೇದ ಮಾಡಬಾರದು. - ೨೧ ಡಿಸೆಂಬರ್ ೨೦೧೩, ೧೮:೫೮
  • ಒಲಿದಂತೆ ಹಾಡುವೆ: ಕಲ್ಯಾಣದ ಶರಣರೆಲ್ ಯಾವಾಗಲೂ ಭಕ್ತಿಭಾವ ಪರವಶತೆಯಲ್ಲಿ, ಭಕ್ತಿಯ ನಿರ್ಭರತೆಯಲ್ಲಿಯೇ ಇರ. ಬಸ ಸಮಕಾಲಿನರು, ಬಸವಣ್ಣನವರನ್ನು ಆತ್ಮೀಯವಾಗಿ ಕರೆ, ಒಂದೊಂದು ರೀತಿಯಾದ ಗೌರವದ ಪದಗಳನ್ನು, ಬಿರುದಾಂಕಿತಗಳನ್ನು ಬಳಸಿರುವರು. - ೨೬ ಡಿಸೆಂಬರ್ ೨೦೧೩, ೦೪:೫೫
  • ಸಮದೃಷ್ಟಿ ಸಮಭಾವ:ಭಕ್ತನ ದೃಷ್ಟಿಯಲ್ಲಿ ಪ್ರಪಂಚ, ಪರಮಾರ್ಥ ಎಲ್ಲವೂ ಪವಿತ್ರ. ಪರಮಾತ್ಮನು ಪವಿತ್ರನಾದರೆ, ಪರಮಾತ್ ಪ್ರಪಂಚವೂ ಪವಿತ್ರ. ಸೃಷ್ಟಿಕರ್ತನಷ್ಟೇ ಸೃಷ್ಟಿಯೂ ಪವಿತ್ರ. - ೮ ಜನವರಿ ೨೦೧೪, ೦೪೫೬
  • ಜೀವನ : ಅಶೋಕ ಚಕ್ರವರ್ತಿಯು ಮಹಾಶೂರನಾ> ಯುದ್ಧವೆಂದರೆ ಅವನಿಗೆ ಎಲ್ಲಿಲ್ಲದ ಉತ್ಸಾಹ. ಹೋರಾಟ, ಇರಿಯು, ಕೊಲ್ಲುವುದು ಎಂದರೆ ಅವನಿಗೆ ಒಂದು ಹಬ್ಬವಿದ್ದಂತೆ. - ೧೫ ಜನವರಿ ೨೦೧೪, ೦೪:೨೦
  • ಬದುಕು ರಸರಂಗ: ಕತ್ತಲೆಯಲ್ಲಿ ಯಾವುದೂ ಸರಿಯಾಗಿ ಕಾಣುವುದಿಲ್ಲ. ಕಂಡರೂ ಕೂಡಾ ವಿಚಿತ್ರವಾಗಿ ಕಾಣುತ್ತದೆ. ಕಡ್ಡಿಯು ಗುಡ್ಡವಾಗಿ, ಗುಡ್ಡವು ಬೆಟ್ಟವಾಗಿ, ಬೆಟ್ಟವು ಭೂತವಾಗಿ ಕಂಡು ಹೆದರಿಸುತ್ತದೆ. - ೧೪ ಜನವರಿ ೨೦೧೪, ೦೪:
  • ಅಹಂ ತ್ಯಾಗ: ನಾನೇ ಹುಟ್ಟಿಸಿದೆ , ನಾನೇ ಕಟ್ಟಿಸ ಎಂಬ ಅಹಂಭಾವನೆಯನ್ನು ತ್ಯಾಗಮಾಡುವುದು ಅಹಂತ್ಯಾಗ! ಭಕ್ತಿಭಾಂಡಾರಿ ಬಸವಣ್ಣನವರು ಭಕ್ತಿಭಾವಾವೇಷದಲ್ಲಿ ಏನಬೇಡಿದಡೀವೆ ಬೇಡಿರಯ್ಯ ಮಹಾಪ್ರಭುಗಳೇ, ಎಂದು ಅಲ್ಲಮಪ್ರಭುದೇವರಿಗೆ ಹೇಳಿದ. - ೬ ಜನವರಿ ೨೦೧೪, ೦೪:೦೯
  • ಮಮಕಾರ ತ್ಯಾಗ: ಮಮಕಾರವೆಂದರೆ ನನ್ನದೆಂಬ ಭಾವ. ನಾನು ಎನ್ನುವುದು ಎಷ್ಟು ಬಾಧಕವೋ ನನ್ನದು ಎನ್ನುವುದು ಅಷ್ಟೇ ಬಾಧಕವಾಗಿದೆ. - ೭ ಜನವರಿ ೨೦೧೪, ೦೪:೫೮
  • ಅಶೋಕನು ?: ‘ನ ವಾಂಛತೇ’ ಎಂದರೆ ಅತಿಯಾಸೆ ಇಲ್ಲದಿರುವುದು. ‘ನ ಶೋಚತಿ’ ಎಂದರೆ ಎಂ ದುಃಖಿಸದೆ ಇರುವುದು. ‘ನ ದ್ವೇಷ್ಟಿ’ ಎಂದರೆ ಯಾರನ್ನೂ ದ್ವೇಷಿಸದೇ ಇರುವುದು. - ೯ ಜನವ ೨೦೧೪, ೦೪:೧೬
  • ಭೂದಾನ ಯಜ್ಞ: ನಮ್ಮ ಎದೆಯೊಳಗಿರುವ ಭಾವನೆ, ತಲೆಯೊಳಗಿರುವ ವಿಚಾರ, ಕೈಯೊಳಗಿರುವ ಕ್ರಿಯೆಗಳು ಇವು ಬದುಕಿ ಮೂರು ಮುಖ್ಯ ಅಂಗಗಳು. ಮಧುರವಾದ ಭಾವನೆಗಳಿಂದ ಜೀವನದ ಸೌಂದರ್ಯ ಹೆಚ್ಚುತ್ತದೆ. - ೧೧ ಜನವರಿ ೨೦೧೪, ೦೪:೪೫
  • ದಿವ್ಯ ಬದುಕು: ನಾವು ಯಾವುದೇ ಯೋಗ ಮಾಡೋಣ. ಆದರೆ ಈ ಮೂರನ್ನು ಮಾತ್ರ ಮರೆಯದೆ ಮಾಡೋಣ-ಸದ್ಭಾವಯೋಗ, ಸುಜ್ಞಾನ ಯೋಗ ಹಾಗೂ ಸತ್ಕ್ರಿಯಾಯೋಗ. - ೧೩ ಜನವರಿ ೨೦೧೪, ೦೪:೫೨
  • ಶ್ರಮದ ಸವಿಫಲ: ಶ್ರಮದಿಂದಲೇ ಬಂದುದು ಸವಿಯಾಗಿರುತ್ತದೆ. ಬರೀ ಮಲಗಿದರೆ ಒಂದು ದಿನ ವೈರಿಯಾಗುತ್ತದೆ. ದೇಶಸೇವೆ, ಈಶಸೇವೆ ಎಂದು ಮನದುಂಬಿ ಮಾಡುವುದು. ತಾಯಿ ಎಂದೂ ಮಗುವಿನ ಸೇವೆಯ ಲೆಕ್ಕವಿಡುವುದಿಲ್ಲ. - ೧೦ ಜನವರಿ ೨೦೧೪, ೦೪:೨೩
  • ದಿವ್ಯ ಜೀವನ: ಹೃದಯದ ಹದುಳಿಗೆ ಭಾವನೆಯು ಭವ್ಯವಾದುದು, ದಿವ್ಯವಾದುದು. ಮನೆಯ ಎದುರು ಸ್ವಾಗತ, ಸುಸ್ವಾಗತ, ಹದುಳ ಬನ್ನಿ, ಶರಣು ಬನ್ನಿ, ಅತಿಥಿ ದೇವೋಭವ ಎಂಬ ಸದ್ಭಾವ ಸೂಚಕ ಫಲಕಗಳನ್ನು ಹಾಕಿ ನೋಡಿರಿ. - ೧೬ ಜನವರಿ ೨೦೧೪, ೦೪;೨೭
  • ಭಾರತವು ಜ್ಞಾನಕ್ಷೇತ್ರವನ್ನು ವಿಸ್ತರಿಸಿದ ದೇಶ. ಬೇರೆ ದೇ ಅಜ್ಞಾನದ ಕತ ಭಾರತ ದೇಶದಲ್ಲಿ ಜ್ಞಾನಸೂರ್ಯನು ಪ್ರಕಾಶಮಾನವಾಗಿ ಬೆಳಗುತ್ತಿದ್ದನು. - ೧೪ ಫೆಬ್ರವರಿ ೨೦೧೪, ೦೭:೨೪
