ವಿಷಯಕ್ಕೆ ಹೋಗು

ಅಬ್ದುಲ್ ಕಲಾಮ್

ವಿಕಿಕೋಟ್ದಿಂದ
(ಅಬ್ದುಲ್‌ ಕಲಾಂ ಇಂದ ಪುನರ್ನಿರ್ದೇಶಿತ)
  • ಉತ್ತುಂಗಕ್ಕೇರಲು ಶಕ್ತಿ ಬೇಕು; ಅದು ಎವೆರೆಸ್ಟ್ ಆಗಿರಬಹುದು ಅಥವಾ ವೃತ್ತಿಯಲ್ಲಾಗಿರಬಹುದು.
  • ಆತ್ಮ ಗೌರವವು ತನ್ನನ್ನು ತಿಳಿಯುವುದರೊಂದಿಗೆ ಬರುವುದೆಂದು ನಮಗೆ ತಿಳಿಯುವುದಿಲ್ಲವೇ?
  • ಇಂದಿನ ಬಹುಪಾಲು ವೈಜ್ಞಾನಿಕ ಸಾಹಿತ್ಯವು ಇಂಗ್ಲಿಷ್‌ನಲ್ಲಿರುವುದರಿಂದ ಅದು ಅವಶ್ಯಕತೆಯಾಗಿದೆ. ಇನ್ನೆರಡು ದಶಕಗಳಲ್ಲಿ ನಮ್ಮ ಭಾಷೆಯಲ್ಲಿ ಮೂಲ ವೈಜ್ಞಾನಿಕ ಸಾಹಿತ್ಯವು ಬರುತ್ತದೆಂದು ನನ್ನ ನಂಬಿಕೆ. ಆಗ ನಾವು ಜಪಾನೀಯರಂತೆ ಮುಂದುವರೆಯಬಹುದು.
  • ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ. ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ.
  • ನಿಮಗೆ ಸೂರ್ಯನಂತೆ ಮಿಂಚುವ ಆಸೆಯಿದ್ದರೆ ಮೊದಲು ಸೂರ್ಯನಂತೆ ಉರಿಯುವುದನ್ನು ಕಲಿಯಿರಿ.
  • ನಿಮ್ಮ ಮೊದಲ ವಿಜಯದ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ. ಏಕೆಂದರೆ, ನೀವು ಎರಡನೇಯದರಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟ ಎಂದು ಹೇಳಲು ಹೆಚ್ಚು ತುಟಿಗಳು ಕಾಯುತ್ತಿರುತ್ತದೆ.
  • ಸೋಲೆಂಬ ರೋಗಕ್ಕೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಮದ್ದು. ಇದು ಯಾರಲ್ಲಿ ಇರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.
  • ಒಬ್ಬ ಒಳ್ಳೆಯ ವ್ಯಕ್ತಿಗೆ ಮೋಸ ಮಾಡುವುದು ಎಂದರೆ ಕೈಯಲ್ಲಿರುವ ವಜ್ರವನ್ನು ಎಸೆದು ಕಲ್ಲನ್ನು ಎತ್ತಿಕೊಂಡಂತೆ.
  • ಈ ಸಮಾಜವೇ ಒಂದು ವಿಚಿತ್ರ. ಮಾತನಾಡಿದರೆ ಮಾತಿನಲ್ಲಿರುವ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಮ್ಮನ್ನೇ ತಪ್ಪಾಗಿ ಚಿತ್ರಿಸುತ್ತಾರೆ.
  • ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ. ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇಡಿ, ಯಶಸ್ಸು ನಿಮ್ಮದಾಗುತ್ತದೆ.
  • ಶ್ರೇಷ್ಠ ವ್ಯಕ್ತಿಗಳಿಗೆ ಧರ್ಮವು ಸ್ನೇಹಿತರನ್ನು ಸಂಪಾದಿಸುವ ಮಾರ್ಗವಾಗಿದೆ. ಆದರೆ ಚಿಲ್ಲರೆ ವ್ಯಕ್ತಿಗಳಿಗೆ ಧರ್ಮವು ಕಲಹವನ್ನು ಸೃಷ್ಟಿಸುವ ಅಸ್ತ್ರವಾಗಿದೆ.
  • ಕೇವಲ ಯಶಸ್ಸಿನ ಕತೆಗಳನ್ನೇ ಹೆಚ್ಚು ಓದಬೇಡಿ. ಏಕೆಂದರೆ ಯಶಸ್ಸಿನ ಕತೆಗಳಲ್ಲಿ ನಿಮಗೆ ಸಂದೇಶಗಳಷ್ಟೇ ಸಿಗುತ್ತದೆ. ಸೋಲಿನ ಕತೆಗಳನ್ನು ಓದಿ, ನೀವು ಯಶಸ್ವಿಯಾಗಲು ಉತ್ತಮ ಚಿಂತನೆಗಳು ಕುಡಿಯೊಡೆಯುತ್ತದೆ.
  • ನೀವು ನಿದ್ದೆ ಮಾಡುವಾಗ ಕಾಣುವ ಕನಸು ನಿಜವಾದ ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು.
  • ಕಪ್ಪು ಬಣ್ಣ ಭಾವನಾತ್ಮಕವಾಗಿ ಕೆಟ್ಟದು. ಆದರೆ ಪ್ರತಿಯೊಂದು ಕಪ್ಪುಹಲಗೆಯು ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನವಾಗಿಸುತ್ತದೆ.
  • ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರೂ ನಿಭಾಯಿಸಲು ಸಾಧ್ಯವಿಲ್ಲ.
  • ಗೆದ್ದಾಗ ಅಹಂ ಪಟ್ಟವನು ಉಳಿಯಲಾರ, ಸೋತಾಗ ಕುಸಿದು ಹೋದವನು ಬೆಳೆಯಲಾರ. ಗೆಲುವಿನ ಸಂಭ್ರಮ ನೆತ್ತಿಗೆ ಏರದಿರಲಿ, ಸೋಲಿನ ನೋವು ಮನಸಿಗೆ ತಾಕದಿರಲಿ.
  • ದೊಡ್ಡ ಗುರಿ, ಜ್ಞಾನ ಹೆಚ್ಚಿಸಿಕೊಳ್ಳುವುದು, ಕಠಿಣ ಪರಿಶ್ರಮ ಮತ್ತು ಧೃಢ ನಿಷ್ಠೆ ಇವುಗಳನ್ನು ನೀವು ನಿರಂತರವಾಗಿ ಪಾಲಿಸಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು.
  • ನೊಣಗಳು ಸುಂದರವಾದ ದೇಹವನ್ನು ಬಿಟ್ಟು ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ, ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.
  • ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ ಮನುಷ್ಯನಿಗೆ ಮಾತ್ರ.
  • ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ.
  • ಯಶಸ್ವಿಯಾಗುವ ನನ್ನ ನಿರ್ಣಯವು ಸಾಕಷ್ಟು ಬಲವಾಗಿದ್ದರೆ ವಿಫಲತೆಯು ನನ್ನನ್ನು ಏನು ಮಾಡಲಾಗದು.
  • ಅತಿಯಾದ ಸಂತೋಷವಾದಾಗ ಅಥವಾ ಅತೀವ ದುಃಖವಾದಾಗ ಮಾತ್ರ ಕವನ ಕುಡಿಯೊಡೆಯುತ್ತದೆ.