ಕೈಲಾಸ್ ಸತ್ಯಾರ್ಥಿ

ವಿಕಿಕೋಟ್ದಿಂದ

ಕೈಲಾಸ್ ಸತ್ಯಾರ್ಥಿ (ಕೈಲಾಶ್ ಸತ್ಯಾರ್ಥಿ ಜನನ:೧೧ ಜನವರಿ ೧೯೫೪) ಕಳೆದ ೩೪ ವರ್ಷಗಳಿಂದಲೂ ಮಕ್ಕಳ ಹಕ್ಕುಗಳ ಹೋರಾಟಗಾರರಾಗಿ ದುಡಿಯುತ್ತಿದ್ದಾರೆ.

  • ಈಗ ಆಗಲ್ಲ ಎಂದರೆ ಯಾವಾಗ ಆಗುತ್ತೆ? ನಿಮ್ಮ ಕಡೆ ಮಾಡಲು ಆಗುವುದಿಲ್ಲವೆಂದರೆ ಬೇರೆ ಯಾರ ಬಳಿ ಆಗುತ್ತೆ? ನಾವು ಈ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗುಲಾಮಿತನ ಹೊಡೆದೋಡಿಸಲು ಸಾಧ್ಯ."
  • ಯಾವುದೇ ದೇಶವು ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲ. ಬಾಲ ಕಾರ್ಮಿಕ ಪದ್ದತಿಗೂ ನಿರುದ್ಯೋಗಕ್ಕೂ ನೇರ ಸಂಬಂಧವಿದೆ ಎಂಬುದು ನಮ್ಮ ವಾದ ದೇಶದಲ್ಲಿ 65 ದಶಲಕ್ಷ ಮಂದಿ ನಿರುದ್ಯೋಗಿಗಳಿದ್ದಾರೆ. ಕಾರ್ಖಾನೆಗಳ ಮಾಲೀಕರು ತಂದೆ ತಾಯಿಗಳಿಗಿಂತ ಅವರ ಮಕ್ಕಳನ್ನೇ ಕೆಲಸಕ್ಕೆ ತೆಗೆದುಕೊಳ್ಳಲುಹೆಚ್ಚಾಗಿ ಆಸಕ್ತಿ ತೋರುತ್ತಾರೆ. ಯಾಕೆಂದರೆ ಮಕ್ಕಳಿಗೆ ಕಡಿಮೆ ವೇತನ ನೀಡಿ ಹೆಚ್ಚಿನ ಕೆಲಸ ಮಾಡಿಸಬಹುದು. ಇದರ ಜತೆಗೆ ಮಕ್ಕಳು ಯೂನಿಯನ್ ಗಳನ್ನು ನಿರ್ಮಿಸಿಕೊಳ್ಳುವುದಿಲ್ಲ. ಬಾಲ ಕಾರ್ಮಿಕ ಸಮಸ್ಯೆಯ ಮೂಲವಿರುವುದೇ ಇಲ್ಲಿ."
  • "ಜಗತ್ತಿನಲ್ಲಿ ಮಕ್ಕಳ ಜೀತ ಪದ್ದತಿ ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಇದೊಂದು ಪಿಶಾಚಿಯಷ್ಟೇ ಅಲ್ಲ, ಮಾನವತೆಯ ವಿರುದ್ದ ಅಪರಾಧವೂ ಹೌದು."
  • ನನ್ನ ಪಾಲಿಗೆ ಇದನ್ನು (ಮಕ್ಕಳ ಶೋಷಣೆ) ಒಂದು ಪರೀಕ್ಷೆಯಾಗಿ ನೋಡುತ್ತೇನೆ. ಇದೊಂದು ರೀತಿಯ ನೈತಿಕ ಪರೀಕ್ಷೆ. ಈ ರೀತಿಯ ಪೈಶಾಚಿಕತೆಯ ವಿರುದ್ದ ಎದ್ದು ನಿಲ್ಲಬೇಕಾದರೆ ಈ ಪರೀಕ್ಷೆಯಲ್ಲಿ ಪ್ರತಿಯೊಬ್ಬರೂ ಉತ್ತೀರ್ಣರಾಗಲೇಬೇಕು.kannada.oneindia.com