  • ನಿರ್ಮಲ ಭಾವ: ಸ್ಟೆಫನ್ ಹಾಫ್‌ಕಿಂಗ್ ನಮ್ಮ ಕಾಲದಲ್ಲಿರುವ ಜಗತ್‌ಪ್ರಸಿದ್ಧ ಮಹಾವಿಜ್. ಆದರೆ ಅವನಿಗೆ ನಡೆಯಲು, ನುಡಿಯಲು ಬ. ನಾಲ್ಕು ದಶಕಗಳಿಂದಲೂ ಅವನ ದೇಹವು ಹೆಚ್ಚು ಕಡಿಮೆ ನಿಷ್ಕ್ರಿಯವಾಗಿಯೇ ಇದೆ. - ೧೧ ಫೆಬ್ರವರಿ ೨೦೧೪, ೦೪:೨೧
  • ಹೃದಯ ಸಿರಿ: ಸಂತ ತುಕಾರಾಮರು ವಿಠ್ಠಲನ ಪರಮ ಭಕ್ತರು. ಮಹಾರಾಷ್ಟ್ರದ ಸಂತ ಸಾಹಿತ್ಯದಲ್ಲಿ ಅವರದು ದೊಡ್ಡ ಹೆಸರಿದೆ. ಆದರೆ ಅವರ ಜೀವನ ಮಾತ್ರ ಅತ್ಯಂತ ಸರಳ. - ೧೯ ಫೆಬ್ರವರಿ ೨೦೧೪, ೦೪:೪೭
  • ಭಾವಪೂಜೆ: ಓರ್ವ ಮಹಾರಾಜನು ಒಂದು ಭವ್ಯವಾದ ಮಂದಿರವನ್ನು ಕಟ್ಟಿಸಿದ. ನೆರೆ ಹೊರೆಯ ರಾಜ ಮಹಾರಾಜರನ್ನು ಎಲ್ಲ ಪ್ರಜೆಗಳನ್ನು ಆಮಂತ್ರಿಸಿ ವೈಭವದಿಂದ ಮಂದಿರದಲ್ಲಿ ದೇವರ ಮೂ ಪ್ರತಿಷ್ಠಾಪಿಸಿದ. - ೧೩ ಫೆಬ್ರವರಿ ೨೦೧೪, ೦೪:೪೬
  • ವ್: ಪ್ರಾಣಕ್ಕೆ ಪ್ರಾ ಇಂಥ ನೀರು, ಅನ್ನ ಮತ್ತು ಮಧುರ ಮಾತುಗಳನ್ನು ಯಾರು ಎಲ್ಲರೊಂದಿಗೆ ಹಂಚಿಕೊಂಡು ಬದುಕುತ್ತಾರೆಯೋ ಅ ನಿಜವಾದ ಧರ್ಮವಂತರು. - ೨೧ ಫೆಬ್ರವರಿ ೨೦೧೪, ೦೪:೧೪
  • ಸಾರ್ಥಕ ಬದುಕು: ಒಂದು ಸಸಿಯು ಹೆಮ್ಮರವಾಗಿ ಬೆಳೆದು ನಿಂತರೆ, ಅದ ಅಸಂಖ್ಯೆ ಪಶು ಪಕ್ಷಿಗಳಿಗೆ, ಜನರಿಗೆ ನೆರಳು ನೆರವು, ಹೂವು ಕಾಯಿ ಹಣ್ಣು ಕೊಡುತ್ತದೆ. - ೧೭ ಫೆಬ್ರವರಿ ೨೦೧೪, ೦೪:೫೯
  • ಜೀವನದ ಶ್ರೇಯಸ್ಸು: ನಮ್ಮ ಬದುಕಿಗೆ ಎರಡು ಪ್ರಧ ಅಂಗಗಳು. ೧) ಬಹಿರಂಗ ೨) . ಬಹಿರಂಗವು ಅಂದರೆ ದೇಹವು ಗೋಚರ, ಕಾಣುವಂಥದ್ದು. ಅಂತರಂಗ ಅಥವಾ ಭಾವವು ಅಗೋಚರ. - ೧೦ ಫೆಬ್ರವರಿ ೨೦೧೪, ೧೮:೨೧
  • ಪ್ರಾಣರತ್ನ: ಪ್ರಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾತಮ್‌ಮೂಢೈಃ ಪಾಷಾಣ ಖಂಡೇಷು ರತ್ನ ಸಂಜ್ಞಾ ವಿಧೀಯತೇ॥ - ೨೦ ಫೆಬ್ರವರಿ ೨೦೧೪, ೦೪:೩೬
  • ಧರ್ಮಸಂಗ್ರಹ: ಅಂಥ ಆದರ್ಶದ ಬದುಕಿನ ಕುರಿತು, ಒಂದು ಸುಭಾಷಿತ ಹೀಗಿದೆ. - ೧೮ ಫೆಬ್ರವರಿ ೨೦೧೪, ೦೪:೫೯
  • ಅಮೃತಾನ್ನ: ಒಂದು ದಿನ ಒಬ್ಬ ಸಂತರು ಒಂದು ಊರಿನ ಹೊರ ವಲಯದಲ್ಲಿರುವ ದೇವಾಲಯದ ಎದುರು ಬಂದು ಕುಳಿತಿದ್ದರು. ಅವರು ಶ್ರೇಷ್ಠ ಅನುಭಾವಿಗಳೆಂದು ಜನರಿಗೆ ತಿಳಿಯುವುದು ತಡವಾಗಲಿಲ್ಲ. - ೧೨ ಫೆಬ್ರವರಿ ೨೦೧೪, ೦೪:೦೩
  • ಜೀವನದ ಶ್ರೇಯಸ್ಸು: ನಮ್ಮ ಬದುಕಿಗೆ ಎರಡು ಪ್ರಧಾನ ಅಂಗಗಳು. ೧) ಬಹಿರಂಗ ೨) ಅಂತರಂಗ. ಬಹಿರಂಗವು ಅಂದರೆ ದೇಹವು ಗೋಚರ, ಕಾಣುವಂಥದ್ದು. ಅಂತರಂಗ ಅಥವಾ ಭಾವವು ಅಗೋಚರ. - ೧೦ ಫೆಬ್ರವರಿ ೨೦೧೪, ೧೮:೨೧
  • ಹೃದಯದ ಕರೆ: ಬಯಕೆ ಸಿದ್ಧಿಯ ಕಡೆಗೆ ಸಾಗುವ ಶಕ್ತಿಯನ್ನು ನೀಡುತ್ತದೆ. ಬಯಕೆ ಇಲ್ಲದಿರೆ ಸಾಧನೆಯೂ ಇಲ್ಲ, ಸಿದ್ಧಿಯೂ ಇಲ್ಲ. ಬಯಕೆ ಒಳ್ಳೆಯದಾದರೆ ಬದುಕೇ ಒಳ್ಳೆಯದಾಗುತ್ತದೆ. - ೨೫ ಫೆಬ್ರವರಿ ೨೦೧೪, ೦೪:೦೪
  • ವಿಶ್ವಕಲ್ಯಾಣ: ಅಂತರಂಗ ಬಹಿರಂಗ ಶುದ್ಧಿಗಾಗಿ ಮಹಾತ್ಮರು ಅದೆಷ್ಟು ಮಹತ್ವ ಕೊಟ್ಟಿದ್ದಾರೆನ್ನುವುದಕ್ಕೆ ಬಸವಣ್ಣನವರ ಈ ವಚನವೇ ಸಾಕ್ಷಿ. - ೨೬ ಫೆಬ್ರವರಿ ೨೦೧೪, ೦೪:೦೯
  • ಹೃದಯಂಗಮ ಪ್ರಾರ್ಥನೆ: ಕಾಲೇ ವರ್ಷತು ಪರ್ಜನ್ಯಃ ಪ್ರಥಿವೀ ಸಸ್ಯಶಾಲಿನೀ!ದೇಶಃ ಭವತು ಕ್ಷೋಭರಹಿತಃ ತತ್ ಪ್ರಜಾಃ ಸಂತು ನಿರ್ಭಯಾಃ॥ - ೨೭ ಫೆಬ್ರವರಿ ೨೦೧೪, ೦೪:೫೬
  • ಭೂಸ್ವರ್ಗ: ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ - ೧ ಮಾರ್ಚ್ ೨೦೧೪, ೦೪೨೦
