ಅಹಿಂಸಾತ್ಮಕ ಚಳುವಳಿ

ವಿಕಿಕೋಟ್ದಿಂದ
Jump to navigation Jump to search

ಅಹಿಂಸೆ ಎಂದರೆ ಯಾವುದೇ ರೀತಿಯ ಹಿಂಸೆಯ ಪ್ರಯೋಗವಿಲ್ಲದೆ ಗುರಿಯನ್ನು ಸಾಧಿಸುವ ಒಂದು ತತ್ವ. ಆ ಗುರಿಯು ವೈಯುಕ್ತಿಕ ವಾಗಿರಬಹುದು, ಸಾಮಾಜಿಕ ಬದಲಾವಣೆ ಇರಬಹುದು ಅಥವಾ ಒಂದು ಧೋರಣೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವಿಕೆಯೂ ಇರಬಹುದು. ಸಾಮಾಜಿಕ ಮಟ್ಟದಲ್ಲಿ ದಬ್ಬಾಳಿಕೆಯನ್ನು ವಿರೋಧಿಸಲು ಮೌನಸಮ್ಮತ ಮತ್ತು ಸಶಸ್ತ್ರ ಹೋರಾಟ ಎಂಬ ಎರಡು ವಿಪರೀತ ನಿಲುವುಗಳ ಹೊರತಾಗಿ ಒಂದು ಆಯ್ಕೆಯನ್ನು ಒದಗಿಸುವುದೇ ಇದರ ಗಮನಾರ್ಹ ಕೊಡುಗೆ. ಈ ತತ್ವದ ಪ್ರತಿಪಾದಕರು ವಿಮರ್ಶಾತ್ಮಕ ಚಿಂತನೆಗಳ ಮೂಲಕ ಇತರರನ್ನು ಪ್ರೇರೇಪಿಸುವುದು, ನಿಂದಾರ್ಹ ಧೋರಣೆಗಳ ಬಗ್ಗೆ ತಿಳುವಳಿಕೆ ಮೂಡಿಸುವುದು, ಅಸಹಕಾರ ಚಳುವಳಿ, ಅಹಿಂಸಾತ್ಮಕ ನೇರ ಪ್ರವರ್ತನೆ, ಸಾಮೂಹಿಕ ಮಾಧ್ಯಮಗಳ ಮೂಲಕ ಜನರನ್ನು ನೇರವಾಗಿ ಸಂಪರ್ಕಿಸುವುದು ಮೊದಲಾದ ಬಗೆಬಗೆಯ ವಿಧಾನಗಳನ್ನು ತಮ್ಮ ದಂಡಯಾತ್ರೆಯಲ್ಲಿ ಅಳವಡಿಸಿಕೊಳ್ಳೂತ್ತಾರೆ.