ಗಾದೆಗಳು
Wikiquote ಇಂದ
ಗಾದೆಗಳು - ಗಾದೆಗಳಿಗೆ ಕರ್ತೃಗಳಿಲ್ಲ. ಬಾಯಿಂದ ಬಾಯಿಗೆ ಹರಡಿದ ಸವಿ ಮಾತುಗಳು ಗಾದೆಗಳಾಗಿ ಹೊರಹೊಮ್ಮಿದವೆಂದು ಹೇಳುತ್ತಾರೆ.
[ಬದಲಾಯಿಸಿ] ವಿಷಯ ಪೋಣಿಕೆ
ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ
ಅ ಇ ಉ ಎ ಒ
ಕ ಚ ಟ ತ ಪ
ಗ ಜ ಡ ದ ಬ
ಯ ರ ಲ ವ
ಸ ಶ ಹ ಳ
ನ ಮ
ಇತರೆ ಗಾದೆಗಳು
ಅಡಿಗೆಮನೆ ಗಾದೆಗಳು
ಮಳೆ ಗಾದೆಗಳು
ಗಾದೆಗಳ ಬಗ್ಗೆ ಇನ್ನೊಂದಿಷ್ಟು Links
[ಬದಲಾಯಿಸಿ] ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ
ದಯವಿಟ್ಟು ವಿಷಯ-ಪೋಣಿಕೆಗೆ ಅನುಗುಣವಾಗಿ ಗಾದೆಗಳನ್ನು ಪಟ್ಟಿ ಮಾಡಿರಿ...
Please try to list the kannada proverbs(kannada gadegalu) as per the Index (ವಿಷಯ-ಪೋಣಿಕೆ)...
ವಿಷಯ-ಪೋಣಿಕೆಗೆ ಹಿಂತಿರುಗಿ/back2index
[ಬದಲಾಯಿಸಿ] ಳ
- ಳೊಳಲೊಟ್ಟೆ ಗಂಡನಿಗೆ ಹಳಸಿದ ಊಟ
[ಬದಲಾಯಿಸಿ] ಅ
- ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ
- ಅಂಗಾಂಗದಲ್ಲಿ ಪಾಪ ಮಡಗಿಕೊಂಡು ಗಂಗೇಲಿ ಮಿಂದು ಬಂದ
- ಅಂಜುತ್ತಾ ಅಳುಕುತ್ತಾ ತಿಂದ ಅಮೃತ ನಂಜು
- ಅಂದು ಬಾ ಅಂದ್ರೆ ಮಿಂದು ಬಂದ
- ಅಂಬಲಿಗೆ ಗತಿಇಲ್ಲದವ ಕಟ್ಟಾಣಿ ರಂಬೆಯ ಬಯಸಿದ
- ಅಕ್ಕ ನನ್ನವಳಾದ್ರೆ ಬಾವ ನನ್ನವನೇನು
- ಅಕ್ಕ ಬರಬೇಕು ಅಕ್ಕಿ ಮುಗೀಬಾರದು
- ಅಕ್ಕನ ಹಗೆ ಬಾವನ ನೆಂಟು
- ಅಕ್ಕರ ಕಲ್ತು ತನ್ನ ಒಕ್ಕಲನ್ನೇ ತಿನ್ನೊದ್ ಕಲ್ತ
- ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
- ಅಕ್ಕಸಾಲಿಗನ ಮಗ ಚಿಮ್ಮಟ ಹಿಡಿಯುತ್ತಲೇ ಹೊನ್ನ ಕದ್ದ
- ಅಕ್ಕಿ ಉಂಡವ ಹಕ್ಕಿ, ಜೋಳ ಉಂಡವ ತೋಳ
- ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
- ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
- ಅಕ್ಕಿಲ್ಲ ಬ್ಯಾಳಿಲ್ಲ ಅಕ್ಕನ್ನ ಕರತರಬೇಕು
- ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
- ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
- ಅಜ್ಜ ಮದುವೆ ಅಂದ್ರೆ ನನಗೋ ಅಂದ
- ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
- ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ
- ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು
- ಅಡವಿಯ ದೊಣ್ಣೆ ಪರದೇಸಿಯ ತಲೆ
- ಅಡೆ ಮಡಕೆಯಲ್ಲ ಇಡೆ ಸಟ್ಟುಗವಲ್ಲ
- ಅಣ್ಣಿಗೇರ‍್ಯಾಗ ಎಣ್ಣೆ ಮೊಣಕಾಲ ಮಟ್ಟ
- ಅತಿ ಆಸೆ ಗತಿಗೇಡು
- ಅತಿ ಸ್ನೇಹ ಗತಿ ಕೇಡು
- ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
- ಅತ್ತೆ ಮಾಡಿದ್ದು ಅಡಕಲಗೂಡಿಗೆ ಸೊಸೆ ಮಾಡಿದ್ದು ಬೆಳಕಿಗೆ
- ಅತ್ತೆಯ ಮನಿಯಾಗ ಮುತ್ತಾಗಿ ಇರಬೇಕು
- ಅತ್ಯಾಶ ಬಹುದುಃಖಾಯ ಅತಿ ಸರ್ವತ್ರ ವರ್ಜಯೇತ್
- ಅಧರಕ್ಕೆ ಕಹಿ ಉದರಕ್ಕೆ ಸಿಹಿ
- ಅನುಭವಿಗೆ ಬೇರೆ ಮತವಿಲ್ಲ
- ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
- ಅನ್ನ ಹಾಕಿದ ಮನೆಗೆ ಕನ್ನ ಹಾಕಿದಂತೆ
- ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
- ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ
- ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ
- ಅಪ್ಪಂಥೋನಿಗೆ ಇಪ್ಪಂತ್ತೊಂದು ಕಾಯಿಲೆ
- ಅಪ್ಪನ ಬಟ್ಟೆಯಾದರು ಚಿಪ್ಪಿಗ ಬಿಡ
- ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿಕೊಣ್ತಾಳೆ
- ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು
- ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
- ಅಯ್ಯೋ ಅಂದರೆ ಅರೆ ವಯಸ್ಸು
- ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ
- ಅರಗಿನಂತೆ ತಾಯಿ, ಮರದಂತೆ ಮಕ್ಕಳು
- ಅರಣೆ (= ಹಾವು ರಾಣಿ) ಕಡಿದರೆ ಭರಣಿ (=ಪಿಂಗಾಣಿ ಮಡಿಕೆ) ಮದ್ದು ಸಾಲದು
- ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ
- ಅರವಲ್ಲದ್ದು (ಧರ್ಮವಲ್ಲದ್ದು) ಮಾಡಿದರೂ ತರವಲ್ಲದ್ದು ಮಾಡಬಾರದು
- ಅರಸನ ಕುದರೆ ಲಾಯದಲ್ಲೆ ಮುಪ್ಪಾಯಿತು
- ಅರಸು ಆದೀಕ (=ಆದಾಯ) ತಿಂದ, ಪರದಾನಿ ಹೂಸು ಕುಡಿದ
- ಅರಸು ಒಲಿದರೆ ಸಿರಿ ದೆಸೆಯಾಯ್ತು
- ಅರಿತು ಮಾಡದ ದಾನ ತೆರೆದು ನೋಡದ ಕಣ್ಣಂತೆ
- ಅರಿತೂ ಮಾಡಿದ ಪಾಪ ವಜ್ರದ ಸೆರೆಯಂತೆ
- ಅರಿತೂ ಮಾಡಿದ ಪಾಪ ವಜ್ರಲೇಪ
- ಅರಿವಿನ ಹಾದಿ ಬೇರೆ
- ಅರುಗೆಟ್ಟ ನಿದ್ದೆ (=ಅರಿವಿಲ್ಲದೆ ಮಲಗಿರುವುದು) ಇರಗೆಟ್ಟು (=ಇರವು ಗೆಟ್ಟು) ಸತ್ತಂತೆ
- ಅರೆಪಾವಿನವರ ಅಬ್ಬರ ಬಹಳ
- ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
- ಅಲಗಿನ ಗಾಯಕ್ಕಿಂತ ಗಲಗಿನ ಗಾಯ ಹೆಚ್ಚು
- ಅಲಾ ಬಲಾ ಪಾಪಿ ತಲೀ ಮ್ಯಾಲೆ
- ಅಲ್ಪರ ಸಂಗ ಅಭಿಮಾನ ಭಂಗ
- ಅಲ್ಲದವನ ಒಡನಾಟ ಮೊಳಕೈಗೆ ಕಲ್ಲು ಬಡಿದಂತೆ
- ಅವರವರ ತಲೆಗೆ ಅವರವರದೇ ಕೈ
- ಅಳಿವುದೇ ಕಾಯ ಉಳಿವುದೇ ಕೀರ್ತಿ
- ಆಗ ಬಾ ಈಗ ಬಾ ಹೋಗಿ ಬಾ ಅನ್ನದೆ ಕೊಡುವ ತ್ಯಾಗವಾಗು
- ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
- ಆಗುವ (ಅಡುವ) ವರೆಗಿದ್ದು ಆರುವ ವರೆಗೆ ಇರಲಾರರೇ
- ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
- ಆಗೋದೆಲ್ಲಾ ಒಳ್ಳೇದಕ್ಕೆ
- ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
- ಆಟ ಕೆಟ್ಟರೆ ದೀವಟಿಗೆಯವನ ಸುತ್ತ
- ಆಡಿ ಉಂಡ ಮೈ ಅಟ್ಟು ಉಂಡೀತೇ?
- ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
- ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
- ಆಡೋಣ ಬಾ ಕೆಡಿಸೋಣ ಬಾ
- ಆಡೋದು ಮಡಿ ಉಂಬೋದು ಮೈಲಿಗೆ
- ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
- ಆನೆ ಬರುವುದಕ್ಕು ಮುನ್ನ ಗಂಟೆ ಸದ್ದು
- ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
- ಆನೆ ಹೋದದ್ದು ದಾರಿ ಹಾವು ಹರಿದದ್ದು ಅಡ್ಡದಾರಿ
- ಆನೆಗೂ ಅಡಿ ತಪ್ಪೀತು
- ಆನೆಯ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ
- ಆನೆಯಂಥದೂ ಮುಗ್ಗರಿಸ್ತದೆ
- ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
- ಆರಿದೋಗರಕ್ಕೆ ಮೊಸರಿಕ್ಕಿ ಕಾಗೆಗೆ ಸೂರೆಕೊಟ್ಟರು
- ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
- ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
- ಆಲಸ್ಯಂ ಅಮೃತಂ ವಿಷಂ
- ಆವು ಕಪ್ಪಾದ್ರೆ ಹಾಲು ಕಪ್ಪೇನು
- ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
- ಆಸೆ ಮಾತು ಕೊಟ್ಟು ಬಾಸೆ ತಪ್ಪಬಾರ‍್ದು
- ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
- ಆಸೆಗೆ ಕೊನೆಯಿಲ್ಲ
- ಆಳ್ ಮೇಲ್ ಆಳ್ ಬಿದ್ದು ಗೋಣು ಬರಿದಾಯ್ತು
- ಆಳಿದ ದೊರೆ ಹುಸಿದರೆ ಅಲ್ಲಿಂದ ಹೇಳದೆ ಹೋಗಬೇಕು
- ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
- ಆಡೋಕಾಗಲ್ಲ,ಅನುಭವಿಸಕ್ಕಾಗಲ್ಲ
- ಆಡಿಕೊಳ್ಳೋರ ಮುಂದೆ ಎಡವಿ ಬಿದ್ದ ಹಾಗೆ
- ಆಡು ಮುಟ್ಟದ ಸೊಪ್ಪಿಲ್ಲ
- ಆಳಾಗಬಲ್ಲವನು ಅರಸಾಗಬಲ್ಲ
- ಆಟಕ್ಕುಂಟು,ಲೆಕ್ಕಕ್ಕಿಲ್ಲ
- ಆದ ಕೆಲಸಕ್ಕೆ ಅತ್ತೆಗಳು ಬಂದಂತೆ
- ಆಗೊದೆಲ್ಲ ವೊಳ್ಳೆದಕ್ಕೆ
- ಆಕಾಶ ನೋಡೊದಕ್ಕೆ ನೂಕುನುಗ್ಗಲೆ ?
- ಆಕಾಶಕ್ಕೆ ಏಣಿ ಹಾಕಿದ ಹಾಗೆ
- ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ.
- ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ,ಆತ ಆಕೇನ ಬಿಟ್ಟು ಆರು ವರ್ಷ ಆಗಿತ್ತಂತೆ.
- ಆನೆ ದಾನ ಮಾಡಿದವನು ಸರಪಣಿಗೆ ಜಗಳಾಡುವನೆ ?
- ಆಪತ್ತಿಗಾದವನೇ ನೆಂಟ
- ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ
- ಆರಕ್ಕೆ ಹೆಚ್ಚಿಲ್ಲ; ಮೂರಕ್ಕೆ ಕಡಿಮೆಯಿಲ್ಲ
- ಆರು ದೋಸೆ ಕೊಟ್ರೆ ಅತ್ತೆ ಕಡೇ,ಮೂರು ದೋಸೆ ಕೊಟ್ರೆ ಮಾವನ ಕಡೆ
- ಆರು ದೋಸೆ ಕೊಟ್ರೆ ಅತ್ತೆ ಕಡೆ, ಮೂರು ದೋಸೆ ಕೊಟ್ರೆ ಸೊಸೆ ಕಡೆ
- ಆಸೆಯೇ ದು:ಖಕ್ಕೆ ಮೂಲ
- ಆತುರಗಾರನಿಗೆ ಬುದ್ಧಿ ಮಟ್ಟ
- ಆತುರಕ್ಕೆ ಅಜ್ಜಿ ಮೈನೆರೆದಳು
- ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ
- ಅಡಿ ಅನ್ನಕ್ಕೆ ಅವಳೇ ಇಲ್ಲೆ ; ಪಿಳ್ಳೆ ಪೇರು ರಾಮಕೃಷ್ನ !
- ಅಡಿಕೆ ಕದ್ದ ಮಾನ ಆನೆ ಕೊಟ್ರೂ ಬರೊಲ್ಲ
- ಅಡುಗೆ ಮಾಡಿದವಳಿಗಿಂತ ಬಡಿಸಿದವಳೇ ಮೇಲು
- ಅಳೋ ... ಮೇಲೆ ಗಳು ಬಿತ್ತು
- ಅಳಿದೂರಿಗೆ ಉಳಿದವನೇ ಗೌಡ
- ಅಳಿಲ ಸೇವೆ, ಮಳಲ ಭಕ್ತಿ
- ಅಳಿಯ ಅಲ್ಲ,ಮಗಳ ಗಂಡ
- ಅಳಿಯ ಮನೆ ತೊಳಿಯ
- ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ
- ಅಂಬಲಿ ಕುಡಿಯುವವನಿಗೆ, ಮೀಸೆ ಹಿಡಿಯುವವನೊಬ್ಬ
- ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
- ಅಂಗೈ ತೋರಿಸಿ ಅವಲಕ್ಷಣ ಅಂತ ಅನ್ನಿಸಿಕೊಂಡರಂತೆ
- ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು
- ಅಂಕೆಯಲ್ಲಿದ್ದ ಹೆಣ್ಣು, ಮಜ್ಜಿಗೆಯಲ್ಲಿದ್ದ ಬೆಣ್ಣೆ ಕೆಡೊಲ್ಲ
- ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ
- ಅಟ್ಟ ಮೇಲೆ ಒಲೆ ಉರಿಯಿತು, ಕೆಟ್ಟ ಮೇಲೆ ಬುದ್ಧಿ ಬಂತು
- ಅಟ್ಟದ ಮೇಲಿಂದ ಬಿದ್ದವನಿಗೆ ದಡಿಗೆ ತಗೊಂಡು ಹೇರಿದರಂತೆ
- ಅಟ್ಟದಿಂದ ಬಿದ್ದವನನ್ನು ದಡಿಗೆ ತೆಗೆದುಕೊಂಡು ಚಚ್ಚಿದರು.
- ಅದ್ನೇ ಉಂಡೇನ್ ಅತ್ತೆಮ್ನೋರೇ,ಕದ ತೆಗೀರಿ ಮಾವ್ನೋರೇ ಅಂದ್ರಂತೆ
- ಅಗ್ಗದ ಆಸೆಗೆ ಗೊಬ್ಬರ ತಗೊಂಡರು
- ಅಗ್ಗದ ಮಾಲು;ಮುಗ್ಗಿದ ಜೋಳ
- ಅಹಂಕಾರಕ್ಕೆ ಉದಾಸೀನವೇ ಮಟ್ಟು.
- ಐದು ಬೆರಳೂ ಒಂದೇ ಸಮ ಇರೋಲ್ಲ
- ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ
- ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡಿದಾರಕ್ಕೆ.
- ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಮಿಂ..ನ ಚಿಂತೆ
- ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೆ ?
- ಅಕ್ಕಸಾಲಿ ಅಕ್ಕನ ಚಿನ್ನಾನೂ ಬಿಡ
- ಅಕ್ಕಿ ಮೇಲೆ ಆಸೆ, ನೆಂಟರ ಮೆಲೆ ಪ್ರೀತಿ
- ಅಲ್ಲುಂಟೆ, ಇಲ್ಲುಂಟೆ, ಕಲ್ಲಲ್ಲುಂಟೆ, ಶಿವದಾನ.
- ಅಲ್ಪ ವಿದ್ಯಾ ಮಹಾಗರ್ವಿ
- ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ
- ಅಲ್ಪರ ಸಂಗ ಅಭಿಮಾನ ಭಂಗ
- ಅಮ್ಮನವರು ಪಟ್ಟಕ್ಕೆ ಬಂದಾಗ,ಅಯ್ಯನವರು ಚಟ್ಟಕ್ಕೇರಿದರು
- ಅನ್ನ ಹಾಕಿದ ಮನೆಗೆ ಕನ್ನ ಹಕಬೇಡ
- ಅನುಕೂಲ ಸಿಂಧು; ಅಭಾವ ವೈರಾಗ್ಯ
- ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ
- ಅಪ್ಪನ್ನೇ ಅಪ್ಪ ಅನ್ನದೋನು,ಚಿಕ್ಕಪ್ಪನ್ನ ಅಪ್ಪಾ ಅಂತ ಕರೀತಾನಾ?
- ಅರವತ್ತಕ್ಕೆ ಅರಳು ಮರಳು
- ಅರ್ಧ ಆದ ಕೆಲಸವನ್ನು ಅರಸನಿಗೂ ತೋರಿಸಬೇಡ
- ಅತಿ ಆಸೆ ಗತಿ ಕೇಡು
- ಅತಿ ಸ್ನೇಹ ಗತಿ ಕೆಡಿಸಿತು
- ಅತಿಯಾದರೆ ಅಮೃತವೂ ವಿಷ
- ಅತ್ತೂ ಕರೆದೂ ಔತಣ ಹೇಳಿಸಿಕೊಂಡರು
- ಅತ್ತೂ ಕರೆದೂ ಔತಣ ಮಾಡಿಸಿಕೊಂಡಂತೆ
- ಅತ್ತ ದರಿ; ಇತ್ತ ಪುಲಿ
- ಅತ್ತೆ ಆಸ್ತೀನ ಅಳಿಯ ದಾನ ಮಾಡಿದ
- ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ
- ಅತ್ತೆ ಒಡೆದ ಪಾತ್ರೆಗೆ ಬೆಲೆಯಿಲ್ಲ
- ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ
- ಅತ್ತು ಹೆದರಿಸೋನೊಬ್ಬ ;ಹೇ.. ಹೆದರಿಸೋನೊಬ್ಬ
- ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ನರಕ
- ಅಯ್ಯೋ ಪಾಪ ಅಂದ್ರೆ ಅರ್ಧ ಆಯುಸ್ಸು
- ಆನೆಗೆ ಚಡ್ಡಿ ಹೊಲಿಸಿದ ಹಾಗೆ
- ಆಡೋದು ಮಡಿ ಉಂಬೋದು ಮೈಲಿಗೆ
- ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
- ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
- ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
- ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
- ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
- ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
- ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
- ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
- ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
- ಆಲಸ್ಯಂ ಅಮೃತಂ ವಿಷಂ
- ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
- ಆನೆಯಂಥದೂ ಮುಗ್ಗರಿಸ್ತದೆ
- ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
- ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
- ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
- ಆಸೆಗೆ ಕೊನೆಯಿಲ್ಲ
- ಆವು ಕಪ್ಪಾದ್ರೆ ಹಾಲು ಕಪ್ಪೇನು
- ಅಡವಿಯ ದೊಣ್ಣೆ ಪರದೇಸಿಯ ತಲೆ
- ಅಡಿಗೆ ಬಿದ್ಫರೂ ಮೀಸೆ ಮೇಲೆ
- ಅಳಿವುದೇ ಕಾಯ ಉಳಿವುದೇ ಕೀರ್ತಿ
- ಅಂದು ಬಾ ಅಂದ್ರೆ ಮಿಂದು ಬಂದ
- ಅಂಗೈ ಹುಣ್ಣಿಗೆ ಕನ್ನಡಿ ಯಾಕೆ
- ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ
- ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು
- ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು
- ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
- ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
- ಅಜ್ಜ! ಮದುವೆ ಅಂದ್ರೆ ನನಗೋ ಅಂದ
- ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
- ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ
- ಅಕ್ಕ ಬರಬೇಕು ಅಕ್ಕಿ ಮುಗೀಬಾರದು
- ಅಕ್ಕ ನನ್ನವಳಾದ್ರೆ ಬಾವ ನನ್ನವನೇನು
- ಅಕ್ಕ ಸತ್ತರೆ ಅಮಾಸೆ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು
- ಅಕ್ಕನ ಹಗೆ ಬಾವನ ನೆಂಟು
- ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
- ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
- ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
- ಅಲ್ಪರ ಸಂಗ ಅಭಿಮಾನ ಭಂಗ
- ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
- ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
- ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
- ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ
- ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ
- ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿಕೊಣ್ತಾಳೆ
- ಅರಗಿನಂತೆ ತಾಯಿ, ಮರದಂತೆ ಮಕ್ಕಳು
- ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ
- ಅರಸನ ಕುದರೆ ಲಾಯದಲ್ಲೆ ಮುಪ್ಪಾಯಿತು
- ಅರಸು ಆದೀಕ (=ಆದಾಯ) ತಿಂದ, ಪರದಾನಿ ಹೂಸು ಕುಡಿದ
- ಅರೆಪಾವಿನವರ ಅಬ್ಬರ ಬಹಳ
- ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
- ಅತಿ ಆಸೆ ಗತಿಗೇಡು
- ಅತಿ ಸ್ನೇಹ ಗತಿ ಕೇಡು
- ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
- ಅತ್ಯಾಶ ಬಹುದುಃಖಾಯ ಅತಿ ಸರ್ವತ್ರ ವರ್ಜಯೇತ್
- ಅವರವರ ತಲೆಗೆ ಅವರವರದೇ ಕೈ
- ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ
[ಬದಲಾಯಿಸಿ] ಇ
- ಇಂಬರಿತು ಕೊಡುವಳೆ ರಂಭೆ
- ಇಕ್ಕಟ್ಟಾದರೂ ತನ್ನ ಗುಡಿಲೇ ಚಂದ
- ಇಕ್ಕಲಾರದ ಕೈ ಎಂಜಲು
- ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಕ್ಕು
- ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ
- ಇಚ್ಚೆಯ ಅರಿತು ಕೊಟ್ಟ ನುಚ್ಚೊಂದು ಮಾಣಿಕ್ಯ
- ಇಟ್ಟ ವಿಭೂತಿ ಪಟ್ಟದಂತೆ ಇಟ್ಟ ವಿಭೂತಿ ಅಳಿದರೆ ಚಟ್ಟ ಹತ್ತಿದಂತೆ
- ಇಟ್ಟ ಶಾಪ ಕೊಟ್ಟವನಿಗೆ ತಟ್ಟೀತು
- ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ
- ಇಡೀ ಮುಳುಗಿದರೂ ಮೂಗು ಮೇಲೆ
- ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತುಕೊಂಡ
- ಇದ್ದ ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
- ಇದ್ದ ಕಾಲದಲ್ಲಿ ಅಟ್ಟುಣ್ಣ ಬೇಕು
- ಇದ್ದ ಮಕ್ಕಳೇ ಎಣ್ಣೆ ಬೆಣ್ಣೆ ಕಾಣದಿರುವಾಗ ಮತ್ತೊಂದು ಕೊಡೋ ದೇವರೇ ಅಂದಂತೆ
- ಇದ್ದದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು
- ಇದ್ದದ್ದು ಹೋಯಿತು ಮದ್ದಿನ ಗುಣದಿಂದ
- ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ
- ಇದ್ದವರು ಇದ್ದಹಾಗೆ ಸಿದ್ಧಾ ದೇವಿಗೆ ಸಿಡಿಲು ಬಡೀತು
- ಇದ್ದುದ ಉಣ್ಣದವನ ಬಾಯಾಗೆ ಕಡೆಗೆ ಮಣ್ಣು ಬಿತ್ತು
- ಇದ್ದೂ ಉಣ್ಣದವನ ಬಾಯಲ್ಲಿ ಕಡೆಗೆ ಮಣ್ಣು ಬಿತ್ತು
- ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ
- ಇಮ್ಮನದಿಂದ ಸುಮ್ಮನೆ ಕೆಟ್ಟೆ (ಕೇಡು)
- ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡ ಬಾರದು
- ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ
- ಇಲಿಯಾಗಿ ನೂರುದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು
- ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು
- ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು
- ಇಲ್ಲು ಪೋಗಂಡ ಅಲ್ಲು ಪೋಗಂಡ
- ಈರಣ್ಣನ ಮುಂದೆ ಬಸ್ಸಣ್ಣ ಕುಂತಂತೆ
- ಇಡಿಯ ಮುಳುಗಿದವನಿಗೆ ಚಳಿಯೇನು?ಮಳೆಯೇನು?
- ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ,ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು
- ಇಬ್ಬರ ಜಗಳ ಮೂರನೆಯವನಿಗೆ ಲಾಭ
- ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ?
- ಇದ್ದದ್ದನ್ನು ಇದ್ದಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ
- ಇದ್ದದ್ದು ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ದನಂತೆ
- ಇಲಿ ಬಂತು ಎಂದರೆ ಹುಲಿ ಬಂತು ಎಂದರು
- ಇರಲಾರದೆ ಇರುವೆ ಬಿಟ್ಟುಕೊಂಡು ಕಿರುಗೂರಿಗೆ ಹೋದರಂತೆ ಕಣಿ ಕೇಳುವುದಕ್ಕೆ
- ಇರುಳು ಕಂಡ ಭಾವೀಲಿ ಹಗಲು ಬಿದ್ದರು
- ಇರುವೆಗೆ ಇರುವೆ ಮೈ ಭಾರ,ಆನೆಗೆ ಆನೆ ಮೈ ಭಾರ
- ಇತ್ತತ್ತ ಬಾ ಅಂದ್ರೆ ಇದ್ದ ಮನೆ ಕಿತ್ಕೊಂಡರು
- ಇಡೀ ಮುಳುಗಿದರೂ ಮೂಗು ಮೇಲೆ
- ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ
- ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ
- ಇದ್ದ ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
- ಇದ್ದದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು
- ಇದ್ದದ್ದು ಹೋಯಿತು ಮದ್ದಿನ ಗುಣದಿಂದ
- ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ
- ಇದ್ದವರು ಇದ್ದಹಾಗೆ ಸಿದ್ಧಾ ದೇವಿಗೆ ಸಿಡಿಲು ಬಡೀತು
- ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ
- ಇಕ್ಕಲಾರದ ಕೈ ಎಂಜಲು
- ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಕ್ಕು
- ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡ ಬಾರದು
- ಇಲಿಯಾಗಿ ನೂರುದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು
- ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ
- ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು
- ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತುಕೊಂಡ
- ಈಚಲ ಮರದ ಕೆಲಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ
- ಈಸಿ ನೋಡು , ಇದ್ದು ಜೈಸಿ ನೋಡು
[ಬದಲಾಯಿಸಿ] ಉ
- ಉಂಡ ಮನೆ ಜಂತೆ ಎಣಿಸಬಾರದು
- ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ
- ಉಂಬಾಗ ಉಡುವಾಗ ಊರೆಲ್ಲ ನೆಂಟರು
- ಉಂಬುವ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು
- ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ
- ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
- ಉಟ್ಟು ಉಡಲಾರ ಕೊಟ್ಟು ಸೈರಿಸಲಾರ
- ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
- ಉಣವಲ್ಲ ಉಡವಲ್ಲದವನ ಒಡವೆ ಕಂಡವರ ಪಾಲಾಯ್ತು
- ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
- ಉತ್ತಮನು ಎತ್ತ ಹೋದರೂ ಶುಭವೇ
- ಉತ್ತುಬಿತ್ತಿದ ಭತ್ತವಾದರೂ ಮಳೆಯಿಲ್ಲದೆ ಮೊಳೆಯದು
- ಉದ್ಯೋಗವೇ ಗಂಡಸಿಗೆ ಲಕ್ಷಣ
- ಉಪಕಾರಕ್ಕೋಗಿ ಉಪದ್ರ ಬಂತು
- ಉಪಾಸ ಇದ್ರೂ ಉಪದ್ರ ಇರಬಾರ‍್ದು
- ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
- ಉಪ್ಪು ತಿಂದ ಮ್ಯಾಲೆ ನೀರ ಕುಡಿಯಲೇಬೇಕು
- ಉರಗಕ್ಕೆ ಹಾಲೆರೆದರೆ ಅದು ತನ್ನ ಗರಳ್ವ ಬಿಡಬಲ್ಲುದೇ
- ಉರವಣಿಸಿ ಬರೋ ದುಃಖಕ್ಕೆ ಪರಿಣಾಮ ವೈರಿ
- ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
- ಊಡದ ಆವಿಗೆ ಉಣ್ಣದ ಕರುವ ಬಿಟ್ಟಂತೆ
- ಊರಿಗಾಗದ ಗೌಡ, ಮೇಲೆರಗುವ ಗಿಡುಗ
- ಊರಿಗೆ ದಾರೀಯ ಯಾರು ತೋರಿದರೇನು
- ಊರು ದೂರಾಯಿತು ಕಾಡು ಹತ್ತರಾಯಿತು
- ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
- ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು
- ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
- ಊಟ ತನ್ನಿಚ್ಚೆ,ನೋಟ ಪರರಿಚ್ಚೆ
- ಊಟಕ್ಕಿಲ್ಲದ ಉಪ್ಪಿನಕಾಯಿ ..ಕ್ಕೆ ಸಮಾನ
- ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ
- ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯತೆ
- ಊರಿಗೆ ಬಂದವಳು ನೀರಿಗೆ ಬಾರದೇ ಇರುವಳೇ?
- ಊರಿಗೆ ಉಪಕಾರಿ, ಮನೆಗೆ ಮಾರಿ
- ಊರಿಗೆಲ್ಲಾ ಒಬ್ಬಳೇ ಪದ್ಮಾವತಿ
- ಊರಿಗೊಂದು ದಾರಿಯಾದ್ರೆ,ಎಡವಟ್ಟಂಗೆ ಅವನದ್ದೇ ದಾರಿ
- ಊರು ಅಂದ ಮೇಲೆ ಹೊಲಗೇರಿ ಇಲ್ಲದೆ ಇರುತ್ತದೆಯೇ?
- ಊರು ಹೋಗು ಅನ್ನುತ್ತೆ; ಕಾಡು ಬಾ ಅನ್ನುತ್ತೆ
- ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
- ಊರು ಸುಟ್ಟರೂ ಹನುಮಂತರಾಯ ಹೊರಗೆ
- ಉಚ್ಚೆ ಕುಡಿದರೂ ತನ್ನಿಚ್ಚೇಲಿರಬೇಕು
- ಉಂಡೂ ಹೋದ; ಕೊಂಡೂ ಹೋದ
- ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿಗೆ
- ಉಣ್ಣೋಕಿಲ್ಲದಿದ್ದರೂ ಸಣ್ಣಕ್ಕಿ ಅನ್ನ ತಿಂದರು ; ಉಡೋಕಿಲ್ಲದಿದ್ದರೂ ಪಟ್ಟೆ ಸೀರೆ ಉಟ್ಟರು
- ಉಣ್ಣು ಬಾ ಅಂದ್ರೆ,ಇರಿ ಬಾ ಅಂದ್ರಂತೆ
- ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ
- ಉಚ್ಚೆ ಕುಡಿದರೂ ತನ್ನಿಚ್ಚೇಲಿರಬೇಕು
- ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
- ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೆಕು
- ಉಪ್ಪು ತಿಂದ ಮನೆಗೆ ಎರಡು ಬಗೆಯ ಬಂದ
- ಉಪ್ಪು ತಿಂದವನು ನೀರು ಕುಡಿಯಲೇ ಬೇಕು
- ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ
- ಉರಿಯೋ ಗಾಯಕ್ಕೆ ಉಪ್ಪು ಸವರಿದಂತೆ
- ಉಸ್ ಎಂದರೆ ಉಸಳಿ ಬೇಡಿದ್ದನಂತೆ
- ಉತ್ತರನ ಪೌರುಷ ಒಲೆ ಮುಂದೆ;ನಿನ್ನ ಪೌರುಷ ನನ್ನ ಮುಂದೆ
- ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
- ಉಂಡ ಮನೆ ಜಂತೆ ಎಣಿಸಬಾರದು
- ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ
- ಉಂಬಾಗ ಉಡುವಾಗ ಊರೆಲ್ಲ ನೆಂಟರು
- ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ
- ಉದ್ಯೋಗವೇ ಗಂಡಸಿಗೆ ಲಕ್ಷಣ
- ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
- ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
- ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
- ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
- ಉತ್ತಮನು ಎತ್ತ ಹೋದರೂ ಶುಭವೇ
- ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು
- ಊರಿಗಾಗದ ಗೌಡ, ಮೇಲೆರಗುವ ಗಿಡುಗ
- ಊರಿಗೆ ಬಂದ ನೀರೆ ನೀರಿಗೆ ಬಾರದಿರುತ್ತಾಳೆಯೇ?
- ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
- ಊರು ದೂರಾಯಿತು ಕಾಡು ಹತ್ತರಾಯಿತು
[ಬದಲಾಯಿಸಿ] ಎ
- ಎಂಜಲ ತಿಂದರೂ ಅಂಜದೆ ತಿನ್ನು
- ಎಂಟು ವರ್ಷಕ್ಕೆ ನನ್ನ ಮಗ ದಂಟಾದ
- ಎಂಟು ಹೊನ್ನು ಘನವಾದ ನಂಟು ತಂತು
- ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ
- ಎಟ್ಟ್ (ಹಟಮಾರಿ) ಗಂಡಗೆ ಖೊಟ್ಟಿ ಹೆಂಡತಿ
- ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು
- ಎಡವಿದ ಕಾಲು ಎಡವುದು ಹೆಚ್ಚು
- ಎತ್ತ ಹೋದರೂ ಬಿಡದು ಒತ್ತಿ ಕಾಡುವ ವಿಧಿ
- ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ
- ಎತ್ತು ಮಾರಿದವಗೆ ಹಗ್ಗದ ಆಸೆಯೇ
- ಎದ್ದವನು ಗೆದ್ದಾನು
- ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ
- ಎರಡೂ ಕೈ ತಟ್ಟಿದರೆ ಸದ್ದು
- ಎರವಿನವರು ಎರವು ಕಸಗೊಂಡರೆ ಕೆರವಿನಂತಾಯಿತು ಮೋರೆ
- ಎಲ್ಲಮ್ಮನ ಗುಡ್ಡದಾಗ ಮುಲ್ಲಾಂದೇನು
- ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
- ಎಲ್ಲರು ಆಸೆ ಬಿಟ್ಟರೆ ಇಲ್ಲಿಯೇ ಕೈಲಾಸ, ಎಲ್ಲವ ಬಯಸಿ ಭ್ರಮಿಸಿದರೆ ಇಲ್ಲಿಯೇ ನರಕ
- ಎಲ್ಲರೂ ಪಾಲಕೀಲಿ ಕೂತರೆ ಹೊರೋರು ಯಾರು
- ಎಲ್ಲವೂ ತಾನಗ ಬಲ್ಲರೆ ಅದುವೇ ಯೋಗ
- ಎಲ್ಲಾ ಬಣ್ಣ ಮಸಿ ನುಂಗಿತು
- ಎಲ್ಲಾ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
- ಏನಾದರೇನು ತಾನು ತಾನಾಗದ ವರೆಗೆ
- ಏನೂ ಇಲ್ಲದವಗೆ ಭಯವಿಲ್ಲ
- ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು
- ಏರಿದವ ಇಳಿದಾನು
- ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ?
- ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ
- ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು
- ಎದ್ದೋಗೋ ಮಾತು ಬಿದ್ದೋಗಲಿ
- ಎದ್ದರೆ ಆಳಲ್ಲ
- ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ
- ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಮಂದಿ ಅಂದನಂತೆ
- ಎಲ್ಲಾ ಜಾಣ,ತುಸಾ ಕೋಣ.
- ಎಲ್ಲಾ ಜಾಣ; ತುಸ ಕೋಣ
- ಎಲ್ಲಾರ ಮನೇ ದೋಸೇನೂ ತೂತು
- ಎಲ್ಲರ ಮನೆ ದೋಸೇನೂ ತೂತೇ.
- ಎಲ್ಲರ ಮನೆಯ ದೋಸೆಯೂ ತೂತೆ !
- ಎರಡೂ ಕೈ ಸೇರಿದರೆ ಚಪ್ಪಾಳೆ
- ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು
- ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಎಳೆದರಂತೆ
- ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
- ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಅಂದರಂತೆ
- ಎತ್ತು ಹೊರಬಲ್ಲ ಭಾರವನ್ನು ಕರು ಹೊರಬಲ್ಲುದೆ ?
- ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು
- ಎಡವಿದ ಕಾಲು ಎಡವುದು ಹೆಚ್ಚು
- ಎಂಟು ವರ್ಷಕ್ಕೆ ನನ್ನ ಮಗ ದಂಟಾದ
- ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ
- ಎಲ್ಲಾ ಬಣ್ಣ ಮಸಿ ನುಂಗಿತು
- ಎಲ್ಲರೂ ಪಾಲಕೀಲಿ ಕೂತರೆ ಹೊರೋರು ಯಾರು
- ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
- ಎರಡೂ ಕೈ ತಟ್ಟಿದರೆ ಸದ್ದು
- ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ
- ಎತ್ತೂ ಕೋಣಕ್ಕೆ ಎರಡು ಕೋಡು, ನಮ್ಮ ಅಯ್ಯಂಗಾರ್ಗೆ ಮೂರು ಕೋಡು
- ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ
- ಏತಿ ಅಂದರೆ ಪ್ರೇತಿ
- ಏತಿ ಅಂದರೆ ಪ್ರೇತಿ ಅಂದಂತೆ
- ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ?
- ಏರಿದವ ಇಳಿದಾನು
[ಬದಲಾಯಿಸಿ] ಒ
- ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ
- ಒಂದರ ಮೊದಲೊಳಗೆ ಬಂದಿದೆ ಜಗವೆಲ್ಲ
- ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ
- ಒಂದು ದುಡ್ಡು ಕೊಡುವೆ ಹಾಡು ದಾಸಯ್ಯ ಎರಡು ದುಡ್ಡು ಕೊಡುವೆ ಬಿಡು ದಾಸಯ್ಯ
- ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವ ಎತ್ತುಕೊಂಡು ಹೋಗಿ
- ಒಂದೊಂದು ಕಾಲಕ್ಕೆ ಒಂದೊಂದು ಪರಿ
- ಒಂದೊಂದು ಹನಿ ಬಿದ್ದು ನಿಂತಲ್ಲಿ ಮಡುವಾಯ್ತು
- ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು
- ಒಡೆದ ಹಾಲು ಹೆಪ್ಪಿಗೆ ಬಂದೀತೇ
- ಒಪ್ಪದಾ ಮಾತಾಡಿ ಕೋಪಕ್ಕೆ ತುತ್ತಾದ
- ಒಪ್ಪವಿಲ್ಲದವಳ ನಗೆ ನುಡಿ ನೋಟ ಎಂದೂ ಸಪ್ಪಗೆ
- ಒಪ್ಪೊತ್ತು ಕೂಳು ತಪ್ಪಿ ಕಣ್ಣು ಕಾಣಾಕ್ಕಿಲ್ಲ ಕಿವಿ ಕೇಳಾಕ್ಕಿಲ್ಲ
- ಒಲುಮೆಗೆ ನೋಟಬೇಟವೇ ಮೊದಲು
- ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು
- ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
- ಒಳ್ಳಿಹ ಬಳ್ಳಿ ಕಳ್ಳಿಯ ಹಬ್ಬಿತು
- ಒಳ್ಳೇ ರಸವಳ್ಳಿ ಕಳ್ಳೀಗಿಡವನ್ನ ಹಬ್ಬಿತು
- ಒಳ್ಳೇರ ಒಡನಿದ್ದು ಕಳ್ಳ ಒಳ್ಳೇನಾದ
- ಒಳ್ಳೊಳ್ಳೆಯವರು ಉಳ್ಳಾಡುವಾಗ ಗುಳ್ಳವ್ವ ಪಲ್ಲಕ್ಕಿ ಬೇಡಿದಳಂತೆ
- ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ
- ಓದಿ ಓದಿ ಮರುಳಾದ ಕೂಚು ಭಟ್ಟ
- ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ, ಓದಿದರ ಅರಿವು ಮೇದ ಕಬ್ಬಿನ ರಸ
- ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ
- ಓಡಿ ಹೋಗೋ ಬಡ್ಡಿ ಹಾಲು ಹೆಪ್ಪಿಟ್ಟಾಳೆ?
- ಓದಿ ಓದಿ ಮರುಳಾದ ಕೂಚು ಭಟ್ಟ; ಓದದೆ ಅನ್ನ ಕೊಟ್ಟ ನಮ್ಮ ರೈತ
- ಓದಿ ಬರೆಯೋ ಕಾಲದಲ್ಲಿ ಆಡಿ ಮಣ್ಣು ಹುಯ್ಕೊಂಡರು
- ಓದುವಾಗ ಓದು; ಆಡುವಾಗ ಆಡು
- ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು
- ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ
- ಒಂದಕ್ಕೆರಡು ದಂಡ,ಹೆಂಡಕ್ಕೆ ರಾಗಿ ದಂಡ
- ಒಂದು ಬಿಟ್ಟು ಇನ್ನೊಂದು ಕಟ್ಕೊಂಡ್ರಂತೆ
- ಒಂದು ಹೊತ್ತು ತಿನ್ನೋವ್ನು ಯೋಗಿ, ಎರಡು ಹೊತ್ತು ತಿನ್ನೋವ್ನು ಭೋಗಿ, ಮೂರು ಹೊತ್ತು ತಿನ್ನೋವ್ನು ರೋಗಿ, ನಾಕು ಹೊತ್ತು ತಿನ್ನೋವ್ನ ಎತ್ಕೊಂಡು ಹೋಗಿ
- ಒಂದು ಕಣ್ಣಿಗೆ ಬೆಣ್ಣೆ; ಮತ್ತೊಂದು ಕಣ್ಣಿಗೆ ಸುಣ್ಣ
- ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ
- ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣು ಮುಚ್ಚಿಕೊಂಡು ನಡಿ
- ಒಲಿದರೆ ನಾರಿ ಮುನಿದರೆ ಮಾರಿ
- ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು
- ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
- ಒನಕೆ ಮುಂಡು ಚಿಗುರಿದಂತೆ
- ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ
- ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವ ಎತ್ತುಕೊಂಡು ಹೋಗಿ
- ಒಂದು ಕಣ್ಣೀಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ
- ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು
- ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು
- ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
- ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ
- ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ
- ಓದಿ ಓದಿ ಮರುಳಾದ ಕೂಚು ಭಟ್ಟ
[ಬದಲಾಯಿಸಿ] ಕ
- ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ
- ಕಂಗಾಲಾದರೂ ಹಂಗಾಳಾಗಬಾರದು
- ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯಮ, ಕಾಣದ್ದು ಕಂಡೆ ಅಧಮ
- ಕಂಡವರ ಕಂಡು ಕೈಕೊಂಡ ಕೆಲಸ ಕೆಂಡವಾಯ್ತು
- ಕಂಡವರ ಕಂಡು ಕೈಕೊಂಡ ಧರ್ಮ ದಂಗು ಬಡಿಸಿತು
- ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
- ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು
- ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
- ಕಡಲಲ್ಲಿ ಪುಟಿದ ತೆರೆ ಕಡಲಲ್ಲೇ ಕರಗಿ ಹೋಯ್ತು
- ಕಡು ಕೋಪ ಬಂದಾಗ ತಡಕೊಂಡವನೇ ಜಾಣ
- ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ
- ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
- ಕಣ್ಣಿಗೆ ಒಪ್ಪವಿಲ್ಲದ ಹೆಣ್ಣು ಸಪ್ಪಗೆ ಕಂಡಳು
- ಕಣ್ಣೆರಡಾದರೂ ನೋಟ ಒಂದೇ
- ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು
- ಕತ್ತಿ ವೈರಿ ಕೈಯಲ್ ಕೊಟ್ಟು ಬೆನ್ನ ಮಾಡಿ ನಿಂತನಂತೆ
- ಕನಿಗೇಡಿಗೆ(ಸ್ವಾರ್ಥಿಗೆ) ಗತಿ ಇಲ್ಲ
- ಕಪ್ಪರ ತಿಪ್ಪೇಲಿಟ್ಟರೆ ತನ್ನ ವಾಸನೆ ಬಿಟ್ಟೀತೇ
- ಕಬ್ಬು ಡೊಂಕಾದ್ರೆ ಸವಿ ಡೊಂಕೇ
- ಕಯ್ಯಾರೆ ಮಾಡುವ ಧರ್ಮ ಲೇಸು
- ಕರಣಗಳ ತಡೆದು ನಿಲಬಾರದು
- ಕರುಬಿದವರ ಮನೆ ಬರಿಮನೆ
- ಕರ್ಮ ಕಳೆಯುವವರೆಗೆ ಮರ್ಮದಲ್ಲಿರು
- ಕಲ್ತ ಕೈ ಕದ್ದಲ್ಲದೆ ಬಿಡದು
- ಕಲ್ಲ ನಾಗರ ಕಂದರೆ ಹಾಲೆರೆವರು ದಿಟ ನಾಗರ ಕಂಡರೆ ಕೊಲ್ಲೆಂಬರು
- ಕಲ್ಲಿನಲ್ಲಿ ಕಳೆಯ ನಿಲ್ಲಿಸಿದ ಗುರುವಿನ ಸೊಲ್ಲಿನಲ್ಲೇ ದೈವ
- ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ
- ಕಳ್ಳನ ಕಾವಲಿಟ್ಟ ಹಾಗೆ
- ಕಳ್ಳನ ಕೈಯಲ್ಲಿ ಕೀಲಿಕೈ ಕೊಟ್ಟಂತೆ
- ಕಳ್ಳನ ನಂಬಿದರೂ ಕುಳ್ಳನ್ನ ನಂಬಬೇಡ
- ಕಳ್ಳನ ಮನಸ್ಸು ಹುಳ್ಳಗೆ
- ಕಳ್ಳನ ಹೆಜ್ಜೆ ಕಳ್ಳನೇ ಬಲ್ಲ
- ಕಾಡಿಗೆ ಗಣ್ಣ ಚೆಲುವೆ ಮನೆಗೆ ಕೇಡು ತಂದಳು
- ಕಾಮಾಲೆ ಕಣ್ಣೊನಿಗೆ ಕಂಡಿದ್ದೆಲ್ಲ ಹಳದಿ ನೇ
- ಕಾಯ ಕಮಲವೇ ಸೆಜ್ಜೆ ಜೀವ ರತುನವೇ ಜ್ಯೋತಿ
- ಕಾರ್ಯವಾಸಿ ಕತ್ತೆ ಕಾಲು ಕಟ್ಟು
- ಕಾಲ ತಪ್ಪಿದ ಬಳಿಕ ನೂರು ಮಾಡಿದರು ಹಾಳು
- ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು
- ಕಾಲಿಗೆ ಬಿದ್ದು ಕಾಲುಂಗರ ಉಚ್ಚಿಕೊಂಡರಂತೆ
- ಕಾವಿ ಉಟ್ಟವರೆಲ್ಲಾ ಸನ್ಯಾಸಿಗಳಲ್ಲ ಬೂದಿ ಬಳಿದವರೆಲ್ಲ ಬೈರಾಗಿಗಳಲ್ಲ
- ಕಿಡಿಯಿಂದ ಕಾಡ ಸುಡ ಬಹುದು
- ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ
- ಕೀಲು ಸಣ್ಣದಾದರೂ ಗಾಲಿ ನಡೆಸುತ್ತದೆ
- ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು
- ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ
- ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ
- ಕುಚ ಹೇಮ ಶಸ್ತ್ರ ಸೋಂಕಿದಾಗ ಶುಚಿ ವೀರ ಧೀರರು ಅಚಲಿತರಾದರು
- ಕುಚುಕು ಬುದ್ಧಿ ಹೊಕ್ಕವನು ಕೆಟ್ಟ
- ಕುದಿಯುವುದರೊಳಗಾಗಿ ಮೂರು ಸಾರಿ ಹಳಸಿದಂತೆ
- ಕುರುಡು ಕಣ್ಣಿಗಿಂತ ಮೆಳ್ಳೆ ಗಣ್ಣು ವಾಸಿ
- ಕುಲಗೇಡಿ ಮಗ ಹುಟ್ಟಿ ಕುಲಕ್ಕೇ ಮಸಿ ಬಳಿದ
- ಕೂಟಸ್ಥ ಇಲ್ದೋನ ಓದು ಗಿಳಿ ಕಲ್ತ ಪಾಠದಂತೆ
- ಕೂಡಿದ ಗಂಡನನ್ನಾದರೂ ಬಿಟ್ತೇನು ಕಲ್ತದ್ದ ಬಿಡಲಾರೆ
- ಕೂತು ಉಣ್ಣೋನಿಗೆ ಕುಡಿಕೆ ಹೊನ್ನು ಸಾಲದು
- ಕೂತುಕೊಂಡು ಹೇಳುವವನ ಕೆಲಸ ಊರು ಮಾಡಿದರೂ ಸಾಲದು
- ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದರು
- ಕೂಳಿಗೆ ಕೇಡು ಭೂಮಿಗೆ ಭಾರ
- ಕೃಷಿತೋನಾಸ್ತಿ ದುರ್ಭಿಕ್ಷಂ (ಸಂಸ್ಕೃತ)
- ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು
- ಕೆಟ್ಟ ಮೇಲೆ ಲೊಟ್ಟ
- ಕೆಟ್ಟು ಪಟ್ಟಣ ಸೇರು ಇಟ್ಟು ಹಳ್ಳಿ ಸೇರು
- ಕೆಟ್ಟು ಬದುಕಬಹುದು ಬದುಕಿ ಕೆಡಬಾರದು
- ಕೆಟ್ಟು ಸೈರಿಸಬಲ್ಲೆ ಕೊಟ್ಟು ಸೈರಿಸಲಾರೆ
- ಕೆಡುವ ಕಾಲಕ್ಕೆ ಬುದ್ಧಿ ಇಲ್ಲ ಮರಣ ಕಾಲಕ್ಕೆ ಮದ್ದಿಲ್ಲ
- ಕೆತ್ತೆಂದರೆ ಕೆತ್ತು ಮೆತ್ತೆಂದರೆ ಮೆತ್ತು
- ಕೆರೆಗೆ ತೊರೆ ಕೂಡಿ ಸರೋವರ ವಾಯ್ತು
- ಕೆರೆಯ ನೀರ ಕೆರೆಗೆ ಚೆಲ್ಲಿ ವರ ಪಡೆದುಕೊಂಡಂತೆ
- ಕೆಲಸಿಲ್ಲದ ಗಂಡು ಕರೀ ಒನಕೆ ತುಂಡು
- ಕೇಡು ಬರೋ ಕಾಲಕ್ಕೆ ನಂಟೆಲ್ಲ ಹಗೆಯಾಯ್ತು
- ಕೇಡು ಬರೋ ಕಾಲಕ್ಕೆ ಬುದ್ಧಿಗೇಡು
- ಕೈ ಕೆಸರಾದ್ರೆ ಬಾಯಿ ಮೊಸರು
- ಕೈಗೆ ಬಂದ ತುತ್ತು ಬಾಯಿಗೆ ಇಲ್ಲ
- ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
- ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ
- ಕೈಯೆತ್ತಿ ಕೊಡಲಿಲ್ಲ ಮೈಯ್ಯ ದಂಡಿಸಲಿಲ್ಲ ಪುಣ್ಯದ ಪಾಲು ನನಗಿರಲಿ ಅಂದ
- ಕೈಲಾದವರು ಮಾಡುತ್ತಾರೆ ಕೈಲಾಗದವರು ಆಡುತ್ತಾರೆ
- ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
- ಕೊಂಕಿಗೆ ಕೊಂಕೇ ಮದ್ದು
- ಕೊಂಡಾಡುತ್ತ ಜಗದ ಇಚ್ಚೆಯನ್ನೆ ನುಡಿದರೆ ಜಗವೆಲ್ಲ ತನ್ನ ಮುದ್ದಾಡುತಿತ್ತು
- ಕೊಂಡು ಕೊಟ್ಟದ್ದೂ ಇಲ್ಲ ಹಂಚಿ ಉಂಡದ್ದೂ ಇಲ್ಲ ಸ್ವರ್ಗ ಬೇಕು ಅಂದ
- ಕೊಂದ ಪಾಪ ತಿಂದು ಪರಿಹಾರ (=ಕೊಂದ ಪಾಪ/ಕರ್ಮ ತನಗೆ ಅಂಟಿಕೊಂಡು ಅದನ್ನು ತೊಡೆಯುವುದಕ್ಕೆ ಕಷ್ಟ ಅನುಭವಿಸಬೇಕಾಗುತ್ತದೆ)
- ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ
- ಕೊಟ್ಟುಣ್ಣದ ಗಂಟು ಪರರಿಗೆ ಬಿಟ್ಟು ಹೋದಂತೆ
- ಕೊಟ್ಟೆ ಅಂತ ಹೇಳಿ ಕೊಡದವನ ಮಾತು ಬೆನ್ನಿಗೆ ಚೂರಿ ಇರಿದಂತೆ
- ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ
- ಕೊಡದ ಲೋಭಿ ಮಾತು ಕೊಡಲಿ ಪೆಟ್ಟು
- ಕೊಡಲಾರದ ಹೆಣ್ಣಿಗೆ ತೆರವು ಕೇಳಿದರಂತೆ
- ಕೊಡಲಿ ಕಾವು ಕುಲಕ್ಕೆ ಸಾವು
- ಕೊಡುವ ದೇವರು ಬಡವನೇ?