  • ಮಂಗಲಮಯಯ ಪ್: ಸರ್ವೇ ಜನಾಃ ಸುಖಿನೋ ಭವಂತು’ ಎಂದು ಭಾರತೀಯ ಋಷಿಮುನಿಗಳು ವಿಶ್ವಕಲ್ಯಾಣವನ್ನೇ ಬಯಸಿದರು. - ೪ ಮಾರ್ಚ್ ೨೦೧೪, ೦೪:೪೨
  • ಒಂದು ನಿಮಿಷದ ಉದಾಸೀನ: ನಮ್ಮ ಸಾಧನೆಯು ಪ್ರಾಪಂಚಿಕವೇ ಇರಲಿ, ಪ ಇರಲಿ ಅದು ಸಿದ್ಧಿಯ ಶ್ರೀಗಿರಿಯ ತಲುಪುವುದಕ್ಕೆ ಅನನ್ಯ ಪ್ರಾರ್ಥನೆ ಅಥವಾ ತೀವ್ರವಾದ ಹಂಬಲ, ಬಯಕೆ ಅತ್ಯವಶ್ಯ. - ೫ ಮಾರ್ಚ್ ೨೦೧೪, ೦೪:೦೫
  • ಆಧ್ಯಾತ್ಮಿಕ ಪ್ರಾರ್ಥನೆ:ಒಬ್ಬ ಒಂದು ಸುಂದರ ಚಿತ್ರ ಬರೆಯುವುದಕ್ಕೆ ಕೈಯೊಳಗೆ ಕುಂಚ ಹಿಡಿಯುತ್ತಾನೆ. ಅವನು ಪ್ರತಿಯೊಂದು ಇಡುವಾಗಲೂ, ರೇಖೆಯನ್ನು ಬರೆಯುವಾಗಲೂ ಮೈಯೆಲ್ಲಾ ಕಣ್ಣಾಗಿರುತ್ತಾನೆ. - ೬ ಮಾರ್ಚ್ ೨೦೧೪, ೦೪;೦೨
  • ಸಂಸಾರ ದಂದುಗ: ಎಂದೋ ಸಂಸಾರ ದಂದುಗ ಹಿಂಗುವುದು?ಎಂದೋ, ಮನದಲ್ಲಿ ಪರಿಣಾಮಹುದೆನಗೆಂದೋ ಎಂದೋ? - ೭ ಮಾರ್ಚ್ ೨೦೧೪, ೦೪:೧೦
  • ಹೃದಯಸ್ಪರ್ಶಿ ಪ್ರಾರ್ಥನೆ ಬದುಕಿನ ಅಂಗಗಳು ಮೂರು ೧) ನನ್ನ ಜೀವನ ೨) ನಾನಿರುವ ಜಗತ್ತು ) ಈ ಜಗತ್ತಿನ ಹಿಂದಿರುವ ಸತ್ಯ ಅಥವಾ ಜಗದೀಶ! ನನ್ನ ತನು, ಮನ,ಬುದ್ಧಿ, ಭಾವ ಚೆನ್ನಾಗಿರಬೇಕು. - ೮ ಮಾರ್ಚ್ ೨೦೧೪, ೦೪:
  • ಹೃದಯಸ್ಪರ್ಶಿ ಪ್ರಾರ್ಥನೆ: ಬದುಕಿನ ಅಂಗಗಳು ಮೂರು ೧) ನನ್ನ ಜೀವನ ೨) ನಾನಿರುವ ಜಗತ್ತು ೩ ಈ ಜಗತ್ತಿನ ಹಿಂದಿರುವ ಸತ್ಯ ಅಥವಾ ಜಗದೀಶ! ನನ್ನ ತನು, ಮನ,ಬುದ್ಧಿ, ಭಾವ ಚೆನ್ನಾಗಿರಬೇಕು. - ೮ ಮಾರ್ಚ್ ೨೦೧೪, ೦೪:
  • ಜಗದ .: ದೇವನೇ ಈ ಜಗದೊಡೆಯ. ಈ ದಿವ್ಯೋತ್ಸವಕ್ಕ ಸ್ವತಃ ದೇವನೇ ನಮ್ಮನ್ನು ಸಂತಸದಿಂದ ಆಮಂತ್ರಿಸಿದ್ದಾನೆ. ನಾವೆಲ್ಲರೂ ದೇವನ ದಿವ್ಯ ಅತಿಥಿಗಳೆಂಬ ಹೆಮ್ಮೆ ನಮಗಿರಬೇಕು. - ೧೨ ಮಾರ್ಚ್ ೨೦೧೪, ೦೪:೦೬
  • ದಿವ್ಯೋತ್ಸವ: ಬದುಕಿನಲ್ಲಿ ಯಾವುದಕ್ಕೂ ಕೊರತೆ ಇರಬಾರದು. ನೂರು ವಸಂತಗಳ ಬದುಕು ಸಂತಸದ ಸಾಗರವಾಗಬೇಕು. ಅ ನಾವಿರುವ ಈ ಜಗತ್ತು ಸಂಪದ್ಭರಿತವಾಗಿರಲೆಂದು ದೇವರಲ್ಲಿ ನಾವು ನಿತ್ಯ ಹಾರೈಸಬೇಕು, ಹಂಬಲಿಸಬೇಕು. - ೧೧ ಮಾರ್ಚ್ ೨೦೧೪, ೦೪:೨೯
  • ದೇವಪಿತನ ಕೃಪೆ: ನಮ್ಮ ಜೀವನವು ದೇವನು ಕರುಣಿಸಿದ ಒಂದು ವೀಣೆ. ಈ ದಿವ್ಯ ವೀಣೆಯನ್ನು ಸಂತರು, ಶರಣರು ಎಷ್ಟು ಚೆನ್ನಾಗಿ ನುಡಿಸಿದರು. ಬುದ್ಧ ಭಗವಾನರು ಶಾಂತಿಗೀತೆ, ಮಹಾವೀರರು ವೈರಾಗ್ಯದ ಗೀತೆ, ಬಸವಣ್ಣನವರು ಭಕ್ತಿ ಗೀತೆ, ಆಚಾರ‌್ಯತ್ರಯರು ಜ್ಞಾನ ಗೀತೆಯನ್ನು ನುಡಿಸಿ ಈ ಪ್ರಪಂಚವನ್ನು ಸಂಪದ್ಭರಿತ ಮಾಡಿದರು. - ೧೩ ಮಾರ್ಚ್ ೨೦೧೪, ೦೪:೫೪
  • ಕ್ರಿಯಾಪೂಜೆ: ದಾಸಿಮಾರ್ಯರ ಒಂದು ಸುಂದರವಾದ ವಚನವಿದೆ. - ೧೬ ಮಾರ್ಚ್ ೨೦೧೪, ೦೭:೧೫
  • ಜೀವನದ ಹೆದ್ದಾರಿ: ಭಾರತ ದೇಶದಲ್ಲಿ ಸಾವಿರ ಸಂಖ್ಯೆಯಲ್ಲಿ ಋಷಿಮುನಿಗಳು, ಸಂತರು- ಶರಣರು ಆಗಿ ಹೋದರು. ಅವರ ಬದುಕೇ ಒಂದು ಆರಾಧನೆಯಾಗಿತ್ತು, ಅರ್ಚನೆಯಾಗಿತ್ತು. - ೧೪ ಮಾರ್ಚ್ ೨೦೧೪, ೧೮:೦೭
  • ಅಗಾಧ ಪರಿವರ್ತನೆ: ಒಂದು ಮನೆಯಲ್ಲಿ ಒಲೆಯ ಹತ್ತಿರ ಇದ್ದಲಿ ಮತ್ತು ಬೆಂಕಿ ಅಕ್ಕಪಕ್ಕದಲ್ಲಿ ವಾಸವಾಗಿದ್ದವು. ಇದ್ದಲಿಯನ್ನು ನೋಡಿದರೆ, ಮುಟ್ಟಿದರೆ ಸಾಕು, ಕಪ್ಪಾಗುತ್ತೇವೆಂದು ಜನರು ಅದನ್ನು ತಿರಸ್ಕರಿಸುತ್ತಿದ್ದರು. - ೧೫ ಮಾರ್ಚ್ ೨೦೧೪, ೦೪:೪೩
  • ಆನಂದದ ಅಭಿಷೇಕ ಓರ್ವ ಮಹಾರಾಜನು ಭವ್ಯವಾದ ಮಂದಿರ ಕಟ್ಟಿ ವೈಭವದ ಉದ್ಘಾಟನೆ ಮಾಡಿ ವಿಶ್ರಮಿಸುವಾಗ ಒಂದು ಸುಂದರ ಕನಸು ಕಂಡ. ಕನಸಿನಲ್ಲಿ ದೇವರು ಪ್ರತ್ಯಕ್ಷನಾದ. - ೧೭ ಮಾರ್ಚ್ ೨೦೧೪, ೦೪:೧೫
