ಚಂದ್ರಶೇಖರ್ ಅಜ಼ಾದ್
ಗೋಚರ
- ನಿಮ್ಮ ರಕ್ತವು ಕ್ರಾಂತಿಯ ಕಿಡಿಯಲ್ಲೂ ಕುದಿಯದಿದ್ದರೆ ಅದು ನೀರಿಗೆ ಸಮ. ದೇಶಸೇವೆಗೆ ಮುಡಿಪಾಗಿರದ ನಿಮ್ಮ ಯೌವ್ವನ ವ್ಯರ್ಥ.
- ನಮ್ಮ ಕ್ರಾಂತಿಕಾರಿ ಜೀವನದಲ್ಲಿ ಸುಖ ಎನ್ನುವುದು ಬರಿ ಕನಸು. ನಮಗೆ ಸಿಗುವುದೆಲ್ಲ ಕಷ್ಟ ಕೋಟಲೆಗಳೇ. ನಮ್ಮದು ಹೂವಿನ ಹಾಸಿಗೆಯಲ್ಲ. ಮುಳ್ಳಿನ ಹಾದಿ.ತ್ಯಾಗದ ಹಾದಿ.
- ನಿಮಗಿಂತ ಅನ್ಯರು ಚೆನ್ನಾಗಿ ಕೆಲಸ ಮಾಡಬೇಕು ಎಂದು ಭಾವಿಸಬೇಡಿ. ಪ್ರತಿನಿತ್ಯ ನಿಮ್ಮದೇ ದಾಖಲೆಗಳನ್ನು ಮುರಿಯಿರಿ. ಏಕೆಂದರೆ ಯಶಸ್ಸು ಎಂಬುದು ನಿಮ್ಮ ಜೊತೆ ನೀವೇ ಗುದ್ದಾಡುವುದನ್ನು ಅವಲಂಬಿಸಿದೆ.
- ನನ್ನ ಹೆಸರು ಅಜ಼ಾದ್, ನನ್ನ ತಂದೆಯ ಹೆಸರು ಸ್ವತಂತ್ರ ಮತ್ತು ನನ್ನ ನಿವಾಸ ಜೈಲು.