- ಕೊಡುವವನ ಕೈ ಯಾವಾಲು ಮೇಲೆ
- ಕೊಡೋದು ಕೊಳ್ಳೋದು ಗಂಡಂದು, ಮಜ ಮಾಡೋದು ಹೆಂಡ್ರುದ್ದು
- ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
- ಕೊಲ್ಲದಿರುವುದೇ ಧರ್ಮ ಬಲ್ಲವರಿಗೆ ಅದೇ ಸಮ್ಮತ
- ಕೋಟಿ ಕೊಟ್ಟರೂ ಕೂಟ ಕರ್ಮಿಯ ದುಂದುಗವೇ ಬೇಡ
- ಕೋಡಗ ಲಂಕೆಯ ಸುಡುವಾಗ ರಾವಣ ನಾಡ ಕಾಯ್ದಿದ್ದ
- ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು
- ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ
- ಕೋಪ ಪಾಪ ತಂತು ಪಾಪ ತಾಪ ತಂತು
- ಕೋಪ ಬೀವುದೇ ಸಮತೆ
- ಕೋಪದಲ್ಲಿ ಕುಯ್ದ ಮೂಗು ಶಾಂತಿಯಲ್ಲಿ ಬಂದೀತೇ
- ಕೋರಿ (=ಚೆಂದುಳ್ಳಿ ಚೆಲುವೆ) ಒಲುಮೆ ತನಗೆ ಅನ್ನೋ ಮಾರನಿಗೆ (=ಚೆಲುವಾಂತನಿಗೆ) ಮಾರಿ ಹಿಡಿಯಿತು.
- ಕ್ರಮ ಕಾಣದ ನಾಯಿ ಕಪಾಳೆ ನೆಕ್ತು
- ಕಾಮಾಲೆ ಕಣ್ಣೊನಿಗೆ ಕಂಡಿದ್ದೆಲ್ಲ ಹಳದಿ ನೇ
- ಕಾರ್ಯವಾಸಿ ಕತ್ತೆ ಕಾಲು ಕಟ್ಟು
- ಕೀಲು ಸಣ್ಣದಾದರೂ ಗಾಲಿ ನಡೆಸುತ್ತದೆ
- ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ
- ಕೋಪದಲ್ಲಿ ಕುಯ್ದ ಮೂಗು ಶಾಂತಿಯಲ್ಲಿ ಬಂದೀತೇ
- ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು
- ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ
- ಕೃಷಿತೋನಾಸ್ತಿ ದುರ್ಭಿಕ್ಷಂ
- ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದರು
- ಕೂತು ಉಣ್ಣೋನಿಗೆ ಕುಡಿಕೆ ಹೊನ್ನು ಸಾಲದು
- ಕಡು ಕೋಪ ಬಂದಾಗ ತಡಕೊಂಡವನೇ ಜಾಣ
- ಕಳ್ಳನ ಹೆಜ್ಜೆ ಕಳ್ಳನೇ ಬಲ್ಲ
- ಕಳ್ಳನ ಮನಸ್ಸು ಹುಳ್ಳಗೆ
- ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯಮ, ಕಾಣದ್ದು ಕಂಡೆ ಅಧಮ
- ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
- ಕಂಗಾಲಾದರೂ ಹಂಗಾಳಾಗಬಾರದು
- ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
- ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ
- ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
- ಕಬ್ಬು ಡೊಂಕಾದ್ರೆ ಸವಿ ಡೊಂಕೇ
- ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು
- ಕೈ ಕೆಸರಾದ್ರೆ ಬಾಯಿ ಮೊಸರು
- ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
- ಕೈಗೆ ಬಂದ ತುತ್ತು ಬಾಯಿಗೆ ಇಲ್ಲ
- ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ
- ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ
- ಕಪ್ಪರ ತಿಪ್ಪೇಲಿಟ್ಟರೆ ತನ್ನ ವಾಸನೆ ಬಿಟ್ಟೀತೇ
- ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು
- ಕೆಡುವ ಕಾಲಕ್ಕೆ ಬುದ್ಧಿ ಇಲ್ಲ ಮರಣ ಕಾಲಕ್ಕೆ ಮದ್ದಿಲ್ಲ
- ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು
- ಕಿಡಿಯಿಂದ ಕಾಡ ಸುಡ ಬಹುದು
- ಕೊಡೋದು ಕೊಳ್ಳೋದು ಗಂಡಂದು, ಮಜ ಮಾಡೋದು ಹೆಂಡ್ರುದ್ದು
- ಕೊಡಲಿ ಕಾವು ಕುಲಕ್ಕೆ ಸಾವು
- ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
- ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
- ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ
- ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ
- ಕ್ರಮ ಕಾಣದ ನಾಯಿ ಕಪಾಳೆ ನೆಕ್ತು
- ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ
- ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ
- ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು
- ಕುರುಡು ಕಣ್ಣಿಗಿಂತ ಮೆಳ್ಳೆ ಗಣ್ಣು ವಾಸಿ
- ಕಾಡಿಗೆ ಹೋಗೋ ವಯಸ್ಸಿನಲ್ಲಿ ಬ್ರಾಹ್ಮಣ ಓಂ ಕಲಿತ
- ಕಾಣದಿರೋ ದೇವರಿಗಿಂತ ಕಾಣೋ ಭೂತಾನೇ ವಾಸಿ
- ಕಾಲಕ್ಕೆ ತಕ್ಕಂತೆ ನಡಿಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು
- ಕಾಲಿನದು ಕಾಲಿಗೆ; ತಲೆಯದು ತಲೆಗೆ
- ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯಂತೆ
- ಕಾರ್ಯವಾಸಿ ಕತ್ತೆ ಕಾಲು ಕಟ್ಟು
- ಕಾಸಿದ್ರೆ ಕೈಲಾಸ
- ಕಾಸಿಗೆ ತಕ್ಕ ಕಜ್ಜಾಯ.
- ಕಾಸಿಗೊಂದು,ಕೊಸರಿಗೆರಡು
- ಕಾಸು ಕೊಟ್ಟು ಬ್ರಹ್ಮೇತಿ ತಗೊಂಡರು
- ಕಾಯಕವೇ ಕೈಲಾಸ
- ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ
- ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು (ರಾಘವಾಂಕ)
- ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು
- ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು
- ಕೋಮಟಿ ಕೊಡ;ಜೈನಿಗ ಬಿಡ
- ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ?
- ಕೋತಿ ಕಜ್ಜಾಯ ಹಂಚಿದ ಹಾಗೆ.
- ಕೋತಿ ತಾನು ಕೆಡೋದಲ್ದೆ ವನ ಎಲ್ಲ ಕೆಡಿಸಿತಂತೆ
- ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿತಂತೆ
- ಕೋತಿಗೆ ಹೆಂಡ ಕುಡಿಸಿದಂತೆ
- ಕೂರೆಗೆ ಹೆದರಿ ಸೀರೆ ಬಿಚ್ಚೆಸೆದರು
- ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ
- ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದ್ರು
- ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರಂತೆ
- ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು
- ಕಡ್ಡೀನ ಗುಡ್ಡ ಮಾಡು
- ಕಡ್ಡೀನ ಗುಡ್ಡ ಮಾಡು.
- ಕಳ್ಳನ ಹೆಂಡತಿ ಎಂದಿದ್ದರೂ ...ಯೆ
- ಕಳ್ಳನ ಹೆಂಡತಿ ಎಂದಿದ್ದರೂ ಮುಂ..
- ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ
- ಕಳ್ಳನ ನಂಬಿದ್ರು ಕುಳ್ಳನ ನಂಬಬೇಡ
- ಕಳ್ಳನಿಗೊಂದು ಪಿಳ್ಳೆ ನೆವ
- ಕಳ್ಳನಿಗೊಂದು ಪಿಳ್ಳೆ ನೆವ
- ಕಳ್ಳನ್ನ ನಂಬಿದ್ರೂ ಕುಳ್ಳನ್ನ ನಂಬಬಾರದು
- ಕಳೆದುಕೊಂಡ ವಸ್ತುವನ್ನು ಕಳೆದುಹೋದ ಜಾಗದಲ್ಲೇ ಹುಡುಕು
- ಕಂಡೋರ ಆಸ್ತಿಗೆ ನೀನೇ ಧಣಿ
- ಕಂಡೋರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ
- ಕಂಡೋರ ಮನೆ ರೊಟ್ಟಿಗೆ ಗಿಣ್ಣು ಹಾಲು ಕಾಯಿಸಿದರಂತೆ
- ಕಂಡ ಕಳ್ಳ ಜೀವ ಸಹಿತ ಬಿಡ
- ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ
- ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ
- ಕಂಕುಳಲ್ಲಿ ದೊಣ್ಣೆ; ಕೈಯಲ್ಲಿ ಶರಣಾರ್ಥಿ
- ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ
- ಕಂತೆಗೆ ತಕ್ಕ ಬೊಂತೆ
- ಕಣ್ಣರಿಯದಿದ್ದರೂ ಕರುಳರಿಯುತ್ತದೆ
- ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಹಾಗೆ
- ಕಣ್ಣು ಕುರುಡಾದರೆ ಬಾಯಿ ಕುರುಡೇ
- ಕಷ್ಟ ಪಟ್ಟರೆ ಫಲವುಂಟು
- ಕಟ್ಟಿಕೊಂಡವಳು ಕಡೇ ತನಕ; ಇಟ್ಟುಕೊಂಡವಳು ಇರೋ ತನಕ
- ಕಬ್ಬಿಣ ಕಾದಿರುವಾಗಲೇ ಬಡಿಯಬೇಕು
- ಕಬ್ಬು ಡೊಂಕಾದರೆ ಸಿಹಿ ಡೊಂಕೆ ?
- ಕದ ತಿನ್ನೋವನಿಗೆ ಹಪ್ಪಳ ಈಡಲ್ಲ
- ಕದ್ದು ತಿಂದ ಹಣ್ಣು, ಪಕ್ಕದ ಮನೆ ಊಟ ಎಂದೂ ಹೆಚ್ಚು ರುಚಿ
- ಕೈ ಕೆಸರಾದರೆ ಬಾಯಿ ಮೊಸರು
- ಕೈ ಕೆಸರಾದರೆ ಬಾಯಿ ಮೊಸರು.
- ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರಂತೆ
- ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
- ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.
- ಕೈಗೆಟುಕದ ದ್ರಾಕ್ಷಿ ಹುಳಿ
- ಕೈಲಾಗದೋನು ಮೈ ಪರಚಿಕೊಂಡ
- ಕೈಯ್ಯಲ್ಲೆ ಬೆಣ್ಣೆ ಇಟ್ಟುಕೊಂಡು,ತುಪ್ಪಕ್ಕೆ ಊರೆಲ್ಲ ಅಲೆದರಂತೆ
- ಕಜ್ಜಿ ಹೋದರೂ ಕಡಿತ ಹೋಗಲಿಲ್ಲ
- ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ?
- ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ
- ಕರೆದು ಹೆಣ್ಣು ಕೊಟ್ಟರೆ ಮಲ್ಲೋಗರ ಬಂತಂತೆ.
- ಕರೆಯದವರ ಮನೆಗೆ ಕಳಸಗಿತ್ತಿಯಾಗು
- ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ
- ಕೆಟ್ಟ ಅಡಿಗೆ ಅಟ್ಟವಳೇ ಜಾಣೆ
- ಕೆಟ್ಟ ಕಾಲ ಬಂದಾಗ ಕಟ್ಟಿಕೊಂಡವಳೂ ಕೆಟ್ಟವಳು
- ಕೆಟ್ಟು ಪಟ್ಟಣ ಸೇರು
- ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದನಂತೆ
- ಕೆಲಸವಿಲ್ಲದ ಬಡಗಿ ಮಗುವಿನ ... ಕೆತ್ತಿದ
- ಕೆಲಸವಿಲ್ಲದ ಕುಂಬಾರ ಮಕ್ಕಳ ಅಂ.. ತಟ್ಟಿದ
- ಕಿಡಿ ಇಲ್ಲದೆ ಬೆಂಕಿಯಿಲ್ಲ ;ಕಾರಣ ಇಲ್ಲದೆ ಜಗಳವಿಲ್ಲ
- ಕೊಂದ ಪಾಪ ತಿಂದು ಪರಿಹಾರ
- ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು
- ಕೊಟ್ಟೋನು ಕೋಡಂಗಿ;ಇಸಕೊಂಡೋನು ಈರಭದ್ರ
- ಕೊಟ್ಟ ಹೆಣ್ಣು ಕುಲದಿಂದ ಹೊರಗೆ
- ಕೊಟ್ಟವನು ಕೋಡಂಗಿ; ಇಸ್ಕೊಂಡೋನು ಈರಭದ್ರ
- ಕೊಟ್ಟಿದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ
- ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ
- ಕುಡಿಯೋ ನೀರಿನಲ್ಲಿ ಬೆರಳಾಡಿಸೋ ಬುದ್ಧಿ (ಕುಡಿಯೋ ನೀರಿನಲ್ಲಿ ... ಅದ್ದುವ ಬುದ್ಧಿ)
- ಕುಂಟನಿಗೆ ಎಂಟು ಚೇಷ್ಟೆ, ಕುರುಡನಿಗೆ ನಾನಾಚೇಷ್ಟೆ
- ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ
- ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡನಂತೆ
- ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಳಂತೆ
- ಕುಣಿಯಲಾರದವಳು ನೆಲ ಡೊಂಕು ಅಂದಳಂತೆ
- ಕುದಿಯುವ ಎಣ್ಣೆಯಿಂದ ಕಾದ ತವದ ಮೇಲೆ ಬಿದ್ದ ಹಾಗೆ
- ಕುದುರೆ ಕಂಡರೆ ಕಾಲುನೋವು
- ಕುಲ ಸೋಸಿ ಹೆಣ್ಣು ತಗೊಂಡು ಬಾ ; ಜಲ ಸೋಸಿ ನೀರು ತಗೊಂಡು ಬಾ
- ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ
- ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ
- ಕುರು ಮೇಲೆ ಬರೆ ಎಳೆದ ಹಾಗೆ
- ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ
- ಖಂಡಿತ ವಾದಿ,ಲೋಕ ವಿರೋಧಿ
[ಬದಲಾಯಿಸಿ] ಗ
- ಗಂಡ ಹೆಂಡಿರ ಜಗಳ ಉಂಡು ಮಲಗುವತನಕ
- ಗಂಡ ಹೆಂಡಿರ ಜಗಳದಲ್ಲಿ ಮಕ್ಕಳು ಜಗಳ ಕಲಿತವು
- ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ
- ಗವುಜಿ ಗದ್ದಲ ಏನೂ ಇಲ್ಲ, ಗೋವಿಂದ ಭಟ್ಟ ಬಾವೀಲಿ ಬಿದ್ದ
- ಗಳಕ್ಕನೇ ಉಂಡವ ರೋಗಿ ಗಳಿಗೆ ಉಂಡವ ಭೋಗಿ
- ಗಾಣವಾಡದೆ ಎಣ್ಣೆ ಬಂದೀತೇ
- ಗಾಯದ ಮೇಲೆ ಬರೆ ಕೊಟ್ಟಂತೆ
- ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
- ಗುಡಿಸಿದ ಮೇಲೆ ಕಸವಿರಬಾರದು ಬಡಿಸಿದ ಮೇಲೆ ಹಸಿವಿರಬಾರದು
- ಗುಣಗೇಡಿ ಒಡನಾಟ ಯಾವಾಲು ದುಃಖದೇಲ್ ಇದ್ದಂತೆ
- ಗುರುವಿಗೆ ತಿರುಮಂತ್ರ
- ಗೆದ್ದವ ಸತ್ತ ಸೋತವ ಸತ್ತ
- ಗಾಳಿ ಬಂದಾಗ ತೂರಿಕೋ
- ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ
- ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ?
- ಗಾಜಿನ ಮನೇಲಿರೋವ್ರು ಅಕ್ಕಪಕ್ಕದ ಮನೇ ಮೇಲೆ ಕಲ್ಲೆಸೆಯಬಾರದು
- ಗಾಯದ ಮೇಲೆ ಬರೆ ಎಳೆದಂತೆ
- ಗೋರ್ಕಲ್ಲ ಮೇಲೆ ಮಳೆಗರೆದಂತೆ
- ಗಡ್ಡಕ್ಕೆ ಬೇರೆ ಸೀಗೇಕಾಯಿ
- ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
- ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು.
- ಗಂಡ ಸರಿಯಿದ್ರೆ ಗುಂಡೂ ಪಾವನ
- ಗಂಡ-ಹೆಂಡಿರ ಜಗಳ ತಿಂದು ಮಲುಗೊ ವರೆಗೆ
- ಗಂಡಸಿಗೇಕೆ ಗೌರಿ ದು:ಖ ?
- ಗಂಡಸು ಕೂತು ಕೆಟ್ಟ ;ಹೆಂಗಸು ತಿರುಗಿ ಕೆಟ್ಟಳು
- ಗಂಟೂ ಹೋಯ್ತು;ನಂಟೂ ಹೋಯ್ತು
- ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ
- ಗಂಜಿ ಕುಡಿಯೋನಿಗೆ,ಮೀಸೆ ಹಿಡಿಯುವವನೊಬ್ಬ
- ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದಂತೆ
- ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ
- ಗೆದ್ದೆತ್ತಿನ ಬಾಲ ಹಿಡಿದ ಹಾಗೆ
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
- ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟರು
- ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರು.
- ಗುಡ್ಡ ಕಡಿದು ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ
- ಗುಂಪಿನಲ್ಲಿ ಗೋವಿಂದ
- ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
- ಗುರುವಿಗೇ ತಿರುಮಂತ್ರ
- ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು.
- ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
- ಗಂಡ ಹೆಂಡಿರ ಜಗಳ ಉನ್ಡು ಮಲಗೊ ತನಕ
- ಗವುಜಿ ಗದ್ದಲ ಏನೂ ಇಲ್ಲ, ಗೋವಿಂದ ಭಟ್ಟ ಬಾವೀಲಿ ಬಿದ್ದ
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
[ಬದಲಾಯಿಸಿ] ಚ
- ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
- ಚಿತ್ತದ ಕಳವಳ ನಿಲ್ಲಿಸಿದವರೇ ಉತ್ತಮರು
- ಚಿತ್ತವಿಲ್ಲದವಳ ಒಡಗೂಟ ನಾಯ್ ಹೆಣಾನ ಹತ್ತಿ ತಿನ್ನುವಂತೆ
- ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ
- ಚೌಲದಾಗ ದೌಲು ಮಾಡು
- ಚೇಳಿಗೆ ಪಾರುಪತ್ಯ ಕೊಟ್ಟರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ.
- ಚೇಳಿಗೊಂದೇ ಬಸಿರು ; ಬಾಳೆಗೊಂದೇ ಗೊನೆ
- ಚಂಡಾಲ ದೇವರಿಗೆ ಚಪ್ಪಲಿ ಸೇವೆ
- ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ
- ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು
- ಚಿನ್ನದ ಸೂಜೀಂತ ಕಣ್ಣು ಚುಚ್ಚಿಕೊಳ್ಳುವುದಕ್ಕೆ ಆಗುತ್ತದೆಯೇ?
- ಚಿತ್ತಾರದ ಅಂದವನ್ನು ಮಸಿ ನುಂಗಿತು
- ಛತ್ರದಲ್ಲಿ ಭೋಜನ , ಮಠದಲ್ಲಿ ನಿದ್ದೆ .
- ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ
- ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
[ಬದಲಾಯಿಸಿ] ಜ
- ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
- ಜನ ಮರುಳೋ ಜಾತ್ರೆ ಮರುಳೋ
- ಜನಕ್ಕಂಜದಿದ್ದರೂ ಮನಕ್ಕಂಜಬೇಕು
- ಜಪ-ತಪ ಉಪವಾಸ ಇದ್ದರೆ ಅಂತಕನ ವಿಪರೀತ ತಪ್ಪೀತೆ
- ಜಿನ ಧರ್ಮವೇ ಜೀವಧರ್ಮ
- ಜೀವ ಜೀವವ ತಿಂದು ಜೀವಿಸುತಿದೆ ಜಗವೆಲ್ಲ
- ಜ್ಯೋತಿಯ ನೆಲೆ ಅರಿತವನೇ ಯೋಗಿ
- ಜಾಣನಿಗೆ ಮಾತಿನ ಪೆಟ್ಟು; ದಡ್ಡನಿಗೆ ದೊಣ್ಣೆಯ ಪೆಟ್ಟು
- ಜೀನ ಗಳಿಸಿದ ;ಜಾಣ ತಿಂದ
- ಜಟ್ಟಿ ಜಾರಿದರೆ ಅದೂ ಒಂದು ಪಟ್ಟು
- ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು
[ಬದಲಾಯಿಸಿ] ಟ
- ಟೊಣಪೆ (ಗಾತ್ರದಲ್ಲಿ ದೊಡ್ಡದಾದ) ಶಾಸ್ತ್ರಕ್ಕೆ ಹೆಣಗುವುದೇ ಅರ್ಥ
[ಬದಲಾಯಿಸಿ] ಡ
- ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು ನನ್ನ ಹೆಂಡ್ರನ್ನ ಕೇಳು
- ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ
[ಬದಲಾಯಿಸಿ] ತ
- ತಕ್ಕಡಿ ಬಲ್ಲದೇ ಮನೆಯ ಬಡತನವ
- ತಕ್ಕಡಿ ಸ್ವರೂಪ ತಕ್ಕವನೇ ಬಲ್ಲ
- ತಕ್ಕವನಲ್ಲಿ ಹೊಕ್ಕಿದ್ದರೆ ತಕ್ಕಷ್ಟಾದರೂ ಸಿಕ್ಕುವುದು
- ತಕ್ಕುದನ್ನು ಅರಿಯದ ಓದು ಲಕ್ಷ ಓದಿದರೇನು
- ತಕ್ರ (=ಮಜ್ಜಿಗೆ) ಶಕ್ರನಿಗೆ(=ಇಂದ್ರ) ಸಹಾ ದುರ್ಲಭ
- ತಗಣೇ ಉಪದ್ರವ ಮಗಳಿಗೂ ಬಿಡಲಿಲ್ಲ
- ತಗಲಿದವನಿಗೆ ಹಗಲಿರುಳೇನು?
- ತಗಲುಗಾರನಿಗೆ (= ದಗಲ್ ಬಾಜ್) ಬಗಲ ಮೇಲೆ ಜ್ಞ್ಯಾನ
- ತಗ್ಗಿದವ ಎಂದಿಗೂ ನುಗ್ಗಾಗ
- ತಗ್ಗು ಗದ್ದೆಗೆ ಮೂರು ಬೆಳೆ ಎತ್ತರದ ಗದ್ದೆಗೆ ಒಂದೇ ಬೆಳೆ
- ತಗ್ಗು ದವಸಕ್ಕಾಗಿ ಹಗ್ಗ ಕೊಂಡು ಕೊಂಡ
- ತಟಕಿನಿಂದ ತಟಪಟವಾಯಿತು
- ತಟಕು ಬಿದ್ದು ಮಠಾ ಕೆಡಿಸಿತು
- ತಟದಲ್ಲಾಗಲೀ ಮಠದಲ್ಲಾಗಲೀ ಹಟದ ಜಂಗಮನ ಕಾಟ ತಪ್ಪುವುದಿಲ್ಲ
- ತಟಸ್ಥನಾದವನಿಗೆ ತಂಟೆಯೇನು?
- ತಟ್ಟನೆ ಆಡಿದರೆ ಕೊಟ್ಟಷ್ಟು ಫಲ
- ತಟ್ಟನೆ ಬಾ ಅಂದ್ರೆ ತುಟಿ ಬಿಟ್ಟನಂತೆ
- ತಟ್ಟಿ ಬೈಸಿಕೊಂಡರೂ ತಟ್ಟೇ ಹುಳಿ ಚೆನ್ನಾಗಿದೆ
- ತಟ್ಟಿನಲ್ಲಿ ಬಿದ್ದಾಗ್ಯೆ ಗಟ್ಟಿ ಆಗಲಾರ
- ತಟ್ಟು ಇದ್ದರೇ ತಟಾಯಿಸಿ ನಡದಾನು
- ತಡವ ಮಾಡುವವನ ಗೊಡವೆ ಬೇಡ
- ತಡವಿದರೆ ಮಡಿ ಸಹಾ ಕೆಡುವುದು
- ತಡೇ ಕಟ್ಟುವವನ ಮುಂದೆ ಮುಡಿಯೇನು
- ತಣ್ಣಗಿದ್ದರೆ ಮಣ್ಣಾದರೂ ಅಸಾಧ್ಯ
- ತಣ್ಣೀರು ಆದರೂ ಪುಣ್ಯದಿಂದ ದೊರಕಬೇಕು
- ತತ್ರಬಿತ್ರಿಯ (ತಂತ್ರಗಾರ) ಮುಂದೆ ಕತ್ತೆಯ ಹಾಗೆ ಆದ
- ತತ್ವಮಸಿ ಅಂತ ಅನ್ನೋದ್ ಕಲಿ ಅಂದ್ರೆ ತುತ್ತು ಸವಿ ಅಂತ ಉಣ್ನೋದ್ ಕಲ್ತ
- ತನಗಿಲ್ಲದ್ದು ಎಲ್ಲಿದ್ದರೇನು
- ತನಗೆ ಇಲ್ಲ ಕೂಸಿಗೇನು ಹೊದ್ದಿಸಲಿ
- ತನಗೆ ಇಲ್ಲದ ಮಾರಿ ತಮ್ಮಡಿಗೆ (ತಮ್ಮಡಯ್ಯನಿಗೆ) ವರಾ ಕೊಟ್ಟೀತೇ?
- ತನಗೆ ಇಲ್ಲದವಳು ಮಕ್ಕಳಿಗೆ ಏನು ಹೊದಿಸ್ಯಾಳು
- ತನಗೆ ಬಂದ ಹಾನಿ ದುಡ್ಡಿನಿಂದ ಹೋಯಿತು
- ತನಗೇ ಇಲ್ಲದವ ಪರರಿಗೆ/ಮಂದಿಗೆ ಏನು ಕೊಟ್ಟಾನು
- ತನುವರಿಯದ ನೋವಿಲ್ಲ ಮನವರಿಯದ ತಾಪವಿಲ್ಲ
- ತನ್ನ ಅಕ್ಕನ ಅರಿಯದವಳು ನೆರೆಮನೆ ಬೊಮ್ಮಕ್ಕನ ಬಲ್ಲಳೇ?
- ತನ್ನ ಕಾಲಿಗೆ ತಾನೇ ಶರಣು ಮಾಡಿ ಹರಸಿಕೊಂಡ ಹಾಗೆ
- ತನ್ನ ತಾ ತನ್ನಿಂದಲೇ ಅರಿಯಬೇಕು
- ತನ್ನ ತಾ ತಿಳಿದು ತಾನು ತಾನಾದುದೆ ಉನ್ನತಿ
- ತನ್ನ ತಾ ಬಲ್ಲವನೆ ಬಲ್ಲವ
- ತನ್ನ ತಾನರಿತರೆ ತನ್ನರಿವೆ ಗುರು
- ತನ್ನ ತಾನರಿತರೆ ತಾನ್‍ಆದಾನು ತನ್ನ ತಾ ಮರೆತರೆ ತಾ ಹೋದಾನು
- ತನ್ನ ತಾನರಿತರೆ ಸುಜ್ಞ್ನಾನಿ
- ತನ್ನ ತಾನರಿತವಗೇ ತ್ರಿಭುವನ ತನ್ನೊಳಗೆ ಕಂಡಿತ್ತು
- ತನ್ನ ನೆರಳಿಗೆ ತಾನಂಜಿ ನಡೆಯಬೇಕು
- ತನ್ನ ನೆರಳು ತಾ ಕಂಡು ನರಳುವವ ಮರುಳನಲ್ಲವೇ?
- ತನ್ನ ಮನೆ ಉಪ್ಪು ಇಲ್ಲ ಬೆನ್ನ ಹಿಂದೆ ಉರಿಯೋ
- ತನ್ನ ಮರ್ಯಾದೆ ಕೆಟ್ಟವ ಪರರ ಮರ್ಯಾದೆ ಇಟ್ಟಾನೆ?
- ತನ್ನ ಸುಖವೇ ಲೋಕದ ಸುಖ, ತನ್ನ ಕಷ್ಟವೇ ಲೋಕದ ಕಷ್ಟ
- ತನ್ನ ಹಲ್ಲು ತಾ ಮರಕೊಂಡು ಇನ್ನೊಬ್ಬನ ಮೇಲೆ ದೂರು ಹೇಳಿದ
- ತನ್ನ ಹೊಟ್ಟೆ ತಾ ಹೊರೆಯದವ ಮುನ್ನಾರ ಸಲಹುವ?
- ತನ್ನೂರಲಿ ರಂಗ, ಪರೂರಲಿ ಮಂಗ
- ತಪಸ್ಸಿಗೆಂತ ಹೋಗಿ ಕುಪ್ಪಸಾ ಕಳಕೊಂಡ
- ತಪಸ್ಸು ಇದ್ದವನೇ ಗಭಸ್ತಿ (=ಕಾಂತಿ) ಉಳ್ಳವನು
- ತಪ್ಪನೆ ಬಾ (=ತಕ್ಷಣ ಬಾ ) ಅಂದ್ರೆ ತಬ್ಬಲಿಕ್ಕೆ ಬಂದ ಹಾಗೆ
- ತಪ್ಪಲೇಲಿ ಇದ್ದದ್ದು ಹೋದರೆ ಕಪಾಲದಲ್ಲಿ ಇದ್ದದ್ದು ಹೋದೀತೇ
- ತಪ್ಪಿ ಬಿದ್ದವನಿಗೆ ತೆಪ್ಪ (=ದೋಣಿ) ಏನು ಮಾಡೀತು
- ತಪ್ಪಿದವನಿಗೆ ಒಪ್ಪು ಇಲ್ಲ
- ತಪ್ಪು ಹೊರಿಸಿದವನಿಗೆ ಒಪ್ಪುವವನು ಯಾರು
- ತಫಾವತುಗಾರ (=ಹಣ ತಿಂದು ಹಾಕುವವ) ತಪ್ಪಿದರೆ ತಿಪ್ಪಯ್ಯಗೆ ಏನು ಕೋಪ
- ತಬ್ಬಲಿ ತಬಕು (ಎಲೆ ಅಡಿಕೆ ತಟ್ಟೆ, ತಂಬಾಕು ತಟ್ಟೆ) ಕದ್ದು ಜಗಲೀಲಿ ಸಿಕ್ಕಿಬಿದ್ದ
- ತಬ್ಬಲಿಯಾದವನು ಬೊಬ್ಬೆ ಹಾಕಿ ಹೆಬ್ಬುಲಿಯ ಓಡಿಸ್ಯಾನೆ?
- ತಬ್ಬಳಿ ದೇವರಿಗೆ ತಂಗಳ ನೈವೇದ್ಯ
- ತಮ್ಮ ಒಳ್ಳೆಯವನೇ ಸರಿ ಒಮ್ಮಾನಕ್ಕಿಗೆ ಮಾರ್ಗವಿಲ್ಲ
- ತಮ್ಮ ಕಲಹಕ್ಕೆ ಐವರು ಪರರ ಕಲಹಕ್ಕೆ ನೂರಾ ಐವರು
- ತಮ್ಮ ನಮ್ಮವನಾದರೂ ನಾದಿನಿ ನಮ್ಮವಳಲ್ಲ
- ತಮ್ಮ ಸಂಗಡ ತಂಗಿಯ ಗಂಡ ದೂರು ಹೇಳಿದರೆ ನಿನಗೇನಪ್ಪ
- ತಮ್ಮನ ಸಂಗಡ ತಿಮ್ಮ ಬಂದರೆ ತಂಗಳನ್ನವೇ ಗತಿ
- ತರಗು (=ಒಣಗಿದ ಎಲೆ) ತಿಂಬುವುದೇ ಪರಮ ಸುಖ
- ತರಗು (ಮರದಿಂದ ಬಿದ್ದ ಒಣ ಎಲೆಗಳು)ಮೊರದಲ್ಲಿ ಹಿಡಿಯದು
- ತರಗು ತಿಂಬವನಿಗೆ ಒರಗೊಂದು ಕೇಡು
- ತರಗು ತಿನ್ನುವವನ ಮನೆಗೆ ಹಪ್ಪಳಕ್ಕೆ ಹೋದರು
- ತರಗು ಲಡ್ಡಿಗೆ ಡೊಳ್ಳು ಗಣಪತಿಯೇ ಶ್ರೇಷ್ಠ
- ತರಗೆಲೆ ಅಡಿಕೆ ತಿರಿದು ತಿನ್ನಬೇಕೆ
- ತರತರವಾಗಿ ಹೇಳಿದ್ದು ಮರೆತರೆ ಮರಕ್ಕಿಂತಾ ಕಡೆ
- ತರಬಲ್ಲವನ ಹೆಂಡತಿ ಅಡಜಾಣೆ (ಅಡಕವಾದ ಜಾಣ್ಮೆ ಉಳ್ಳವಳು)
- ತರಲಿಲ್ಲ ಬರಲಿಲ್ಲ ಬರ ಹ್ಯಾಗೆ ಹಿಂಗೀತು
- ತರಲೆ ಕೇಳುವವ ಮರುಳಗಿಂತ ಕಡೆ
- ತರವಲ್ಲದ ಮಾತು ಮರ ಏರಿದರೆ ಆದೀತೇ
- ತರಹರಿಸಾಳಾರದವಳು ಮರಣಕ್ಕೆ ಪಾತ್ರಳು
- ತರುಬಿ ಹೋಗುವನ್ನ ಕರುಬಿ (=ಅಸೂಯೆ) ಮಾಡುವುದೇನು?
- ತರುಬಿದವಗೂ (=ಅಡ್ಡಕಟ್ಟು, ಹೊಡೆ) ಓಡಿದವಗೂ ಸರಿಪಾಲು ಕಷ್ಟ
- ತರುಬಿಲ್ಲದ ಒಡ್ಡನು, ಬಿರಿಸಿಲ್ಲದ ಹುರಿಯು
- ತರುಬು ಇದ್ದರೆ ಹರುಬು ನಿಂತೀತೇ
- ತರುವವ ಮರೆತರೆ ಮೊರ ಏನು ಮಾಡೀತು
- ತರುವವ ಹೋದಮೇಲೆ ಮರಗುವವರುಂಟೇ
- ತರ್ಕಾ ಮಾಡುವವ ಮೂರ್ಕನಿಂದ ಕಡೆ
- ತಲೆ ಗಟ್ಟಿ ಅಂತ ಕಲ್ಲ ಹಾಯಬಾರದು
- ತಲೆ ಚೆನ್ನಾಗಿದ್ದರೆ ಮುಂಡಾಸು ನೂರು ಕಟ್ಟಬಹುದು
- ತಲೆ ತಾಗಿದ್ದಲ್ಲದೆ ಬುದ್ಧಿ ಬಾರದು
- ತಲೆ ಬಲಿಯಿತು ಅಂತ ಕಲ್ಲಿಗೆ ಹಾಯಬಾರದು
- ತಲೆ ಸೀಳಿದರೆ ಎರಡಕ್ಷರ ಇಲ್ಲ
- ತಲೆ ಹೋಗುವುದಕ್ಕೆ ಕಾಲು ಹೊಣೆಯಾದ ಹಾಗೆ
- ತಲೆಗೆ ಎಣ್ಣೆ ಇಲ್ಲ ತನು ಮೃಗನಾಭಿ ಬೇಡಿತು
- ತಲೆಗೆ ಒಂದು ಕಡ್ಡೀಯಾದರೆ ಒಂದು ತಲೆಯ ಹೊರೆ
- ತಲೇ ಒಡೆದವನೂ ಸಮ ಲೇಪ ಹಚ್ಚಿದವನೂ ಸಮ
- ತಲೇ ಕೂದಲಿದ್ದರೆ ಎತ್ತ ಬೇಕಾದರು ತುರುಬು ಹಾಕಿಕೊಳ್ಳಬಹುದು
- ತಲೇ ಕೂದಲಿಲ್ಲದವಳು ತುರುಬು ಬಯಸಿದಳಂತೆ
- ತಲೇ ಕೂದಲು ಉದ್ದವಿದ್ದವಳು ಹ್ಯಾಗೆ ಕಟ್ಟಿದರೂ ಚಂದ
- ತಲೇ ಕೂದಲು ನೆರೆಯಾದ ಮೇಲೆ ತಬ್ಬಿಕೊಂಡ ತಬ್ಬಲಿ ಮುರವ (=ತಿರುಕ)
- ತಲೇ ಮೂರು ಸುತ್ತು ತಿರುಗಿದರೂ ತುತ್ತು ಬಾಯಿಲೇ
- ತಲೇ ಮೇಲಣ ಬರಹ ಎಲೆಯಿಂದ ಒರೆಸಿದರೆ ಹೋದೀತೇ
- ತಲೇ ಸಿಡಿತಕ್ಕೆ ಮಲಶೋಧನೇ ಕೊಂಡ ಹಾಗೆ
- ತವಕ ಪಟ್ಟವ ತಬ್ಬರಿಸಿ ಬಿದ್ದ
- ತವಡು ತಿಂದರು ಮುರುಕು (ಬೆಡಗು, ಕೊಂಕು) ಘನ
- ತವಡು ತಿಂಬುವನಿಗೆ ವಯ್ಯಾರ ಯಾಕೆ
- ತವಡು ತಿಂಬುವವ ಹೋದರೆ ಉಮ್ಮಿ ತಿಂಬುವವ ಬತ್ತಾನೆ
- ತವರೂರಿನ ದಾರೀಲಿ ಕಲಿಲ್ಲ ಮುಳ್ಳಿಲ್ಲ
- ತಳಮಳ ತೀರಲಿಲ್ಲ, ಕಳವಳ ಕಳಿಯಲಿಲ್ಲ
- ತಳವಾರನಿಗೆ ಪಟ್ಟ ಕಟ್ಟಿದರೆ ಕುಳವಾರು (ಒಕ್ಕಲಿಗರ ಸಮೂಹ) ಹೋದೀತೋ?
- ತಳಾ ಬಿಟ್ಟು ಬಂಡಿ ಹಾರದು
- ತಳಿಗೆ ಚಂಬು ಹೋದ ಮೇಲೆ ಮಳಿಗೇ ಬಾಗಿಲು ಮುಚ್ಚಿದ ಹಾಗೆ
- ತಾ ಅನ್ನೋದು ನಮ್ಮ ತಲತಲಾಂತರಕ್ಕೂ ಇರಲಿ, ಕೊ ಅನ್ನೋದು ನಮ್ಮ ಕುಲಕೋಟಿಗೂ ಬೇಡ
- ತಾ ಕಳ್ಳೆ ಪರರ ನಂಬಳು, ಹಾದರಗಿತ್ತಿ ಗಂಡನ ನಂಬಳು
- ತಾ ಕಾಣದ ದೇವರು ಪೂಜಾರಿಗೆ ವರ ಕೊಟ್ಟೀತೇ?
- ತಾ ಕೋಡಗ ಪರರ ಅಣಕಿಸಿತು
- ತಾ ನೊಂದಂತೆ ಬೇರೇರ ನೋವನ್ನೂ ಅರಿಯಬೇಕು
- ತಾ ಬಲವೋ ಜಗ ಬಲವೋ
- ತಾಗದೆ ಬಾಗದು ಬಿಸಿಯಾಗದೆ ಬೆಣ್ಣೆ ಕರಗದು
- ತಾಟುಗಾರ (ಗರ್ವದ ಮನುಷ್ಯ) ಆಟಕ್ಕೆ ಹೋಗಿ ಮೋಟಗಾರನಾಗಿ (ತನ್ನಿಂದಲೇ ತಾ ಮೂರ್ಕನಾಗುವುದು) ಬಿದ್ದ
- ತಾತಾಚಾರ‍್ಯರ ಮನೆಗೆ ಏನಪ್ಪಣೆ?
- ತಾನಾಗಿ ಬೀಳುವ ಮರಕ್ಕೆ ಕೊಡಲಿ ಇಕ್ಕಿದ ಹಾಗೆ
- ತಾನು ಗರತಿ ಆದರೆ ಸೂಳೆಗೇರೀಲಿ ಮನೆ ಕಟ್ಟು
- ತಾನು ಜಾರಿಬಿದ್ದು ಉಣ್ಣೆಯಂತ ನೆಲ ಅಂದ
- ತಾನು ತಿಂದದ್ದು ಮಣ್ಣು ಹೆರರಿಗೆ ಕೊಟ್ಟದ್ದು ಹೊನ್ನು
- ತಾನು ತಿಂಬೋದು ಪಲ್ಲೆ ಸೊಪ್ಪು ಹಿರೇ ಕುದರೆ ಚೇಷ್ಟೆ
- ತಾನು ನೆಟ್ಟ ಬೀಳು (ಬಳ್ಳಿ) ತನ್ನ ಎದೆಗೆ ಹಬ್ಬಿತು
- ತಾನು ಬಾಳಲಾರದೆ ವಿಧಿಯ ಬೈದಂತೆ
- ತಾನು ಸಾಯಬೇಕು ಸ್ವರ್ಗಾ ಪಡೆಯಬೇಕು
- ತಾನು ಹೋದರೆ ಮಜ್ಜಿಗೆ ಇಲ್ಲ ಮೊಸರಿಗೆ ಚೀಟು
- ತಾನು ಹೋದರೆ ಮಜ್ಜಿಗೆ ಇಲ್ಲ ಹೇಳಿ ಕಳಿಸಿದರೆ ಮೊಸರು ಕೊಟ್ಟಾರೆ
- ತಾನುಂಟೋ? ಮೂರು ಲೋಕವುಂಟೋ?
- ತಾನೂ ಕುಡಿಯ ಕುಡಿಯಲೀಸ
- ತಾನೊಂದೆಣಿಸಿದರೆ ದೈವವೊಂದೆಣಿಸಿತು
- ತಾನೊಲಿದ ಮಂಕು ಮಾಣಿಕ್ಯ
- ತಾಪತ್ರಯದವನಿಗೆ ತಾಪೆ/ಚಾಪೆ ಯಾಕೆ
- ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು
- ತಾಯಂತೆ ಕರು ನಾಯಂತೆ ಬಾಲ
- ತಾಯಂತೆ ಮಕ್ಕಳು ನೂಲಂತೆ ಸ್ಯಾಲೆ
- ತಾಯಿ ಒಂದಾದರೂ ಬಾಯಿ ಬೇರೆ
- ತಾಯಿ ಕಲಿಸಿದ ಊಟ ತಂದೆ ಕಲಿಸಿದ ಬುದ್ಧಿ
- ತಾಯಿ ಬೇಕು ಇಲ್ಲವೆ ಬಾಯಿ ಬೇಕು
- ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ
- ತಾಯಿ ಮಾರಿಯಾದರೆ ತರಳನು ಎಲ್ಲಿ ಹೋದಾನು
- ತಾಯಿಗೆ ಕಂಡರೆ ತಲೆ ನೋವು
- ತಾಯಿಗೆ ಕುಲವಿದ್ದರಷ್ಟೇ ಮಗಳಿಗೂ ಕುಲ
- ತಾಯಿಗೆ ಸೇರದ್ದು ನಾಯಿಗೂ ಸೇರದು
- ತಾಯಿದ್ದರೆ ತವರು ಮನೆ ನೀರಿದ್ದರೆ ಕೆರೆ ಬಾವಿ
- ತಾಯಿನ್ನ ನೋಡಿ ಮಗಳನ್ನ ತಕ್ಕೋ ಹಾಲನ್ನ ನೋಡಿ ಎಮ್ಮೇನ್ನ ತಕ್ಕೋ
- ತಾಯಿಯ ಹತ್ತಿರ ತರ್ಕವಲ್ಲ ಗುರುವಿನ ಹತ್ತಿರ ವಿದ್ಯೆಯಲ್ಲ
- ತಾಯಿಲ್ಲದ ತವರು ಕಾಟಕದಿದ್ದ ಅಡವಿ
- ತಾರಕ್ಕೆ (ಎರಡು ಕಾಸಿನ ನಾಣ್ಯ) ಮೂರು ಸೇರು ಉಪ್ಪಾದರೂ ತರುವುದಕ್ಕೆ ಗತಿ ಬೇಡವೋ
- ತಾರಕ್ಕೊಂದು ಸೀರೆಯಾದರೂ ನಾಯಿ ತಿಕ ಬೆತ್ತಲೆ
- ತಾರತಮ್ಯ ಅರಿಯದವ ದೊರೆಯಲ್ಲ ಮಾತು ಮೀರಿದವ ಸೇವಕನಲ್ಲ
- ತಾರು ಮಾರು ಮಾಡುವವನಿಗೆ ಯಾರು ತಾನೆ ನಂಬ್ಯಾರು
- ತಾರುಣ್ಯವೇ ರೂಪು ಕಾರುಣ್ಯವೇ ಗುಣ
- ತಾರೇ ಬಡ್ಡೀ ನೀರಾ ಅಂದ್ರೆ ತರುವೆನು ನಿಲ್ಲೊ ತಿರುಕ ಮುರವ
- ತಾರೇಮರದ ಕಾಯಾದರೂ ಕರೆದರೆ ಬಂದೀತೇ
- ತಾವು ಮಾಡುವುದು ಗಂಧರ್ವರು ಮಾಡಿದರು
- ತಾಸಿಗೊಂದು ಕೂಸು ಹೆತ್ತರೆ ಈಸೀಸು ಮುತ್ತು
- ತಾಸಿನ ಗೊತ್ತು ದಾಸಿಗೆ ತಿಳಿದೀತೇ?