  • ಮಹಾತ್ಯಾಗ: ಪ್ರತಿಯೊಂದು ಮನೆಯಲ್ಲಿರುವ ಮಾತೆ ವರುಷದ ಹನ್ನೆರಡು ತಿಂಗಳು, ಮೂವತ್ತು ದಿವಸ, ಇಪ್ಪತ್ತ್ನಾಲ್ಕು ಗಂಟೆ ಹಗಲು ರಾತ್ರಿಯೆನ್ನದೆ ಪ್ರತಿಫಲದಾಸೆಯಿಲ್ಲದೆ ದುಡಿಯುತ್ತಾರೆ. - ೧೮ ಮಾರ್ಚ್ ೨೦೧೪, ೦೪:೨೬
  • ಬದುಕೇ ಒಂದು ಆರಾಧನೆ: ಕ್ರಿಯಾಪೂಜೆಯ ಕುರಿತು ತುರುಗಾಹಿ ರಾಮಣ್ಣನವರ ವಚನವೊಂ ತುಂಬಾ ಸುಂದರವಾಗಿದೆ. - ೧೯ ಮಾರ್ಚ್ ೨೦೧೪, ೦೬:೨೭
  • ‘ವಬಂ‘ನ: ಪೂಜೆಯು ಒಂದು ಮಹತ್ವದ ಸಾ‘ನವಾಗಿದೆ. ಅದು ಬದುಕಿಗೆ ಪಾವಿತ್ರತೆಯನ್ನು ತಂದುಕೊಡುತ್ತದೆ. ಮನಸ್ಸು ಸುಶೀಲವೂ, ಸುಸಂಸ್ಕೃತವೂ ಆಗುತ್ತದೆ. - ೨೦ ಮಾರ್ಚ್ ೨೦೧೪, ೦೬:
  • ವಾಣಿಪೂಜೆ: ನಾವಾಡುವ ಒಂದು ಒಳ್ಳೆಯ ಮಾತು ಜಗತ್ತನ್ನು, ಜೀವನವನ್ನು ಕಟ್ಟು ತ್ತದೆ. ಆದರೆ ನಾವು ಆಡುವ ಒಳ್ಳೆಯದಲ್ಲದ ಒಂದೇ ಒಂದು ಮಾತು ಜಗತ್ತನ್ನು, ಜೀವನವನ್ನು ಒಡೆದು ಚೂರು ಮಾಡುತ್ತದೆ. - ೨೨ ಮಾರ್ ೨೦೧೪, ೦೪:೫೬
  • ಕನಸಿನ ಮಾತು: ಉತ್ತಾನಪಾದ ಮಹಾರಾಜನಿಗೆ ಸುನೀತಿ, ಸುರುಚಿ ಎಂ ಇಬ್ಬರು ಮಹಾರಾಣಿಯರು. ಒಂದು ದಿನ ಸುನೀತಿಯ ಮಗ ‘್ರುವನು ಮಹಾರಾಜನ ತೊಡೆಯ ಮೇಲೆ ಕುಳಿತಿದ್ದ. - ೨೧ ಮಾರ್ಚ್ ೨೦೧೪, ೦೪:೩೭
  • ನನ್ನ ಗುರುದೇವರು: ಹರಿದಾ ಶ್ರೇಷ್ಠ ಗಾಯಕರು. ಅವರ ಶಿಷ್ಯ ತಾನಸೇನನು ರಾಜನ ಆಸ್ಥಾನದಲ್ಲಿ ಗಾಯಕನಾಗಿ ಒಳ್ಳೆಯ ಹೆಸರನ್ನು ಮಾಡಿದ್ದ. ತಾನಸೇನನು ಹಾಡುತ್ತಿದ್ದರೆ ದೀಪಗಳು ಬೆಳಗುತ್ತಿದ್ದವು ಎಂದು ಹೇಳುತ್ತಾರೆ. - ೨೪ ಮಾರ್ಚ್ ೨೦೧೪, ೦೪:೧೧
  • ನಾದಮಯ ಜೀವನ: ‘ಓಮಿತ್ಯೇತದಕ್ಷರಮಿದಂ ಸರ್ವಂ’-ಮಾಂಡುಕ್ಯ ಎಂದರೆ ಈ ವಿಶ್ವವೇ ಓಂಕಾರದ ನಿನಾದವಾಗಿದೆ. ಈ ವಿಶ್ವವೇ ಸಂಗೀತಮಯವಾಗಿದೆ ನಾದಮಯವಾಗಿದೆ. - ೨೫ ಮಾರ್ಚ್ ೨೦೧೪, ೦೪:೧೭
  • ದೇವಕಾರ್ಯ: ನಮ್ಮ ಜೀವನವೇ ದೇವನಿಗೆ ಒಂದು ಆರಾಧನೆ ಆಗಬೇಕು. ಇದನ್ನು ನಾವು ಸಂತರ ಶರಣರ ಜೀವನದಲ್ಲಿ ನೋಡುತ್ತೇವೆ. ಅವರ ದೇಹವೇ ದೇವಾಲಯವಾಗಿರುತ್ತದೆ, ಅವರ ಹಸನಾದ ಹೃದಯವೇ ದೇವನಿಗೆ ಗದ್ದುಗೆ ಆಗಿರುತ್ತದೆ. ಅವರು ಮಾಡುವ ಕ್ರಿಯೆಗಳೆಲ್ಲವೂ ದೇವನಿಗೆ ಮಹಾಪೂಜೆಯಾಗಿರುತ್ತವೆ. - ೨೬ ಮಾರ್ಚ್ ೨೦೧೪, ೦೪:೦೬
  • ನಿತ್ಯ ಆರಾಧನೆ: ಯಾವುದನ್ನು ಸ್ಮರಿಸುವಾಗ ನಮ್ಮ ಮನಸ್ಸು ಸುವಿಶಾಲವಾಗುತ್ತದೆಯೋ, ಸುಶಾಂತವಾಗುತ್ತದೆಯೋ ಅ ದೇವರು. ದೇವರು ಮನಸ್ಸನ್ನು ಅರಳಿಸುವನು ಆದರೆ ಕೆರಳಿಸುವುದಿಲ್ಲ. - ೨೭ ಮಾರ್ಚ್ ೨೦೧೪, ೦೪:೦೬
  • ಭರವಸೆಯ ಹೆಜ್ಜೆ: ವ್ಯಾಸ ಮಹರ್ಷಿಗಳು ಮಹಾಜ್ಞಾನಿಗಳು. ಒಂದು ದಿನ ಅವರು ಪಾದಚಾರಿಗಳಾಗಿ ಒಂದು ಹಳ್ಳಿಯ ಹತ್ತಿರ ಹಾ ಹೊರಟಿದ್ದರು. - ೨೮ ಮಾರ್ಚ್ ೨೦೧೪, ೦೪:೨೬
  • ಕ್ರಿಯಾರಾಧನೆ: ನಾವು ನಮ್ಮ ಕೈಯಾರೆ ಮನಸಾರೆ ಮಾಡುವ ಕ್ರಿಯೆಗಳೇ ದೇವರ ಪೂಜೆಯಾಗಿ ದೇವರನ್ನು ಹೇಗೆ ಸಂತುಷ್ಟಗೊಳಿಸುತ್ತವೆ ಎಂಬುದನ್ನು ಮಹಾಕವಿ ರವೀಂದ್ರರು ತಮ್ಮ ಒಂದು ಕವನದಲ್ಲಿ ಮನಮುಟ್ಟುವಂತೆ, ಹೃದಯ ತ ಹೇಳುತ್ತಾರೆ ‘ಓ ಸಾಧಕನೆ, ನಾಲ್ಕು ಗ ಮಧ್ಯೆದಲ್ಲಿ ಕುಳಿತು ಹಾಡುವುದನ್ನು, ಜಪಿಸುವುದನ್ನು ಬಿಟ್ಟು ಸ್ವಲ್ಪ ಹೊರಗೆ ಬಾ, ನಿನ್ನ ದೇವರು ಈ ಕತ್ತಲೆಯ ಕೋಣೆಯಲ್ಲಿಲ್ಲ! - ೨೯ ಮಾರ್ಚ್ ೨೦೧೪, ೦೪:೧೩
