ಅರ್ಕಿಮಿಡಿಸ್

ವಿಕಿಕೋಟ್ದಿಂದ

ಅರ್ಕಿಮಿಡಿಸ್ - ಗ್ರೀಕ್ ಗಣಿತಜ್ಞ,ತತ್ವಜ್ಞಾನಿ,ಮೇಧಾವಿ ವಿಜ್ಞಾನಿ

ನುಡಿದದ್ದು[ಸಂಪಾದಿಸಿ]

  • ಯುರೇಕಾ
    • ಅರ್ಥ: ಗ್ರೀಕ್ ಭಾಷೆಯಲ್ಲಿ 'ಸಿಕ್ಕಿತು' ಎಂದು ಅರ್ಥ
    • ಸಂದರ್ಭ: ರಾಜನ ಕಿರೀಟದಲ್ಲಿನ ಚಿನ್ನದ ಪ್ರಮಾಣವನ್ನು ಕರಾರುವಕ್ಕಾಗಿ ತಿಳಿಯುವ ಬಗ್ಗೆ ಅರ್ಕಿಮಿಡಿಸ್ ಚಿಂತಿತನಾಗಿದ್ದ. ಹಾಗೆಯೇ ಸ್ನಾನದ ಕೋಣೆಯಲ್ಲಿರುವ ನೀರಿನ ತೊಟ್ಟಿಯಲ್ಲಿ ಮುಳುಗಿದ. ತೊಟ್ಟಿಯಲ್ಲಿದ್ದ ನೀರು ಹೊರಗೆ ಚೆಲ್ಲಿತು. ಇದರಿಂದ ವಸ್ತುವು ತನ್ನ ಗಾತ್ರದಷ್ಟೇ ನೀರನ್ನು ಸ್ಥಾನಪಲ್ಲಟಗೊಳಿಸುವುದು ಎಂದು ಅವನು ಅರಿತನು. ಇದೇ ತತ್ವವನ್ನು ರಾಜನ ಕಿರೀಟದಲ್ಲಿರುವ ಚಿನ್ನವನ್ನು ಅಳೆಯಲು ಬಳಸಬಹುದೆಂಬ ಅರಿವು ಮೂಡಿತು. ಕೂಡಲೇ ತಾನಿರುವ ನಿರ್ವಸ್ತ್ರ ಸ್ಥಿತಿಯನ್ನು ಲೆಕ್ಕಿಸದೆ ಯುರೇಕಾ ಯುರೇಕಾ ಎಂದು ಕೂಗುತ್ತ ಬೀದಿಗಿಳಿದನು


  • ನಿಲ್ಲಲು ಸ್ವಲ್ಪ ಜಾಗ ಹಾಗೂ ಉದ್ದನೆಯ ಕೋಲನ್ನು ಕೊಟ್ಟರೆ ಭೂಮಿಯನ್ನೇ ಸರಿಸುವೆ
    • ಸಂದರ್ಭ: ತನ್ನ ಲಿವರ್ ತತ್ವದ ಬಗ್ಗೆ ಹೇಳುತ್ತಿರುವಾಗ


  • ದೂರ ಸರಿ, ನನ್ನ ಗೆರೆಗಳನ್ನು ಮುಟ್ಟಬೇಡ
    • ಅರ್ಕಿಮಿಡಿಸನ ಕೊನೆಯ ವಾಕ್ಯಗಳು
    • ರೋಮನ್ ಸೈನ್ಯವು ನಗರವನ್ನು ವಶಪಡಿಸಿಕೊಳ್ಳುವಾಗ ಯಾವುದೊ ಲೆಕ್ಕಾಚಾರದಲ್ಲಿ ತೊಡಗಿರುವ ಅರ್ಕಿಮಿಡಿಸನು ತನ್ನ ಬಳಿ ಬಂದ ಸೈನಿಕನಿಗೆ ನುಡಿಯುವ ಮಾತುಗಳಿವು
      • ಈ ಅಪರಾಧಕ್ಕಾಗಿ ಆ ಸೈನಿಕನಿಗೆ ಮರಣದಂಡನೆ ವಿಧಿಸಲಾಯಿತು.