- ತಾಸಿನ ಬಟ್ಟಲು ನೀರ ಕುಡಿದರೆ ತಾಸಿಗೆ ಕೊಡತೀ ಪೆಟ್ಟು
- ತಾಳ ತಪ್ಪಿದ ಬಾಳು, ತಾಳಲಾರದ ಗೋಳು
- ತಾಳ ತಪ್ಪಿದರೆ ಕುಣಿಯೊದು ತಪ್ಪುವುದಿಲ್ಲ
- ತಾಳದಲ್ಲಿ ಜಾಣನಾದರೆ ತಾಳಿಕೆ ಇದ್ದೀತೇ
- ತಾಳಲಾರದ ವಿರಹ ತಿಣಕಿದರೆ ಹೋದೀತೇ?
- ತಾಳಿಕೆ (ತಾಳ್ಮೆ) ಉಳ್ಳವನಲ್ಲಿ ಕೇಳಿದರೆ ಕಾಳು ಸಿಕ್ಕುವುದು
- ತಾಳಿದವ ಬಾಳ್ಯಾನು
- ತಾಳು ಬಡಿದರೆ ಕಾಳು ಸಿಕ್ಕೀತೇ
- ತಾಳೆ ಹೂವು ಶಿವನಿಗೆ ಆಗದು ಸಂಪಿಗೆಯ ಹೂ ಸಾಲಿಗ್ರಾಮಕೆ ಆಗದು
- ತಾಳೆಮರ ಉದ್ದವಾದರೆ ಕೋಳಿಗೆ ಬಂದದ್ದೇನು
- ತಾಳೆಮರ ದೊಡ್ಡದಾದರೂ ತಾಳೆ ಹೂವಿಗೆ ಸರಿಯಾದೀತೇ
- ತಾಳೇ ಹಣ್ಣು ತಾನೇ ಬಿದ್ದರೂ ಬಾಳಾದ ಮುರವಗೆ ಬಾಯಿ ಮುಚ್ಚಿತು
- ತಾಳ್ಮೆ ಇದ್ದ ಪುರುಷರಲ್ಲಿ ಬೀಳು ಬಿದ್ದರೆ ಬಾಳ್ಯಾನು
- ತಿಂಗಳ ಬೆಳಕಾಗಿ ಬಾಳಿನಲ್ಲಿ ತಂಗಾಳಿ ಹಿಂಗದಿರಲಿ
- ತಿಕ ಮಕ ಒಂಡೇ ತಿಪ್ಪಾಭಟ್ಟರಿಗೆ
- ತಿಗಳಗಿತ್ತಿಯ ಬಾಯಿ ಕೆಣಕಬೇಡ ಬಗಳೊ ನಾಯಿ ಬಡಿಯಬೇಡ
- ತಿಗಳಾ ತಾ ಕೆಡುತ್ತಾ ಏಳು ನೆರೆ ಕೆಡಿಸಿದ
- ತಿಗುಳಗೆ ತುತ್ತಿಗೆ ತತ್ವಾರವಾದರೂ ನೆತ್ತಿತುಂಬಾ ನಾಮಕ್ಕೆ ಕಡಿಮೆ ಇಲ್ಲ
- ತಿಪ್ಪಯ್ಯಗೆ ಸೂಜಿ ಮೇಲು ಕಳ್ಳಗೆ ಬಾಯಿ ಮೇಲು
- ತಿಪ್ಪೆಯ ಮೇಲೆ ಕುಂಡ್ರುವವಗೆ ತಕ್ಯೆ ಯಾತಕ್ಕೆ
- ತಿಪ್ಪೇ ಮೇಲಣ ಅರಿವೆಯಾದರೂ ಕಾಲಿಗೆ ಕಟ್ಟಿದರೆ ಬಿರುದು
- ತಿಪ್ಪೇ ಮೇಲಣ ದೀಪ ಉಪ್ಪರಿಗೆಯ ಮೇಲೆ ಬಂದೀತೋ?
- ತಿಪ್ಪೇ ಮೇಲೇ ಮುಪ್ಪಾದ ಕುಂಬಾರ ತಿಪ್ಪ
- ತಿಪ್ಪೇ ಮ್ಯಾಲೆ ಮಲಗಿ ಉಪ್ಪರಿಗೆ ಕನಸು ಕಂಡ ಹಾಗೆ
- ತಿಮರು (=ಕಡಿತ, ನವೆ) ತುರಿಸಿದರೆ ಅರಸಿನ ಹಾಗೆ
- ತಿರಿಚಿನಾಪಳ್ಳಿಗೆ ತಿರಿದುಂಬೊದಕ್ಕೆ ಇಲ್ಲಿಂದ ಕೈ ಸವರಿಸಬೇಕೆ
- ತಿರಿತಿರಿಗಿ ಗೋಕರ್ಣಕ್ಕೆ ಹೋಗಿ ತುರಕನಿಂದ ದೆಬ್ಬೆ ತಿಂದ
- ತಿರಿತಿರಿಗಿ ತಿಮ್ಮಪ್ಪನ ಹತ್ತರ ಹೋದರೆ ತಿರಿದುಂಬೋದು ತಪ್ಪೀತೇ?
- ತಿರಿದುಂಬುವ ಭಟ್ಟ ದಕ್ಷಿಣೆಯಾದರೂ ಬಿಟ್ಟಾನು ಭೊಜನ ಸಿಕ್ಕಿದರೆ ಬಿಡಲೊಲ್ಲ
- ತಿರುಕನ ಬಳಿಗೆ ತಿರುಕ ಹೋದರೆ ಮರುಕ ತಾ ಬರುವುದೇ?
- ತಿರುಕನಿಗೆ ಮುರುಕು (ಬೆಡಗು ಕೊಂಕು) ಇದ್ದಾಗ್ಯೂ ತಿರಿದುಂಬುವುದು ತಪ್ಪದು
- ತಿರುದುಂಬುವುದಕ್ಕೆ ಬೀದಿ ಹಂಚಿಕೊಂಡ ಹಾಗೆ
- ತಿರುಪತಿ ಕ್ಷೌರಿಕರು ತಲೆ ಬೋಳಿಸಿದ ಹಾಗೆ
- ತಿರುಪದ ಪುಟ್ಟಿಯಲ್ಲಿ ಶನೀಶ್ವರ ಕೂತ
- ತಿರುಪಿನಂತೆ ಇರಬೇಕು ತಿಳಿದವ
- ತಿರುಳು ತಿಂದರೂ ಮರುಳು ಹೋಗಲಿಲ್ಲ
- ತಿರುಳು ಹೋಗಿ ಬೆಂಡು ಉಳೀತು
- ತಿರೋಕಲ್ಲು ಗಾಳಿಯಿಂದ ಹಾರುವುದೋ
- ತಿರೋಕಲ್ಲು ಮಳೇಲಿ ಬಿದ್ದರೆ ಮರಕ್ಕಿಂತಾ ಕಡೆಯಾದೀತೇ
- ತಿವಾಸಿ ಯಾತಕ್ಕೆ ತಿಪ್ಪೇ ಮೇಲಣವಗೆ
- ತಿವಿದುಕೊಂಡರೆ ಬಂದೀತೇ ತಿಮ್ಮಪ್ಪನ ದಯೆ
- ತಿಳಿದ ಕಳ್ಳ ತಿರಿಗಿದರೂ ಬಿಡ
- ತಿಳಿದವ ಮಾಡ್ಯಾನು ನಳಪಾಕವ
- ತಿಳಿದವನಾದರೂ ಮಲಮೂತ್ರ ಬಿಟ್ಟೀತೇ?
- ತಿಳಿದು ಒಡ್ಡೋ ತೀರು ಬಾಣವ
- ತಿಳಿಯಕ್ಕಿಲ್ಲ ನೋಡಕ್ಕಿಲ್ಲ ಹುಚ್ಚು ಮೂಕನ ಆಟ
- ತೀಟೆ ಆದರೆ ತಾನೆ ಬರುತ್ತಾನೆ
- ತೀಟೆಗೆ ಮಕ್ಕಳ ಹೆತ್ತು ತಿರುಮಲ ದೇವರ ಹೆಸರಿಟ್ಟ ಹಾಗೆ
- ತೀರಕ್ಕೆ ಬಂದ ಮೇಲೆ ತೆರೆಯ ಭಯವೇ
- ತೀರದ ಕಾರ್ಯ ಹಾರಿದರೂ ಆಗದು
- ತೀರದಲ್ಲಿರುವ ಮರಕ್ಕೆ ನೀರು ಯಾತಕ್ಕೆ
- ತುಂಬಿದ ಕೊಡ, ತುಳುಕೋದಿಲ್ಲ
- ತುಟಿ ಸುಮ್ಮನಿದ್ದರೂ ಹೊಟ್ಟೆ ಸುಮ್ಮನಿರದು
- ತುಟ್ಟಿಯಾದರೂ ಹೊಟ್ಟೆ ಕೇಳದು
- ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
- ತೂತು ಗತ್ತಲೇಲಿ ತಾತನ ಮದುವೆ
- ತೇಗಿ ತೇಗಿ ಬೀಗಿ ಬಿದ್ದ
- ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು
- ತೊಳೀಲಿಲ್ಲ ಬಳೀಲಿಲ್ಲ ಮೂಗೇಕೆ ಮಸಿಯಾಯ್ತು
- ತೋಟದ ಕಬ್ಬಿಗಿಂತ, ಪೋಟೆಯ ಜೇನಿಗಿಂತ, ಬಲ್ಲವಳ ಕೂಟ ಲೇಸು
- ತೋಟದ ಬೇಲಿಯನ್ನು ದಾಟಿ ನೋಡದವರಾರು
- ತಾ ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು
- ತಾಳಕ್ಕೆ ತಕ್ಕ ಮೇಳ
- ತಾಳಿದವನು ಬಾಳಿಯಾನು
- ತಾಮ್ರದ ಕಾಸು ತಾಯಿ ಮಕ್ಕಳನ್ನು ಬೇರೆ ಮಾಡ್‌ತಂತೆ
- ತಾನೂ ತಿನ್ನ; ಪರರಿಗೂ ಕೊಡ
- ತಾನು ಕಳ್ಳ ,ಪರರ ನಂಬ
- ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು
- ತಾಯೀನೇ ತಿಂದೋಳು,ಅತ್ತೇನ ಬಿಟ್ಟಾಳೆಯೇ?
- ತಾಯಿ ಮಾಡಿದ ಹೊಟ್ಟೆ ;ಊರು ಮಾಡಿದ ಕೊಳಗ
- ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ
- ತೋಳ ಬಿದ್ದರೆ ಆಳಿಗೊಂದು ಕಲ್ಲು
- ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
- ತೋಟ ಶೃಂಗಾರ, ಒಳಗೆ ಗೋಣಿ ಸೊಪ್ಪು
- ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ
- ತಲೆ ಗಟ್ಟಿ ಇದೆ ಅಂತ ಕಲ್ಲಿಗೆ ಹಾಯಬಾರದು
- ತಲೆಗೆ ಬಿದ್ದ ನೀರು ಕಾಲಿಗೆ ಬೀಳದೆ ಇರುತ್ತದೆಯೇ?
- ತಲೆಗೆಲ್ಲಾ ಒಂದೇ ಮಂತ್ರವಲ್ಲ
- ತಮ್ಮ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು ಎಂದುಕೊಂಡರು
- ತಮ್ಮನೇಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಬೇರೇ ಮನೇ ಸತ್ತ ನೊಣದ ಕಡೆಗೆ ಬೆಟ್ಟು ಮಾಡಿದರು
- ತನಗೇ ಜಾಗವಿಲ್ಲ; ಕೊರಳಲ್ಲಿ ಡೋಲು ಬೇರೆ
- ತನ್ನ ಓಣೀಲಿ ನಾಯಿಯೇ ಸಿಂಹ
- ತನ್ನ ಬೆನ್ನು ತಾನೇ ತಟ್ಟಿಕೊಂಡ ಹಾಗೆ
- ತನ್ನ ಎಲೇಲಿ ಕತ್ತೆ ಸತ್ತು ಬಿದ್ದಿದ್ರೆ , ಪಕ್ಕದ ಎಲೇಲಿ ನೊಣ ಹೊಡೆಯಕ್ಕೆ ಹೋದ
- ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು
- ತುಂಬೆ ಗಿಡಕ್ಕೆ ಏಣಿ ಹಾಕಿದಂತೆ
- ತುಂಬಿದ ಕೊಡ ತುಳುಕುವುದಿಲ್ಲ
- ತುಂಬಿದ ಕೊಡ ತುಳುಕುವುದಿಲ್ಲ
- ತಾಳ ತಪ್ಪಿದ ಬಾಳು, ತಾಳಲಾರದ ಗೋಳು
- ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು
- ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು
- ತೇಗಿ ತೇಗಿ ಬೀಗಿ ಬಿದ್ದ
- ತೂತು ಗತ್ತಲೇಲಿ ತಾತನ ಮದುವೆ
- ತನ್ನೂರಲಿ ರಂಗ, ಪರೂರಲಿ ಮಂಗ
- ತುಂಬಿದ ಕೊಡ, ತುಳುಕೋದಿಲ್ಲ
- ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
[ಬದಲಾಯಿಸಿ] ದ
- ದನಿಯಿದ್ದವರೂ ಅತ್ತರೂ ಚಂದ ನಕ್ಕರೂ ಚಂದ
- ದಾನ ಮಾಡೋಕೆ ಕನಲುವ ಮಾನವ ದಂಡ ಚಕಾರ ಎತ್ತದೆ ತೆರುವ
- ದಾನಿಗೆ ದೀನತನ ಸಲ್ಲ, ಗ್ನಾನಿಗೆ ಮೌನ ಸಲ್ಲ
- ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
- ದಾರವಿದ್ದರೆ ಮುತ್ತು ಹಾರವೆಂದನಿಸಿತ್ತು
- ದಿಟವೇ ಪುಣ್ಯದ ಪುಂಜ ಸಟೆಯೇ ಪಾಪದ ಬೀಜ
- ದೀನನ ಬೇಡಿ ಬಳಲಿದರೆ ಆತ ಏನು ಕೊಟ್ಟಾನು
- ದೀಪಕ್ಕೆ ಎಣ್ಣೆಯ ಹುಯ್ಯ್ ಅಂತ ಸುರಿಯುತ್ತಾರೇ
- ದುಡಿದದ್ದು ಉಂಡೆಯೋ ಪಡೆದದ್ದು ಉಂಡೆಯೋ
- ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ?
- ದೂಫ ಹಾಕಿದರೆ ಪಾಪ ಹೋದೀತೇ
- ದೈವ ಅನ್ನೋದ ಮತ್ತೆಲ್ಲೂ ನೊಡದೆ ತಾನಿದ್ದ ಒತ್ತಿಲೇ ನೋಡು
- ದೈವ ಒಲ್ಲದೆ ಆಗೋದಿಲ್ಲ ದೈವ ಒಲಿದರೆ ಹೋಗೋದಿಲ್ಲ
- ದೈವದ ಸೊಲ್ಲು ಹರಟುವಾತ ಭವದೊಳಗೆ ತೇಲಾಡುತಿದ್ದ
- ಧರ್ಮದ ಹಾದಿ ತಿಳಿದವನಿಗೆ ಓದು ವಾದಗಳೇಕೆ
- ದಾಕ್ಷಿಣ್ಯಕ್ಕೆ ಬಸಿರಾಗೋದು
- ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ
- ದೇಶ ಸುತ್ತು ; ಕೋಶ ಓದು.
- ದೇವನೊಬ್ಬ ನಾಮ ಹಲವು
- ದೇವರಿಲ್ಲದ ಗುಡಿ;ಯಜಮಾನನಿಲ್ಲದ ಮನೆ ಎರಡೂ ಒಂದೇ
- ದೇವರು ಒಲಿದರೂ ಪೂಜಾರಿ ಒಲಿಯೊಲ್ಲ.
- ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ
- ದೇವಸ್ಥಾನದಲ್ಲಿ ಊದಿನ ಕಡ್ಡಿ ಹಚ್ಚದಿದ್ದರೂ ಚಿಂತೆಯಿಲ್ಲ; ... ಬಿಡಬೇಡ
- ದೀಪದ ಕೆಳಗೆ ಯಾವತ್ತೂ ಕತ್ತಲೇ
- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
- ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು ನಿನ್ನ ಗಳಗಂಟೆಗೆ
- ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ
- ದನ ತಿನ್ನುವವನಿಗೆ ಗೊಬ್ಬರದ ಆಣೆ
- ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರು
- ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು
- ದಿನಾ ಸಾಯೋರಿಗೆ ಅಳೋರ್ ಯಾರು?
- ದೊಡ್ಡವರು ಹೇಳಿದ ಹಾಗೆ ಮಾಡು; ಮಾಡಿದ ಹಾಗೆ ಮಾಡಬೇಡ
- ದುಡ್ಡೇ ದೊಡ್ಡಪ್ಪ,ಬುದ್ಧಿ ಅದರಪ್ಪ
- ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡ ಹಾಗೆ
- ದುಡಿಮೆಯೇ ದೇವರು
- ದುಡಿಮೆಯೇ ದುಡ್ಡಿನ ತಾಯಿ
- ದುಷ್ಟರಿಂದ ದೂರವಿರು
- ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ
- ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
- ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ?
[ಬದಲಾಯಿಸಿ] ನ
- ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು
- ನಚ್ಚುವುದು ಬೇರೆ ಹೆಣ್ಣು ಒಬ್ಬನ ಮೆಚ್ಚುವುದು ಬೇರೆ
- ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ
- ನಡೆವರ್ ಎಡವದೇ ಕುಳಿತವರ್ ಎಡವುವರೇ
- ನಯಶಾಲಿ ಆದವನು ಜಯಶಾಲಿ ಆದಾನು
- ನಲ್ಲೆ ಮುಂದೆ ಸುಳಿದರೆ ಲೋಕದೊಳಗೆ ಒಲ್ಲದವರಾರು
- ನಾ ಬಡವ ವಾಲಗ ಸಾವಕಾಶ ಊದು ಅಂದಂತೆ
- ನಾ ಬಲ್ಲೆ ಅನ್ನೊ ಮಾತು ಎಲ್ಲರಿಗು ಸಲ್ಲದು
- ನಾಡಳಿದು ನಾಡೊಡೆಯನಿಗೆ ಕೇಡು ನಾಡೊಡೆಯ ಅಳಿದು ನಾಡಿಗೆಲ್ಲ ಕೇಡು
- ನಾಡೆಂದ್ರ ಕಾಡನ್ನ ಸುಡುವಾಗ ದೇವೇಂದ್ರ ಗಾಳೀನ್ನ ನೋಡೊಕೆ ಕಳಿಸಿದ
- ನಾಯಿ ಬಾಲ ಡೊಂಕು
- ನಾಯಿ ಬೊಗಳಿದರೆ ದೇವಲೋಕ ಹಾಳೇನು
- ನಾಯಿಗೆ ಕೆಲಸಿಲ್ಲ, ನಿಲ್ಲೋಕೆ ಹೊತ್ತಿಲ್ಲ
- ನಾಳೆ ಯಾರೋ ನಾನು ಯಾರೋ!
- ನಿಜ ಆಡಿದರೆ ನಿಷ್ಠೂರ
- ನಿಜವ ಹಿಡಿ ಘಟವ ನೆಚ್ಚದಿರು
- ನಿದ್ದೆ ಗೈಯೋನ ಹೊತ್ತು ನುಂಗ್ತು
- ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ
- ನಿಷ್ಠೆ ಇದ್ದಲ್ಲಿ ದೈವ ಕಲ್ಲುಗುಂಡೊಳಗೆ ಅಡಗಿತ್ತು
- ನಿಷ್ಠೆ ಇಲ್ಲದವನಿಗೆ ದೈವ ಬಟ್ಟಬಯಲು
- ನಿಷ್ಠೆ ಇಲ್ಲದೆ ಎಷ್ಟು ಪೂಜೆ ಮಾಡಿದರೂ ನಷ್ಟ
- ನೀಡುವವ ಉತ್ತಮ ಬೇಡಿದರೂ ನೀಡದವ ಅಧಮ
- ನೀರೆ ನಿನ್ನ ಮಾತು ನಿಜವೇನೆ ನೀರ ಕಡಿದರೆ ಬೆಣ್ಣೆ ಬಂದಾದೇನೆ
- ನೀರೆಯ ಓರೆಗಣ್ಣ ನೋಟಕ್ಕೆ ನಾಡೆಲ್ಲ ಇರಿದಾಡಿತು/ಕಾದಡಿತು
- ನೆಂಟ ನೆರವಲ್ಲ ಕುಂಟ ಜೊತೆಯಲ್ಲ
- ನೆತ್ತರು ಉಕ್ಕಿದರೆ ಜೀವ ತೊಡಕೀತು
- ನೆತ್ತಿಯಲ್ಲಿ ಅಮೃತ ಹೊತ್ತು ಸಾವಿಗಂಜಿ ಜಗವೆಲ್ಲ ಸುತ್ತಾಡಿದ
- ನೆರಲೆ ಹಣ್ಣು ಬಲು ಕಪ್ಪು ತಿಂದು ನೋಡಿದರೆ ಬಲು ಸವಿ
- ನೆರೆದ ಸಿರಿ ಜಾವಕ್ಕೆ ಹರಿದು ಹೋಯಿತು
- ನೇಮ ಉಳ್ಳವನ ಕಂಡರೆ ಯಮನಿಗೂ ಭಯ
- ನಾಯಿ ಬಾಲ ಡೊಂಕು
- ನಾಯಿ ಬೊಗಳಿದರೆ ದೇವಲೋಕ ಹಾಳೇನು
- ನಾಯಿಗೆ ಕೆಲಸಿಲ್ಲ, ನಿಲ್ಲೋಕೆ ಹೊತ್ತಿಲ್ಲ
- ನೀರೆ ನಿನ್ನ ಮಾತು ನಿಜವೇನೆ ನೀರ ಕಡಿದರೆ ಬೆಣ್ಣೆ ಬಂದಾದೇನೆ
- ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ
- ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ
- ನಯಶಾಲಿ ಆದವನು ಜಯಶಾಲಿ ಆದಾನು
- ನೆಂಟರೆಲ್ಲ ಖರೆ, ಕಂಟಲೆ ಚೀಲಕ್ಕೆ ಕೈ ಹಾಕಬೇಡ
- ನಿಜ ಆಡಿದರೆ ನಿಷ್ಠೂರ
- ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ
- ನಾಯೀನ ತಗೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದರೆ ... ಕಂಡು ಇಳಿಬಿತ್ತು
- ನಾಯಿ ಬಾಲ ಡೊಂಕು
- ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ ಹಾಗೆ
- ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೆ ?
- ನಾಯಿ ಹೆಸರು’ಸಂಪಿಗೆ’ಅಂತ
- ನಾಯಿ ಮೊಲೇಲಿ ಖಂಡುಗ ಹಾಲಿದ್ದರೇನು, ದೇವರಿಗಿಲ್ಲ ದಿಂಡರಿಗಿಲ್ಲ
- ನಾಯಿಗೆ ಹೊತ್ತಿಲ್ಲ;ನಿಲ್ಲಕ್ಕೆ ನೆಲೆಯಿಲ್ಲ
- ನಾಯಿಗೆ ವಯಸ್ಸಾದ್ರೆ ಅಜ್ಜ ಅಂತಾರಾ?
- ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು (ಮುದ್ದಣ)
- ನೀರಿನಲ್ಲಿ ಹೋಮ ಮಾಡಿದಂತೆ
- ನೂಲಿನಂತೆ ಸೀರೆ; ತಾಯಿಯಂತೆ ಮಗಳು
- ನೂರು ಜನಿವಾರ ಒಟ್ಟಿಗಿರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ
- ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ
- ನಗೋ ಗಂಡಸನ್ನೂ ಅಳೋ ಹೆಂಗಸನ್ನೂ ನಂಬಬೇಡ
- ನಗುವ ಹೆಂಗಸು, ಅಳುವ ಗಂಡಸು ಇಬ್ಬರನ್ನೂ ನಂಬಬಾರದು
- ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡ ಹಾಗೆ
- ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು
- ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
- ನಮ್ಮ ದೇವರ ಸತ್ಯ ನಮಗೆ ಗೊತ್ತು.
- ನನ್ನ ಮಗ ಎಂಟು ವರ್ಷಕ್ಕೆ ದಂಟು ಎಂದ
- ನರಿ ಕೂಗು ಗಿರಿ ಮುಟ್ಟುತ್ತದೆಯೆ ?