  • ಸುಖದ ಸೂತ್ರ: ಒಂದು ಹೂವಿನ ಸಸಿಯನ್ನು ತಿಪ್ಪೆಯಲ್ಲಿಟ್ಟರೂ ಅದು ಹೆಮ್ಮರವಾಗಿ ಬೆಳೆದು ಹೂವನ್ನೇ ಕೊಡುತ್ತದೆ, ಸುಗಂಧವನ್ನೇ ನೀಡುತ್ತದೆ, ಸಂತಸವನ್ನೇ ತರುತ್ತದೆ. - ೩೧ ಮಾರ್ಚ್ ೨೦೧೪, ೦೬:೩೮
  • ತಿಳಿಬೆಳಕು: ಒಂದು ತಿಪ್ಪೆಯಲ್ಲಿ ಮಲ್ಲಿಗೆ ಹೂವಿನ ಕಂಟಿ ಬೆಳೆದಿತ್ತ, ಮೈತುಂಬ ಅರಳಿದ ಹೂವನ್ನು ಧರಿಸಿಕೊಂಡು ಸುತ್ತೆಲ್ಲ ಸುಗಂಧ ಸೂಸುತ್ತಲಿತ್ತು. - ೨ ಏಪ್ರಿಲ್ ೨೦೧೪, ೦೪:೩೯
  • ನುಡಿಯ ಬೆಳಕು: ಆ ಮಾತಿನ ಮಹಿಮೆ ಕುರಿತು ಚಿನ್ಮ ಚೆನ್ನಬಸವಣ್ಣನವರು ಹೇಳುತ್ತಾರೆ. - ೫ ಏಪ್ರಿಲ್ ೨೦೧೪, ೦೪:೫೨
  • ಶಬ್ಧಬ್ರಹ್ಮ: ಭಾರ ದೇಶವು ಶ್ರೇಷ್ಠ ಜ್ಞಾನಿಗಳ ದೇಶ. ಸಾವಿರಾರು ವರುಷಗಳ ಹಿಂದೆಯೇ ಇಲ್ಲಿಯ ಸಂತರು, ಶರಣರು, ಋಷಿಮುನಿಗಳು ಮಾನವ ಜೀವನದ ಸಾರ್ಥಕತೆಯ ಕುರಿತು ಆಳವಾಗಿ ಚಿಂತನ ಮಂಥನ ಮಾಡಿದರು. - ೪ ಏಪ್ರಿಲ್ ೨೦೧೪, ೦೪:೦೧
  • ಬದುಕು ದಿವ್ಯವೀಣೆ: ಸಂಗೀತ ಸಾಧನೆ ಮಾಡಿದವರಿಗೆ, ಕೊಳಲು, ನಾದಸುಧೆಯನ್ನು ಹರಿಸುವ ಒಂದು ಸುಂದರ ಮಾಧ್ಯಮ. ಸಂಗೀತದ ಅರಿವಿಲ್ಲದವರಿಗೆ, ಕೊಳಲು ಕೆಲಸಕ್ಕೆ ಬಾರದ ಒಂದು ಕಟ್ಟಿಗೆಯ ತುಂಡು ಅಷ್ಟೆ ! ನಮ್ಮ ಬದುಕು ಒಂದು ಕೊಳಲಾಗಬೇಕು. - ೩ ಏಪ್ರಿಲ್ ೨೦೧೪, ೦೪:೧೦
  • ಮಧರ ಬದುಕು: ಬೋರೆಹಣ್ಣಿನ ಮರಕ್ಕೆ ಬಾರಿಕಂಟಿ ಎಂದು ಕರೆಯುತ್ತಾರೆ. ಅದರ ಮೈತುಂಬ ಮುಳ್ಳು ಇರುತ್ತದೆ. ಆ ಮುಳ್ಳಿನ ಮರೆಯಲ್ಲಿಯೇ ಸವಿ ಸವಿಯಾದ ಹಣ್ಣುಗಳು ಮೆತ್ತಿಕೊಂಡಿರುತ್ತವೆ. - ೭ ಏಪ್ರಿಲ್ ೨೦೧೪, ೦೪:೪೮
  • ದೇವಲೋಕದ ದಾರಿ: ಶಾಪೆನ್ ಹಾವರ್ ಎಂ ವಿದೇಶದ ತತ್ತ್ವಜ್ಞಾನಿ ಹೇಳುತ್ತಾರೆ ‘ಭಾರತ ದೇಶದ ಆಧ್ಯಾತ್ಮಿಕ ಜ್ಞಾನವೇ ನನ್ನ ಇಹ-ಪರ ಜೀವನದ ಶಾಂತಿ ಸೂತ್ರವಾಗಿದೆ’ ‘ಊರಿಗೆ ದಾರಿಯನಾರು ತೋರಿದರೇನು ಸಾರಾಯದ ನಿಜವನು ತೋರುವ ಗುರು ಯಾರಾದರೇನು ಸರ್ವಜ್ಞ?’ ಎಂಬ ಸರ್ವಜ್ಞನ ವಚನವನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. - ೮ ಏಪ ೨೦೧೪, ೦೪:೪೯
  • ಭವವ ದಾಟಿದವರು: ಹಡಪದ ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮನವರು ಸಂತಪ್ತಿಯ ಜೀವನದ ರಹಸ್ಯವನ್ನು ತಮ್ಮ ಒಂದು ವಚನದಲ್ಲ ಬಿಚ್ಚಿಟ್ಟಿದ್ದಾರೆ. - ೧೧ ಏಪ್ರಿಲ್ ೨೦೧೪, ೦೪:೦೧
  • ಹಸನಾದ ಹೃದಯ: ಈ ಜಗತ್ತಿನಲ್ಲಿ ಕೋಟಿ ಕೋಟಿ ವಸ್ತುಗಳಿವೆ, ವ್ಯಕ್ತಿಗಳಿದ್ದಾರೆ. ಒಂದರಂತೆ ಒಂದಿಲ್ಲ. ಒಬ್ಬರಂತೆ ಒಬ್ಬರಿಲ್ಲ, ಪ್ರತಿಯೊಬ್ಬರ ದೇಹ, ಮನ, ಬುದ್ಧ, ಭಾವ ಎಲ್ಲವೂ ಬೇರೆ.- ೧೨ ಏಪ್ರಿ ೨೦೧೪, ೦೪:೫೬
  • ಬದುಕುವ ಕಲೆ: ಈ ಜಗತ್ತಿನಲ್ಲಿ ಬದುಕಿಗಿಂತ ಮಹತ್ವವಾದುದು ಯಾವುದಿದೆ? ಸಮಸ್ತ ಜಗತ್ತು ಇರುವ ನಮ್ ಬದುಕನ್ನು ಸಿಂಗರಿಸುವುದಕ್ಕೆ ಅಲ್ಲವೆ? ನಮ್ಮ ಬದುಕು ಈ ಜಗತ್ತಿನ ಅಮೂಲ್ಯ ಕಲಾ. - ೯ ಏಪ್ರಿಲ್ ೨೦೧೪, ೦೪:೨೮
  • ಸಂತೃಪ್ತ ಜೀವನ: ಒಂದು ದಿನ ದೇವನೇ ಸ್ವತಃ ಗೂ ಇದ್ದಲ್ಲಿಗೆ ಹೋಗಿ ಕೇಳಿದ-‘ಅನೇಕ ಪಕ್ಷಿಗಳಿಗೆ ನಾನು ಒಳ್ಳೆಯ ರೂಪ, ಧ್ವ, ಕಣ್ಣು ಕೊಟ್ಟಿ ಆದರೆ ನಿನಗೆ ಮಾತ್ರ ಹಾಗೆ ಮಾಡಲಿಲ್ಲ. ಇದರಿಂದ ನಿನ್ನ ಬದುಕು ಕಷ್ಟ ಕಾರ್ಪಣ್ಯಗಳಿಂದ ಕೂಡಿರಬಹುದು. - ೧೦ ಏಪ್ರಿಲ್ ೨೦೧೪, ೦೪:೨೯
  • ಕಲಾ: ಮೈಕಲ್ ಎಂಜಲೋ ಇಟಲಿ ದೇಶದ ಜಗತ್ ಪ್ರಸಿದ್ಧ ಕಲಾವಿದ. ಒಂದು ದಿನ ಅವನು ವಿಹಾರಕ್ಕೆ ಹೋದಾಗ ಒಬ್ಬ ಸಿರಿವಂತನ ಮನೆ ಎದುರ ಒಂದು ದೊಡ್ಡ ಬಂಡೆಗಲ್ಲು ಕಾಣಿಸಿತು. - ೧ ಏಪ್ರಿಲ್ ೨೦೧೪, ೦೪:೪೦
