ವಿಷಯಕ್ಕೆ ಹೋಗು

ಅಲ್ಬರ್ಟ್ ಐನ್‍‌ಸ್ಟೀನ್

ವಿಕಿಕೋಟ್ದಿಂದ
  • ಜ್ಞಾನಕ್ಕಿಂತ ಕಲ್ಪನೆ ಮುಖ್ಯ.
  • ಯಶಸ್ವಿ ವ್ಯಕ್ತಿಯಾಗಲು ಪ್ರಯತ್ನಿಸಬೇಡಿ ಮೌಲ್ಯಯುತ ವ್ಯಕ್ತಿಯಾಗಲು ಪ್ರಯತ್ನಿಸಿ.
  • ಸಮಸ್ಯೆ ಸೃಷ್ಟಿಯಾಗಲು ಕಾರಣವಾದ ಮನಸ್ಸಿನಿಂದ ಅದನ್ನು ಬಗೆಹರಿಸಲು ಸಾಧ್ಯವಿಲ್ಲ.
  • ಆಳವಾಗಿ ಹುಡುಕಿದಷ್ಟು ನಾವು ತಿಳಿಯಬೇಕಾದ್ದು ಇನ್ನಷ್ಟು ಸಿಗುತ್ತದೆ.
  • ನಾನು ಅತಿ ಬುದ್ಧಿವಂತನಲ್ಲ ಆದರೆ ನಾನು ಸಮಸ್ಯೆಗಳೊಂದಿಗೆ ಹೆಚ್ಚು ಕಾಲ ಇರುತ್ತೇನೆ.
  • ನನಗೆ ನಿಖರವಾದ ಜ್ನಾನವಿಲ್ಲದ ವಿಷಯಗಳ ಮೇಲೆ ನನ್ನ ಅಭಿಪ್ರಾಯ ತಿಳಿಸಲು ಇಚ್ಚಿಸುವುದಿಲ್ಲ.
  • ಮೊದಲು ನೀವು ಆಟದ ನಿಯಮಗಳನ್ನು ಕಲಿಯಬೇಕು ಮತ್ತು ನಂತರ ನೀವು ಅದನ್ನು ಬೇರೆಯವರಿಗಿಂತ ಉತ್ತಮವಾಗಿ ಆಡಬೇಕು.
  • ಯಾರು ತಮ್ಮ ಕೆಲಸದ ಕಡೆ ತಮ್ಮ ಸಂಪೂರ್ಣ ಶಕ್ತಿ ಮತ್ತು ಆತ್ಮವನ್ನು ಸಮರ್ಪಿಸುತ್ತಾರೋ ಅವರು ನಿಜವಾದ ನಿಪುಣನಾಗಲು ಸಾಧ್ಯ.
  • ನಾವು ದೀರ್ಘವಾಗಿ ಆಲೋಚಿಸಿದರೆ ನಾವು ಪರರಿಗಾಗಿ ಬದುಕುತ್ತಿದ್ದೇವೆ ಎಂದು ಅರಿವಾಗುತ್ತದೆ.
  • ಒಂದು ವಯಸ್ಸಿನ ನಂತರ ಹೆಚ್ಚಿನ ಓದು ನಮ್ಮನ್ನು ಕ್ರಿಯಾತ್ಮಕ ಕತೆಯಿಂದ ದೂರ ಮಾಡುತ್ತದೆ. ಯಾವ ವ್ಯಕ್ತಿ ಬಹಳ ಓದಿ ತನ್ನ ಮೆದುಳನ್ನು ಕಡಿಮೆ ಬಳಸುತ್ತಾನೋ ಅವನು ಸೋಮಾರಿಯಾಗುತ್ತಾನೆ.
  • ಈ ಜಗತ್ತು ನಾಶ ಮಾಡಲು ಪ್ರಯತ್ನಿಸುವ ಜನರಿಂದ ನಾಶವಾಗುವುದಿಲ್ಲ, ಅದನ್ನು ಮೌನವಾಗಿ ನೋಡುತ್ತಾ ಏನನ್ನೂ ಪ್ರತಿಕ್ರಿಯಸದೆ ಕೂರುವ ಜನರಿಂದ ನಾಶವಾಗುತ್ತದೆ.
  • ಏನೋ ತಪ್ಪಾಯಿತು ಅಂತ ತುಂಬಾ ಬೇಸರ ಮಾಡಬೇಡಿ. ಒಬ್ಬ ವ್ಯಕ್ತಿ ತಪ್ಪೇ ಮಾಡಿಲ್ಲ ಎಂದರೆ ಅವರು ಯಾವ ಹೊಸ ಪ್ರಯೋಗಕ್ಕೂ ಕೈ ಹಾಕಿಲ್ಲ ಎಂದು ಅರ್ಥ.
  • ಸ್ರಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನದಲ್ಲಿ ಸಂತೋಷವನ್ನು ಜಾಗ್ರತಗೊಳಿಸುವುದು ಶಿಕ್ಷಕರ ಶ್ರೇಷ್ಠ ಕಲೆ.
  • ಹೊಗಳಿಕೆಯ ಮಾಲಿನ್ಯವನ್ನು ತೊಡೆದು ಹಾಕಲು ಏಕಮಾತ್ರ ಉಪಾಯವೆಂದರೆ ಕೆಲಸ ಮತ್ತು ಇನ್ನಷ್ಟು ಕೆಲಸ.