- ನರಿಗೆ ಹೇಳಿದರೆ ನರಿ ತನ್ನ ಬಾಲಕ್ಕೆ ಹೇಳಿತಂತೆ
- ನವಿಲಾಡಿತು ಅಂತ ಕೆಂಬೂತ ಪುಕ್ಕ ತೆರೆಯಿತು
- ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿತಂತೆ
- ನೆಂಟರಿಗೆ ದೂರ ; ನೀರಿಗೆ ಹತ್ತಿರ
- ನೆಚ್ಚಿನೆಮ್ಮೆ ಕೋಣನನ್ನೀಯಿತು
- ನೆಲಕ್ಕೆ ಬಿದ್‍ದ್ರೂ ಮೀಸೆ ಮಣ್ಣಾಗಿಲ್ಲ
- ನಿನ್ನ ಹಿತು(ಮುದ್ದು),ನನ್ನ ತಿಂತು
- ನಿಸ್ಸಹಾಯಕರ ಮೇಲೆ ಹುಲ್ಲುಕಡ್ಡಿ ಸಹ ಭುಸುಗುಡುತ್ತದೆ
[ಬದಲಾಯಿಸಿ] ಪ
- ಪಡುವಣ ಮನೆಗೆ ಮೂಡಣ ದೀಪ
- ಪರರ ಹಂಗಿಸಿ ಮಂಗ ಅನಿಸಿಕೊಂಡ
- ಪಾತ್ರವರಿತು ಜಗದ ಜಾತ್ರೆಗೆ ಸಲ್ಲಬೇಕು
- ಪಾಪ ಅಂದ್ರೆ ಕರ್ಮ ಬರ್ತದೆ
- ಪಾಪ ಅನ್ನೋದಕ್ಕೆ ಕೋಪವೇ ನೆಲೆಗಟ್ಟು
- ಪಾಪಿ ಸಮುದ್ರ ಹೊಕ್ಕರು ಮೊಣಕಾಲುದ್ದ ನೀರು
- ಪಾಲಿಗೆ ಬಂದದ್ದು ಪಂಚಾಮೃತ
- ಪಿಶಾಚಿ ಬಿಟ್ಟರೂ ನಿಶಾಚರ ಬಿಡ
- ಪುಣ್ಯ ಉಂಡು (=ಸುಖ ಅನುಭೋಗಿಸಿ) ತೀರಿತು, ಪಾಪ ತಿಂದು (=ಕಷ್ಟ ಅನುಭವಿಸಿ) ತೀರಿತು
- ಪೆದ್ದ ಮರದ ತುದಿಯೇರಿ ಅಣಿತಪ್ಪಿ ಬಿದ್ದು ಸತ್ತ
- ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು
- ಪ್ರಸ್ತಕ್ಕಿಲ್ಲದ ಮಾತು ಹತ್ತುಸಾವಿರವಿದ್ದೇನು
- ಪ್ರಾರಬ್ಧ ಬಂದ ಕಾಲಕ್ಕೆ ಒಂದಲ್ಲ ಒಂದು ಕೇಡು
- ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು
- ಪಾಲಿಗೆ ಬಂದದ್ದೆ ಪರಮಾನ್ನ.
- ಪಾಲಿಗೆ ಬಂದದ್ದು ಪಂಚಾಮೃತ
- ಪಾಪಿ ಚಿರಾಯು
- ಪಾಪಿ ಧನ ಪ್ರಾಯಶ್ಚಿತ್ತಕ್ಕೆ
- ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು
- ಪಾಯಸ ಮಾಡಿ ನಾಯಿ ಬಾಲದಲ್ಲಿ ತೊಳಸಿದ ಹಾಗೆ
- ಪಕ್ಕದ ಮನೇಗೆ ಬಿದ್ದ ಬೆಂಕಿ ಬಿಸಿ ತನ್ನ ಮನೇಗೆ ಬೀಳೋವರೆಗೂ ತಾಕಲ್ಲ
- ಪ್ರಥಮ ಚುಂಬನೇ ದಂತ ಭಗ್ನಮ್
- ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
- ಪುರಾಣ ಹೇಳೊಕೆ; ಬದನೆಕಾಯಿ ತಿನ್ನೋಕೆ
- ಪಾಪ ಅಂದ್ರೆ ಕರ್ಮ ಬರ್ತದೆ
- ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು
- ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು
[ಬದಲಾಯಿಸಿ] ಬ
- ಬಂಗಾರಕ್ಕೆ ಕುಂದಣವಿಟ್ಟಂತೆ
- ಬಂಡಾಟದ ನಡೆ ಚೆಂದ ಮಿಂಡಾಟದ ನುಡಿ ಚೆಂದ
- ಬಂದ ಅಥಿತಿಗೆ ಅನ್ನ ಇಕ್ಕದ ಬದುಕು ಯಾತಕ್ಕು ಬೇಡ
- ಬಂದರು ಬಾ ಅನ್ನದ ದರ್ಪಕುರುಡರ ಸಾವಸವೇ ಬೇಡ
- ಬಂಧುಗಳಿಲ್ಲದಿರೊ ಬಡತನ ಎಂದಿಗೂ ಬೇಡ
- ಬಚ್ಚಿಟ್ಟ ಆಸ್ತಿ ಹೊಂಚುತ್ತಿದ್ದವರ ಪಾಲಾಯ್ತು
- ಬಡವ ನೀ ಸೆಣಸಿ ಕೆಡಬೇಡ
- ಬಡವನಿಗೆ ಉಳಿದಷ್ಟೆ ಅಭಿಮಾನ
- ಬಡವರ ಮಾತು ನುಡಿನುಡಿಗೂ ಬೇಸರ
- ಬಣ ಬಣ ಬೆಳಕು ಹರಿದಾಗ ಕತ್ತಲು ಎತ್ತಲೊ
- ಬನ್ನ ಪಟ್ಟುಣ್ಣೋ ಬಿಸಿ ಅನ್ನಕ್ಕಿಂತ ತಂಗುಳೇ ಲೇಸು
- ಬರಿಗೆಟ್ಟ ಬದುಕಿಗಿಂತ ಕೊಂದು ತಿನ್ನೊ ಮಾರಿ ಲೇಸು
- ಬರೀ ಮಾತಾಡಿ ಬೈಯ್ಯಿಸಿಕೊಂಡ
- ಬರೋಳನ್ನು ನೆಚ್ಚಿ ಇರೋಳನ್ನು ಬಿಟ್ಟ
- ಬಲ್ಲಿದರೊಡನೆ ಸೆಣಸಿ ಮಾತಾಡಿದರೆ ಅಲ್ಲೇ ಬಂತು ಕೇಡು
- ಬಸುರಲ್ಲಿ ಬಂದ ಕೂಸು ಮುದ್ದು
- ಬಹುಮನದ ಹಾದಿ ಕೈಗೊಂಡರೆ ಸುಖವಿಲ್ಲ
- ಬಳ್ಳಿಗೆ ಕಾಯಿ ಭಾರವೇ
- ಬಾಡಿಗೆ ಎತ್ತೆಂದು ಬಡಿದು ಬಡಿದು ಹೂಡಬೇಕೆ
- ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು
- ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ
- ಬಾಯಲ್ಲಿ ಬೆಲ್ಲ ಕರುಳು ಕತ್ತರಿ
- ಬಾಲೇರ ಮನಸ್ಸು ನೆಲೆಯಿಲ್ಲ
- ಬಾಳಿ ಬದುಕುವರಿಗೆ ಹಾಳೂರ ಸುದ್ದಿ ಯಾಕೆ
- ಬಾಳಿಕೆಗೆಟ್ಟು ಬೆಸಲಾದ ಚೇಳಿನಂತಾದ
- ಬಾಳಿಬದುಕಿದವ ಕಲಿ(=ವಿದ್ಯೆ)ಕಲಿತ, ಬಾಳಲಾರದವ ಪಾಠ ಕಲಿತ
- ಬಿಟ್ಟವರ ಕಂಡು ಬಿಟ್ಟು ಬಾಳುಗೆಟ್ಟ
- ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು.
- ಬಿದ್ದಲ್ಲಿ ಸೋತಲ್ಲಿ ಹೊದಿದ್ದ ಬುದ್ಧಿ ತಪ್ಪಿತು
- ಬಿದ್ದಿನ (=ಅತಿಥಿ, ನೆಂಟ) ಬಂದು ಹಾಳು ಮನೇ ಯಜಮಾನ (ಮನೆಯೊಡೆಯ) ಕುಂತು ಹಾಳು
- ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು
- ಬಿಳಿ ಆನೆ ಸಾಕಿದ ಹಾಗೆ
- ಬೀಜ ಸಣ್ಣದಾದರೆ ಮರ ಸಣ್ಣದೋ
- ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು
- ಬೀದೀಲಿ ಹೋಗೋ ಮಾರೀನ ಮನೆಗೆ ಕರೆದಂತೆ
- ಬೀಳು ಭೂಮಿಗೆ ಬೀಜ ದಂಡ
- ಬುದ್ಧಿ ಉಳ್ಳವನಿಗೆ ಕರ್ಮ ತಿದ್ದಿ ಕೊಡುತಿತ್ತು
- ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ
- ಬೆಂದ ಮನೇಲಿ ಹಿರಿದದ್ದೇ ಲಾಭ
- ಬೆಕ್ಕಿಗೆ ಬೆಣ್ಣೆ ಕಂಡಿತು ಬಡಿಗೆ ಕಾಣಲಿಲ್ಲ
- ಬೆಕ್ಕಿನ ಕನಸಿನಲ್ಲಿ ಬರೀ ಇಲಿಗಳೇ
- ಬೆಣ್ಣೆಯೊಳಗಿನ ಕೂದಲು ತೆಗೆದಂತೆ
- ಬೆನ್ನಹಿಂದೆ ಬಿದ್ದು (ಓಡಿ)ಬನ್ನ ಪಟ್ಟ
- ಬೆರಳು ತೋರುದ್ರೆ ಅಂಗೈನೇ ನುಂಗಿದಂತೆ
- ಬೆಲ್ಲದ ಸಿಪಾಯಿ ಮಾಡಿ ಇರುವೆ ಹತ್ತರ ಕಳಿಸಿದ
- ಬೆಲ್ಲವಿಲ್ಲದಿದ್ದರೆ ಬೆಲ್ಲದಂಥ ಮಾತೂ ಇಲ್ಲವೇ?
- ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ
- ಬೇಕೆಂಬುದು ಬಾಳು ಸಾಕೆಂಬುದು ಸಾವು
- ಬೇಡಿದರೆ ಇಲ್ಲ ಅನ್ನೋದ್ ಕಷ್ಟ ನೀಡುವರ ಬೇಡ ಅನ್ನೋದ್ ಕಷ್ಟ
- ಬೇಲಿನೆ ಎದ್ದು ಹೊಲ ಮೇಯಿತಂತೆ
- ಬೇವು ಕಾಗೆಗೆ ಇಂಪು ಮಾವು ಕೋಗಿಲೆಗೆ ಇಂಪು
- ಬೇವು ಕಾಗೆಗೆ ಇಷ್ಟ , ಮಾವು ಕೋಗಿಲೆಗೆ ಇಷ್ಟ
- ಬೋನದ ಬುತ್ತಿ ತಪ್ಪಿ ಚಿತ್ತವಲ್ಲಭೆಯನ್ನು ಮರೆಸಿತ್ತು
- ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ
- ಭಂಗಿ ರಸ ನೆತ್ತಿಗೇರಿ ಬಿಂಗಿಯಂತೆ ಆಡಿದ
- ಭಕ್ತಿ ಉಳ್ಳಾತಗೆ ಮುಕ್ತಿ ,ಶಕ್ತಿ ಉಳ್ಳಾತಗೆ ಭುಕ್ತಿ
- ಭಲೆ ಜಟ್ಟಿ ಅಂದ್ರೆ ಕೆಮ್ಮಣ್ಣು ಮುಕ್ಕಿದ
- ಭೋಗಿ ಭೋಗದಲ್ಲಿ ನೆರೆದು ರೋಗಿಯಾದ, ಯೋಗಿ ಯೋಗದಲ್ಲಿ ನೆರೆದು ಯೋಗವಾದ
- ಬಾಣಲೆಯಿಂದ ಬೆಂಕಿಗೆ
- ಬಾಲ ಸುಟ್ಟ ಬೆಕ್ಕಿನ ಹಾಗೆ
- ಬಾಯಲ್ಲಿ ಬೆಣ್ಣೆ;ಬಗಲಲ್ಲಿ ದೊಣ್ಣೆ.
- ಬಾಯಿ ಬಿಟ್ಟರೆ ಬಣ್ಣಗೇಡು
- ಬಾಯಿದ್ದೋರು ಬರಗಾಲದಲ್ಲೂ ಬದುಕಿದರು
- ಬೇಲಿಯೇ ಎದ್ದು ಹೊಲ ಮೇದಂತೆ
- ಬೇಲಿಯೇ ಎದ್ದು ಹೊಲ ಮೇಯ್ದಂತೆ
- ಬೀದೀಲಿ ಹೋಗೋ ಮಾರೀನ ಮನೆ ಹೊಕ್ಕು ಹೋಗು ಅಂದಂತಾಯ್ತು
- ಬೀದೀಲಿ ಹೊಗೊ ಮಾರೀನ ಮನೆಗೆ ಕರೆದಂಗೆ
- ಬಡ್ಡಿ ಬಾಯಿಗಂಜ್ತೀಯೋ,ದೊಡ್ಡೆತ್ತಿನ ಕೋಡಿಗಂಜ್ತೀಯೋ
- ಬಡ ದೇವರನ್ನು ಕಂಡರೆ ಬಿಲ್ಪತ್ರೇನೂ ’ಭುಸ್’ ಅಂತಂತೆ
- ಬಡವ ನೀ ಮಡಗಿದ ಹಾಗಿರು
- ಬಡವನ ಕೋಪ ದವಡೆಗೆ ಮೂಲ
- ಬಡವನ ಸಿಟ್ಟು ದವಡೆಗೆ ಮೂಲ
- ಬಡವರ ಮನೆ ಊಟ ಚೆನ್ನ, ದೊಡ್ಡವರ ಮನೆ ನೋಟ ಚೆನ್ನ
- ಬಡವೆ ಸೀರೆ ಉಡದೆ ಮಾಸಿತು
- ಬಂದ ದಾರಿಗೆ ಸುಂಕವಿಲ್ಲ
- ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ
- ಬೈದು ಹೇಳಿದವರು ಬದುಕಕ್ಕೆ ಹೇಳಿದರು
- ಬಲ್ಲವನೇ ಬಲ್ಲ ಬೆಲ್ಲದ ರುಚಿಯ
- ಬರೀ ಕೈಗಿಂತ ವಾಸಿ ಹಿತ್ತಾಳೆ ಕಡಗ
- ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು
- ಬಸವನ ಹಿಂದೆ ಬಾಲ,ಸೂಜಿ ಹಿಂದೆ ದಾರ
- ಬೆಳ್ಳಗಿರೋದೆಲ್ಲಾ ಹಾಲಲ್ಲ
- ಬೆಳ್ಳಗಿರೋದೆಲ್ಲ ಹಾಲಲ್ಲ
- ಬೆಳಗೂ ಹೆತ್ತ ಮಗೂನ ನಾಯಿ ಕೊಂಡೊಯ್ಯಿತಂತೆ
- ಬೆಳೆಯುವ ಪೈರು ಮೊಳಕೆಯಲ್ಲಿ
- ಬೆಂದ ಮನೆಗೆ ಹಿರಿದದ್ದೇ ಲಾಭ
- ಬೆಂಕಿ ಇಲ್ಲದೆ ಹೊಗೆ ಏಳಲ್ಲ
- ಬೆಣ್ಣೇಲಿ ಕೂದಲು ತೆಗೆದ ಹಾಗೆ
- ಬೆಟ್ಟ ಅಗೆದು ಇಲಿ ಹಿಡಿದಂತೆ
- ಬೆಕ್ಕಿಗೆ ಚೆಲ್ಲಾಟ: ಇಲಿಗೆ ಪ್ರಾಣಸಂಕಟ
- ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ
- ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ
- ಬಿಡಿಯಕ್ಕೆ ಬಸಿರಾದರೆ ಹಡೆಯೋದು ಕಷ್ಟ
- ಬಿಟ್ಟಿ ಬಂದದ್ದಾದರೆ ನನಗೂ ಇರಲಿ,ನಮ್ಮ ತಾತಂಗೂ ಇರಲಿ.
- ಬಿರಿಯಾ ಉಂಡ ಬ್ರಾಹ್ಮಣ ಭಿಕ್ಷೆ ಬೇಡಿದ
- ಬಿಸಿ ತುಪ್ಪ; ನುಂಗೋದಕ್ಕೂ ಆಗೊಲ್ಲ; ಉಗುಳೋದಕ್ಕೂ ಆಗೊಲ್ಲ
- ಬೊಗಳುವ ನಾಯಿ ಕಚ್ಚುವುದಿಲ್ಲ
- ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು
- ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ
- ಬಾಯಲ್ಲಿ ಬೆಲ್ಲ ಕರುಳು ಕತ್ತರಿ
- ಬೇಲಿನೆ ಎದ್ದು ಹೊಲ ಮೇಯಿತಂತೆ
- ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು
- ಬಂಟರ ಅಬ್ಬರ ಸೇವಿನ ಗೊಬ್ಬರ
- ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ
- ಬಿದ್ದರೂ ಮೀಸೆ ಮಣ್ಣಾಗಲಿಲ್ಲ
- ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು
- ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ
[ಬದಲಾಯಿಸಿ] ಮ
- ಮಂಡಕ್ಕಿ ತಿಂದ ಮಗ ಮದ್ದಾನೆ ತರುಬಿದ ಮೃಷ್ಟಾನ್ನ ತಿಂದ ಮಗ ನೊಣ ಝಾಡಿಸಿದ
- ಮಂತ್ರ ತಂತ್ರ ದೈವ ಒಲ್ಲದೆ ತನಗೆ ಸ್ವಂತವಲ್ಲ
- ಮಂತ್ರಿಇಲ್ಲದ ರಾಜ್ಯ ಕೀಲು ಮುರಿದ ಯಂತ್ರದಂತೆ
- ಮಂದಾಳಿಗೊಂದು ಮುಂದಾಳು
- ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು
- ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು
- ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದ
- ಮದ್ದು ಬುದ್ಧಿ ದೈವ ಒಲ್ಲದೆ ತಿದ್ದವು
- ಮನಸ್ಸಿಲ್ಲದವಳ ಒಡನಾಟ ಮಾತುಮಾತಿಗು ಬೇಸರ
- ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
- ಮರ ಕಡಿದು ಮೈಮೇಲೆ ಹಾಕಿಕೊಂಡ್ರಂತ
- ಮರಗಿಣಿಯ ಕೂಡೆ ಆಡಿ ಅರಗಿಣಿ ಕೇಟ್ಟಿತು
- ಮಲ್ಲಿಗೆ ವನದಲ್ಲಿ ತುರುಬಿಲ್ಲದಾಕೆ ಸುಳಿದಂತೆ
- ಮಳೆಗಾಲದೇಲಿ ಚಿಗಿಯೂದಿಲ್ಲ ಬೇಸಿಗೇಲಿ ಒಣಗೂದಿಲ್ಲ
- ಮಳೇ ನೀರ ಬಿಟ್ಟು ಮಂಜಿನ ನೀರಿಗೆ ಕೈ ಒಡ್ಡಿದಂತೆ
- ಮಾಡಿದ ಕರ್ಮ ಬೆನ್ನಾಡಿ ಬಂತು
- ಮಾಡಿದ ಕರ್ಮ ಹಿಡಿದೊಯ್ಯದೆ ಬಿಡದು
- ಮಾಡಿದ ಪಾಪ ದಾನದಿಂದ ಹೋದೀತೆ
- ಮಾಡಿದ್ದುಣ್ಣೋ ಮಾರಾಯ
- ಮಾಡುವವ ಉತ್ತಮ ಆಡಿ ಮಾಡದವ ಅಧಮ
- ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ
- ಮಾತಿಂದಲೇ ಉಪಚಾರ ಮಾತಿಂದಲೇ ಅಪಚಾರ
- ಮಾತಿಂದಲೇ ನಗೆನುಡಿ ಮಾತಿಂದಲೇ ಹಗೆಕೊಲೆ
- ಮಾತಿಗೆ ಮಾತುಗಳ ಓತು ಸಾಸಿರ ಉಂಟು
- ಮಾತಿಗೊಂದು ಮಾತು ಬಂತು ವಿಧಿ ಬಂದು ಆತುಕೊಣ್ತು
- ಮಾತಿನ ಬೊಮ್ಮ ತೂತಾದ ಮಡಕೆಯ ಪರಿ
- ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ
- ಮಾತು ಬೆಳ್ಳಿ, ಮೌನ ಬಂಗಾರ
- ಮಾತು ಮನೆ ಮುರೀತು, ತೂತು ಒಲೆ ಕೆಡಿಸ್ತು
- ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ
- ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ ಕಣ್ಣು ಕುರಿ ಮ್ಯಾಲೆ
- ಮಾರಿಯ ಹೋತ ತೋರಣದ ಚಿಗುರು ಬಯಸಿತಂತೆ
- ಮಾಳಿಗೆ ಮನೆ ಬೇಕು ಜೋಳಿಗೆ ಹಣ ಬೇಕು ಮಾದೇವನಂಥಾ ಮಗ ಬೇಕು ಗೌರಿಯಂಥಾ ಸೊಸೆ ಬೇಕು
- ಮಿಂದರೆ ಮೈಯ ಕೊಳೆ ಹೋಯ್ತು
- ಮಿಂದು ಮೈಲಿಗೆ ಉಡೊದಾದ್ರೆ ಜಳಕದ ದಂದುಗವೇಕೆ
- ಮುಚ್ಚಿ ಹೇಳಿದರೆ ಒಗಟು ಬಿಚ್ಚಿ ಹೇಳಿದರೆ ಒರಟು
- ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು
- ಮುತ್ತು ಚಿಪ್ಪಲ್ಲಿ ಹುಟ್ಟಿ ಮುಕುಟದ ಮಣಿಯಾಯ್ತು
- ಮುದುಕೀ ನಿನ್ನಾಟ ಮುಂದೈತಿ
- ಮುದ್ದು ಮುದ್ದು ತೊಗಲೆ ಬಿದ್ದು ಬಿದ್ದು ನಗಲೆ
- ಮುಲಾಜಿಗೆ ಬಸುರಾಗಿ ಹೇರೋಕೆ ತಾವಿಲ್ಲ
- ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ
- ಮೂಕ ಪ್ರಾಣಿಯ ಕೊಲ್ಲದ್ದು ಜೀವಧರ್ಮ
- ಮೂಗು ಹಿಡಿದರೆ ಬಾಯಿ ತಾನೇ ತೆರೆಯುವುದು
- ಮೂರೂ ಬಿಟ್ಟೋಳು ಊರಿಗೆ ದೊಡ್ಡೋಳು
- ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು
- ಮೆಲ್ಲಗೆ ಹರಿಯೋ ನೀರು ಕಲ್ಲ ಕೊರೆದಿತ್ತು
- ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
- ಮೊಂಡ ಕೊಡಲಿ ರಟ್ಟೆಗೆ ಮೂಲ
- ಮೊಂಡ ಮಾವನಿಗೊಬ್ಬ ಭಂಡ ಅಳಿಯ
- ಮೊಸರ ಕಡೆದರೆ ಬೆಣ್ಣೆ ಒಸೆದು ಬಂತು
- ಮೋಕ್ಷಕ್ಕೆ ಗ್ನಾನ ಬೇಕು ಯೋಗಕ್ಕೆ ಧ್ಯಾನ ಬೇಕು
- ಮೋಕ್ಷಮಂತ್ರ ತಿಳಿದವನಿಗೆ ವೇದಮಂತ್ರದ ಗೊಡವೆಯೆ?
- ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ
- ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ
- ಮಾತು ಬೆಳ್ಳಿ, ಮೌನ ಬಂಗಾರ
- ಮಾತು ಮನೆ ಮುರೀತು, ತೂತು ಒಲೆ ಕೆಡಿಸ್ತು
- ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
- ಮೂರೂ ಬಿಟ್ಟೋಳು ಊರಿಗೆ ದೊಡ್ಡೋಳು
- ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು
- ಮದುವೆ ಮಡಿನೋಡು ಮನೆ ಕಟ್ಟಿ ನೋಡು
- ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದ
- ಮಕ ನೋಡಿ ಮಾರು ಹೋದ, ಗುಣ ನೋಡಿ ದೂರ ಹೋದ
- ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
- ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ
- ಮುದ್ದು ಮುದ್ದು ತೊಗಲೆ ಬಿದ್ದು ಬಿದ್ದು ನಗಲೆ
- ಮುಲಾಜಿಗೆ ಬಸುರಾಗಿ ಹೇರೋಕೆ ತಾವಿಲ್ಲ
- ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು
- ಮಾಡೋದು ಅನಾಚಾರ ; ಮನೆ ಮುಂದೆ ಬೃಂದಾವನ
- ಮಾಡೋರನ್ನು ಕಂಡರೆ ನೋಡು ನನ್ನ ಸಿರೀನ
- ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುತ್ತೆ
- ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗತ್ತೆ
- ಮಾಡಿದೋರ ಪಾಪ ಆಡಿದೋರ ಬಾಯಲ್ಲಿ
- ಮಾಡಿದರೆ ಮನೆ ; ಹೂಡಿದರೆ ಒಲೆ
- ಮಾಡಿದ್ದುಣ್ಣೋ ಮಹರಾಯ
- ಮಾಡಿದುಣ್ಣೊ ಮಾರಾಯ
- ಮಾಘ ಕಾವ್ಯ ಮಗನಿಗೆ ಬೇಡ
- ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ್ ಕಣ್ಣು ಕುರಿ ಮ್ಯಾಲೆ.
- ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು
- ಮಾತು ಬೆಳ್ಳಿ; ಮೌನ ಬಂಗಾರ
- ಮಾತು ಮನೆ ಕೆಡಿಸಿತು; ತೂತು ಒಲೆ ಕೆಡಿಸಿತು
- ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ
- ಮೇಯುವುದಕ್ಕೆ ಮುಂದೆ ;ಮೀಯುವುದಕ್ಕೆ ಹಿಂದೆ
- ಮೀಸೆ ಬಂದಾಗ ದೇಶ ಕಾಣದು ಮೊ.. ಬಂದಾಗ ನೆಲ ಕಾಣದು
- ಮೋಟಾಳಿಗೊಂದು ಚೋಟಾಳು
- ಮೂಗಿಗಿಂತ ಮೂಗುತಿ ಭಾರ
- ಮೂರೂ ಬಿಟ್ಟೋನು,ಊರಿಗೆ ದೊಡ್ಡೋನು
- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
- ಮೂರು ವರ್ಷಕ್ಕೆ ಬಂದಿದ್ದು ಮೂವತ್ತು ವರ್ಷಕ್ಕೆ ಬಂತು
- ಮಘೆ ಮಳೆ ಬಂದಷ್ಟೂ ಒಳ್ಳೇದು, ಮನೆ ಮಗ ಉಂಡಷ್ಟೂ ಒಳ್ಳೇದು
- ಮಳ್ಳೀ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದ್ಲಂತೆ
- ಮಳೆ ಹುಯ್ದರೆ ಕೇಡಲ್ಲ; ಮಗ ಉಂಡರೆ ಕೇಡಲ್ಲ
- ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ
- ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೆ ?
- ಮಂತ್ರಕ್ಕಿಂತ ಉಗುಳೇ ಜಾಸ್ತಿ
- ಮದುವೇಲಿ ಗಂಡು, ಸ್ಮಶಾನ ಯಾತ್ರೇಲಿ ಹೆಣವಾಗೋ ಬಯಕೆ
- ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು
- ಮದುವೆಯಾಗೋ ಗುಂಡ ಅಂದರೆ ನೀನೇ ನನ್ನ ಹೆಂಡತಿಯಾಗು ಅಂದ ಹಾಗೆ
- ಮಗೂನ ಚಿವುಟೋದು, ತೊಟ್ಟಿಲು ತೂಗೋದು
- ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ
- ಮಕ್ಕಳಿಲ್ಲದ ಮನೆಯಲ್ಲಿ ಅಜ್ಜ ಅಂಬೆಗಾಲಿಟ್ಟ
- ಮಕ್ಕಳಿಸ್ಕೂಲ್ ಮನೇಲಲ್ವೇ? (ಕೈಲಾಸಂ)
- ಮನೇಗೆ ಬೆಂಕಿ ಬಿದ್ದಾಗ ಭಾವಿ ತೋಡಕ್ಕೆ ಶುರು ಮಾಡಿದರಂತೆ
- ಮನೇಲಿ ಇಲಿ,ಬೀದೀಲಿ ಹುಲಿ
- ಮನಸ್ಸಿದ್ದರೆ ಮಾರ್ಗ
- ಮನೆ ದೇವರನ್ನ ಮೂಲೆಗಿಟ್ಟು ಬೆಟ್ಟದ ದೇವರಿಗೆ ಬುತ್ತಿ ಹೊತ್ತಂತೆ.
- ಮನೆ ತುಂಬ ಮುತ್ತಿದ್ದರೆ ...ಗೂ ಪೋಣಿಸಿಕೊಂಡರಂತೆ
- ಮನೆಗೆ ಮಾರಿ, ಪರರಿಗೆ ಉಪಕಾರಿ
- ಮೆತ್ತಗಿದ್ದಲ್ಲಿ ಮತ್ತೊಂದು ಗುದ್ದಲಿ
- ಮೆತ್ತಗಿದ್ದವರನ್ನು ಮೊಣಕೈಯಲ್ಲಿ ಗುದ್ದಿದರು
- ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?
- ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು
- ಮೊಲ ಎಬ್ಬಿಸಿ ...ಕ್ಕೆ ಕೂತರು
- ಮುಖ ನೋಡಿ ಮಣೆ ಹಾಕು
- ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ
- ಮುಂದೆ ಬರೋ ಕೋಡಿಗಿಂತ ಹಿಂದೆ ಬರೋ ಬಾಲಾನೇ ವಾಸಿ
- ಮುಟ್ಟಿದೋರ ಮೇಲೆ ಬಿಟ್ಟೆ ನನ್ನ ಪ್ರಾಣ
- ಮುದಿ ... ಮಹಾ ಪತಿವ್ರತೆ (ವೃದ್ಧ ನಾರೀ ಪತಿವ್ರತಾ)
- ಮುಸುಕಿನೊಳಗೆ ಗುದ್ದಿಸಿಕೊಂಡಂತೆ
- ಮುತ್ತು ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ತೊಟ್ರಂತೆ.
[ಬದಲಾಯಿಸಿ] ಯ
- ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ
- ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
- ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ
- ಯಾರನ್ನ ನಂಬಿದರು ಆರೈದು ನಂಬಬೇಕು
- ಯಾರಿಗೂ ತೋರದಂತೆ ದೈವ ತನ್ನೊಳಗೆ ಸಾರಿಹುದು
- ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
- ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
- ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು
- ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ
- ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮುದ್ದೆ ಉಣ್ತಾ ಮಜ್ಜಿಗೆ ಓಡಾಟ
- ಯೋಗ ಇದ್ದಷ್ಟೇ ಭೋಗ
- ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ
- ಯೋಗಿಗೆ ರಾಗ ಇರಬಾರದು ಭೋಗಿಗೆ ರೋಗ ಇರಬಾರದು
- ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ
- ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ
- ಯಾರದೊ ದುಡ್ಡಿನಲ್ಲಿ ಯೆಲ್ಲಮನ್ನ ಜಾತ್ರೆ
- ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೊ
- ಯಂಕ,ಸೀನ,ನೊಣ ಅಂತ ಮನೇಲಿ ಮೂರೇ ಜನ
- ಯಥಾ ರಾಜಾ ತಥಾ ಪ್ರಜಾ
- ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
- ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
- ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
- ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ
- ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು
- ಯೋಗ ಇದ್ದಷ್ಟೇ ಭೋಗ
- ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ
- ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ
- ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ
- ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
- ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮುದ್ದೆ ಉಣ್ತಾ ಮಜ್ಜಿಗೆ ಓಡಾಟ
- ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ
[ಬದಲಾಯಿಸಿ] ರ
- ರಂಭೆಯಂಥ ಹೆಣ್ತೀನ ಬಿಟ್ಟು ದೊಂಬಿತಿಯ ಹಿಂದೆ ಹೋದ
- ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು
- ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ
- ರಸವಳ್ಳಿ ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ
- ರಸವಳ್ಳಿ ಹೆಣ್ಣು ಒಲಿವಂತೆ ಮಾಡುವುದು ಎಳ್ಳ ತಿಂದ ಋಣ
- ರಸಿಕನ ನುಡಿ ತಿಂಗಳ ಬೆಳಕಿನಂತೆ
- ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
- ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
- ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
- ರಾಜ ಇರೋತನಕ ರಾಣಿ ಭೋಗ
- ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
- ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
- ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ
- ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
- ರಾಯ ಸತ್ತರೂ ಹೆಣ ; ನಾಯಿ ಸತ್ತರೂ ಹೆಣ
- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
- ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
- ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ
- ರಾಮ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ
- ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ
- ರಾವಣಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ
- ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು
- ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ
- ರೋಗಿ ಬಯಸಿದ್ದು ಹಾಲು-ಅನ್ನ ವೈದ್ಯ ಹೇಳಿದ್ದು ಹಾಲು-ಅನ್ನ
- ರಂಗನ ಮುಂದೆ ಸಿಂಗನೆ ? ಸಿಂಗನ ಮುಂದೆ ಮಂಗನೆ ?
- ರತ್ನ ತಗೊಂಡು ಹೋಗಿ ಗಾಜಿನ ತುಂಡಿಗೆ ಹೋಲಿಸಿದರು
- ರವಿ ಕಾಣದ್ದನ್ನು ಕವಿ ಕಂಡ
- ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ
- ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
- ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
- ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
- ರಾಜ ಇರೋತನಕ ರಾಣಿ ಭೋಗ
- ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
- ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
- ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
- ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು
- ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ
- ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
[ಬದಲಾಯಿಸಿ] ಲ
- ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
- ಲಕುಮಿ ತೊಲಗಿದ ಬಳಿಕ ಕುಲ ವೀರವಿದ್ದು ಫಲವಿಲ್ಲ
- ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು
- ಲಕ್ಷ್ಮಿ ಚಂಚಲೆ
- ಲಲನೆಯರ ಒಲುಮೆ ತೊಲಗಿದರೆ ಇಲ್ಲ
- ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ
- ಲಿಂಗ ಹರಿದ ಮೇಲೆ ಜಂಗಮನ ಹಂಗೇನು
- ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
- ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ
- ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
- ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
- ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು
- ಲಿಂಗ ಹರಿದ ಮೇಲೆ ಜಂಗಮನ ಹಂಗೇನು
- ಲಾಲಿಸಿದರೆ ಮಕ್ಕಳು ; ಪೂಜಿಸಿದರೆ ದೇವರು
- ಲಂಘನಮ್ ಪರಮೌಷಧಮ್
[ಬದಲಾಯಿಸಿ] ವ
- ವಜ್ರಕ್ಕೆ ಸಾಣಿ ಹಿಡಿದಂತೆ
- ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು
- ವಶಗೆಡದೆ ಹಸಗೆಡಲ್ಲ
- ವಿದ್ಯೆ ಇಲ್ಲದವನ ಮೊರೆ ಹಾಳೂರ ಹದ್ದಿನಂತೆ
- ವಿದ್ಯೆ ಬಲ್ಲವ ಇದ್ದಲ್ಲು ಸಲ್ಲುವ ಹೋಗಿದ್ದಲ್ಲು ಸಲ್ಲುವ
- ವಿದ್ಯೆ ಬಲ್ಲವ ಎಲ್ಲಿದ್ದರು ಸಲ್ಲುವ
- ವಿಧಿ ಕಾಣದ ಎಡೆಗಳಿಲ್ಲ
- ವಿಧಿ ಮುನಿದರೆ ಸರಿ ಬೆಸವಾಯ್ತು
- ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
- ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
- ವೇದ ಸುಳ್ಳಾದರೂ ಗಾದೆ ಸುಳ್ಳಾಗದು
- ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ
- ವಿದ್ಯೆ ಇಲ್ಲದವನು ಹದ್ದಿಗಿಂತಲೂ ಕಡೆ
- ವಿನಾಶ ಕಾಲೇ ವಿಪರೀತ ಬುದ್ಧಿ
- ವ್ರತ ಕೆಟ್ಟರೂ ಸುಖ ಪಡಬೇಕು
- ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
- ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
[ಬದಲಾಯಿಸಿ] ಶ
- ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
- ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ
- ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
- ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು
- ಶಂಖದಿಂದ ಬಂದರೇ ತೀರ್ಥ
- ಶಂಖದಿಂದ ಬಿದ್ದರೆ ತೀರ್ಥ
- ಶರಣರ ಬದುಕನ್ನು ಅವರ ಮರಣದಲ್ಲಿ ನೋಡು
- ಶೆಟ್ಟಿ ಶೃಂಗಾರ ಆಗೋದ್ರಲ್ಲಿ ಪಟ್ಣ ಕೆಡ್ತು
- ಶೆಟ್ಟಿ ಬಿಟ್ಟಲ್ಲೆ ಪಟ್ಣ
- ಶಿಸ್ತುಗಾರ ಪುಟ್ಟಶಾಮಿ
- ಶಿವ ಪೂಜೇಲಿ ಕರಡಿ ಬಿಟ್ಟಂಗೆ
- ಶಿವಪೂಜೇಲಿ ಕರಡಿಗೆ ಬಿಟ್ಟ ಹಾಗೆ
- ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಲ್ಲೋ ಮಾಮ ಅಂದ ಹಾಗೆ
- ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
- ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು
- ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ
- ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
[ಬದಲಾಯಿಸಿ] ಸ
- ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
- ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು
- ಸಂತೇಲಿ ಮಂತ್ರ ಹೇಳಿದಂಗೆ
- ಸಂತೇಲಿ ಮನೇ ಮಾಡಿ ಸದ್ದಿಗಂಜೂದೇ
- ಸಂದೀಲಿ ಸಮಾರಾಧನೆ ಮಾಡ್ದಂಗೆ
- ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ
- ಸಜ್ಜನರ ಸಂಗ ಹೆಜ್ಜೇನು ಸವಿದಂತೆ
- ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ
- ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ
- ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ
- ಸತ್ತು ಕೊಳ್ಳೋ ಸೊರ್ಗಕ್ಕಿಂತ ಬದುಕಿ ಕೊಳ್ಳೋ ನರಕ ಲೇಸು
- ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
- ಸಮತೆ ತೊಟ್ಟು(=ಧರಿಸಿ) ಪದವಿ ಮುಟ್ಟು
- ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
- ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ
- ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ)
- ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
- ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
- ಸರಿದರೆ ಒತ್ತಣ್ಣ ಒತ್ತಿದರೆ ಸರಿಯಣ್ಣ
- ಸರಿಯಾದ ಎಚ್ಚರಿಕೆ ಇಲ್ಲದೆ ಹರಕೆಯ ಕುರಿಯಾದ
- ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
- ಸಾದೆತ್ತಿಗೆ ಎರಡು ಹೇರು (ಹೊರೆ)
- ಸಾಮವೇದದ ಗಾನ ಭೂಮಿ ದಾನದ ಫಲವ ಜಂಬೂದ್ವೀಪದವರೇ ಬಲ್ಲರು
- ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
- ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
- ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
- ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ
- ಸಾಲ ಕೊಳ್ಳುವಾಗ ಒಂದುರಾಗ, ಸಾಲ ಹೊಳ್ಳಿ ಕೊಡುವಾಗ ನಾನಾರಾಗ
- ಸಾಲ ಕೊಳ್ಳುವಾಗ ಹಾಲು ಕುಡಿದಂತೆ, ಸಾಲ ತಿರುಗಿ ಕೊಡುವಾಗ ಕಿಬ್ಬದಿ ಕೀಲು ಮುರಿದಂತೆ
- ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ
- ಸಾಲಗಾರನ ಮನೆಗೆ ಸವುದೆ ಹೊತ್ತರೆ ಮೇಲಣ ಬಡ್ಡಿಗೆ ಸಮವಾಯಿತು
- ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
- ಸಾವಿರ ಕೊಟ್ಟರೂ ಸವತಿ ಮನೆ ಬೇಡ
- ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ
- ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ
- ಸಾವಿರ ಸುಳ್ಳು ಹೇಳಿ ಒಂಡು ಮಡುವೆ ಮಾಡು
- ಸಿಟ್ಟು ಬಂದರೆ ಪಡಿ ಹಿಟ್ಟು ಮುಕ್ಕು
- ಸಿಡಿಲು ಬಡಿದರೆ ಅಂಗೈಲಿ ಹಿಡಿದ ಕೊಡೆ ಕಾಪಾಡಿತೇ
- ಸಿದ್ದಿಗಿಂತ ಬಲವಿಲ್ಲ ಬುದ್ಧಿಗಿಂತ ಹಿರಿದಿಲ್ಲ
- ಸಿರಿ ಬಂದ ಕಾಲದಲಿ ಕರದಲಿ ಧರ್ಮ ಬೇಕು
- ಸಿರಿ ಸೋಂಕಿದವರ ಪರಿ ಬೇರೆ
- ಸಿರಿತನ ಇರೂತನ ಪಿರಿಪಿರಿ ಸಿರಿಹೋದ ಮರುದಿನ ಕಿರಿಕಿರಿ
- ಸಿರಿತನ ಇರೂತನ ಹಿರಿತನ ಘನ
- ಸಿರಿತನ ಇರೂತನ ಹಿರಿತನ ಸಿರಿಹೋದ ಮರುದಿನ ಕಿರಿತನ
- ಸಿರಿಯಣ್ಣ ಉಳ್ಳನಕ ಹಿರಿಯಣ್ಣ ಇಲ್ಲಾದಗ ನಡಿಯಣ್ಣ
- ಸಿರಿಯವ್ವನದ ಹೆಣ್ಣು ಸಕ್ಕರೆ ಬೊಂಬೆಯಂತೆ
- ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
- ಸುಡುವ ಮನೆಯ ಗಳ ಹಿರಿದಂತೆ
- ಸುಳ್ಳನ ಮಾತು ಕೆಸರೊಳಗೆ ಮುಳ್ಳು ತುಳಿದಂತೆ
- ಸುಳ್ಳು ದೇವರಿಗೆ ಕಳ್ಳ ಪೂಜಾರಿ
- ಸುಳ್ಳು ಹೇಳಿದರೂ ನಿಜದ ತಲೆಯ ಮೇಲೆ ಹೊಡೆದಂಗೆ ಹೇಳಬೇಕು
- ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
- ಸೂಳೆ ಪಾಪ ಸನ್ಯಾಸಿಗೆ
- ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
- ಸೇರಿಗೆ ಸವ್ವಾ ಸೇರು
- ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
- ಸೊಕ್ಕುವುದು ಕೆಕ್ಕರಿಸಿ ನೋಡುವುದು ಸೇರಕ್ಕಿಯ ಗುಣ
- ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು
- ಸೊಲ್ಲಿನ ಬೇದ ತಿಳಿದ ಕಿರಿಯ ಎಲ್ಲರಿಗೂ ಹಿರಿಯ
- ಸಾವಿರ ಚಿತ್ತಾರ ಮಸಿ ನುಂಗಿತು
- ಸಾವಿರ ಕುದುರೆ ಸರದಾರ, ಮನೆ ಹೆಂಡತಿ ಕಾಸ್ತಾರ
- ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು
- ಸಾವಿರ ಉಳಿ ಪೆಟ್ಟು,ಒಂದು ಚಿತ್ತಾರ
- ಸಾಯ್ತೀನಿ ಸಾಯ್ತೀನಿ ಅಂದೋಳು ಸಾವಿರ ಮುದ್ದೆ ನುಂಗಿದಳಂತೆ.
- ಸೇರಿಗೆ ಸವ್ವಾಸೇರು
- ಸೀರೆ ಗಂಟು ಬಿಚ್ಚೋವಾಗ ದಾರದ ನಂಟು ಯಾರಿಗೆ ಬೇಕು?
- ಸೋದರ ಮಾವನ ಚಾಳು ತುಂಡಪುಂಡರ ಪಾಲು
- ಸೂಳೆ ಕೈಲಿ ಜೋಳ ಕುಟ್ಟಿಸಿದ ಹಾಗೆ
- ಸೂಳೆ ಮುಪ್ಪಾಗಿ ಗೊರವಿತ್ತಿಯಾದಳು
- ಸೂಳೆಗೆ ಮದುವೆ ಮಾಡಿದ ಹಾಗೆ
- ಸಂದೀಲಿ ಸಮಾರಾಧನೆ
- ಸಂಕಟ ಬಂದಾಗ ವೆಂಕಟರಮಣ
- ಸಂಸಾರ ಗುಟ್ಟು; ವ್ಯಾಧಿ ರಟ್ಟು
- ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ
- ಸಂತೆ ಸೂಳೆ ನೆಚ್ಚಿಕೊಂಡು ಮನೆ ಹೆಂಡಿರನ್ನ ಬಿಟ್ಟರಂತೆ.
- ಸಂತೆಗೂ ಮುಂಚೆ ಗಂಟು ಕಳ್ಳರು ನೆರೆದರಂತೆ
- ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ
- ಸದಾಶಿವನಿಗೆ ಅದೇ ಧ್ಯಾನ
- ಸಗಣಿಯವನ ಸರಸಕ್ಕಿಂತ, ಗಂಧದವನ ಗುದ್ದಾಟ ಮೇಲು
- ಸಗಣಿಯವನೊಡನೆ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು
- ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ
- ಸಜ್ಜನರ ಸಂಗ ಹೆಜ್ಜೇನು ಸವಿದಂತೆ
- ಸಲಿಗೆ ಕೊಟ್ಟ ಸೊಣಗ ಸಟ್ಟುಗ ನೆಕ್ಕಿತಂತೆ
- ಸಮುದ್ರ ದಾಟಿದವನಿಗೆ ಹಸುವಿನ ಹೆಜ್ಜೆ ದೊಡ್ಡದೆ
- ಸಮುದ್ರದ ಮದ್ಯೆ ಇದ್ದರೂ ಉಪ್ಪಿಗೆ ಬರವಂತೆ
- ಸಮುದ್ರದ ನೆಂಟಸ್ತನ ; ಉಪ್ಪಿಗೆ ಬಡತನ
- ಸನ್ಯಾಸಿ ಬೆಕ್ಕು ಸಾಕಿದ ಹಾಗೆ
- ಸನ್ಯಾಸಿ ಸಂಸಾರ ಕಟ್ಟಿಕೊಂಡ ಹಾಗೆ
- ಸರಿಸರಿಯಾಗಿದ್ರೆ,ಪರಿಪರಿ ನೆಂಟರು
- ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ
- ಸುಂಕದವನ ಮುಂದೆ ಸುಖದುಃಖವೇ
- ಸ್ವತಂತ್ರವೋ,ಸ್ವರ್ಗಲೋಕವೋ
- ಸಾದೆತ್ತಿಗೆ ಎರಡು ಹೇರು (ಹೊರೆ)
- ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ
- ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ
- ಸಾಲಗಾರನ ಮನೆಗೆ ಸವುದೆ ಹೊತ್ತರೆ ಮೇಲಣ ಬಡ್ಡಿಗೆ ಸಮವಾಯಿತು
- ಸಾವಿರ ಕೊಟ್ಟರೂ ಸವತಿ ಮನೆ ಬೇಡ
- ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
- ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ
- ಸಾವಿರ ಸುಳ್ಳು ಹೇಳಿ ಒಂಡು ಮಡುವೆ ಮಾಡು
- ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು
- ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ
- ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
- ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
- ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
- ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
- ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ
- ಸಂದೀಲಿ ಸಮಾರಾಧನೆ ಮಾಡ್ದಂಗೆ
- ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ
- ಸಂತೇಲಿ ಮಂತ್ರ ಹೇಳಿದಂಗೆ
- ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
- ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು
- ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
- ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ
- ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
- ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ)
- ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
- ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
- ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ
- ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ
- ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
- ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
- ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
- ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು
- ಸುಳ್ಳು ದೇವರಿಗೆ ಕಳ್ಳ ಪೂಜಾರಿ
- ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
[ಬದಲಾಯಿಸಿ] ಹ
- ಹಂಗು ತೊರೆದ ಮೇಲೆ ಲಿಂಗದ ಪರಿವೆ ಏನು
- ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು
- ಹಂಪ್ಯಾಗ ಇರೂದಕ್ಕಿಂತ ತನ್ನ ಕೊಂಪ್ಯಾಗ ಇರೂದ್ ಲೇಸು
- ಹಕ್ಕಿ ತೆನೆ ತಿಂದು ಹಿಕ್ಕೆ ಇಕ್ಕಿ ಹೋಯ್ತು
- ಹಗಲು ಅರಸನ ಕಾಟ ಇರುಳು ದೆವ್ವದ ಕಾಟ
- ಹಗೆ ಬಿತ್ತಿ ಬೆಂಕಿ(ಹೊಗೆ) ಬೆಳೆದ
- ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
- ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
- ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
- ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ
- ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ
- ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ
- ಹಣ ಇಲ್ಲದವ ಹೆಣಕ್ಕಿಂತ ಕಡೆ
- ಹಣ ಎರವಲು ತಂದು ಮಣ ಉರುವಲು ಕೊಂಡ
- ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
- ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು
- ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು
- ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು
- ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
- ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
- ಹತ್ತು ಮಂದಿ ಹುಲ್ಲು ಕಡ್ಡಿ ಒಬ್ಬನ ತಲೆ ಭಾರ
- ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
- ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
- ಹಬ್ಬಕ್ಕೆ ಹೋಗಿ ತಬ್ಬಿಬ್ಬನಾದ
- ಹರ ಮುನಿದರೆ ಗುರು ಕಾಯ್ವ
- ಹರಕಿನಲ್ಲಿ ಇಲಿ ಕಡಿಯಿತು
- ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
- ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ
- ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ
- ಹರೆಯಕ್ಕೆ ಬಂದಾಗ ಹಂದಿನೂ ಚಂದ
- ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
- ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು
- ಹಸನಾದ ಮಾತಿಗೆ ಜೀವ ಬೆಸನಾಯ್ತು
- ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
- ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು
- ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ
- ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
- ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
- ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ
- ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
- ಹಾದರ ಹಾಲು ಸಕ್ಕರೆಯಂತೆ,ಬಯಲಾದರೆ, ಬೇವಿನ ಸಾರದಂತೆ
- ಹಾದಿ ತಪ್ಪಿದವನಿಗೆ ಹದಿನೆಂಟು ಹಾದಿ
- ಹಾದಿ ಹಣವಡ್ಡ ಹಾದರಗಿತ್ತಿ ಮನೆ ಯಾವುದು.