  • ಆನಂದದ : ನಮ್ಮ ಮನಸ್ಸು ಬೆಳಗಿನಿಂದ ಸಂಜೆಯವರೆಗೆ, ಹುಟ ಕೊನೆಯವರೆಗೆ ನಿರಂತರ ಚಲಿ ಇರುತ್ತದ. ಅಸಂಖ್ಯ ವಸ್ತುಗಳ, ವ್ಯಕ್ತಿಗಳ ಸಂಗ-ಸಂಪರ್ಕ ಪಡೆಯುತ್ತದೆ. - ೧೫ ಏಪ್ರಿಲ್ ೨೦೧೪, ೦೬:೩೯
  • ಯಾವುದು ನರಕ: ತಾಯಿಯು ಪಂಚಪಕ್ವಾನದ ಅಡಿಗೆ ಮಾಡಿದ್ದಾಳೆ. ತಾಟಿಗೆ ಎಡೆ ಮಾಡಿ ಮಗನನ್ನು ಊಟಕ್ಕೆ ಕರೆದಿದ್ದಾಳೆ. ಹೊರಗಿನಿಂದ ಬಂದು ಕೈಕಾಲು ತೊಳೆಯದೆ ನೇರವಾಗಿ ಅಡಿಗೆ ಮನೆಗೆ ಬಂದು ಊಟಕ್ಕೆ ಕುಳಿತಿದ್ದಾನೆ. - ೧೩ ಏಪ್ರಿಲ್ ೨೦೧೪, ೦೩:೩೮
  • ದಿವ್ಯಕಲಾಕೃತಿ: ಈ ಜಗತ್ತನ್ನು ಯಾರೋ ಮರುಳರು ಮಾಡಿದ್ದಲ್ಲ. ಇದು ದೇವನ ದಿವ್ಯಕಲಾಕೃತಿ. ಮಹಾಕಲಾವಿದ ಮೈಕಲ್ ಎಂಜಲೋರವರೆ ಹೇಳುತ್ತಾರೆ. ‘ಆ ಮಹಾದೇವನೇ ನಿಜವಾದ ಕಲಾವಿದ. - ೧೭ ಏಪ್ರಿಲ್ ೨೦೧೪, ೦೪:೨೧
  • ದುಸ್ಸಂಗ ಒಂದು ಕಸ: ಮಹಾಕವಿ ವ್ಯಾಸಮಹರ್ಷಿಗಳು ಹೇಳುತ್ತಾರೆ ‘ದುಸ್ಸಂಗಃ ಸರ್ವದಾ ತ್ಯಾಜ್ಯ ಏವ’ ನಾವು ದುಸ್ಸಂಗವನ್ನು ಯಾವಾಗಲೂ ತ್ಯಾಗ ಮಾಡಬೇಕು. - ೧೮ ಏಪ್ರಿಲ್ ೨೦೧೪, ೦೪:೫೨
  • ಬದುಕೇ ಬಂಗಾರ: ನಮ್ಮ ಬದುಕನ್ನು ರೂಪಿಸುವ ಸಂಗತಿಗಳು ಒಂದಲ್ಲ, ಎರಡಲ್ಲ ಹತ್ತು ಹಲವು. ಸುತ್ತ ಮುತ್ತಲಿನ ನಿಸ, ಜನ, ವಸ್ತುಗಳು, ಘಟನೆಗಳು ಮೊದಲಾದವುಗಳು ನಮ್ಮ ಬದುಕನ್ನು ರೂಪಿಸುತ್ತವೆ. - ೨ ಏಪ್ರಿಲ್ ೨೦೧೪, ೦೭:೦೨
  • ಸಂಸಾರ ಸಂರಕ್ಷಣೆ: ಅಜಾಮಿಳನು ಪರಿಶುದ್ಧವಾದ ಪವಿತ್ರವಾದ ಜೀವನ ಸಾಗಿಸುತ್ತಿದ್ದ. ಒಂದು ದಿನ ಸ್ನಾನ ಮಾಡಿ ಬರುವಾಗ ಓರ್ವ ನರ್ತಕಿಯ ಮಗಳು ಅವನ ಮೇಲೆ ಕಸವನ್ನು ಅರಿತೋ ಅರಿಯದೆಯೋ ಚಲ್ಲಿ. - ೧೯ ಏಪ್ರಿಲ್ ೨೦೧೪, ೦೬:೫೯
  • ಅಮರವಾಣಿ: ಪ್ರಪಂಚಕ ಬರುವಾಗ ನಾವು ಸ್ವಚ್ಛ ಸುಂದರ ಮನಸ್ಸನ್ ತ. ಅಲ್ಲಿ ಅಹಂಕಾರ-ಮಮಕಾರಗಳ ಬಿರುಗಾಳಿ ಇರಲಿಲ್ಲ. ಕಾಮಕ್ರೋಧದ ಕಸವಿರಲಿಲ್ಲ. - ೨೦ ಏಪ್ರಿಲ್ ೨೦೧೪, ೦೭:೦೧
  • ದ್ವೇಷಾಗ್ನಿ: ಉತ್ತಾನಪಾದ ರಾಜನಿಗೆ ಸುನೀತಿ ಸುರುಚಿ ಎಂದು ಇಬ್ಬರು ರಾಣಿಯರು. ಇಬ್ಬರ ಮೇಲೆಯೂ ರಾಜನಿಗೆ ಒಂದೇ ತೆರನಾದ ಪ್ರೀತಿ. ಇಬ್ಬರಿಗ ಒಂದೊಂದು ಮಗುವ ಆಗಿತ್ತು. - ೨೧ ಏಪ್ರಿಲ್ ೨೦೧೪, ೦೭:೦೧
  • ಪ್ರೇರಣೆ-ಪ್ರೋತ್ಸಾಹ: ವಸ್ತುವಿನ ಬ ಎಲ್ಲರಿಗೂ ತಿಳಿದಿರುತ್ತದೆ ಎಂದು ಹೇಳಲಾಗದು. ಸುಂ ಹೂವನ್ನು ಕವಿಯ ಕೈಗಿತ್ತರೆ, ಅದರ ಮೇಲೆ ಗೀತಾಂಜಲಿಯಂಥ ಒಂ ಅಮರ ಕಾವ್ಯವೇ ರಚನೆಯಾಗುತ್ತದೆ. - ೨೩ ಏಪ್ರಿಲ್ ೨೦೧೪, ೦೪:೦೩
  • ಲೋಕಸೇವೆಯ ಛಲ: ಒಂದು ಆಲದ ಮರದ ಬೀಜವು ರಸ್ತೆಯ ಬದಿಯಲ್ಲಿ ಎಷ್ಟೋದಿನಗಳಿಂದ ಒಂದು ಸಣ್ಣ ಕ ಕೆಳಗೆ ಬಿದ್ದಿತ್ತು. ಒಂದು ದಿನ ಯಾರೋ ಆ ಕಲ್ಲನ್ನು ಎಡವಿದರು. - ೨೪ ಏಪ್ರಿಲ್ ೨೦೧೪, ೦:೦೮
  • ಎಚ್ಚರಿಕೆ ಗಂಟೆ: ಅಲೆಕ್ಸಾಂಡರನು ಶೂರ-ವೀರ, ಸಶಕ್ತ-ಸುಂದರ, ಉತ್ಸಾಹಿತರುಣ. ಮಹಾರಾಜನಾ ಒಂದು ಕನಸು ಕಂಡ. ಸಾರ್ವಭೌಮನಾಗಿ ಜಗತ್ತನ್ನೇ ಆಳುವುದು. - ೨೮ ಏಪ್ರಿಲ್ ೨೦೧೪, ೦೩:೫೯
  • ಜೀವನಯಾತ್ರೆ: ಮಾನವನ ಜೀವನವೆಂದರೆ ನಿರಂತರ ನಡೆಯುವ ಪಯಣ ಅಥವಾ ಯಾತ್ರೆ. ಎಲ್ಲಿಂದಲೋ ಎಲ್ಲಿಗೋ ನಡೆಯುವ ಈ ಪಯಣವು ಎಲ್ಲಿಯೂ ನಿಲ್ಲದು. - ೨೬ ಏಪ್ರಿಲ್ ೨೦೧೪, ೦೪:೨೬
  • ಸತ್ಯಂ ಶಿವಂ ಸುಂದರಂ: ಒಬ್ಬ ರಾಜನು ಆಯುಷ್ ತುಂಬ ಕುಡಿಯುತ್ತಲೇ ಇದ್ದ. ಅವನ ಅರಮನೆಯ ಕೆಳಗೆಲ್ಲ ಬರೀ ಸೆರೆ ಪಾತ್ರೆಗಳೇ ಇದ್ದವು. ಈ ಲೋಕವನ್ನು ಬಿಡುವಾಗ ಆ ರಾಜನೇ ಹ , ಕುಡಿದು ಕುಡಿದು ಯಮರಾಜನ ಸದನಕ್ಕೆ ನಡದೆ’. ಹೀೀಗಾದರೆ ನಮಗೆ ಆ ಮಹ ದಿವ್ಯ ದರ್ಶನ ಆಗುವುದು ಹೇಗೆ ಸಾಧ್ಯ? - ೩೦ ಏಪ್ರಿಲ್ ೨೦೧೪, ೦೪:೨೮
  • ದೇವದರ್ಶನ: ವ್ಯಾಮೋಹವು ಭಯಂಕರವಾದುದು. ಯಾವುದಾದರೂ ಒಂದು ವಸ್ತುವಿನ ಆಕರ್ಷಣೆಗೆ ಒಳಗ ಪ್ರಾಣಹೋದರೂ ಅದನ್ನು ಬಿಡದಿರುವುದೇ ವ್ಯಾಮೋಹ. ಒಂದು ಇಲಿ ಹೊಲದಲ್ಲಿ ವಾಸವಾಗಿತ್ತು. - ೨೯ ಏಪ್ರಿಲ್ ೨೦೧೪, ೦೪
  • ಕಣ್ ಒಂದು ದಡದಲ್ಲಿ ಕಮಲದ ಹೂವುಗಳು ಅರಳಿ ಸುತ್ತೆಲ್ಲ ಸುಗಂಧ ಹರಡಿತ್ತು. ಆ ಹೂವುಗಳ ಮಕರಂದ ಹ ಒಂದು ದುಂಬಿ ದಿ ತಪ್ಪದೇ ಬರ. -೧ ೨೦, ೦೩:೪೪
  • ಯಾ  ?: ಅಲ್ಲಮ ಪ್ರಭುದೇವರು ನಿರಾಭಾರಿಗಳಾಗಿ ದೇಶವನ್ನೆಲ್ಲ ಸ. ತಮ್ಮ ಜ್ಞಾನದ ದೃಷ್ಟಿಯಿಂದ ಜಗತ್ತಿನ ಒಳಹೊರಗನೆಲ್ಲ ಅರಿತು ಬಯ ಬಯಲಾದರು. - ೧೧ ಮೇ ೨೦೧೪, ೦೪:೪೦
  • ಕಟುಕರ ಕರುಳು: ‘ವನವಿಹಾರ’ದ ನಿಮಿತ್ತ ಮಾಡಿಕೊಂಡು ಭೋಜನನ್ನು ವನಕ್ಕೆ ಕರೆದುಕೊಂಡು ಹೋಗಿ ಅವನನ್ನು ಕೊಂದು ಬರಬೇಕೆಂದು ನಾಲ್ಕು ಜನ ಕಟುಕರನ್ನು ಕರೆದು ಹೇಳಿದ. - ೧೩ ಮೇ ೨೦೧೪, ೦:೨೨
  • ಚಂಚಲ ಮನಸ್ಸು ಭೋಜ ಮಹಾರಾಜನು ಚಿಕ್ಕ ಬಾಲಕನಿದ್ದಾಗ ಒಂದು ವಿಚಿತ್ರ ಘಟನೆ ನಡೆಯಿತು. ಭೋಜನ ತಂದೆಯು ಗಂಭೀರ ಕಾಯಿಲೆಯಿಂದ ಮರಣದ ಹಾಸಿಗೆ ಹಿಡಿದ. - ೧೨ ಮೇ ೨೦೧೪, ೦೭:೨೧
  • ಇದ್ದು ಗೆದ್ದವರು: ಈ ಪ್ರಪಂಚ ಅಥವಾ ಸಂಸ ಒಂದು ಪ್ರ, ತು ಹರಿಯುವ ನದಿ. ಇದರಲ್ಲಿ ನಮ್ಮ ಜೀವನವೆಂಬುದು ಒಂದು ಪುಟ್ಟ ನೌಕೆ. ಅದು ಪ್ರಪಂಚ ದಡದಿಂದ ಆ ಪಾರಮಾರ್ಥಿಕ ದಡವನ್ನು ಸುರಕ್ಷಿತವಾಗಿ ತಲುಪಬೇಕು. -೨೩ ಮೇ ೨೦೧೪, ೦೪:೨೩
  • ಲಯವಾಗದವರು ಮಾಂಧಾತಾ ಸ ಮಹಿಪತಿಃ ಕೃತಯುಗಾಲಂಕಾರಭೂತೋ ಗತಃ - ೧೯ ಮೇ ೨೦೧೪, ೦೪:೫೯
  • ನಗುನಗುತಾ ನಲಿ: ಸತ್ಯದರ್ಶನ ಪಡೆದು ಸುಂದರ ಜೀವನ ಸಾಗಿಸು ಕೆಲವು ಅಡತಡೆಗಳಿವೆ. ಅದರಲ್ಲಿ ಮೊದಲನೆಯದೆಂದರೆ ಮಮಕಾರ. ಇದೆಲ್ಲವೂ ನಾನು ಮಾಡಿದ್ದು, ನನ ಆಯಿತು ಎನ್ನುವುದೇ ಮಮಕಾರ. ಈ ಜಗತ್ತಿನ ಒಡೆಯರು ನಾವಲ್ಲ. - ೨೪ ಮೇ ೨೦೧೪, ೦೪:೧೩
  • ನಾಯಿ: ಮನುಷ್ಯನಿಗೆ ಇರುವ ಮಮಕಾರ. ಅಧಿಕಾರದಾಹ ಅಷ್ಟಿಷ್ಟಲ್ಲ. ಏನಾದರೂ ಈ ಪ್ರಪಂಚದ ಮೇಲೆ ಒಡೆತನ ಸಾಧಿಸಲು ನೋಡಿದ. ಅದಕ್ಕಾಗಿ ಕೋಟೆ ಕೊತ್ತಲೆಗಳನ್ನು ಕಟ್ಟಿ ಶಸ್ತ್ರಾಸ್ತ್ರಗಳನ್ನಿಟ್ಟು ರಾಜ್ಯವನ್ನಾಳಿದ. - ೨೬ ಮೇ ೨೦೧೪, ೦೪:೧೦
  • ಅ-ಮಮಕಾರ: ಮಾನವನ ಅಜ್ಞಾನದ ಕತ್ತಲೆ ಕಳೆಯಲೆಂದು ಅನುಪಮ ಜ್ ದೇವರು ಹೇಳಿದ ಒಂದು ವಚನವು ತುಂಬಾ ಮಾರ್ಮಿಕವಾಗಿದೆ. - ೨೮ ಮೇ ೨೦೧೪, ೦೪:೨೦
  • ಯಾವುದು ಗುಣರತ್ನ ? ಇಬ್ಬರು ಆಗರ್ಭ ಸಿರಿವಂತ ಸಹೋದರರು. ಅವರ ತಂದೆಯು ಒಂದು ದೊಡ್ಡಮನೆಯನ್ನು ಕಟ್ಟಿಸಿಕೊಟ್ಟು ದೇವನ . ಈಗ ಸಹೋದರರು ತಂದೆ ಕಟ್ಟಿಸಿದ್ದ ಆ ಮನೆಯನ್ನು ಹಂಚಿಕೊಳ್ಳುವುದಕ್ಕೆ ನ್ಯಾಯಾಲಯದ ಕಟ್ಟೆ ಹತ್ತಿದರು. - ೨೯ ಮೇ ೨೦೧೪, ೦೪:೩೪
  • ಯಾವುದು ಪರಿಪೂರ್ಣ? ಯಾವ ವಸ್ತುವು ಎಲ್ಲ ಕಾಲಗಳಲ್ಲಿ, ಎಲ್ಲ ದೇಶಗಳಲ್ಲಿ ಇರುತ್ತದೆಯೋ ಅದು ಪೂರ್ಣವಸ್ತು. ಯಾವುದು ಒಂದು ದೇಶದಲ್ಲಿ ಇದ್ದು, ಇನ್ನೊಂದು ದೇಶದಲ್ಲಿ ಇರುವುದಿಲ್ಲವೋ ಒಂದು ಕಾಲದಲ್ಲಿದ್ದು, ಇನ್ನೊಂದು ಕಾಲದಲ್ಲಿ ಇರುವುದಿಲ್ಲವೋ ಅದು ಅಪೂರ್ಣ ವಸ್ತು. ಈ ಜಗತ್ತಿನಲ್ಲಿ ಇರುವ ಎಲ್ಲ ವಸ್ತುಗಳು ದೇಶ, ಕಾಲದಿಂದ ಸೀಮಿತವಾಗಿವೆ. - ೩೦ ಮೇ ೨೦೧೪, ೦೬;೩೬