- ಹಾದೀಲಿ ಹೋಗುವವನ ಕೆಣಕ ಅವನು ಬಂದು ನಿನ್ನ ತದಕ
- ಹಾಯೋ ಎತ್ತು ಹಾಯ್ದರೂ ಬಂತು ಬಿಟ್ಟರೂ ಬಂತು
- ಹಾಯ್ದೆ ಇದ್ದರೂ ಎತ್ತಿನ ಕೊಂಬು ಉದ್ದ
- ಹಾರದ ಕೋತಿಗೆ ಮುಪ್ಪಾಗ ಬೆಲ್ಲ ತಿನ್ನಿಸಿದರಂತೆ
- ಹಾರಾಡೋ ಅಪ್ಪುಂಗೆ ತೂರಾಡೋ ಮಗ ಹುಟ್ದಂಗೆ
- ಹಾರುವ ಆಳಲ್ಲ, ಬಾಳೆ ದಡಿಯಲ್ಲ
- ಹಾರುವಯ್ಯನಿಗೆ ಹರಕೆ ಕಟ್ಟಿದಕ್ಕೆ ಹಳೇ ಪರಕೇಲಿ ಹೋಡ್ದ ಹಾಗೆ
- ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
- ಹಾರುವರ ಮೋರೆಯಾದರೂ ನೀರಿನಲ್ಲಿ ತೊಳೆಯದಿದ್ದರೆ ನಾರದೆ ಇದ್ದೀತೆ.
- ಹಾರೋ ಹಕ್ಕಿ ಪುಕ್ಕ ಎಣಿಸಿದಂತೆ
- ಹಾರೋ ಹಕ್ಕಿಗೆ ಹಾದರ ಕಟ್ಟಿದರು.
- ಹಾರ‍್ಸೋನೋ ತೀರ‍್ಸೋನೋ.
- ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ
- ಹಾಲಲ್ಲಾದ್ರೂ ಅದ್ದು, ನೀರಲ್ಲಾದ್ರೂ ಅದ್ದು.
- ಹಾಲಿಗಿಂತ ಕೆನೆ ರುಚಿ
- ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
- ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ
- ಹಾಲು ಕಾಯಿಸ್ಕೊಂಡು ನಾನಿದ್ದೆ ಹಲ್ಲು ಕಿರ‍್ಕೊಂಡು ನೀ ಬಂದೆ.
- ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ
- ಹಾಲು ಬಿಟ್ಟವರ ಮನೆಗೆ ಸೀಬಿ ಅಂದಂಗೆ.
- ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ
- ಹಾಲುಕ್ಕಿದ ಮನೇಲಿ ಮೇಲ್‍ಗರೀಲಿ.
- ಹಾವಿಗೆ ಹಾಲೆರೆದರೇನು ಫಲ
- ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
- ಹಾಸಿಗೆ ಇದ್ದಷ್ಟು ಕಾಲು ಚಾಚು
- ಹಾಳೂರಿಗೆ ಉಳಿದವನೇ ಗೌಡ
- ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರ
- ಹಿಂದಲ ಮಾತು ಮರಿ ಮುಂದಲ ಬಾಳು ಅರಿ
- ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು
- ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
- ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು
- ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ
- ಹಿರಿದು ಪಾಪ ಮಾಡಿ ಗಂಗೆಗೆ ಹರಿದರು
- ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ
- ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ
- ಹುಚ್ಚು ಹೊಳೇ ಬರುವಾಗ ಹೂವಿನ ತೋಟ ಇದಿರೇ
- ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
- ಹುಟ್ಟಿದವಗೆ ಸಾವು ತಪ್ಪದು
- ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
- ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
- ಹುಟ್ಟು ಸಾವು ದಿಟವೇ ಆದರೂ ಹೆಜ್ಜೆ ಹೆಜ್ಜೆಗೆ ಅಂಜೂದ್ ತಪ್ಪಲಿಲ್ಲ
- ಹುಟ್ಟುವವನ ಅಣ್ಣ ಬೆಳೆಯುವವನ ತಮ್ಮ
- ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ
- ಹುಣ್ಣು ಮಾದರೂ ಕಲೆ ಮಾದೀತೇ
- ಹುತ್ತ ಬಡಿದರೆ ಹಾವು ಸಾಯುವುದೇ
- ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
- ಹುಯ್ಯಂತ ಕೊಡ ಬೇಡ ಸುಮ್ಮನೆ ಕೂರಲು ಬೇಡ
- ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ
- ಹೂವ ತರುವ ಮನೆಗೆ ದೇವ ಹುಲ್ಲು ಹೊರುವ
- ಹೃದಯಶೂನ್ಯರ ಒಲವಿಗಿಂತ ಬಲ್ಲವರ ಕದನವೇ ಲೇಸು
- ಹೆಂಡತಿಯಿಲ್ಲದ ಮನೆ ತಂತಿಯಿಲ್ಲದ ವೀಣೆ
- ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
- ಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ
- ಹೆಂದತಿಯಿಲ್ಲದ ಮನೆ ದೇವರಿಲ್ಲದ ಗುಡಿ
- ಹೆಡ್ಡಾಳಾದ್ರೂ ದೊಡ್ಡಾಳು ಮೇಲು
- ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ
- ಹೆಣ್ಣಿಂದ ರಾವಣ ಕೆಟ್ಟ ಮಣ್ಣಿಂದ ಕೌರವ ಕೆಟ್ಟ
- ಹೆಣ್ಣಿದ್ದ ಮನೆಗೆ ಎಡತಾಕಿ ಅಣ್ಣಯ್ಯ ಮಣ್ಣಾಗಿ ಹೋದ
- ಹೆಣ್ಣಿನ ಬಗೆ/ಮನಸ್ಸ ಬಲ್ಲೋರಿಲ್ಲ
- ಹೆಣ್ಣಿನ ಬಾಳು ಕಣ್ಣೀರಿನ ಗೋಳು
- ಹೆಣ್ಣಿನ ಸೊಬಗನು ಕಣ್ಣಾರೆ ಕಂಡು ಬಯಸದ ಅಣ್ಣಗಳು ಅದಾರು
- ಹೆಣ್ಣು ಉರಿಸಿದ ಮನೆಯ ಹೆಗ್ಗಂಬ ಉರಿಯಿತು
- ಹೆಣ್ಣು ಚಂದ ಕಣ್ಣು ಕುಲ್ಡು ಅಂದಂಗೆ
- ಹೆಣ್ಣು ಜಲ್ಮಕ್ಕೆ ಹೆಜ್ಜೆಗೊಂದು ಮುಳ್ಳು
- ಹೆಣ್ಣು ಹಡೆದವರ ಮನೆ ನುಣ್ಣಗೆ ಗಂಡು ಹಡೆದವರ ಮನೆ ತಣ್ಣಗೆ
- ಹೆಣ್ಣು ಹುಟ್ಟಿದರೊಂದು ಹುಣ್ಣು ಹುಟ್ಟಿದ ಹಾಗೆ
- ಹೆಣ್ಣು ಹೊನ್ನು ಮಣ್ಣು ಇನ್ನೊಬರ ಕೈ ಸೇರಿದರೆ ಹೋದಂತೆ
- ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ
- ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು
- ಹೆತ್ತವರು ಹೆಸರಿಕ್ಕ ಬೇಕು
- ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
- ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ
- ಹೇಮಗೇಡಿ ನೇಮ ಬೆಳಗಿದ
- ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
- ಹೇಳೊದು ವೇದ ಹಾಕೊದು ಗಾಳ
- ಹೊಕ್ಕು ಬಳಸಿದರೆ ನಂಟು
- ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
- ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
- ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
- ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
- ಹೊತ್ತನ್ನು ಕೊಲ್ಲುವ ಮೈಗಳ್ಳಗಿಂತ ಸತ್ತ ಹೆಣ ಲೇಸು
- ಹೊತ್ತಿರುವಾಗಲೇ ಗೊತ್ತು ಸೇರಬೇಕು
- ಹೊತ್ತು ಕಳೆದರೆ ಮತ್ತೆ ಬಾರದು
- ಹೊತ್ತು ಮೀರಿದ ಮಾತು ತನಗೇ ಕುತ್ತು ತಂತು
- ಹೊನ್ನಿನ ಶೃತಿ ಕೇಳಿ ಎಂಥೆಂಥಾವರೆಲ್ಲ ಭ್ರಮೆಗೆ ಬಿದ್ದರು
- ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ
- ಹೊಲಬನರಿತು ನುಡಿದ ಮಾತು ಫಲ ಪಕ್ವವಾದಂತೆ
- ಹೊಲಬನರಿಯದ (ರೀತಿಯಲ್ಲದ) ಮಾತು ತಲೆ ಬೇನೆ
- ಹೊಳೆಗೆ ಸುರಿದರೂ ಅಳೆದು ಸುರಿ
- ಹೋದ ಬದುಕಿಗೆ ಹನ್ನೆರಡು ದೇವರು
- ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ
- ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು
- ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ
- ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರ
- ಹಾಳೂರಿಗೆ ಉಳಿದವನೇ ಗೌಡ
- ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
- ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
- ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ
- ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ
- ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
- ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ
- ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ
- ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ
- ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
- ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
- ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
- ಹೇಳೊದು ವೇದ ಹಾಕೊದು ಗಾಳ
- ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ
- ಹೋದ ಬದುಕಿಗೆ ಹನ್ನೆರಡು ದೇವರು
- ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು
- ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
- ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ
- ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು
- ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು
- ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
- ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ
- ಹಣ ಎರವಲು ತಂದು ಮಣ ಉರುವಲು ಕೊಂಡ
- ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ
- ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ
- ಹಣ ಇಲ್ಲದವ ಹೆಣಕ್ಕಿಂತ ಕಡೆ
- ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
- ಹಗಲು ಅರಸನ ಕಾಟ ಇರುಳು ದೆವ್ವದ ಕಾಟ
- ಹಗೆ ಮಾತು ಆತುಕೊಂಡ, ತುಟಿ ಬಿಚ್ಚದೆ ಕೂತುಕೊಂಡ
- ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
- ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
- ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
- ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
- ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು
- ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ
- ಹರೆಯಕ್ಕೆ ಬಂದಾಗ ಹಂದಿನೂ ಚಂದ
- ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
- ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ
- ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
- ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು
- ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು
- ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
- ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು
- ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
- ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
- ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ
- ಹೆಡ್ಡಾಳಾದ್ರೂ ದೊಡ್ಡಾಳು ಮೇಲು
- ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
- ಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ
- ಹೆಣ್ಣು ಚಂದ ಕಣ್ಣು ಕುಲ್ಡು ಅಂದಂಗೆ
- ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ
- ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
- ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ
- ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ
- ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು
- ಹೆತ್ತವರು ಹೆಸರಿಕ್ಕ ಬೇಕು
- ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
- ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು
- ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ
- ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ
- ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು
- ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ
- ಹೊಳೆಗೆ ಸುರಿದರೂ ಅಳೆದು ಸುರಿ
- ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
- ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
- ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
- ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
- ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ
- ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ
- ಹುಣ್ಣಿಮೆ ಬರುವನಕ ಅಮಾಸೆ ನಿಲ್ಲದು, ಅಮಾಸೆ ಬರುವನಕ ಹುಣ್ಣಿಮೆ ನಿಲ್ಲದು
- ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ
- ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
- ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
- ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
- ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
- ಹುತ್ತ ಬಡಿದರೆ ಹಾವು ಸಾಯುವುದೇ
- ಹಾಡಿದ್ದೇ ಹಾಡಿದ ಕಿಸಬಾಯಿ ದಾಸ
- ಹಾಡ್ತಾ ಹಾಡ್ತಾ ರಾಗ , ನರಳ್ತಾ ನರಳ್ತಾ ರೋಗ
- ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ
- ಹಾಳೂರಿಗೆ ಉಳಿದವನೇ ಗೌಡ
- ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
- ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
- ಹಾಕು ಮಣೆ,ನೂಕು ಮಣೆ,ತಳ್ಳು ಮಣೆ
- ಹಾಲಿದ್ದಾಗ ಹಬ್ಬ ;ನೀರಿದ್ದಾಗ ನೇಮ
- ಹಾಲಿನ ದುಡ್ಡು ಹಾಲಿಗೆ;ನೀರಿನ ದುಡ್ಡು ನೀರಿಗೆ
- ಹಾಲಿನಲ್ಲಿ ಹುಳಿ ಹಿಂಡಿದಂತೆ
- ಹಾಲು ಕುಡಿದ ಮಕ್ಕಳೇ ಬದುಕೊಲ್ಲ; ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೇ ?
- ಹಾಸಿಗೆ ಇದ್ದಷ್ಟು ಕಾಲು ಚಾಚು
- ಹಾಸಿಗೆ ಇದ್ದಷ್ಟು ಕಾಲು ಚಾಚು-
- ಹಾವು ಸಾಯಬಾರದು , ಕೋಲು ಮುರೀಬಾರದು
- ಹಾವು ಸಾಯಬಾರದು ;ಕೋಲು ಮುರಿಯಬಾರದು
- ಹೇಳೋದು ಶಾಸ್ತ್ರ, ಹಾಕೋದು ಗಾಣ
- ಹೇಳೋದು ಶಾಸ್ತ್ರ,ತಿನ್ನೋದು ಬದನೆಕಾಯಿ
- ಹೇಳೋರು ಹೆಡ್ಡರಾದರೆ ,ಕೇಳೋರು ಕಿವುಡರೇ?
- ಹೀನ ಸುಳಿ ಬೋಳಿಸಿದರೂ ಹೋಗೋದಿಲ್ಲ
- ಹೋದ ಪುತ್ತ ಬಂದ ಪುತ್ತ ಪುಟ್ಟನ ಕಾಲಿಗೆ ನೀರಿಲ್ಲ
- ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂದಂತೆ
- ಹೋದೆಯಾ ಪಿಶಾಚಿ ಅಂದ್ರೆ ಬಂದೆಯಾ ಗವಾಕ್ಷೀಲಿ
- ಹೂ-ದವರು ಯಾರು ಅಂದರೆ ಮಾಸಿದ ಸೀರೆಯವರು.
- ಹೂವಿನ ಜೊತೆ ದಾರ ಮುಡಿಯೇರಿತು
- ಹೂವಿನಿಂದ ನಾರಿಗೂ ಸ್ವರ್ಗ
- ಹಳೇ ಗಂಡನ ಪಾದವೇ ಗತಿ
- ಹಳೆ ಚಪ್ಪಲಿ, ಹೊಸಾ ಹೆಂಡತಿ ಕಚ್ಚೊಲ್ಲ
- ಹಂಚಿದವರಿಗೆ ಹಲ್ಲು ಬಾಯಿ
- ಹಂಚು ಕಾಣದ ಕೈ ಕಂಚು ಕಾಣ್ತು
- ಹಂಗಿನ ಅರಮನೆಗಿಂತಾ ಗುಡಿಸಿಲೇ ಮೇಲು
- ಹಣ್ಣು ತಿಂದವನು ನುಣುಚಿಕೊಂಡ; ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ
- ಹಣ ಅಂದರೆ ಹೆಣಾನೂ ಬಾಯಿ ಬಿಡುತ್ತದೆ
- ಹಣವಿದ್ದ ಗಂಡನನ್ನು ಮದುವೆಯಾದರೂ ಋಣವಿದ್ದಷ್ಟೇ
- ಹಬ್ಬದ ದಿನವೂ ಹಳೇ ಗಂಡನೇ ?
- ಹದರಿದವರ ಮೇಲೆ ಕಪ್ಪೆ ಎಸೆದರು
- ಹಲವು ಸಲ ಸಾಯುವವನು ಹೇಡಿ,ವೀರಯೋಧನಿಗೊಂದೇ ಸಲ ಸಾವು
- ಹಲ್ಲಿದ್ದಾಗ ಕಡ್ಲೆ ಇಲ್ಲ; ಕಡ್ಲೆ ಇದ್ದಾಗ ಹಲ್ಲಿಲ್ಲ
- ಹಲ್ಲಿದ್ರೆ ಕಡಲೆ ಇಲ್ಲ;ಕಡಲೆ ಇದ್ರೆ ಹಲ್ಲಿಲ್ಲ
- ಹನಿಹನಿಗೂಡಿದರೆ ಹಳ್ಳ; ತೆನೆತೆನೆಗೂಡಿದರೆ ಬಳ್ಳ
- ಹನುಮಂತನೇ ಹಗ್ಗ ತಿನ್ನುವಾಗ ಪೂಜಾರಿಗೆ ಶ್ಯಾವಿಗೆ ಬೇಕಂತೆ
- ಹನುಮಂತರಾಯ ಹಗ್ಗ ತಿನ್ನುವಾಗ ಪೂಜಾರಿ ಶಾವಿಗೆ ಬೇಡಿದನಂತೆ
- ಹರಯದಲ್ಲಿ ಹಂದಿ ಕೂಡ ಚೆನ್ನಾಗಿರುತ್ತೆ.
- ಹಸಿ ಗೋಡೆ ಮೇಲೆ ಹರಳು ಎಸೆದಂತೆ
- ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೊಲ್ಲ
- ಹತ್ತಿರಕ್ಕೆ ಬಂದರೆ ಹಡಿಕ್ ನಾತ
- ಹೌದಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು ?
- ಹೆಂಡ ಕುಡಿದ ಕಪಿಗೆ ಚೇಳು ಕಡಿದ ಹಾಗೆ
- ಹೆಂಡ ಕುಡಿಯುವ ದೇವರಿಗೆ ಹೇ.. ತಿನ್ನುವ ಪೂಜಾರಿ
- ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ
- ಹೆಂಗಸರ ಬುದ್ಧಿ ಸೊಂಟದಿಂದ ಕೆಳಗೆ
- ಹೆಣ್ಣಿಗೆ ಹೆಣ್ಣೇ ವೈರಿ
- ಹೆಣ್ಣು ಚಂದ,ಕಣ್ಣು ಕುರುಡು
- ಹೆದರುವವರ ಮೇಲೆ ಕಪ್ಪೆ ಎಸೆದಂತೆ
- ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು.
- ಹಿಟ್ಟು ಹಳಸಿತ್ತು;ನಾಯಿ ಹಸಿದಿತ್ತು
- ಹಿರೀಮಗ ಆಗಬೇಡ,ಹಿತ್ತಿಲ ಕದ ಆಗಬೇಡ
- ಹಿತ್ತಲ ಗಿಡ ಮದ್ದಲ್ಲ
- ಹಿತ್ತಿಲ ಗಿಡ ಮದ್ದಲ್ಲ
- ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದರಂತೆ
- ಹೊಳೆ ನೀರಿಗೆ ದೊಣೆನಾಯ್ಕನ ಅಪ್ಪಣೆ ಏಕೆ ?
- ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ
- ಹೊಳೆಯುವುದೆಲ್ಲಾ ಚಿನ್ನವಲ್ಲ
- ಹೊಟ್ಟೇಲಿರೋ ಸಿಟ್ಟು ರಟ್ಟೇಲಿಲ್ಲ
- ಹೊಟ್ಟೆ ತುಂಬಿದ ಮೇಲೆ ಹಿಟ್ಟೂ ಕಲ್ಲು
- ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
- ಹೊರಗೆ ಥಳುಕು, ಒಳಗೆ ಹುಳುಕು
- ಹೊಸ ಡಾಕ್ಟರ್‌ಗಿಂತ ಹಳೇ ಕಾಂಪೌಂಡರ್ ವಾಸಿ
- ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು
- ಹೊಸದರಲ್ಲಿ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದನಂತೆ
- ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ.
- ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡಿತು
- ಹುಣ್ಣಿನ ಮೇಲೆ ಉಪ್ಪು ಸವರಿದಂತೆ
- ಹುಣಿಸೆ ಮರ ಮುದಿಯಾದ್ರೂ ಕಾಯಿ ಹುಳಿ ಹೋಗಲ್ಲ
- ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೆ ? ಆಕಳು ಕಪ್ಪಾದರೂ ಹಾಲು ಕಪ್ಪೆ ?
- ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೆ ?
- ಹುಟ್ಟು ಗುಣ ಸುಟ್ಟರೂ ಹೋಗಲ್ಲ
- ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು; ಬೆಳೀತಾ ಬೆಳೀತಾ ದಾಯಾದಿಗಳು
- ಹುಚ್ಚಲ್ಲ,ಬೆಪ್ಪಲ್ಲ,ಶಿವಲೀಲೆ
- ಹುಚ್ಚು ಬಿಟ್ಟ ಹೊರತು ಮದುವೆ ಆಗೋಲ್ಲ; ಮದುವೆ ಆದ ಹೊರತು ಹುಚ್ಚು ಬಿಡಲ್ಲ
- ಹುಚ್ಚು ಮನಸಿಗೆ ಹತ್ತು ಹಲವು ಮುಖಗಳು
- ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ
- ಹುಲಿಗೆ ಹುಣ್ಣು ಎದ್ದ ಹಾಗೆ
- ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ
[ಬದಲಾಯಿಸಿ] ಇತರೆ ಗಾದೆಗಳು
- ’ಕೋ’ ಅನ್ನೋದು ಕುಲದಲ್ಲಿಲ್ಲ ,’ತಾ’ ಅನ್ನೋದು ತಾತರಾಯನ ಕಾಲದ್ದು
- (ಅವರು) ಚಾಪೆ ಕೆಳಗೆ ತೂರಿದರೆ (ನೀನು) ರಂಗೋಲಿ ಕೆಳಗೆ ತೂರು.
- ಭಾವಿಗೆ ಬಿದ್ರೆ,ಸಾಲಿಗ್ರಾಮ ಸಿಗ್‌ತಂತೆ
- ನೀನು ಮೊಳ ಬಿಟ್ಟರೆ,ನಾನು ಮಾರು ಬಿಡುತ್ತೇನೆ
[ಬದಲಾಯಿಸಿ] ಅಡಿಗೆಮನೆ ಗಾದೆಗಳು
- ಇಂಗು ತೆಂಗು ಇದ್ದರೆ ಮಂಗಮ್ಮನೂ ಅಡಿಗೆ ಮಾಡ್ತಾಳೆ.
- (ಉಪ್ಪು) ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು.
- ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.
[ಬದಲಾಯಿಸಿ] ಮಳೆ ಗಾದೆಗಳು
- ಮಘಾ ಮಳೆ ಬಂದಷ್ಟು ಒಳ್ಳೇದು ; ಮನೆ ಮಗ ಉಂಡಷ್ಟು ಒಳ್ಳೇದು.
- ಆಶ್ಲೇಷ ಮಳೆ , ಈಸಲಾರದ ಹೊಳೆ.
- ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.
- ಅಣ್ಣ ಹುಸಿಯಾದರೂ ತಮ್ಮ ತಂಪು ತರದೇ ಹೋಗಲ್ಲ.( ಪೂರ್ವಾಷಾಢ , ಉತ್ತರಾಷಾಢ ಮಳೆಗಳು )
- ಆರಿದ್ರಾ ಮಳೆ ಆರದೇ ಹುಯ್ಯುತ್ತೆ.
- ಅಮ್ಮನ ಮನಸ್ಸು ಬೆಲ್ಲದ ಹಾಗೆ ; ಆರಿದ್ರಾ ಹನಿ ಕಲ್ಲಿನ ಹಾಗೆ.
- ಮಳೆಗಾಲದ ಮಳೆ ನಂಬಲಾಗದು ; ಮನೆ ಹೆಂಡ್ತಿ ನಗೆ ನಂಬಲಾಗದು.
- ತುಂತುರು ಮಳೆಯಿಂದ ತೂಬು ಒಡೆದೀತೆ?
[ಬದಲಾಯಿಸಿ] ಗಾದೆಗಳ ಬಗ್ಗೆ ಇನ್ನು ಕೆಲವು ಹಾಳೆಗಳು
[ವಿಕಿಪೀಡಿಯ ಕನ್ನಡ ಗಾದೆಗಳು]
[ವಿಕಿಪೀಡಿಯ ಕನ್ನಡ ಗಾದೆಗಳು (ಆಂಗ್ಲ) / wikipedia kannada proverbs (English)]
[ಅವರ್-ಕರ್ನಾಟಕ ಗಾದೆಗಳು]
[ಸಂಪದ ಗಾದೆಗಳ ಸಂಗ್ರಹ]