  • ಕ್ಷಣಕ್ಷಣವೂ ಬದಲಾವಣೆ:ಅಪರಿಪೂರ್ಣವಾದ ವಸ್ತುಗಳ ಮತ್ತೊಂದು ಲಕ್ಷಣವೆಂದರೆ ಅವು ಚಲನಶೀಲವಾಗಿವೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಚಲಿಸುತ್ತವೆ. - ೨ ಜೂನ್ ೨೦೧೪, ೦೪:೦೫
  • ಬದುಕಿನ ರೀತಿ: ಯಾವ ನದಿಯೂ ನೇರವಾಗಿ ಹರಿದು ಸಾಗರವನ್ನು ಸೇರುವುದಿಲ್ಲ. ತಗ್ಗು-ದಿನ್ನಿ ಹಳ್ಳ ಕೊಳ್ಳಗಳನ್ನು ದಾಟಿ ಹತ್ತಾರು ಸಲ ದಿಕ್ಕುಗಳನ್ನು ಬದಲಿಸುತ್ತ, ಪಾತ್ರವನ್ನು ಹಿರಿದು-ಕಿರಿದು ಮಾಡಿ ಕೊನೆಗೆ ಸಾಗರ ಸೇರುತ್ತದೆ. - ೪ ಜೂನ್ ೨೦೧೪, ೦೪:
  • ಮರಣ ಗೆದ್ದ ಮಹಾತ್ಮರು: ಯಾರೇ ಇರಲಿ ಎಲ್ಲರ ಬದುಕಿನಲ್ಲಿ ರೋಗ, ಮುಪ್ಪು, ಮರಣ, ಬಡತನ ಇವು ನಾಲ್ಕು ಇದ್ದದ್ದೆ ! ರೋಗ ಬರಬಾರದೆಂದು ಆಸ್ಪತ್ರೆಯಲ್ಲಿದ್ದರೆ ವೈದ್ಯರಿಗೇ ರೋಗ ಬಂದರೆ ಏನು ಮಾಡುವುದು? ಮುಪ್ಪು ಬರಬಾರದೆಂದು ಕೆಲವರು ಮನೆ ಬಿಟ್ಟು ಹೊರಗೆ ಬರುವುದಿಲ್ಲ. - ೫ ಜೂನ್ ೨೦೧೪, ೦೪೪೧
  • ಜೀವನ ಜೋಕಾಲಿ: ಜೀವನದಲ್ಲಿ ಏರು-ಇಳಿವು, ಸುಖ-ದುಃಖ, ಮಾನ-ಅಪಮಾನ, ಸಿರಿತನ-ಬಡತನ ಎಲ್ಲವೂ ಇದ್ದದ್ದೆ. ಏರಿದವರು ಇಳಿಯಲ. ಇಳಿದವರು ಏರಲೇಬೇಕು> - ೩ ಜೂನ್ ೨೦೧೪, ೦೬:೪೦
  • ಮನೆಯ ಮಾಂಗಲ್ಯ: ಈ ಪ್ರ ನಾ ಯಾರೂ ಒಬಾಗಿ ಬದುಕಲಾರೆವು. ಅಂತೆಯೇ ನಮ್ಮ ಹಿರಿಯರು ಹಬ್ಬ-ಹರಿದಿನಗಳಲ್ಲಿ ತಮ್ಮ ಮನೆಯ ಸಿಹಿ-ತಿಂಡಿಗಳನ್ನು ನೆರಮನೆಯವರಿಗೆ ಕೊಟ್ಟರ. - ೧೦ ಜೂನ್ ೨೦೧೪, ೦೬:೫೦
  • ಎಲ್ಲರೂ ಪರಾವಲಂಬಿಗಳೇ:ನಮ್ಮ ಋಷಿಮುನಿಗಳು ‘ಜೀವೇಮಃ ಶರದಃ ಶತಮ್’ ನಾವು ನೂರು ವಸಂತಗಳವರೆಗೆ ನಗು-ನಗುತ ಸಂತಸ ಇರುತ್ತೇವೆಂದು ಹೇಳಿದರು. - ೬ ಜೂನ್ ೨೦೧೪, ೦೬:
  • ಮನೆಯ ಮಾಂಗಲ್ಯ: ಈ ಪ್ರಪಂಚದಲ್ಲಿ ನಾವು ಯಾರೂ ಒಬ್ಬಂಟಿಗರಾಗಿ ಬದುಕಲಾರೆವು. ಅಂತೆಯೇ ನಮ್ಮ ಹಿರಿಯರು ಹಬ್ಬ-ಹರಿದಿನಗಳಲ್ಲಿ ತಮ್ಮ ಮನೆಯ ಸಿಹಿ-ತಿಂಡಿಗಳನ್ನು ನೆರಮನೆಯವರಿಗೆ ಕೊಟ್ಟರು. - ೧೦ ಜೂನ್ ೨೦೧೪, ೦೬:೫೦
  • ಯಾವುದು ಗುಣರತ್ನ ?: ಇಬ್ಬರು ಆಗರ್ಭ ಸಿರಿವಂತ ಸಹೋದರರು. ಅವರ ತಂದೆಯು ಒಂದು ದೊಡ್ಡಮನೆಯನ್ನು ಕಟ್ಟಿಸಿಕೊಟ್ಟು ದೇವನ ಮನೆಗೆ ಹೋಗಿದ್ದ. ಈಗ ಸಹೋದರರು ತಂದೆ ಕಟ್ಟಿಸಿದ್ದ ಆ ಮನೆಯನ್ನು ಹಂಚಿಕೊಳ್ಳುವುದಕ್ಕೆ ನ್ಯಾಯಾಲಯದ ಕಟ್ಟೆ ಹತ್ತಿದರು. - ೨೯ ಮೇ ೨೦೧೪, ೦೪:೩೪
  • ಎಲ್ಲರೂ ಪರಾವಲಂಬಿಗಳೇ: ನಮ್ಮ ಋಷಿಮುನಿಗಳು ‘ಜೀವೇಮಃ ಶರದಃ ಶತಮ್’ ನಾವು ನೂರು ವಸಂತಗಳವರೆಗೆ ನಗು-ನಗುತ ಸಂತಸದಿಂದ ಇರುತ್ತೇವೆಂದು ಹೇಳಿದರು. - ೬ ಜೂನ್ ೨೦೧೪, ೦೬:೪೯
  • ಜೀವನ ಜೋಕಾಲಿ: ಜೀವನದಲ್ಲಿ ಏರು-ಇಳಿವು, ಸುಖ-ದುಃಖ, ಮಾನ-ಅಪಮಾನ, ಸಿರಿತನ-ಬಡತನ ಎಲ್ಲವೂ ಇದ್ದದ್ದೆ. ಏರಿದವರು ಇಳಿಯಲೇಬೇಕು. ಇಳಿದವರು ಏರಲೇಬೇಕು. - ೩ ಜೂನ್ ೨೦೧೪, ೦೬:೪೦
  • ಅಹಂಕಾರ-ಮಮಕಾರ: ಮಾನವನ ಅಜ್ಞಾನದ ಕತ್ತಲೆ ಕಳೆಯಲೆಂದು ಅನುಪಮ ಜ್ಞಾನಿ ಅಲ್ಲಮಪ್ರಭು ದೇವರು ಹೇಳಿದ ಒಂದು ವಚನವು ತುಂಬಾ ಮಾರ್ಮಿಕವಾಗಿದೆ. - ೨೮ ಮೇ ೨೦೧೪, ೦೪:೨೦
  • ನಾಯಿಬಾಳು: ಮನುಷ್ಯನಿಗೆ ಇರುವ ಮಮಕಾರ. ಅಧಿಕಾರದಾಹ ಅಷ್ಟಿಷ್ಟಲ್ಲ. ಏನಾದರೂ ಮಾಡಿ ಈ ಪ್ರಪಂಚದ ಮೇಲೆ ಒಡೆತನ ಸಾಧಿಸಲು ನೋಡಿದ. ಅದಕ್ಕಾಗಿ ಕೋಟೆ ಕೊತ್ತಲೆಗಳನ್ನು ಕಟ್ಟಿ ಶಸ್ತ್ರಾಸ್ತ್ರಗಳನ್ನಿಟ್ಟು ರಾಜ್ಯವನ್ನಾಳಿದ. - ೨೬ ಮೇ ೨೦೧೪, ೦೪:೧೦